ಕೈಗೆ ಗದಗ ನಂಟು; ಕಮಲಕ್ಕೆ ಮೋದಿ ಬಲ


Team Udayavani, May 9, 2019, 12:48 PM IST

gad-1

ಮುಧೋಳ: ಜಿಲ್ಲೆಯ ಏಕೈಕ ಮೀಸಲು ಮುಧೋಳ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳ ಪ್ರಮುಖರಲ್ಲಿ ಪಕ್ಷಕ್ಕಿಂತ ಜಾತಿ ಹೊಂದಾಣಿಕೆ ಮತ್ತು ಕೊಡು-ಕೊಳ್ಳುವಿಕೆಯ ಚುನಾವಣೆ ನಡೆದಿದೆ. ಹೀಗಾಗಿ ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಬಿಜೆಪಿ ಅಷ್ಟೊಂದು ಲೀಡ್‌ ಪಡೆಯಲು ಸಾಧ್ಯವಿಲ್ಲ ಎಂಬುದು ಬಹುತೇಕರ ಲೆಕ್ಕಾಚಾರ.

ಹೌದು, ಕಾಂಗ್ರೆಸ್‌ ಪಕ್ಷ, ಗದಗ-ಹಾವೇರಿ ಲೋಕಸಭೆ ಕ್ಷೇತ್ರದ ನಂಟನ್ನು ಇಲ್ಲಿ ಬಳಿಸಿಕೊಂಡಿದೆ. ನೀವು ಇಲ್ಲಿ ನಮಗೆ ಮತ ಕೊಡಿಸಿ, ನಾವು ನಿಮಗೆ ಅಲ್ಲಿ ಮತ ಕೊಡಿಸುತ್ತೇವೆ ಎಂಬುದು ರಡ್ಡಿ ಮತ್ತು ಪಂಚಮಸಾಲಿ ಪ್ರಮುಖರು (ಎರಡೂ ಪಕ್ಷಗಳು ಒಳಗೊಂಡಂತೆ) ಒಳ ಒಪ್ಪಂದ ಮಾಡಿಕೊಂಡೇ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಕ್ಷೇತ್ರದಲ್ಲಿ ಎದುರಿಸಿದ್ದಾರೆ. ಇದರ ಜತೆಗೆ ಪ್ರಮುಖವಾಗಿ ತಾಲೂಕಿನ ಪ್ರಮುಖ ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಗೂ, ಲೋಕಾ ಚುನಾವಣೆಗೂ ಲಿಂಕ್‌ ಮಾಡಲಾಗಿತ್ತು. ಅದಕ್ಕಾಗಿಯೇ ಕಳೆದ ಬಾರಿ ತುರುಸಿನಿಂದ ನಡೆದಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ, ಈ ಬಾರಿ ಬಹುತೇಕ ಅವಿರೋಧ ಆಯ್ಕೆಗೂ ಕಾರಣವಾಗಿತ್ತು ಎಂಬುದು ತಾಲೂಕಿನಲ್ಲಿರುವ ಬಹಿರಂಗ ಗುಟ್ಟು ಎನ್ನಲಾಗಿದೆ.

ಏನಿದು ಒಳ ಒಪ್ಪಂದ-ನಂಟು: ಮುಧೋಳ ನಗರದಲ್ಲಿ ಕಾಂಗ್ರೆಸ್‌ ಒಂದಷ್ಟು ಪ್ರಭಾವ ಹೊಂದಿದ್ದರೆ, ಗ್ರಾಮೀಣ ಭಾಗದಲ್ಲಿ ಮೋದಿ ಅಲೆ, ಹಿಂದುತ್ವದ ಬಲ ಹೊಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಧೋಳದ ಗ್ರಾಮೀಣ ಭಾಗದಲ್ಲೇ 17,898 ಮತಗಳ ಲೀಡ್‌ ಬಿಜೆಪಿಗೆ ಬಂದಿತ್ತು. ಈ ಕ್ಷೇತ್ರದ ಹಾಲಿ ಸಚಿವ ಆರ್‌.ಬಿ. ತಿಮ್ಮಾಪುರ, ಕಳೆದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಬಂಡಿವಡ್ಡರ, ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ ಒಟ್ಟಿಗೆ ಕುಳಿತು, ಸಹಕಾರಿ ಕಾರ್ಖಾನೆ ಚುನಾವಣೆಗೆ ಕಾಂಗ್ರೆಸ್ಸಿಗರು ಸ್ಪರ್ಧೆ ಮಾಡಲ್ಲ. ನೀವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡಿ ಎಂಬ ಒಪ್ಪಂದ ಮಾಡಿಕೊಂಡರೆ, ಮತ್ತೂಂದೆಡೆ ಗದಗ-ಹಾವೇರಿ ಕ್ಷೇತ್ರದ ಪಂಚಮಸಾಲಿ ಸಮಾಜದಿಂದ ಅಲ್ಲಿನ ಅಭ್ಯರ್ಥಿ ಡಿ.ಆರ್‌. ಪಾಟೀಲರಿಗೆ ಬೆಂಬಲಿಸುತ್ತೇವೆ, ನೀವು (ರಡ್ಡಿ) ಇಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂಬ ಒಪ್ಪಂದವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಮಧ್ಯಸ್ಥಿಕೆಯಲ್ಲಿ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಈ ಬಾರಿ, ಪಕ್ಷ ಬದಿಗಿಟ್ಟು, ಜಾತಿ ಪ್ರಮುಖರಲ್ಲಿ ಒಳ ಒಪ್ಪಂದ ನಡೆಸಲಾಗಿತ್ತು ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬಂದ ಸತ್ಯದ ಮಾತು. ಇದರಿಂದ ಈ ಬಾರಿ ಕಾಂಗ್ರೆಸ್‌ ಇಲ್ಲಿ ಹೆಚ್ಚಿನ ಮತ ಪಡೆಯಲಿದೆ ಎಂಬುದು ಪಕ್ಷದ ಹಿರಿಯರ ನಿರೀಕ್ಷೆ.

ಮೋದಿ ಅಲೆ: ಎರಡು ಪಕ್ಷಗಳ ರಾಜಕೀಯ ಮುಖಂಡರು ಏನೇ ಒಳ ಒಪ್ಪಂದ ಮಾಡಿಕೊಂಡರೂ, ಈ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆಯ ಜತೆಗೆ ಮೋದಿಯ ಅಲೆಯೂ ಇದೆ. ಅಲ್ಲದೇ ಕಳೆದ ಮೂರು ಅವಧಿಗೆ ರಡ್ಡಿ ಸಮಾಜಕ್ಕೆ ಲೋಕಸಭೆ ಟಿಕೆಟ್ ಕೊಟ್ಟು, ಈ ಬಾರಿ ಸಮಾಜಕ್ಕೆ ಟಿಕೆಟ್ ಕೊಟ್ಟಿಲ್ಲ ಎಂಬ ಅಸಮಾಧಾನ, ಕಾಂಗ್ರೆಸ್‌ಗೆ ಮೈನಸ್‌ ಆಗಿತ್ತು. ಹೀಗಾಗಿ ರಡ್ಡಿ ಸಮಾಜ, ಕಾಂಗ್ರೆಸ್‌ ಬೆಂಬಲಿಸಲು ಸಾಧ್ಯವಿಲ್ಲ. ಎಲ್ಲ ಸಮಾಜದೊಂದಿಗೂ ಉತ್ತಮವಾಗಿರುವ ಬಿಜೆಪಿ ಅಭ್ಯರ್ಥಿಗೆ ಇಲ್ಲಿನ ಮತದಾರರು, ತಮ್ಮ ಹಕ್ಕಿನ ಮುದ್ರೆಯೊತ್ತಿದ್ದಾರೆ ಎಂಬ ವಿಶ್ವಾಸ ಬಿಜೆಪಿಗರಲ್ಲಿದೆ.

ಈ ಕ್ಷೇತ್ರದಲ್ಲಿ ದಲಿತ, ಮುಸ್ಲಿಂ, ರಡ್ಡಿ, ವಾಲ್ಮೀಕಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಬಹುತೇಕ ಹಳ್ಳಿಗಳು, ರಡ್ಡಿ ಸಮಾಜದ ಪ್ರಮುಖರು ಹೇಳಿದಂತೆ ಕೇಳುವ ಬಹುಪಾಲು ಜನರಿದ್ದಾರೆ. ಅವರು ಹೇಳುವ ಪಕ್ಷಕ್ಕೆ, ಅಭ್ಯರ್ಥಿಗೆ ಬೆಂಬಲ ಕೊಡುವ ಪರಂಪರೆ ಹಲವು ಚುನಾವಣೆಗಳಿಂದ ನಡೆದುಕೊಂಡು ಬಂದಿದ್ದು, ಅದು ಈ ಬಾರಿಯೂ ಮುಂದುವರೆದಿದೆ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿದೆ.

•ಮಹಾಂತೇಶ ಕರೆಹೊನ್ನ

ಟಾಪ್ ನ್ಯೂಸ್

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 8 ಮಂದಿ ದುರ್ಮರಣ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

6

Movies: ʼಪುಷ್ಪ-2ʼ ಮುಂದೂಡಿಕೆಯಾದರೆ ಸ್ವಾತಂತ್ರ್ಯ ದಿನದ ರಿಲೀಸ್‌ ಮೇಲೆ ಈ ಚಿತ್ರಗಳ ಕಣ್ಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

Gadag; Gadag rural station CPI suspended due to dereliction of duty

Gadag; ಕರ್ತವ್ಯ ಲೋಪ ಹಿನ್ನೆಲೆ ಗದಗ ಗ್ರಾಮೀಣ ಠಾಣೆ ಸಿಪಿಐ ಸಸ್ಪೆಂಡ್

ಭಾರಿ ಮಳೆಗೆ ಮರದ ಬಳಿ ನಿಂತ್ತಿದ್ದವರಿಗೆ ಬಡಿದ ಸಿಡಿಲು… ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

ಭಾರಿ ಮಳೆಗೆ ಮರದ ಬಳಿ ನಿಂತಿದ್ದವರಿಗೆ ಬಡಿದ ಸಿಡಿಲು… ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

MUST WATCH

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

ಹೊಸ ಸೇರ್ಪಡೆ

ಬೆಳ್ತಂಗಡಿಯಲ್ಲಿ ಭತ್ತದ ಬೇಸಾಯಕ್ಕೆ ಯಂತ್ರ ಶ್ರೀ ಬೆಂಗಾವಲು

ಬೆಳ್ತಂಗಡಿಯಲ್ಲಿ ಭತ್ತದ ಬೇಸಾಯಕ್ಕೆ ಯಂತ್ರ ಶ್ರೀ ಬೆಂಗಾವಲು

8

ಚನ್ನಪಟ್ಟಣ ಟಿಕೆಟ್‌: ಮೈತ್ರಿಪಕ್ಷದಲ್ಲಿ ಪೈಪೋಟಿ?

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

ಪುತ್ತೂರು: ಗ್ರಾಮೀಣ ಶಾಲೆ ಮಕ್ಕಳಿಗಾಗಿ ಹಳೆ ವಿದ್ಯಾರ್ಥಿಯ ಸೈಕಲ್‌ ಸವಾರಿ

ಪುತ್ತೂರು: ಗ್ರಾಮೀಣ ಶಾಲೆ ಮಕ್ಕಳಿಗಾಗಿ ಹಳೆ ವಿದ್ಯಾರ್ಥಿಯ ಸೈಕಲ್‌ ಸವಾರಿ

3-application

Udupi: ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.