ವನ್ಯಜೀವಿ ಸಂರಕ್ಷಣೆ ಜಾಗೃತಿಗೆ 140 ಕಿಮೀ ಜಾಥಾ : ಗದಗದಲ್ಲಿ ವನ್ಯಜೀವಿ ಸಪ್ತಾಹ ಆಚರಣೆ

Team Udayavani, Oct 5, 2020, 4:17 PM IST

ವನ್ಯಜೀವಿ ಸಂರಕ್ಷಣೆ ಜಾಗೃತಿಗೆ 140 ಕಿಮೀ ಜಾಥಾ : ಗದಗದಲ್ಲಿ ವನ್ಯಜೀವಿ ಸಪ್ತಾಹ ಆಚರಣೆ

ಗದಗ: ವನ್ಯಜೀವಿ ಸಪ್ತಾಹ ಅಂಗವಾಗಿ ಜಿಲ್ಲಾ ಅರಣ್ಯ ಇಲಾಖೆಯಿಂದ ನಗರದಲ್ಲಿ ರವಿವಾರ ಆಯೋಜಿಸಿದ್ದ 140 ಕಿಮೀ ಹಾಗೂ 20 ಕಿಮೀ ದೂರದ ಸೈಕ್ಲೋಥಾನ್‌ (ಸೈಕಲ್‌ ಜಾಥಾ) ಯಶಸ್ವಿಯಾಗಿ ನಡೆಯಿತು. ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 140 ಕಿಮೀ ಸೈಕಲ್‌ ಜಾಥಾಗೆ ಜಿಪಂ ಸಿಇಒ ಡಾ| ಆನಂದ ಕೆ., ಎಸ್‌ಪಿ ಯತೀಶ್‌ ಎನ್‌., ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ. ಸೂರ್ಯಸೇನ್‌ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಲಗರೆ ಚಾಲನೆ ನೀಡಿದರು. ಬಳಿಕ 20 ಕಿಮೀ ವಿಭಾಗದ ಸೈಕಲ್‌ ಜಾಥಾಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ನೀಲಮ್ಮ ಮಲ್ಲಿಗವಾಡ, ಪ್ರೇಮಾ ಹುಚ್ಚಣ್ಣವರ, ಬಸಿರಾ ಹಾಗೂ ಹರೀಶ ಮುಟಗಾರ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ. ವಿಶ್ವನಾಥ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪರಿಮಳ ವಿ.ಎಚ್‌. ಫಯಾಜ್‌ ಖಾಜಿ, ಗದಗ ವಲಯ ಅರಣ್ಯಾಧಿಕಾರಿಗಳಾದ ರಾಜು ಗೊಂದಕರ, ಮಹಾಂತೇಶ ಪೇಟೂರ ಸೇರಿದಂತೆ ಅರಣ್ಯ, ಕ್ರೀಡಾ ಇಲಾಖೆ ಸಿಬ್ಬಂದಿ ಇದ್ದರು.

ಇದನ್ನೂ ಓದಿ:ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ: ಸಿಬಿಐ ದಾಳಿ ಬಳಿಕ ಕಿಡಿಕಾರಿದ ಡಿಕೆ ಸುರೇಶ್

ಹಸಿರು ಕಾನನದಲ್ಲಿ ಸೈಕಲ್‌ ಸವಾರಿ: ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 6.30ಕ್ಕೆ ಚಾಲನೆ ಪಡೆದ 140 ಕಿಮೀ ಸೈಕಲ್‌ ಜಾಥಾ ಕಪ್ಪತ್ತಗುಡ್ಡ ಮೈಯೊಡ್ಡಿರುವ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಸುಮಾರು 8 ಗಂಟೆಗಳ ಕ್ರಮಿಸಿತು. ಈ ಪೈಕಿ ಮುಂಡರಗಿ-ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡದ ಹಸಿರು ಸೆರಗಿನ ಮಧ್ಯೆ ಸಾಗಿತು. ಗದಗ ತಾಲೂಕಿನ ಕದಾಂಪುರ, ಮೇವುಂಡಿ, ಮುಂಡರಗಿ, ಬಾಗೇವಾಡಿ, ಕಡಕೋಳ, ಶಿರಹಟ್ಟಿ, ಮಾಗಡಿ, ಹರ್ತಿ ಮಾರ್ಗವಾಗಿ ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲು ಮರದದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ತಲುಪಿ ಕೊನೆಗೊಂಡಿತು. ಈ ನಡುವೆ ಸುಮಾರು 10 ಕಡೆ ಹಣ್ಣು, ಉಪಾಹಾರ ಹಾಗೂ ಕುಡಿಯುವ ನೀರು ಒದಗಿಸಲಾಯಿತು.

ಇನ್ನು ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿದ 20 ಕಿಮೀ ದೂರದ ಸೈಕಲ್‌ ಜಾಥಾದಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು, ಜಿಪಂ ಸಿಇಒ ಡಾ| ಆನಂದ ಹಾಗೂ ಎಸ್ಪಿ ಯತೀಶ್‌ ಎನ್‌., ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್‌ ಗಮನ ಸೆಳೆದರು.

ಉಭಯ ಸೈಕಲ್‌ ಜಾಥಾಗಳು
ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ತಲುಪಿ ಮುಕ್ತಾಯಗೊಂಡವು. ಎರಡೂ ವಿಭಾಗಗಳದಲ್ಲಿ 290 ಜನರು ಆನ್‌ಲೈನ್‌ ಮೂಲಕ ನೋಂದಾಯಿಸಿದ್ದು, ಆ ಪೈಕಿ 150 ಜನರು ಪಾಲ್ಗೊಂಡಿದ್ದರು. ಈ ಪೈಕಿ ಬಾಗಲಕೋಟೆ, ವಿಜಯಪುರ ಹಾಗೂ ಗದಗಿನ ಸೈಕ್ಲಿಸ್ಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಧಾರವಾಡ ಸೇರಿದಂತೆ ಇನ್ನಿತರೆ ಜಿಲ್ಲೆಯ ಸೈಕಲ್‌ ಪಟುಗಳು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

7-chitradurga

ಒತ್ತಡಕ್ಕೆ ಮಣಿಯದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಾಗಲಿ; ಬಿ.ವೈ.ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

12

Online ಗೇಮ್‌ ಚಟಕ್ಕೆ ಬಿಎಸ್‌ಸಿ ಮೊದಲ ವರ್ಷದ ವಿದ್ಯಾರ್ಥಿನಿ ಬಲಿ

11-

Yadagiri: ಬಾಲ್ಯ ವಿವಾಹ ವಿರುದ್ಧ ಹೋರಾಡೋಣ: ಶಾಸಕ ಕಂದಕೂರು ಕರೆ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

10-

Chikkamagaluru: ಪೆಟ್ರೋಲ್-ಡಿಸೇಲ್ ಬೆಲೆಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.