ಕೋಟೆ ನಾಡಿನ ಟಕ್ಕೇದ ಮಸೀದಿ ಸೌಹಾರ್ದತೆ ಸಂಕೇತ

Team Udayavani, May 18, 2019, 1:05 PM IST

gadaga-tdy-2..

ಗಜೇಂದ್ರಗಡ: ಸೈಯದ್‌ ಮಾಸೂಮ ಅಲಿಷ್ಯಾ ಪೀರಾಂ ದರ್ಗಾ ನೋಟ.

ಗಜೇಂದ್ರಗಡ: ಸರ್ವ ಧರ್ಮಗಳ ತ್ರಿವೇಣಿ ಸಂಗಮದಂತಿರುವ ಭಾರತದ ಪುಣ್ಯ ಭೂಮಿಯಲ್ಲಿ ಅನೇಕ ಸಂತ ಸೂಫಿ ಶರಣರ ಮಠ, ಮಸೀದಿಗಳು ಭ್ರಾತೃತ್ವದ ಭಾಷ್ಯ ಬರೆದಿವೆ. ಅಂತಹ ಮಠ, ಮದೀಸಿಗಳಲ್ಲಿ ಕೋಟೆ ನಾಡಿನ ಟಕ್ಕೇದ ಮಸೀದಿಯೂ ಒಂದು.

ಐತಿಹಾಸಿಕ ಹಿನ್ನೆಲೆಯ ಟಕ್ಕೇದ ಬಾಬಾನವರ ಮಸೀದಿ ಸುಮಾರು ಐದನೂರು ವರ್ಷಗಳ ಇತಿಹಾಸ ಪರಂಪರೆ ಹೊಂದಿದೆ. ದರ್ಗಾದಲ್ಲಿ ಹಜರತ್‌ ಸೈಯ್ಯದ್‌ ಮಾಸೂಮ್‌ ಅಲಿಷಾ ಪೀರಾಂ(ರ.ಅ) ಹಾಗೂ ಹಜರತ್‌ ನಿಸಾರ್‌ ಅಲಿಷಾ ಪೀರಾಂ(ರ.ಅ) ಅವರು ಹಿಂದೂ-ಮುಸ್ಲಿಂ ಬಾಂಧವರ ಸೌಹಾರ್ದತೆ ಕೊಂಡಿಯಾಗಿ ಬೆಸೆದು ನಿಸ್ವಾರ್ಥದಿಂದ ಸೂಫಿ ಸಂತರಾಗಿ ಧಾರ್ಮಿಕ ಚಿಂತನೆ ಹರಿಕಾರರಾಗಿ ಜನಜನಿತರಾದರು.

ಸೂಫಿ ಸಂತ ಹಜರತ್‌ ಸೈಯ್ಯದ್‌ ನಿಸಾರ್‌ ಅಲಿಷಾ ಪೀರಾಂ (ರ.ಅ)ರಿಂದ 1965ರಲ್ಲಿ ಬಯ್ಯತ್‌ (ಗುರು ದೀಕ್ಷೆ) ಪಡೆದ ದರ್ಗಾದಲ್ಲಿ 8ನೇ ಪೀಠಾಧಿಪತಿಯಾಗಿ ಹಜರತ್‌ ಸೈಯ್ಯದ್‌ ಮೆಹಬೂಬ್‌ ಆಲಿಷಾ ಪೀರಾಂ ದರ್ಗಾದ ಸಜ್ಜಾದೆ ನಸೀನರಾಗಿ ಭಕ್ತರ ಪ್ರೀತಿಯ ಟಕ್ಕೇದ ಬಾಬಾ, ಟಕ್ಕೇದ ಅಜ್ಜ, ಟಕ್ಕೇದ ನಾನಾ ಎಂದೇ ಕರೆಯಿಸಿಕೊಂಡಿದ್ದಾರೆ. ಕಳೆದ ಮೂರು ದಶಕಗಳಿಂದ ಜಾತಿ, ಮತ, ಪಂಥ ಭೇದ ಎನಿಸದೆ ಬಯಸಿ ಬಂದ ಭಕ್ತರನ್ನು ಪ್ರೀತಿಯಿಂದ ಕಂಡು ಅವರ ನೋವು ನಲಿವು ಜತೆ ಹಲವಾರು ರೋಗ ರುಜಿನಗಳಿಗೆ ಕೇವಲ ಮಂತ್ರ ಶಕ್ತಿಯಿಂದ ಗುಣಮುಖರಾದದ್ದನ್ನು ಕೇಳಬಹುದು. ಹೀಗಾಗಿ ಕೊಪ್ಪಳ, ಬಾಗಲಕೋಟೆ, ಬೀದರ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲದೆ ಪಕ್ಕದ ಮಹಾರಾಷ್ಟ್ರದಿಂದಲೂ ಭಕ್ತ ಸಮೂಹ ಇಲ್ಲಿಗೆ ಹರಿದು ಬರುತ್ತದೆ. ಇದೀಗ 9ನೇ ಪೀಠಾಧಿಪತಿಯಾಗಿ ಹಜರತ್‌ ಸೈಯ್ಯದ್‌ ನಿಜಾಮುದ್ದಿನಶಾ ಅಶ್ರಫಿ ಸೂಫಿ ಸಂತ ಹಜರತ್‌ ಮೆಹಬೂಬ್‌ ಅಲಿಶಾ ಪೀರಾಂರಿಂದ 2015ರಲ್ಲಿ ಬಯ್ಯತ (ಗುರುದೀಕ್ಷೆ) ಪಡೆದು ದರ್ಗಾದ ಸಜ್ಜಾದ ನಸಿನರಾಗಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬೌದ್ಧ ಪೌರ್ಣಿಮೆಯೆಂದು ಉರುಸು: ಸೌಹಾರ್ದತೆ ಪ್ರತೀಕವಾದ ಹಜರತ್‌ ಸೈಯದ್‌ ಮಾಸೂಂ ಅಲಿಷಾ ಪೀರಾಂ (ರ.ಅ) ಹಜರತ್‌ ಸೈಯದ ನಿಸಾರ ಅಲಿಷಾ ಪೀರಾಂ(ರ.ಅ) ಅವರ ಉರುಸು ಪ್ರತಿ ವರ್ಷ ಬೌದ್ಧ ಪೌರ್ಣಿಮೆ (ಆಗಿ ಹುಣ್ಣಿಮೆ) ದಿನದಂದು ಜರುಗಲಿದೆ.

ಶುಕ್ರವಾರ ಸ್ಥಳೀಯ ಕೆಳಗಲ ಪೇಟೆಯ ತಟಗಾರ ಮಸೀದಿಯಿಂದ ಗಂಧ (ಸಂದಲ) ಆಚರಣೆ ನಡೆದಿದ್ದು, ಮೇ 18 ರಂದು ಭಾವೈಕ್ಯತಾ ಉರುಸು ಜರುಗಲಿದೆ. ಆ ದಿನದಂದೆ ಸಂಜೆ ಕೆಳಗಲ ಪೇಟೆಯ ಶ್ರೀ ದುರ್ಗಾದೇವಿ ಜಾತ್ರೆ ಉಚ್ಚಾಯ ಎಳೆದ ಬಳಿಕ ಉರುಸಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅನ್ನಸಂತರ್ಪಣೆಯಂತಹ ಆಚರಣೆಗಳಿಗೆ ಚಾಲನೆ ನೀಡುವುದರ ಜತೆಗೆ ಕಾಕತಾಳಿಯಂಬಂತೆ ಶಿರಹಟ್ಟಿಯ ಫಕೀರೇಶ್ವರ ಜಾತ್ರಾ ಮಹೋತ್ಸವವು ಇದೇ ದಿನದಂದು ನಡೆಯುತ್ತಿರುವುದು ಭಾವೈಕ್ಯತೆ ಸಾರಿ ಹೇಳುತ್ತಿದೆ.

•ಡಿ.ಜಿ. ಮೋಮಿನ್‌

ಟಾಪ್ ನ್ಯೂಸ್

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

Gadag; Gadag rural station CPI suspended due to dereliction of duty

Gadag; ಕರ್ತವ್ಯ ಲೋಪ ಹಿನ್ನೆಲೆ ಗದಗ ಗ್ರಾಮೀಣ ಠಾಣೆ ಸಿಪಿಐ ಸಸ್ಪೆಂಡ್

ಭಾರಿ ಮಳೆಗೆ ಮರದ ಬಳಿ ನಿಂತ್ತಿದ್ದವರಿಗೆ ಬಡಿದ ಸಿಡಿಲು… ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

ಭಾರಿ ಮಳೆಗೆ ಮರದ ಬಳಿ ನಿಂತಿದ್ದವರಿಗೆ ಬಡಿದ ಸಿಡಿಲು… ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.