ಧರ್ಮ ಪಾಲನೆಯಿಂದ ಶಾಂತಿ ಸಾಧ್ಯ; ಸಂಪತ್ತಿನೊಂದಿಗೆ ಶಿವಜ್ಞಾನವು ಮುಖ್ಯ

Team Udayavani, Mar 11, 2024, 11:28 AM IST

ಧರ್ಮ ಪಾಲನೆಯಿಂದ ಶಾಂತಿ ಸಾಧ್ಯ; ಸಂಪತ್ತಿನೊಂದಿಗೆ ಶಿವಜ್ಞಾನವು ಮುಖ್ಯ

ಉದಯವಾಣಿ ಸಮಾಚಾರ
ಲಕ್ಷ್ಮೇಶ್ವರ: ಭೌತಿಕ ಬದುಕಿಗೆ ಸಂಪತ್ತಿನೊಂದಿಗೆ ಶಿವಜ್ಞಾನದ ಅರಿವು ಮುಖ್ಯ. ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸಕಲಗಳನ್ನು ಪಡೆಯಬೇಕು. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು.

ಅವರು ರವಿವಾರ ತಾಲೂಕಿನ ಶ್ರೀರಂಭಾಪುರಿ ಶಾಖಾ ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜನ ಸಮುದಾಯದಲ್ಲಿ ತಾಳ್ಮೆ ಮತ್ತು
ಸಹನೆಯ ಗುಣ ಇಲ್ಲದಿರುವುದೇ ಇಂದಿನ ಅಶಾಂತಿ, ಅತೃಪ್ತಿಗಳಿಗೆ ಮೂಲ ಕಾರಣ.

ಮಹಾತ್ಮರು ತಮಗಾಗಿ ಏನನ್ನೂ ಬಯಸದೇ ಪರರ ಹಿತಕ್ಕಾಗಿ ಸದಾ ಶ್ರಮಿಸುತ್ತಾರೆ. ನೆರಳು ನೀಡುವ ಮರ, ಹರಿಯುವ
ನೀರು, ಬೀಸುವ ಗಾಳಿ ಮತ್ತು ನಮ್ಮೆಲ್ಲರನ್ನು ಹೊತ್ತ ನೆಲ ಪರೋಪಕಾರವನ್ನು ಎತ್ತಿ ತೋರಿಸುತ್ತವೆ.

ನದಿಯ ನೀರನ್ನು ಎಷ್ಟು ತುಂಬಿದರೂ ಕಡಿಮೆ ಹೇಗೆ ಆಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಪೂರ್ಣವಾಗದು. ಜಾತಿ ಮತ್ತು ಮತೀಯ ಮೌಡ್ಯ ಅಳೆದು ಸ್ನೇಹ, ಸೌಜನ್ಯ ಉಳಿದು ಬೆಳೆಯಬೇಕು. ಹಣ ಮತ್ತು ಅ ಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ದೇಶ, ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಚಿಂತಿಸಲಾರ. ಅಧ್ಯಾತ್ಮ ಸಾಧನೆಗೆ ಮತ್ತು
ಭಗವಂತನ ಸ್ಮರಣೆಗೆ ಮಾತ್ರ ಸಮಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವುದು ನೋವಿನ ಸಂಗತಿ.

ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯಾಧಾರಿತ ವಿಚಾರಗಳನ್ನು ಅನುಸರಿಸಿ ಬಾಳಬೇಕಾಗುತ್ತದೆ. ಮಾ. 20ರಿಂದ 26ವರೆಗೆ ರಂಭಾಪುರಿ ಪೀಠದಲ್ಲಿ ನಡೆಯುವ ರೇಣುಕಾಚಾರ್ಯ ಯುಗಮಾನೋತ್ಸವ, ಧರ್ಮ ಸಮಾರಂಭದಲ್ಲಿ ಭಕ್ತ ಸಮೂಹ ಪಾಲ್ಗೊಳ್ಳಬೇಕು ಎಂದರು.

ಧರ್ಮಜಾಗೃತಿ ಸಮಾರಂಭ ಉದ್ಘಾಟಿಸಿದ ಹುಬ್ಬಳ್ಳಿಯ ಡಾ| ಎಸ್‌.ಪಿ. ಬಳಿಗಾರ ಮಾತನಾಡಿ, ಲಿಂ. ಶ್ರೀಮದ್‌ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ದೂರದೃಷ್ಟಿ ಮತ್ತು ವಿಶ್ವ ಬಂಧುತ್ವದ ಚಿಂತನೆಗಳು ನಮ್ಮೆಲ್ಲರ ಬಾಳಿಗೆ ದಾರಿದೀಪ. ಸಿದ್ಧಿ ಸಾಧನೆಯ ಮೇರು ಪರ್ವತದಂತಿದ್ದ ಜಗದ್ಗುರುಗಳು ಅಧ್ಯಾತ್ಮ ಜ್ಞಾನದ ಅರಿವು ಮೂಡಿಲು ಸದಾ ಶ್ರಮಿಸಿದ್ದನ್ನು ಮರೆಯಲಾಗದು. ಅವರು ತೋರಿದ ದಾರಿಯಲ್ಲಿ ನಡೆಯುವುದೇ ಅವರಿಗೆ ಅರ್ಪಿಸುವ ನಿಜವಾದ ಕೃತಜ್ಞತೆಯಾಗಿದೆ. ಮಕ್ಕಳಷ್ಟೇ ಅಲ್ಲ ದೊಡ್ಡವರೂ ಮೊಬೈಲ್‌, ಟಿವಿಗಳ ದುರಭ್ಯಾಸದಿಂದ ಹೊರ ಬರದಿದ್ದರೆ ಬದುಕು ಹಾಳಾಗುತ್ತದೆ. ಮಕ್ಕಳಿಗೆ
ಬಾಲ್ಯದಲ್ಲೇ ದೇವರು, ಧರ್ಮ, ಮಠ-ಮಾನ್ಯಗಳ ಬಗ್ಗೆ ಪೂಜ್ಯನೀಯ ಭಾವನೆ, ನಂಬಿಕೆ, ಶೃದ್ಧೆ, ಭಕ್ತಿ ಮೂಡಿಸಬೇಕು ಎಂದರು.

ಶಾಸಕ ಡಾ| ಚಂದ್ರು ಲಮಾಣಿ ಮಾತನಾಡಿ, ಶ್ರೀಕ್ಷೇತ್ರದ ಧಾರ್ಮಿಕ ಸೇವೆಯ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುತ್ತೇನೆ. ರಾಜ್ಯ ಸರ್ಕಾರ ರಸ್ತೆ ಸೇರಿ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಲ್ಪಿಸುತ್ತಿಲ್ಲ. ಅನುದಾನ ಮಂಜೂರಾದ ಕೂಡಲೇ ಧರ್ಮಕ್ಷೇತ್ರ ಸಂಪರ್ಕಿಸುವ ರಸ್ತೆ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡುವ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದರು.

ನೇತೃತ್ವ ವಹಿಸಿದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಅಧ್ಯಾತ್ಮ ಲೋಕದಲ್ಲಿ ಧ್ರುವ ನಕ್ಷತ್ರ. ಅವರ ಆದರ್ಶ ಜೀವನ, ಸಂದೇಶ ಭಕ್ತ ಸಂಕುಲಕ್ಕೆ ಆಶಾ ಕಿರಣ. ಅವರು ಸಂಕಲ್ಪಿಸಿದ ತ್ರಿಕೋಟಿ ಶಿವಲಿಂಗ ಪ್ರಾಣ ಪ್ರತಿಷ್ಠಾಪನೆಗೆ ಇದೀಗ ಕಾಲ ಕೂಡಿ ಬಂದಿದೆ. ಈ ಪುಣ್ಯಕಾರ್ಯ ಪೂರ್ಣಗೊಂಡ ಬಳಿಕ ಶ್ರೀಕ್ಷೇತ್ರ ಪ್ರಸಿದ್ಧಿ ಪಡೆಯಲಿದೆ ಎಂದು ಹರುಷ ವ್ಯಕ್ತಪಡಿಸಿದರು.

ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ್ದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಮಾಜಿ ಶಾಸಕರಾದ ಜಿ.ಎಸ್‌. ಗಡ್ಡದೇವರಮಠ, ಕುಸುಮಾವತಿ ಸಿ. ಶಿವಳ್ಳಿ, ಸೋಮಣ್ಣ ಡಾಣಗಲ್‌ ಮಾತನಾಡಿದರು. ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಕಲಾದಗಿಯ ಗಂಗಾಧರ ಶಿವಾಚಾರ್ಯರು, ಲಕ್ಷ್ಮೇಶ್ವರದ ಮಳೆಮಲ್ಲೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.

ಧರ್ಮಕ್ಷೇತ್ರದ ಸೇವಾಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ನೀಡಲಾಯಿತು. ಡಾ| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪಲ್ಲಕ್ಕಿ ಉತ್ಸವ, ಧರ್ಮ ರಥೋತ್ಸವ ಹಾಗೂ ಕಡುಬಿನ ಕಾಳಗ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಟಾಪ್ ನ್ಯೂಸ್

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

June 27: ಕಂಬಳ ಅನುದಾನ ಬಿಡುಗಡೆ ಆಗ್ರಹಿಸಿ ಸಿಎಂ, ಸಚಿವರ ಭೇಟಿ ನಿಗದಿ

June 27: ಕಂಬಳ ಅನುದಾನ ಬಿಡುಗಡೆ ಆಗ್ರಹಿಸಿ ಸಿಎಂ, ಸಚಿವರ ಭೇಟಿ ನಿಗದಿ

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬಂದಿಯ ಕೊಲೆ ಯತ್ನ

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬಂದಿಯ ಕೊಲೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

1-sasaasd

Finland Games: ನೀರಜ್‌ ಚೋಪ್ರಾ ಮರಳಿ ಕಣಕ್ಕೆ

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

chess

AICF ವಿರುದ್ಧ ಕರುಣ್‌ ದುಗ್ಗಲ್‌ ಲೀಗಲ್‌ ನೊಟೀಸ್‌

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.