Udayavni Special

ಮೋಜಿನ ಮೂಡಲ್ಲಿ ಅಪಾಯ ಮರೆತ ಜನತೆ 


Team Udayavani, Jul 21, 2018, 5:49 PM IST

21-july-23.jpg

ಕೊಪ್ಪಳ: ಕಳೆದ ನಾಲ್ಕಾರು ವರ್ಷಗಳ ಬಳಿಕ ತುಂಗಭದ್ರೆಗೆ ಜೀವಕಳೆ ಬಂದಿದೆ. ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ. ಆದರೆ ಮುನಿರಾಬಾದ್‌ ಸಮೀಪದ ಎಚ್‌ ಎಚ್‌-63 ಹಳೇ ಸೇತುವೆಯ ಗೇಟ್‌ ಬಳಿ ಜನರು ನೀರಿನ ಹರಿವು ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಆದರೆ ಹಳೆ ಸೇತುವೆ ಅಪಾಯವನ್ನೂ ಮರೆತಿದ್ದಾರೆ.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತ್ಯ ಧಿಕ ಮಳೆಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಡ್ಯಾಂ ಬಹುತೇಕ ಭರ್ತಿಯಾಗಿದ್ದು, ಒಳ ಹರಿವಿನ ಪ್ರಮಾಣವೂ 50 ಸಾವಿರ ಕ್ಯೂಸೆಕ್‌ನಷ್ಟಿದೆ. ಡ್ಯಾಂನ ನೀರಿನ ಸಂಗ್ರಹಣಾ ಸಾಮರ್ಥ್ಯದ ಸ್ಥಿತಿಗತಿ ಅವಲೋಕಿಸಿದ ನೀರಾವರಿ ಇಲಾಖೆಯಿಂದ ಹೆಚ್ಚುವರಿ ನೀರನ್ನು ಜಲಾಶಯ ಮುಖ್ಯ ಗೇಟ್‌ ಗಳ ಮೂಲಕ ಹರಿಬಿಡಲಾಗಿದೆ.

ಹಲವು ವರ್ಷಗಳಿಂದ ಡ್ಯಾಂನಲ್ಲಿ ನೀರು ಸಂಗ್ರಹಣೆಯಾಗದೇ ಇರುವುದನ್ನು ನೋಡಿದ ಜನರು ಈಗ ನೀರಿನ ದೃಶ್ಯ ನೋಡಿ ಕಣ್ಮನ ತಣಿಸಿಕೊಳ್ಳಲು ತಂಡೋಪ ತಂಡವಾಗಿ ಡ್ಯಾಂನತ್ತ ಹೆಜ್ಜೆ ಹಾಕುತ್ತಿದ್ದಾರೆ. ಡ್ಯಾಂನ ಮುಂಭಾಗದ ಸುಂದರ ನೋಟವು ಸಮೀಪದ ರಾಷ್ಟ್ರೀಯ ಹೆದ್ದಾರಿ-63 ರಸ್ತೆಯಲ್ಲಿ ನಿಂತು ನೋಡಿದರೆ ಎಲ್ಲರ ಕಣ್ಣು ಕೊರೈಸುವಂತೆ ಕಾಣುತ್ತದೆ. ಅಲ್ಲಿ ಡ್ಯಾಂನಿಂದ ನೀರು ಹೊರ ಬರುತ್ತಿರುವ ದೃಷ್ಯವೂ ಎಲ್ಲರ ಕಣ್ಣನ್ನು ಅರಳಿಸುವಂತೆ ಮಾಡುತ್ತದೆ.

ಆದರೆ ಡ್ಯಾಂ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿಯೇ ಹಲವು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಆ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಅದರ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಹಳೆ ಸೇತುವೆಯಲ್ಲಿ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಇದನ್ನೇ ಸದ್ಭಳಕೆ ಮಾಡಿಕೊಳ್ಳುತ್ತಿರುವ ಜನರು ಹಳೇ ಸೇತುವೆ ಮೇಲೆ ಕುಳಿತು ಡ್ಯಾಂನಿಂದ ನೀರು ಹರಿದು ಬರುತ್ತಿರುವ ಫೋಟೋ ಹಾಗೂ ವೀಡಿಯೋ ಹಾಗೂ ಸೇಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಮಕ್ಕಳು, ವೃದ್ಧರು ಸೇರಿದಂತೆ ಯುವಕರು ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಸೇತುವೆ ಕೆಳ ಭಾಗದಲ್ಲಿ ನೀರಿನ ರಭಸವೂ ಹೆಚ್ಚಾಗಿದೆ. ಅಲ್ಲದೇ, ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಅದರ ಮೇಲೆ ಜನದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಅಪಾಯಕ್ಕೆ ಆಹ್ವಾನ ನೀಡುವಂತ ಸ್ಥಿತಿಯಲ್ಲಿದೆ.

ಹಳೆ ಸೇತುವೆಗೆ ಎಡ ಹಾಗೂ ಬಲ ಭಾಗದಲ್ಲಿ ಯಾವುದೇ ರಕ್ಷಣಾ ಗೋಡೆಯಿಲ್ಲ. ಹೀಗಾಗಿ ಜನರು ಸ್ವಲ್ಪ ಆಯ ತಪ್ಪಿದರೂ ಭೋರ್ಗರೆಯುವ ನೀರಿನಲ್ಲಿ ಬೀಳುವುದು ನಿಶ್ಚಿತ. ನೀರಿನ ಮೋಜಿನಲ್ಲಿಯೇ ತೊಡಗುತ್ತಿರುವ ಯುವಕರು ಬೈಕ್‌ನಲ್ಲಿ ರೈಡಿಂಗ್‌ ಮಾಡುತ್ತಿದ್ದಾರೆ. ಇದು ಜನರಿಗೆ ಕಿರಿಕಿರಿ ಮಾಡಲಾಂಭಿಸಿದೆ.

ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತವು ತುಂಗಭದ್ರಾ ಡ್ಯಾಂ ಮುಂಭಾಗದಲ್ಲಿನ ಹಳೆ ಸೇತುವೆಯ ಬಳಿ ಭದ್ರತಾ ವ್ಯವಸ್ಥೆ ಕೈಗೊಳ್ಳುವ ಅಗತ್ಯವಿದೆ. ಅವಘಡಗಳು ಸಂಭವಿಸುವ ಮುನ್ನ ಜಾಗೃತರಾಗಬೇಕಿದೆ. ರಕ್ಷಣಾ ಗೋಡೆ ಇಲ್ಲವೇ ಬ್ಯಾರೆಕೇಡ್‌ಗಳ ಅಳವಡಿಸುವ ಅವಶ್ಯಕತೆಯಿದೆ ಎನ್ನುತ್ತಿದ್ದಾರೆ ಸ್ಥಳೀಯ ಪ್ರಜ್ಞಾವಂತ ಜನರು. 

ತುಂಗಭದ್ರಾ ಡ್ಯಾಂ ಮುಂಭಾಗದಲ್ಲಿ ಹಳೆ ಸೇತುವೆ ಮೇಲೆ ಜನರು ನೀರು ಹರಿಯುವುದನ್ನು ನೋಡುತ್ತಿದ್ದಾರೆ. ಆದರೆ
ಸೇತುವೆ ತುಂಬಾ ಹಳೆಯದಾಗಿದ್ದು, ಕುಸಿಯುವ ಸಾಧ್ಯತೆಯಿದೆ. ಪೊಲೀಸ್‌ ಇಲಾಖೆ, ಜಿಲ್ಲಾಡಳಿತ ಹಳೆ ಸೇತುವೆಯ ಸುತ್ತ ಭದ್ರತೆ ಒದಗಿಸಿ ಜಾಗೃತಿ ಮೂಡಿಸಬೇಕಿದೆ.
 ವೀರೇಂದ್ರ ಮುನಿರಾಬಾದ್‌,
ಸ್ಥಳೀಯ ನಿವಾಸಿ.

ಟಾಪ್ ನ್ಯೂಸ್

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

fcgrdtr

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hftyrty

ಕೇಂದ್ರೀಯ ವಿದ್ಯಾಲಯದ ಸನಿಹ ಪ್ರತ್ಯಕ್ಷವಾದ ಚಿರತೆ

fgrt55r

ಬಳಕೆಯಾಗದ ಕೋಟಿ ವೆಚ್ಚದ ಸಿಮ್ಯುಲೇಟರ್‌

fgtyht

ಧಾರವಾಡ: ಅನ್ನದ ಬಟ್ಟಲಿಗೆ ನಶೆ ಪೀಡೆಯ ಹುಣ್ಣು| ಗಾಂಜಾ ಬೆಳೆ ಅವ್ಯಾಹತ

2 ಲಕ್ಷ ಮೊತ್ತದ ಅಕ್ರಮ ಗಾಂಜಾ ಬೆಳೆ ಪತ್ತೆ; ಮೂವರು ಆರೋಪಿಗಳ ಬಂಧನ

2 ಲಕ್ಷ ಮೊತ್ತದ ಅಕ್ರಮ ಗಾಂಜಾ ಬೆಳೆ ಪತ್ತೆ; ಮೂವರು ಆರೋಪಿಗಳ ಬಂಧನ

ತಾಕತ್ತಿದ್ದರೆ ನಿಮ್ಮ ಕ್ಷೇತ್ರದ ಅನ್ಯಧರ್ಮದ ಪ್ರಾರ್ಥನಾ ಮಂದಿರ ತೆರವು ಮಾಡಿ: ಸಿಎಂ ಗೆ ಸವಾಲು

ತಾಕತ್ತಿದ್ದರೆ ನಿಮ್ಮ ಕ್ಷೇತ್ರದ ಅನ್ಯಧರ್ಮದ ಪ್ರಾರ್ಥನಾ ಮಂದಿರ ತೆರವು ಮಾಡಿ: ಸಿಎಂ ಗೆ ಸವಾಲು

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

Children’s education

ಆದಿವಾಸಿ ಮುಖಂಡರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ :ಡಿವೈಎಸ್ ಪಿ ರವಿಪ್ರಸಾದ್ ಮನವಿ

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.