ನೀರಿಗಾಗಿ ಮಲೆನಾಡಿನಲ್ಲಿ ಹಾಹಾಕಾರ

Team Udayavani, May 10, 2019, 3:11 PM IST

has-2

ಸಕಲೇಶಪುರ: ಹಿಂದೆಂದೂ ಕಾಣದ ರಣಬಿಸಿಲಿಗೆ ಸಕಲೇಶಪುರ ತಾಲೂಕು ತತ್ತರಿಸಿ ಹೋಗಿದ್ದು ಹನಿ ನೀರಿಗಾಗಿ ಮಲೆನಾಡಿನಲ್ಲೂ ಹಾಹಾಕಾರ ಶುರುವಾಗಿದೆ. ವಾರದಲ್ಲಿ ಮಲೆನಾಡಿನಲ್ಲಿ ಸತತ ಮಳೆ ಬೀಳ ಲಿಲ್ಲ ಅಂದರೆ ಜಲಕ್ಷಾಮ ಶುರುವಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ.

ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಮಲೆನಾಡು ಸಕಲೇಶಪುರ ಅಕ್ಷರಶಃ ಬಿಸಿಲಿನ ತಾಪಕ್ಕೆ ನಲುಗಿ ಹೋಗಿದೆ. ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸಕಲೇಶಪುರದ ಮಲೆನಾಡು ಭಾಗದಲ್ಲಿ ಜಲಕ್ಷಾಮ ಕಾಣಿಸಿಕೊಂಡಿದ್ದು, ಪಶ್ಚಿಮಘಟ್ಟದ ನದಿ ತೊರೆಗಳು ಬತ್ತಿ ಹೋಗಿವೆ. ಜೊತೆಗೆ ಕಾಫೀ ಏಲಕ್ಕಿ ಬೆಲೆ ಒಣಗುತ್ತಿದ್ದರೆ, ಪಶ್ಚಿಮ ಘಟ್ಟದ ಕಾಡಿನ ಪ್ರಾಣಿಗಳು ನೀರಿಗಾಗಿ ಪರದಾಡುತ್ತಿವೆ.

ಬಡವರ ಊಟಿ: ಸಕಲೇಶಪುರ ಅಂದ್ರೆ ಬಡವರ ಊಟಿ. ವರ್ಷದ 365 ದಿನವೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆ ನಾಡು ಇಂದು ಬಿಸಿಲಿನ ತಾಪಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಕರ್ನಾಟಕದ ಸ್ವಿಟ್ಜರ್‌ಲ್ಯಾಂಡ್‌ ಎಂದೇ ಹೆಸರುವಾಸಿ ಆಗಿರುವ ಸಕಲೇಶಪುರದ ಮಲೆನಾಡು ಪ್ರದೇಶದಲ್ಲಿ ಕಂಡರಿಯದ ಬರದ ಛಾಯೆ ಆವರಿಸಿದೆ.

ಅತಿ ಮುಖ್ಯವಾಗಿ ಸಾವಿರಾರು ಕೋಟಿ ಎತ್ತಿನಹೊಳೆ ಯೋಜನೆಯ ನೀರಿನ ಮೂಲದ ನದಿಗಳಾದ ಕೆಂಪು ಹೊಳೆ, ಅಡ್ಡ ಹೊಳೆ, ಎತ್ತಿನ ಹಳ್ಳ ನದಿ ತೊರೆಗಳಲ್ಲಿ ಜಲಕ್ಷಾಮ ಉಂಟಾಗಿದ್ದು, ದಶಕಗಳಿಂದ ನೀರಿಗಾಗಿ ಕಾಯುತ್ತಿರುವ ಬಯಲುಸೀಮೆ ಜಿಲ್ಲೆಗಳಿಗೂ ಆತಂಕ ಎದುರಾಗಿದೆ. ವರ್ಷ ಪೂರ್ತಿ ಮೈದುಂಬಿ ಹರಿಯುತ್ತಿದ್ದ ನದಿ ತೊರೆಗಳು ಬತ್ತಿ ಹೋಗಿದ್ದು, ಪಶ್ಚಿಮ ಘಟ್ಟದ ಕಾಡಿನ ಪ್ರಾಣಿಗಳು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಹಾಗಾಗಿಯೇ ನೀರು ಆಹಾರ ಹುಡುಕಿ ಕಾಡಾನೆಗಳು ಕಾಡು ಕೋಣ ಸೇರಿದಂತೆ ಹಲವಾರು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಜನರಿಗೆ ತೊಂದರೆ ನೀಡುತ್ತಿವೆ.

ಕಳೆದ ಬಾರಿ ಅತಿ ಯಾದ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ್ದ ಸಕಲೇಶಪುರ ಭಾಗದ ಕಾಫಿ, ಮೆಣಸು, ಏಲಕ್ಕಿ ಬೆಳೆಗಾರರು, ಸದ್ಯ ಅತಿಯಾದ ತಾಪಮಾನ ದಿಂದ ಬೆಳೆ ಹಾನಿಯ ಆತಂಕದಲ್ಲಿ ಇದ್ದಾರೆ. ಕಳೆದ ವರ್ಷ ಅತಿವೃಷ್ಟಿ ಮಳೆಯಿಂದ ತತ್ತರಿಸಿದ ಜನ ಇದೀಗ ಅನಾವೃಷ್ಟಿಯಿಂದ ತತ್ತರಿಸುವಂತಾಗಿದೆ.

ಜಲ ಕ್ಷಾಮ: ಮಲೆನಾಡು ಭಾಗದ ಜಲಕ್ಷಾಮ ಹೇಮಾವತಿ ಹಾಗೂ ಧರ್ಮಸ್ಥಳದ ನೇತ್ರಾವತಿ ನದಿಗಳಿಗೂ ತಟ್ಟಲಿದ್ದು, ಶೀಘ್ರದಲ್ಲಿ ಮಳೆ ಬಾರದಿದ್ದರೆ ಮಲೆನಾಡು ಬಿಸಿಲಿಗೆ ತತ್ತರಿಸಿ ಹೋಗಲಿದೆ.

ನಿರಂತರ ಅರಣ್ಯ ನಾಶ: ಮಲೆನಾಡಿನಲ್ಲೂ ಈ ರೀತಿಯ ತಾಪಮಾನ ಹೆಚ್ಚಾಗಲು, ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ಕಾಡನ್ನು ನಾಶ ಮಾಡಿರುವುದೇ ಕಾರಣ ಎಂದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣ ವಾಗಿದೆ. ಪವರ್‌ ಪ್ರಾಜೆಕ್ಟ್ಗಳು, ಎತ್ತಿನಹೊಳೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಅಗಲೀಕ ರಣ, ಹೇಮಾವತಿ ತೀರದಲ್ಲಿ ಮರಳು ಲೂಟಿ, ಟಿಂಬರ್‌ ಮಾಫಿಯಾ ಸೇರಿದಂತೆ ಇನ್ನು ಹಲವು ಯೋಜನೆಗಳಿಂದ ಮಲೆನಾಡಿನ ಪರಿಸ್ಥಿತಿ ಈ ರೀತಿಯಾಗಲು ಕಾರಣವಾಗಿದೆ. ಒಟ್ಟಾರೆ ಬಡವರ ಊಟಿ ಎಂದು ನೂರಾರು ಸಿನಿಮಾಗಳ ಚಿತ್ರೀಕರಣ ವಾಗಿದ್ದ ಸಕಲೇಶಪುರ, ಸದ್ಯ ಅಕ್ಷರಶಃ ಒಣ ಕಾಡಿನಂತಿದೆ. ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಕಾಡಿಗೆ ಕನ್ನ ಹಾಕುವ ಕೆಲಸ ಬಿಟ್ಟು, ಹಸಿರು ತಾಣವನ್ನು ಉಳಿಸಬೇಕಿದೆ.

ಎತ್ತಿನಹೊಳೆ ಹೊಳೆ ಸೇರಿದಂತೆ ವಿವಿಧ ಪರಿಸರಕ್ಕೆ ಮಾರಕವಾ ಗಿರುವ ಯೋಜನೆ ಗಳಿಂದ ತಾಲೂ ಕಿನ ಪರಿಸರಕ್ಕೆ ನೇರ ಹಾನಿಯುಂಟಾ ಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ತಾಲೂಕಿನ ಪರಿಸರವನ್ನು ನಾಶ ಮಾಡಿರುವುದರ ನೇರ ಪರಿಣಾಮ ವನ್ನು ನಾವು ಅನುಭವಿಸುತ್ತಿದ್ದೇವೆ.
● ರಶ್ಮಿ ಹಿರಿಯೂರು, ಪರಿಸರ ಪ್ರೇಮಿ

ಎತ್ತಿನಹೊಳೆ ಯೋಜನೆ ಸಂಪೂರ್ಣವಾಗಿ ಪರಿಸರಕ್ಕೆ ಮಾರಕವಾಗಿದೆ.  ಈ ಯೋಜನೆ ಯಿಂದ ವ್ಯಾಪಕ ನಷ್ಟವುಂಟಾ ಗುತ್ತಿದ್ದು ಒಂದು ಕಡೆ ಮಲೆನಾಡಿನ ಪರಿಸರದ ಮೇಲೆ ಹಾನಿಯುಂಟಾ ಗುತ್ತಿದೆ. ಮತ್ತೂಂದು ಕಡೆ ಸರ್ಕಾರದ ಬೊಕ್ಕಸವನ್ನು ಯೋಜನೆಯ ಹೆಸರಿನಲ್ಲಿ ಖಾಲಿ ಮಾಡಲಾ ಗುತ್ತಿದೆ.ಈ ಯೋಜನೆಯಿಂದ ಬರಪೀಡಿತ ಪ್ರದೇಶಗಳಿಗೆ ನೀರು ಹರಿಯುವುದು ಅನುಮಾನವಾಗಿದೆ.
● ಕವನ್‌ ಗೌಡ, ವಕೀಲರು

ಸುಧೀರ್‌ ಎಸ್‌.ಎಲ್

ಟಾಪ್ ನ್ಯೂಸ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Marriage of 72-year-old man with 12-year-old girl; The father sold his daughter for money!

Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Prajwal Revanna: ಹೊಳೆನರಸೀಪುರಕ್ಕೆ ಪ್ರಜ್ವಲ್‌; ಲೈಂಗಿಕ ದೌರ್ಜನ್ಯ ಕೇಸಲ್ಲಿ ಸ್ಥಳ ಮಹಜರು

Prajwal Revanna: ಹೊಳೆನರಸೀಪುರಕ್ಕೆ ಪ್ರಜ್ವಲ್‌; ಲೈಂಗಿಕ ದೌರ್ಜನ್ಯ ಕೇಸಲ್ಲಿ ಸ್ಥಳ ಮಹಜರು

Hassan: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತು, ಮೂವರಿಗೆ ಗಾಯ

Hassan: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತ್ಯು, ಮೂವರಿಗೆ ಗಾಯ

1-hasana’

Hasana Crime: ರೌಡಿಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.