ಶುಲ್ಕ ವಿವರ ಘೋಷಣೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅಸಡ್ಡೆ


Team Udayavani, May 3, 2019, 2:29 PM IST

has-5

ಚನ್ನರಾಯಪಟ್ಟಣ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ವಿಧಿಸುವ ಶುಲ್ಕದ ವಿವರಗಳನ್ನು ನಿಗದಿತ ದಿನಾಂಕದೊಳಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಗೆ ಸಲ್ಲಿಸಿ ಕೈತೊಳೆದು ಕೊಂಡಿರುವುದನ್ನು ಹೊರತುಪಡಿಸಿ ಶಾಲಾ ಆವರಣದಲ್ಲಿನ ನೋಟಿಸ್‌ಬೋರ್ಡ್‌ನಲ್ಲಿ ಹಾಕದೇ ಅಸಡ್ಡೆ ತೋರುತ್ತಿವೆ.

ಅನುದಾನ ರಹಿತ ಶಾಲೆಗಳು ಡಿ.31ರೊಳಗೆ ಶೈಕ್ಷಣಿಕ ವರ್ಷದ ನಿಗದಿತ ಶುಲ್ಕಗಳ ಸಂಪೂರ್ಣ ವಿವರಗಳನ್ನು ಇಲಾಖೆಗೆ ಒದಗಿಸಿವೆ. ಆದರೆ ಶಾಲೆಗೆ ಮಕ್ಕಳು ದಾಖಲೆಯಾಗುತ್ತಿರುವ ಈ ವೇಳೆಯಲ್ಲಿ ನೋಟಿಸ್‌ ಬೋರ್ಡ್‌ ಅಥವಾ ವೆಬ್‌ಸೈಟ್‌ಗಳಲ್ಲಿ ಶುಲ್ಕದ ವಿವಿರಗಳನ್ನು ಪ್ರಕಟಿಸಬೇಕೆಂಬ ಸರ್ಕಾರ ಆದೇಶಕ್ಕೆ ಮನ್ನಣೆ ನೀಡದೇ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಪ್ರಸಕ್ತ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದು, ಪಾಲಕರಿಂದ ಮನಸೋ ಇಚ್ಛೆ ಹಣ ವಸೂಲಿಗೆ ಇಳಿದಿವೆ.

ಶಿಕ್ಷಣ ಇಲಾಖೆ ನಿದ್ದೆ ಮಾಡುತ್ತಿದೆ: ತಾಲೂಕಿನ 43 ಖಾಸಗಿ ಶಾಲೆಗಳಿದ್ದು, 2019-20ನೇ ಸಾಲಿನ ನಿಗದಿತ ಶುಲ್ಕ ವಿವರಣೆಯನ್ನು ಡಿಸೆಂಬರ್‌ ತಿಂಗಳಿನಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತಲುಪಿಸಿದ್ದಾರೆ. ಶಾಲೆಗೆ ಮಕ್ಕಳ ದಾಖಲಾತಿ ಯಾಗುವ ತಿಂಗಳಿನಲ್ಲಿ ನಿಗದಿತ ಶುಲ್ಕದ ವಿವರವನ್ನು ನೋಟಿಸ್‌ ಬೋರ್ಡ್‌ ಹಾಕು ವಲ್ಲಿ ಖಾಸಗಿ ಸಂಸ್ಥೆಯವರು ಅಸಡ್ಡೆ ತೋರುತ್ತಿದ್ದಾರೆ, ಈ ಬಗ್ಗೆ ಪ್ರಶ್ನೆ ಮಾಡಬೇಕಿರುವ ಸರ್ಕಾರಿ ಇಲಾಖೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ.

ಬಿಇಒ ನಿರಂತರ ರಜೆ: ಈ ಸಂಬಂಧ ಶಾಲೆಗಳಿಗೆ ಬಿಸಿ ಮುಟ್ಟಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಏ.5 ರಿಂದ ಏ.29ರ ವರೆಗೆ ರಜೆ ಮೇಲೆ ತೆರಳಿದ್ದು, ಎರಡು ದಿವಸದಿಂದ ಕಚೇರಿಗೆ ಅಗಮಿಸಿದ್ದಾರೆ. ಎಸ್‌ಎಸ್‌ಎಲ್ಸಿ ಫ‌ಲಿತಾಂಶ ಹೊರಬಂದಿರುವ ವೇಳೆಯಲ್ಲಿ ಕಚೇರಿಗೆ ಆಗಮಿಸಿರುವ ಬಿಇಒ ಎಚ್.ಕೆ.ಪುಷ್ಪಲತಾ ಈಗಾಗಲೇ ಕಡಿಮೆ ಫ‌ಲಿತಾಂಶ ಬಂದಿರುವ ಪ್ರೌಢ ಶಾಲೆ ಶಿಕ್ಷಕರ ಸಭೆ, ಬೇಸಿಗೆ ರಜೆಯಲ್ಲಿನ ಬಿಸಿಯೂಟ ಪರಿಶೀಲನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆ ಮುಖ ಮಾಡುತ್ತಿಲ್ಲ.

ಕ್ಷೇತ್ರ ಶಿಕ್ಷಣಾಧಿಕಾರಿ ನಿರಂತರ ರಜೆ ಮೇಲೆ ಕಚೇರಿ ಯಿಂದ ಹೊರಗೆ ಇದ್ದ ವೇಳೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಹೇಳುವವರು ಹಾಗೂ ಕೇಳುವರು ಇಲ್ಲದಂತಾಗಿದ್ದು ಇಸಿಒಗಳು ತಮ್ಮ ಜವಬ್ದಾರಿ ಮರೆತಿದ್ದಾರೆ. ಅವರು ತಮ್ಮ ವ್ಯಾಪ್ತಿಗೆ ಬರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಭೇಟಿ ನೀಡಿ ಪರಿಶೀಲನೆ ಮಾಡಬೇಕಿತ್ತು ಈ ಕೆಲಸ ಮಾಡುವಲ್ಲಿ ಅಧಿಕಾರಿಗಳು ವಿಫ‌ಲರಾಗಿದ್ದಾರೆ.

ಪಾರದರ್ಶಕತೆ ಇಲ್ಲ: ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ಮೇಲೆ ನಿಗಾ ವಹಿಸಲು ಮತ್ತು ಶಾಲಾ ಪ್ರವೇಶಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಬೇಕೆಂಬ ಉದ್ದೇಶದಿಂದ ಪ್ರವೇಶಾತಿ ಶುಲ್ಕ ನಿಗದಿ ಮಾಡಿರುವ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಒದಗಿಸುವುದು ಮತ್ತು ನಿಗದಿ ಪಡಿಸಿರುವ ಶುಲ್ಕದ ವಿವರಗಳನ್ನು ಶಾಲೆಗಳ ವೆಬ್‌ಸೈಟ್, ನೋಟಿಸ್‌ ಬೋರ್ಡ್‌ಗಳಲ್ಲಿ ಪ್ರಕಟಿಸುವಂತೆ ನಿಯಾಮಾವಳಿ ಜಾರಿಯಲ್ಲಿದೆ, ಆದರೆ ಹೆಚ್ಚಿನ ಖಾಸಗಿ ಶಾಲೆಗಳು ಶುಲಕ ನಿಗದಿ ದಾಖಲೆಯನ್ನು ಇಲಾಖೆಗೆ ನೀಡಿರುವುದು ಬಿಟ್ಟರೆ ಶಾಲೆಗಳಲ್ಲಿ ಶುಲ್ಕದ ವಿವಿರಗಳ ಸಂಪೂರ್ಣ ಮಾಹಿತಿ ಯನ್ನು ನೋಟಿಸ್‌ ಬೋರ್ಡ್‌ಗಳಿಗೆ ಹಾಕದೇ ಇರುವು ದರಿಂದ ಪಾರದರ್ಶಕ ಪ್ರಕ್ರಿಯೆಗೆ ತೊಡಕನ್ನು ಉಂಟು ಮಾಡುತ್ತಿದೆ.

ಪೋಷಕರು ಪ್ರಶ್ನಿಸುತ್ತಿಲ್ಲ: ಮಕ್ಕಳ ಶಾಲೆಗೆ ದಾಖಲಿ ಸಲು ಆಗಮಿಸುವ ಪೋಷಕರಿಗೆ ನಿಯಮಾನು ಸಾರ ಮಾಡಿದ ಶುಲ್ಕದ ಸ್ವರೂಪ, ಬೋಧನಾ ಸಂಪನ್ಮೂಲ ಸೇರಿದಂತೆ ಇತರೆ ವಿವಗಳನ್ನು ಮನದಟ್ಟು ಮಾಡ ಬೇಕು. ಆದರೆ ತಮ್ಮ ಮಕ್ಕಳ ಭವಿಷ್ಯದ ಮುಂದೆ ಉಳಿದೆಲ್ಲವನ್ನು ನಗಣ್ಯವೆಂದು ಕೆಲ ಪೋಷಕರು ಕೂಡಾ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಶುಲ್ಕ ನಿಗದಿಗೆ ಸಂಬಂಧಿಸಿದಂತೆ ವಿರೋಧಗಳು ಎದು ರಾಗದಂತೆ ಕೆಲವು ಖಾಸಗಿ ಶಾಲೆಗಳು ನೋಡಿ ಕೊಳ್ಳುತ್ತಿವೆ. ಒಟ್ಟು ಶುಲ್ಕವನ್ನಷ್ಟೇ ತಿಳಿಸುತ್ತಿವೆ ಎಂಬ ಆರೋಪಗಳು ಪೋಷಕರಿದ ಕೇಳು ಬರುತ್ತಿದೆ.

ಖಾಸಗಿ ಶಾಲೆಗಳ ಶುಲ್ಕದ ವಿವರ: ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ ಎಲ್ಕೆಜಿ ಅಥವಾ 1ನೇ ತರಗತಿಗೆ 6,300 ರೂ. ಶುಲ್ಕ ಪಡೆದರೆ, ಕೆಲವು ಶಾಲೆಗಳು 1ನೇ ತರಗತಿಗೆ 34,800 ರೂ. ಶುಲ್ಕ ನಿಗದಿ ಮಾಡಿರುವುದಾಗಿ ಇಲಾಖೆಗೆ ಮಾಹಿತಿ ನೀಡಿವೆ.

ನ್ಯಾಯಾಲದ ಮೊರೆ: ಶಾಲಾ ಪ್ರವೇಶಾತಿಗೆ ಯಾವ ಪ್ರಮಾಣದಲ್ಲಿ ಶುಲ್ಕ ನಿಗದಿ ಮಾಡಬೇಕೆಂಬ ನಿಯಮ ಸಂಬಂಧ ಖಾಸಗಿ ಶಾಲೆಗಳು ನ್ಯಾಯಾಲಯದ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಅಂತಿಮ ಅಧಿಸೂನೆಯನ್ನು ಸರ್ಕಾರ ಹೊರಡಿಸಿಲ್ಲ. ಇಷ್ಟೇ ಶುಲ್ಕ ಪಡೆಯಬೇಕೆಂಬ ನಿಮಯಕ್ಕೂ ಒಪ್ಪದೇ ಇತ್ತ ತಾವೇ ವಿಧಿಸುವ ಶುಲ್ಕದ ವಿವರಗಳನ್ನು ಇಲಾಖೆಗೂ ನೀಡಿದ್ದಕ್ಕಿಂತ ಹೆಚ್ಚು ಹಣವನ್ನು ಪೀಕಿಸುತ್ತಿದ್ದಾರೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಗಮನಕ್ಕೆ ತಂದರೆ ಲಿಖೀತರೂಪದಲ್ಲಿ ದೂರು ನೀಡುವಂತೆ ಹೇಳುತ್ತಾರೆ ಇದರಿಂದ ಊರ ಉಸಾಬರಿ ನಮಗ್ಯಾಕೆ ಎಂದು ಹಲವು ಪೋಷಕರು ಸುಮ್ಮನಾಗುತ್ತಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಖಾಸಗಿ ಶಾಲೆಗಳು ತಮ್ಮ ನೋಟಿಸ್‌ ಬೋರ್ಡ್‌ನಲ್ಲಿ ಹಾಗೂ ವೆಬ್‌ಸೈಟ್‌ನಲ್ಲಿ ಶುಲ್ಕದ ವಿವರಗಳನ್ನು ಹಾಕದಿರುವ ಸಂಸ್ಥೆಯ ವಿರುದ್ಧ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಕುರಿತು ಪೋಷಕ ರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.

ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna Case ಸಂತ್ರಸ್ತನ ವಿರುದ್ಧ ದೂರು ದಾಖಲಿಸಿದ್ದ ವ್ಯಕ್ತಿ ನಾಪತ್ತೆ!

Suraj Revanna Case ಸಂತ್ರಸ್ತನ ವಿರುದ್ಧ ದೂರು ದಾಖಲಿಸಿದ್ದ ವ್ಯಕ್ತಿ ನಾಪತ್ತೆ!

Police detained Revanna’s son suraj revanna

Hassan; ಅನೈಸರ್ಗಿಕ ಲೈಂಗಿಕ ಕ್ರಿಯೆ: ರೇವಣ್ಣ ಪುತ್ರ ಸೂರಜ್‌ ಪೊಲೀಸ್‌ ಬಲೆಗೆ

ಅನೈಸರ್ಗಿಕ ಲೈಂಗಿಕ ಕ್ರಿಯೆ: ಸೂರಜ್‌ಗೂ ಬಂಧನ ಭೀತಿ

ಅನೈಸರ್ಗಿಕ ಲೈಂಗಿಕ ಕ್ರಿಯೆ: ಸೂರಜ್‌ಗೂ ಬಂಧನ ಭೀತಿ

ಆರೋಪ ರಾಜಕೀಯ ಷಡ್ಯಂತ್ರ: ಸೂರಜ್‌ ರೇವಣ್ಣ

Suraj Revanna ಆರೋಪ ರಾಜಕೀಯ ಷಡ್ಯಂತ್ರ

Pickup vehicle collides with scooter at shantigrama of Hassan

Hassan; ಸ್ಕೂಟರ್ ಗೆ ಬೊಲೆರೋ ಪಿಕಪ್ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.