ಬಚ್ಚಲು ಗುಂಡಿ ನಿರ್ಮಾಣ: ಹಳೇಬೀಡು ಫ‌ಸ್ಟ್‌

ನರೇಗಾ ಯೋಜನೆ ಹಣ ಸಮರ್ಪಕ ಬಳಕೆ

Team Udayavani, Oct 6, 2020, 2:47 PM IST

ಬಚ್ಚಲು ಗುಂಡಿ ನಿರ್ಮಾಣ: ಹಳೇಬೀಡು ಫ‌ಸ್ಟ್‌

ಹಳೇಬೀಡು: ನರೇಗಾ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅತಿಹೆಚ್ಚುಬಚ್ಚಲು ಗುಂಡಿ ನಿರ್ಮಾಣ ಮಾಡಿದ ಜಿಲ್ಲೆಯ ಮೊದಲ ಗ್ರಾಪಂ ಎಂಬ ಹೆಗ್ಗಳಿಕೆಗೆ ಹಳೇಬೀಡು ಪಾತ್ರವಾಗಿದೆ.

ಗ್ರಾಮೀಣ ಜನರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿರುತ್ತಿವೆ. ಆದರೂ, ಅಧಿಕಾರಿ ಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರ್ಹರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಆದರೆ, ಹಳೇಗ್ರಾಪಂ ಪಿಡಿಒ ಅವರ ಕಾರ್ಯದಕ್ಷತೆಯಿಂದ ಗ್ರಾಮೀಣ ಜನರಿಗೆ ಸೌಲಭ್ಯ ದೊರೆಯುವಂತಾಗಿದೆ.

125 ಬಚ್ಚಲುಗುಂಡಿ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸರ್ಕಾರ ಪ್ರತಿ ಮನೆಗೂ ಬಚ್ಚಲುಗುಂಡಿ ನಿರ್ಮಿಸಿ ಕೊಳ್ಳಲು ಉದ್ಯೋಗ ಖಾತ್ರಿ ಅಡಿಯಲ್ಲಿ 17 ಸಾವಿರ ರೂ. ಸಹಾಯಧನ ನೀಡುತ್ತಿದೆ. ಇದರಲ್ಲಿ 5 ಸಾವಿರ ರೂ. ಕೂಲಿ, ಉಳಿದ 12 ಸಾವಿರ ರೂ. ಉಪಕರಣ ಖರೀದಿಗೆ ನೀಡಲಾಗುತ್ತದೆ. ಈ ಯೋಜನೆಯನ್ನು ಪಿಡಿಒಗಳೇ ಖುದ್ದು ಕಾಮಗಾರಿ ವೀಕ್ಷಣೆ ಮಾಡಿ, ಹಣ ಬಿಡುಗಡೆ ಮಾಡುತ್ತಾರೆ. ಕೆಲಸ ಆಗದೆ ಕೇವಲ ಹೆಸರು ಹೇಳಿ ಬಿಲ್‌ ಮಾಡುವ ಕೆಲಸಕ್ಕೆ ಬ್ರೇಕ್‌ ಹಾಕಿ, ಫ‌ಲಾನುಭವಿಗಳಿಗೆ ಯೋಜನೆ ತಲುಪಿಸುವ ಕಾರ್ಯವನ್ನು ಪಿಡಿಒ ರವಿಕುಮಾರ್‌ ಮಾಡುತ್ತಿದ್ದಾರೆ.

ಬೇರೆ ತಾಲೂಕುಗಳಲ್ಲಿ 10 ರಿಂದ 15 ಬಚ್ಚಲುಗುಂಡಿಗಳು ಮಾತ್ರ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಹಳೇ ಬೀಡು ಗ್ರಾಪಂ ಮಾತ್ರ 125ಕ್ಕೂ ಹೆಚ್ಚು ಬಚ್ಚಲುಗುಂಡಿ ನಿರ್ಮಾಣ ಮಾಡಿ, ನರೇಗಾ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಮೊದಲ ಪಂಚಾಯ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಪಿಡಿಒ ಕಾರ್ಯಕ್ಕೆ ಶ್ಲಾಘನೆ: ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಅಲ್ಲಿ ಬಚ್ಚಲು ನೀರು ರಸ್ತೆಗೆ ಹರಿಯುತ್ತಿದ್ದರೆ, ಆ ಮನೆಯ ಸದಸ್ಯರಿಗೆ ಈಯೋಜನೆ ಮತ್ತು ಅದರ ಉಪಯೋಗ ತಿಳಿಸುವ ಕಾರ್ಯವನ್ನು ಖುದ್ದು ಪಿಡಿಒ ರವಿಕುಮಾರ್‌ಮಾಡುತ್ತಿದ್ದಾರೆ. ಅಲ್ಲದೆ, ಗುಂಡಿ ನಿರ್ಮಾಣಕ್ಕೆನರೇಗಾದಡಿ ಸಿಗುವ ಸಹಾಯಧನ ವಿತರಿಸುವಮೂಲಕ ಅರ್ಹರಿಗೆ ಯೋಜನೆಯ ಫ‌ಲಸಿಗುವಂತೆ ಮಾಡುತ್ತಿದ್ದಾರೆ. ಇದಕ್ಕೆ ಹಳೇಬೀಡು ಸುತ್ತ ಮುತ್ತಲಿನ ಹಳ್ಳಿಗಳ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಹಲವು ಹಳ್ಳಿಗೆ ಭೇಟಿ ನೀಡಿದಾಗ ಮನೆಯಲ್ಲಿ ಬಳಸಿದ ನೀರು ನೇರ ರಸ್ತೆಗೆ ಹರಿಯುವುದನ್ನು ಗಮನಿಸಿದೆ. ಆ ನಂತರ ಮನೆಯ ಸದಸ್ಯರಿಗೆ ಬಚ್ಚಲು ಗುಂಡಿ ನಿರ್ಮಾಣ ಕುರಿತು ಸಲಹೆ ನೀಡಿದೆ. ಇದಕ್ಕೆ ಸರ್ಕಾರ ನೀಡುವ 17 ಸಾವಿರ ರೂ. ಸಹಾಯಧನವನ್ನು ಬಳಸಿಕೊಂಡು ಹೆಚ್ಚು ಮಂದಿ ಈ ಯೋಜನೆ ಪ್ರಯೋಜನೆ ಪಡೆದಿದ್ದಾರೆ. ರವಿಕುಮಾರ್‌, ಪಿಡಿಒ, ಹಳೇಬೀಡು

ಬಚ್ಚಲುಗುಂಡಿ ನಿರ್ಮಾಣಕ್ಕೆ ಸರ್ಕಾರ ಹಣ ಕೊಡುತ್ತದೆ ಎಂಬುದು ಗೊತ್ತಿರಲಿಲ್ಲ. ಪಾತ್ರೆ ತೊಳೆದಿದ್ದು, ಸ್ನಾನ ಮಾಡಿದ ನೀರು ರಸ್ತೆಗೆ ಹರಿಯುತ್ತಿತ್ತು. ಇದನ್ನು ಗಮನಿಸಿದ ಪಿಡಿಒಖುದ್ದು ಮನೆಗೆ ಬಂದು ಪರಿಶೀಲನೆ ಮಾಡಿ, ಅವರೇ ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳಲು ಸೂಚಿಸಿ, ಸಹಾಯಧನವನ್ನು ಬಿಡುಗಡೆ ಮಾಡಿದರು. ಮಂಜುನಾಥ್‌ ಬಿ.ಆರ್‌, ಹಳೇಬೀಡು

ಡಾ.ಕುಮಾರ್‌ ಎಂ.ಸಿ.

ಟಾಪ್ ನ್ಯೂಸ್

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

14-hospete

Hospete: ಸ್ಮಾರಕಗಳ ಮಹತ್ವ, ಸಂರಕ್ಷಣೆ ಮುಂದಿನ ಪೀಳಿಗೆಗೆ ತಿಳಿಸೋದು ಅಗತ್ಯ: ಡಿಸಿ ದಿವಾಕರ್

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್

No court relief, Arvind Kejriwal to remain in jail till July 3

Delhi Liquor Case: ಸಿಎಂ ಅರವಿಂದ್‌ ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಜು.3ವರೆಗೆ ವಿಸ್ತರಣೆ

ಜೂ.24 ರಿಂದ ಗೋವಾದಲ್ಲಿ12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ಜೂ.24 ರಿಂದ ಗೋವಾದಲ್ಲಿ12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Prajwal Revanna: ಹೊಳೆನರಸೀಪುರಕ್ಕೆ ಪ್ರಜ್ವಲ್‌; ಲೈಂಗಿಕ ದೌರ್ಜನ್ಯ ಕೇಸಲ್ಲಿ ಸ್ಥಳ ಮಹಜರು

Prajwal Revanna: ಹೊಳೆನರಸೀಪುರಕ್ಕೆ ಪ್ರಜ್ವಲ್‌; ಲೈಂಗಿಕ ದೌರ್ಜನ್ಯ ಕೇಸಲ್ಲಿ ಸ್ಥಳ ಮಹಜರು

Hassan: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತು, ಮೂವರಿಗೆ ಗಾಯ

Hassan: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತ್ಯು, ಮೂವರಿಗೆ ಗಾಯ

1-hasana’

Hasana Crime: ರೌಡಿಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

14-hospete

Hospete: ಸ್ಮಾರಕಗಳ ಮಹತ್ವ, ಸಂರಕ್ಷಣೆ ಮುಂದಿನ ಪೀಳಿಗೆಗೆ ತಿಳಿಸೋದು ಅಗತ್ಯ: ಡಿಸಿ ದಿವಾಕರ್

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.