ದಲಿತ ಕಾಲೋನಿಯಲ್ಲಿ ಆಳೆತ್ತರ ತಗ್ಗು-ದಿನ್ನೆ!


Team Udayavani, Jan 8, 2020, 3:20 PM IST

gadaga-tdy-1

ರೋಣ: ಉತ್ತಮ ಸಂಗೀತಗಾರರು ಹಾಗೂ ಜನಪದ ಕಲಾವಿದರನ್ನು ನಾಡಿಗೆ ಪರಿಚಯಿಸಿದ ಕೋತಬಾಳ ಗ್ರಾಮದಲ್ಲಿನ ದಲಿತ ಕಾಲೋನಿಯಲ್ಲಿ ಆಳೆತ್ತರದ ತಗ್ಗು-ದಿನ್ನೆಗಳು ಬಿದ್ದು ಪರಿಣಾಮ ಸಾರ್ವಜನಿಕರು ಮನೆಯಿಂದ ಹೊರಬರಲು ಒದ್ದಾಡುತ್ತ ಸಾಂಕ್ರಾಮಿಕ ರೋಗಗಳ ಮಧ್ಯದಲ್ಲಿಯೇ ಜೀವನ ನಡೆಸುವಂತ ದುಸ್ಥಿತಿ ಬಂದೊದಗಿದೆ.

ಸರ್ಕಾರ ದಲಿತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆ ನೀಡಿ, ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದ್ದರೂ ಕೋತಬಾಳ ಗ್ರಾಮದ ಮಾಡಲಗೇರಿ ರಸ್ತೆಯಲ್ಲಿ ಹೊಂದಿಕೊಂಡಿರುವ ದಲಿತ ಕಾಲೋನಿಯಲ್ಲಿರುವ ನೂರಾರು ಮನೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೇ ಜನರು ನರಳುತ್ತಿದ್ದಾರೆ.

ತುಂಬಿದ ಚರಂಡಿ: ಕಳೆದ ಮೂರು ತಿಂಗಳಿಂದ ಇಲ್ಲಿನ ಚರಂಡಿಗಳು ತುಂಬಿ ತುಳಕುತ್ತಿವೆ. ಆದರೆ ಸಂಬಂಧಪಟ್ಟ ಗ್ರಾಪಂ ಆಡಳಿತ ಮಂಡಳಿ ಮಾತ್ರ ಇತ್ತ ಗಮನಹರಿಸಿಲ್ಲ. ಇದರಿಂದ ಚರಂಡಿ ಕೊಳಚೆ ನೀರು ಮನೆಯತ್ತ ನುಗ್ಗುತ್ತಿದೆ. ಇದರ ಮಧ್ಯೆ ಚರಂಡಿ ನೀರು ಸರಗವಾಗಿ ಮುಂದೆ ಹರಿದು ಹೋಗದೇ ಅಲ್ಲಿಯೇ ನಿಂತು ಸಣ್ಣ ಸಣ್ಣ ಹೊಂಡಗಳು ನಿಮಾರ್ಣವಾಗಿರುವುದು ಜನ ಗ್ರಾಮದೊಳಗೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ.

ರೋಗ ಹರಡುವ ಭೀತಿ: ಸುಮಾರು 150ಕ್ಕೂ ಹೆಚ್ಚು ಮನೆ ಹೊಂದಿರುವ ದಲಿತ ಕಾಲೋನಿಯಲ್ಲಿರುವ ಚರಂಡಿಗಳು ತುಂಬಿದ್ದು, ಅರ್ಧಕ್ಕೂ ಹೆಚ್ಚು ಗ್ರಾಮದ ಜನರು ಬಳಸುವ ನೀರು ಹರಿದು ಇಲ್ಲಿಗೆ ಬರುತ್ತದೆ. ಇದರಿಂದ ವ್ಯಬಸ್ಥಿತ ಚರಂಡಿಗಳನ್ನು ನಿರ್ವಹಿಸದ ಹಿನ್ನೆಲೆಯಲ್ಲಿ ನೀರು ರಸ್ತೆಯಲ್ಲಿ ನಿಂತಿದೆ. ಸುತ್ತಲು ಜಾಲಿಕಂಟಿ ಅದರೊಳಗೆ ಕೆಸರು ನೀರು ನಿಂತಿರುವುದರಿಂದ ಮಕ್ಕಳು ಇಲ್ಲಿಯೇ ಆಡುತ್ತಾರೆ. ಇಲ್ಲಿನ ವೃದ್ಧರು ಮನೆಯ ಹೊರಗಡೆ ಕುಳಿತುಕೊಂಡು ವಿಶ್ರಾಂತಿ ಪಡೆಯುತ್ತಿದ್ದು, ದುರ್ವಾಸನೆಯಲ್ಲಿಯೇ ಬದುಕುವಂತಾಗಿದೆ. ಇದರಿಂದ ಜ್ವರ, ಕೆಮ್ಮು, ನೆಗಡಿ, ಡೆಂಘೀ,ಟೈಫಾಯಿಡ್‌, ಮಲೇರಿಯಾದಂತಹ ರೋಗಗಳ ಭೀತಿಯಲ್ಲಿ ಜನರಿದ್ದಾರೆ.

ಪ್ರಯಾಣಿಕರ ಹಿಡಿಶಾಪ: ಕೋತಬಾಳ ಗ್ರಾಮದಿಂದ ಮಾಡಲಗೇರಿ,ನೈನಾಪುರ, ಬಸರಕೋಡ ಸೇರಿದಂತೆ ಅನೇಕ ಗ್ರಾಮಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಈ ರಸ್ತೆ ಸ್ಥಿತಿ ನೋಡಿ ಹಿಡಿಶಾಪ ಹಾಕುತ್ತಿದ್ದಾರೆ.

ಏಕೆಂದರೆ ಇಲ್ಲಿ ದ್ವಿಚಕ್ರ ವಾಹನಗಳು ಸಂಪೂರ್ಣ ನೀರಿನಲ್ಲಿ ಮುಳಗುತ್ತವೆ. ಕೆಲ ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಗ್ರಾಮದ ಮುಖ್ಯ ರಸ್ತೆಯಿಂದ ಸುಮಾರು 500 ಮೀಟರ್‌ವರೆಗೆಸಂಪೂರ್ಣ ರಸ್ತೆ ಹಾಳಾಗಿದ್ದು, ತಗ್ಗು-ದಿನ್ನೆಗಳಲ್ಲಿ ನೀರು ಸಂಗ್ರಹವಾಗಿ ರೋಗದ ವಾತಾವರಣ ನಿಮಾಣವಾಗಿದೆ.

 

ಯಚ್ಚರಗೌಡ ಗೋವಿಂದಗೌಡ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.