ಮಾರುಕಟ್ಟೆಗೆ ಬಂದ ಹಣ್ಣುಗಳ ರಾಜ

Team Udayavani, May 6, 2019, 12:24 PM IST

6–May-13

ಹರಪನಹಳ್ಳಿ: ಅನಂತನಹಳ್ಳಿ ಬಳಿ ರೈತರು ಹೊಲದಲ್ಲಿ ಬೆಳೆದು ತಾವೇ ಮಾರಾಟಕ್ಕಿರುವ ಮಾವಿನ ಹಣ್ಣು

ಹರಪನಹಳ್ಳಿ: ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಸುಗ್ಗಿ ಎಲ್ಲೆಡೆ ಆರಂಭವಾಗಿದ್ದು, ಹರಪನಹಳ್ಳಿ ಮಾರುಕಟ್ಟೆಗೆ ಇದೀಗ ಮಾವಿನ ಹಣ್ಣು ಮಾರಾಟಕ್ಕೆ ಆಗಮಿಸುತ್ತಿವೆ. ತಾಲೂಕಿನ ವಿವಿಧೆಡೆ ಬೆಳೆದಿರುವ ಬೇಲಿಸಾ, ಮಲಗಾವ್‌, ಮಲ್ಲಿಕಾ, ತೋತಾಪುರಿ, ರಸಪೂರಿ ಮಾವು ಜೊತೆಗೆ ಇತರೆ ವಿವಿಧ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಈಗ ಮಾರುಕಟ್ಟೆಯಲ್ಲಿರುವ ಮಲಗಾವ್‌-50, ಮಲ್ಲಿಕಾ-50, ತೋತಾಪುರಿ-40, ರಸಪೂರಿ 50 ರಿಂದ 60 ರೂ. ಬೆಲೆಗೆ ಮಾರಾಟ ಅಗುತ್ತಿವೆ. ಹಣ್ಣಿನ ಮಾರುಕಟ್ಟೆ, ಮಾರಾಟ ಸ್ಥಳವಾದ ಚಿತ್ರಮಂದಿರದ ಆಸುಪಾಸು, ಹೊಸ ಬಸ್‌ ನಿಲ್ದಾಣ ಬಳಿ ಹೋದರೆ ಮಾವಿನ ವಾಸನೆ ಒಮ್ಮೆ ಕತ್ತು ತಿರುಗಿಸುವಂತೆ ಮಾಡುತ್ತಿವೆ. ಬಿಸಿಲಿನ ಝಳವಿದ್ದರೂ ಆತಂಕದಲ್ಲಿಯೇ ಒಮ್ಮೆ ರುಚಿ ನೋಡುವ ಆಸೆಯಿಂದ ಖರೀದಿಯೂ ನಡೆಯುತ್ತಿದೆ.

ಮಾವು ಬೆಳೆದ ರೈತರು ಬಹುತೇಕ ಸ್ಥಳೀಯ ಹಣ್ಣಿನ ವ್ಯಾಪಾರಿಗಳನ್ನು ನಂಬಿಕೊಂಡಿರುವುದರಿಂದ ಕೆಲವು ಸಲ ಮಾರುಕಟ್ಟೆ ದರದಲ್ಲಿ ವ್ಯತ್ಯಾಸವಾಗಿ ಮಾವು ಬೆಳೆಗಾರರು ನಷ್ಟ ಅನುಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ರೈತರು ಬೆಳೆದ ಮಾವಿನ ಹಣ್ಣುಗಳಿಗೆ ಉತ್ತಮ ಬೆಲೆ ಪಡೆಯಲು ತಾವೇ ಹೊಲ ಮತ್ತು ರಸ್ತೆ ಬಳಿ ಮಾರಾಟಕ್ಕಿಳಿದಿರುವುದು ಕಂಡು ಬರುತ್ತಿದೆ. ಕಳೆದ ಬಾರಿ ಈ ಹೊತ್ತಿನಲ್ಲಿ ಮಾವಿನ ಬೆಲೆ ಇನ್ನೂ ಹೆಚ್ಚಿತ್ತು, ಈ ಬಾರಿ ಸ್ವಲ್ಪ ಕಡಿಮೆಯಿದೆ. ಇನ್ನೂ ಮಾವಿನ ವ್ಯಾಪಾರ ಕುದುರಿಲ್ಲ. ಜತೆಗೆ ಈ ಬಾರಿ ಹಣ್ಣು ಕೂಡ ಕಡಿಮೆಯಿದೆ. ಕಳೆದ ವರ್ಷ ಈ ಹೊತ್ತಿಗೆ ಸಾಕಷ್ಟು ವ್ಯಾಪಾರ ಮಾಡಿದ್ದೆವು ಎನ್ನುತ್ತಾರೆ ಮಾವು ವ್ಯಾಪಾರಿ ಪಟ್ಟಣದ ವಾಲ್ಮೀಕಿ ನಗರದ ದೊಡ್ಡಗರಡಿಗೇರಿ ದುರುಗಮ್ಮ ಮತ್ತು ಊರಮ್ಮ.

ತಾಲೂಕಿನ ಅನಂತನಹಳ್ಳಿ ಗ್ರಾಮದ ರೈತ ರವಿಚಂದ್ರ ಎಂಬುವವರ ಜಮೀನಿನಲ್ಲೇ ಬೆಳೆದಿರುವ ಬೇಲಿಸಾ ತಳಿ ಮಾವಿನ ಹಣ್ಣು ಕೆಜಿಗೆ 90 ರಿಂದ 100 ರೂ.ನಂತೆ ಮಾರಾಟವಾಗುತ್ತಿದೆ. ತೋಟದಲ್ಲಿ ಸಮಗ್ರ ಬೆಳೆ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದು, ಇಲ್ಲಿ ಒಟ್ಟು 3 ಎಕರೆ ಪ್ರದೇಶದಲ್ಲಿ 140 ಗಿಡಗಳಿವೆ. ಮಾವು ಉಷ್ಣ ವಲಯದ ಬೆಳೆಯಾಗಿರುವುದರಿಂದ ಕೆಂಪು ಗೋಡು ಮಣ್ಣಿನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ನೀರಾವರಿ ಪ್ರದೇಶದಲ್ಲಿಯೂ ಹಣ್ಣು ಬೆಳೆಯಲಾಗಿದ್ದು, ಮಳೆ ಕಡಿಮೆಯಾಗಿರುವುದರಿಂದ ಹಣ್ಣುಗಳ ಇಳುವರಿ ಕಡಿಮೆಯಾಗಿದೆ. ನಾವೇ ಹೊಲದ ರಸ್ತೆ ಬದಿ ಮಾರಾಟ ಮಾಡುತ್ತಿದ್ದೇವೆ ಎಂದು ರೈತ ರವಿಚಂದ್ರ ಹೇಳುತ್ತಾರೆ.

ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 500 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಬೆಳೆ ಹಾಕಲಾಗಿದೆ. ಕಂಚಿಕೇರಿ, ಕ್ಯಾರಕಟ್ಟೆ, ಹಳ್ಳಿಕೆರೆ, ತೆಲಿಗಿ ಕೆ.ಕಲ್ಲಹಳ್ಳಿ ಸೇರಿದಂತೆ ವಿವಿಧೆಡೆ ಫಸಲು ಚೆನ್ನಾಗಿ ಬಂದಿದೆ. ಪ್ರತಿ ಒಂದು ಹೆಕ್ಟೇರ್‌ ಪ್ರದೇಶದಿಂದ 5ರಿಂದ 8 ಟನ್‌ ಹಣ್ಣು ನಿರೀಕ್ಷೆ ಮಾಡಲಾಗಿದೆ. ಇಡೀ ತಾಲೂಕಿನ ಒಟ್ಟು 2500 ರಿಂದ 3000 ಸಾವಿರ ಟನ್‌ ಹಣ್ಣು ಸಿಗುವ ನಿರೀಕ್ಷೆಯಿದೆ. ಈಚೆಗೆ ಬಂದ ಗಾಳೆಯಿಂದ ಸ್ವಲ್ಪ ಹಾನಿಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಸಲು ಬಂದಿದೆ.
ಟಿ.ಆರ್‌. ಶಶಿಕಲಾ,
ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ.

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.