ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ತೋಂಟದಾರ್ಯ ಮಠ ಈ ಸಾಲಿನಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ

Team Udayavani, Apr 26, 2024, 5:50 PM IST

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಉದಯವಾಣಿ ಸಮಾಚಾರ 
ಗದಗ: ಅನ್ನ-ಅಕ್ಷರ ದಾಸೋಹಕ್ಕೆ ನಾಡಿನಲ್ಲಿ ಪ್ರಸಿದ್ಧವಾಗಿರುವ ತೋಂಟದಾರ್ಯ ಮಠ ಸಮಾಜಕ್ಕೆ ಕೊಡುಗೆ ನೀಡಿದ ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ಜಡೆ ಸಂಸ್ಥಾನಮಠದ ಡಾ| ಮಹಾಂತ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರೋತ್ಸವದ ಲಘುರಥೋತ್ಸವ ಕಾರ್ಯಕ್ರಮದಲ್ಲಿ ಗೌರವ ಸಂಮಾನ ಸ್ವೀಕರಿಸಿ ಮಾತನಾಡಿದ ಅವರು, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ನನಗೆ ಮಾರ್ಗದರ್ಶಕರಾಗಿದ್ದರು. ನಾನು ಪೀಠಾ ಧಿಕಾರ ವಹಿಸಿಕೊಂಡ ದಿನದಂದು ಜಡೆ ಸಂಸ್ಥಾನಮಠದ ಸಂಪೂರ್ಣ ಇತಿಹಾಸವುಳ್ಳ ಪುಸ್ತಕವೊಂದನ್ನು ನನಗೆ ನೀಡಿ ಅಧ್ಯಯನ ಮಾಡುವಂತೆ ತಿಳಿಸಿದ್ದರು ಎಂದರು.

ಜಡೆ ಸಂಸ್ಥಾನಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿ, ರಾಜ್ಯ ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಉನ್ನತ ಮಟ್ಟಕ್ಕೆ ತಲುಪಿದ್ದರೆ ಅದರ ಹಿಂದೆ ಮಠ-ಮಾನ್ಯಗಳ ಕೊಡುಗೆ ಸಾಕಷ್ಟಿದೆ. ತೋಂಟದಾರ್ಯ ಮಠ ಈ ಸಾಲಿನಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ.

ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ತೋಂಟದ ಸಿದ್ಧರಾಮ ಶ್ರೀಗಳು ಅಪಾರ ವಿದ್ವತ್ತುಳ್ಳ ಅಪರೂಪದ ಯತಿಗಳಾಗಿದ್ದು, ಹಿರಿಯ ಸ್ವಾಮೀಜಿಗಳಿಗೆ ಅವರ ಮಾರ್ಗದರ್ಶನ ಸದಾಕಾಲ ಇರಬೇಕೆಂದರು. ದೆಹಲಿ ಜಾಟವಾ ಸಮುದಾಯದ ಶ್ರೀಮಠದ ಭಕ್ತರು ಹಾಗೂ ಕಾರ್ಪೋರೇಶನ್‌ ಅಧಿಕಾರಿಗಳಾದ ರವೀಂದ್ರ ಪ್ರಧಾನ್‌ ಮಾತನಾಡಿ, ಜಾಟವಾ ಜನಾಂಗ ಮತ್ತು ತೋಂಟದಾರ್ಯ ಮಠಕ್ಕೂ ಇರುವ ಬಾಂಧವ್ಯ ನೆನೆದರು. ಬೆಳಗಾವಿ ಶಾಲಿನಿ ದೊಡಮನಿ ರಚಿಸಿದ “ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು ಗ್ರಂಥದ ಹಿಂದಿ ಆವೃತ್ತಿ ಲೋಕಾರ್ಪಣೆಗೊಳಿಸಲಾಯಿತು.

ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಡೂರ ವಿರಕ್ತಠದ ಡಾ| ಪ್ರಭು ಸ್ವಾಮೀಜಿ, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಕಲಬುರ್ಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯ ಸ್ವಾಮೀಜಿ, ರಟಕಲ್‌ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಡಾ| ಮಹಾಂತಸ್ವಾಮೀಜಿ ಸಮ್ಮುಖ ವಹಿಸಿದ್ದರು. ಡಾ| ಅಶೋಕ ಹುಗ್ಗಣ್ಣವರ ವಚನ ಸಂಗೀತ ನೀಡಿದರು. ಮಾಜಿ ಸಚಿವ ಎಸ್‌.ಎಸ್‌. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ
ಆಡಳಿತಾಧಿಕಾರಿ ಎಸ್‌.ಎಸ್‌. ಪಟ್ಟಣಶೆಟ್ಟರ ಇದ್ದರು.

ಟಾಪ್ ನ್ಯೂಸ್

2-DKSHI

Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

Lok Sabha Speaker: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ. ಸುರೇಶ್ ನಾಮಪತ್ರ ಸಲ್ಲಿಕೆ

Speaker Election: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ.ಸುರೇಶ್ ನಾಮಪತ್ರ ಸಲ್ಲಿಕೆ

9

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

8

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavathi

ಗಂಗಾವತಿ: ಮುಂಗಾರಿಗೆ ಕೆರೆ, ಕೊಳ್ಳಗಳು ಸಂಪೂರ್ಣ ಭರ್ತಿ

Education ಇಲಾಖೆಯ ಆದೇಶಕ್ಕೆ ಕಿಮ್ಮತ್ತು ನೀಡದ ಸೆಂಟ್ ಪಾಲ್ಸ್ ಆಂಗ್ಲ ಮಾಧ್ಯಮ ಶಾಲೆ

Education ಇಲಾಖೆಯ ಆದೇಶಕ್ಕೆ ಕಿಮ್ಮತ್ತು ನೀಡದ ಸೆಂಟ್ ಪಾಲ್ಸ್ ಆಂಗ್ಲ ಮಾಧ್ಯಮ ಶಾಲೆ

ಗದಗ: ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ ಬಿಜೆಪಿ- ಸಲೀಂ ಅಹ್ಮದ್‌

ಗದಗ: ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ ಬಿಜೆಪಿ- ಸಲೀಂ ಅಹ್ಮದ್‌

ಭರ್ತಿಯಾಗಬೇಕಿದೆ ಬಹುತೇಕ ಕೆರೆಗಳು; ಬಳಕೆಗೆ ಸೀಮಿತವಾದ ಕೆರೆಗಳು-192

ಭರ್ತಿಯಾಗಬೇಕಿದೆ ಬಹುತೇಕ ಕೆರೆಗಳು; ಬಳಕೆಗೆ ಸೀಮಿತವಾದ ಕೆರೆಗಳು-192

ಅತಿವೃಷ್ಟಿ ನಿಯಂತ್ರಣಕ್ಕೆ ಅಧಿಕಾರಿಗಳ ಪಾತ್ರ ಮಹತ್ವ: ಡಿಸಿ

ಅತಿವೃಷ್ಟಿ ನಿಯಂತ್ರಣಕ್ಕೆ ಅಧಿಕಾರಿಗಳ ಪಾತ್ರ ಮಹತ್ವ: ಡಿಸಿ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಮುಂಡ್ಕೂರು: ರಸ್ತೆಯಲ್ಲಿ ಬೃಹತ್‌ ಹೊಂಡ- ವಾಹನ ಸಂಚಾರಕ್ಕೆ ಕಿರಿಕಿರಿ

ಮುಂಡ್ಕೂರು: ರಸ್ತೆಯಲ್ಲಿ ಬೃಹತ್‌ ಹೊಂಡ- ವಾಹನ ಸಂಚಾರಕ್ಕೆ ಕಿರಿಕಿರಿ

ಬೈಂದೂರು: ಬಹುಕೋಟಿ ಬಸ್‌ ನಿಲ್ದಾಣ ಜಾನುವಾರು ತಂಗುದಾಣ!

ಬೈಂದೂರು: ಬಹುಕೋಟಿ ಬಸ್‌ ನಿಲ್ದಾಣ ಜಾನುವಾರು ತಂಗುದಾಣ!

Udayavani Campaign: ಕಾರ್ಕಳ-ಮೊದಲು 70, ಈಗ 20!

Udayavani Campaign: ಕಾರ್ಕಳ-ಮೊದಲು 70, ಈಗ 20!

12

Sandalwood: ಒಂದು ಆತ್ಮ ಮೂರು ಜನ್ಮ

2-DKSHI

Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.