ಜನಪದರು ಜೀವಂತ ವಿಶ್ವ ವಿದ್ಯಾಲಯ

Team Udayavani, Jul 8, 2018, 4:35 PM IST

8-july-23.jpg

ಮುಧೋಳ: ಜನಪದವೇ ಜೀವನ ಎಂದು ಬದುಕು ನಡೆಸುತ್ತಿರುವ ಗ್ರಾಮೀಣ ಭಾಗದಲ್ಲಿರುವ ಜನಪದರು ಜೀವಂತ ವಿಶ್ವವಿದ್ಯಾಲಯ ಎಂದು ಸಾಹಿತಿ ಡಾ| ಸಿದ್ದು ದಿವಾಣ ಬಣ್ಣಿಸಿದರು. ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸ್ಥಳೀಯ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಐ.ಎಸ್‌. ಮಂಟೂರ ಗ್ರಾಮೀಣಾಭಿವೃದ್ಧಿ ಜನಸೇವಾ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಸ್ಮರಣೋತ್ಸವದ ನಿಮಿತ್ತ ನಡೆದ ‘ಜನಪದ ವಾಣಿ’ ಸಾಂಸ್ಕೃತಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜನಪದ ಎಂದರೆ ಸತ್‌ ಸಂಪ್ರದಾಯ, ಜನಪದಕ್ಕೆ ಜೀವಾಗಿರುವ ಜನಪದರನ್ನು ಗುರುತಿಸಿ ಹಾಗೂ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.

ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿ, ಸ್ತುತಿ, ನಿಂದೆಗಳ ಮಧ್ಯೆ ಜನಪದವೇ ಜೀವನವೆಂದು ನಂಬಿರುವ ಗ್ರಾಮೀಣ ಪ್ರದೇಶದ ಜನಪದರು ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳ ನಿಜವಾದ ಕಾವಲುಗಾರರು. ಜನಪದರು ಸಂಸ್ಕೃತಿಯ ಸಂಕೇತ ಎಂದು ಅಭಿಪ್ರಾಯಪಟ್ಟರು. ಹಿರಿಯ ಪಾರಿಜಾತ ಕಲಾವಿದ ಮಲ್ಲಿಕಾರ್ಜುನ ಮುದಕವಿ ಹಾಗೂ ಮೆಟಗುಡ್ಡದ ಅಪ್ಪಣ್ಣ ಶರಣರು ಆಧ್ಯಾತ್ಮಿಕ ವಿಷಯಗಳನ್ನು ವಿವರಿಸಿದರು. ಹಿರಿಯ ತಲೆಮಾರಿನ ಜನಪದ ಕಲಾವಿದೆ ನಿಂಬೆವ್ವ ಜಗದಾಳ ಅವರಿಗೆ ‘ಜನಪದ ಸಿರಿ-2018’ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಸ್‌.ಜಿ. ಪರಸನ್ನವರ ಡೊಳ್ಳು ನುಡಿಸಿ ಜನಪದವಾಣಿ ಸಮಾರಂಭವನ್ನು ಉದ್ಘಾಟಿಸಿದರು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ಯಾಮಲಾ ಲಕ್ಷ್ಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೂರ ಗ್ರಾಮದ ಹೊಳಬಸಪ್ಪ ಬದಾಮಿ, ಚಿಮ್ಮಡದ ಯಲ್ಲಪ್ಪ ಜಬ್ಬರಕಿ, ಮೆಳ್ಳಿಗೇರಿಯ ರಾಯಪ್ಪ ಮುಗಳಿ, ಮುಗಳಖೋಡದ ತೇಜಸ್ವಿನಿ ಲಕ್ಷ್ಮೇಶ್ವರ ಇವರಿಂದ ಡೊಳ್ಳಿನ ಪದ, ಕುಳಲಿಯ ಯಲ್ಲಪ್ಪ ಬನಾಜಗೋಳ ಭಜನೆ, ಜಯಶ್ರೀ ನಡುವಿನಕೇರಿ ಸಂಗಡಿಗರಿಂದ ಚೌಡಕಿ ಪದ, ಸುಮವ್ವ ಮಠಪತಿ ಸಂಗಡಿಗರಿಂದ ಸಂಪ್ರದಾಯದಿಂದ ಮುಧೋಳದ ಗಂಗವ್ವ ನಾವಿ ಮುಂತಾದ ಕಲಾ ತಂಡಗಳಿಂದ ಜನಪದ ಧ್ವನಿ ಕೇಳಿ ಬಂದಿತು. ಚಿದಾನಂದ ಹುಂಡೇಕಾರ, ಶಿವು ಜೋಗಿ, ಸುರೇಶ ಹುಂಡೇಕಾರ, ರಮೇಶ ಎಸ್‌. ಇದ್ದರು. 

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಆಕಾಶ ಮಠಪತಿ ಪ್ರಕರಣದಲ್ಲಿ 8 ಮಂದಿ ಬಂಧನ

Hubli; ಆಕಾಶ ಮಠಪತಿ ಪ್ರಕರಣದಲ್ಲಿ 8 ಮಂದಿ ಬಂಧನ

5-Kundgola

Kundgola: ಬೆನಕನಹಳ್ಳಿ ಜಲ ಜೀವನಾಡಿಗೆ ಅಸ್ವಚ್ಛತೆ ಬೇಡಿ

crime (2)

Hubballi; ಆಟೋರಿಕ್ಷಾ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ನ ಪುತ್ರನ ಹತ್ಯೆ

Hubli; Protest demanding implementation of Dr. Sarojini Mahishi’s revised report

Hubli; ಡಾ.ಸರೋಜಿನಿ‌ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Janardhana Reddy: ಅಯೋಗ್ಯ ಜನಾರ್ದನ ರೆಡ್ಡಿ ಕ್ಷಮೆಯಾಚಿಸಲಿ; ಸಲೀಂ ಅಹ್ಮದ್‌

Janardhana Reddy: ಅಯೋಗ್ಯ ಜನಾರ್ದನ ರೆಡ್ಡಿ ಕ್ಷಮೆಯಾಚಿಸಲಿ; ಸಲೀಂ ಅಹ್ಮದ್‌

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

Chinese space ship Chang’e 6 brought rock from the invisible side of the moon

Chang’e 6: ಚಂದ್ರನ ಅಗೋಚರ ಭಾಗದಿಂದ ಶಿಲೆ ತಂದ ಚೀನಾ ನೌಕೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.