ಸಕ್ಕರೆ ಕಾರ್ಖಾನೆ ಆರಂಭಿಸದಿದ್ರೆ ಹೋರಾಟ


Team Udayavani, Sep 25, 2020, 4:26 PM IST

ಸಕ್ಕರೆ ಕಾರ್ಖಾನೆ ಆರಂಭಿಸದಿದ್ರೆ ಹೋರಾಟ

ಚನ್ನರಾಯಪಟ್ಟಣ: ಈ ತಿಂಗಳ ಅಂತ್ಯದೊಳಗೆ ತಾಲೂಕಿನ ಶ್ರೀನಿವಾಸಪುರ ಬಳಿ ಇರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಪ್ರ ಕ್ರಿಯೆಗೆ ಚಾಲನೆನೀಡದೆಹೋದರೆ, ಪಕ್ಷದಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಎಂ.ರಾಮಚಂದ್ರ ಎಚ್ಚರಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ ಹಲವು ಬಾರಿ ಕಾರ್ಖಾನೆ ಪ್ರಾರಂಭಿಸುವುದಾಗಿ ದಿನಾಂಕ ನೀಡಿದ್ದಾರೆ, ಕಾರ್ಖಾನೆ ಅಧಿಕಾರಿಗಳು ಸೆ.14ರಂದು ಪೂಜೆ ಮಾಡಿ, ತಿಂಗಳಾಂತ್ಯದೊಳಗೆ ಚಾಲನೆ ನೀಡುವುದಾಗಿ ಹೇಳಿದ್ದರು. ಆದರೆ, ಈ ವರೆಗೆ ಕಾರ್ಖಾನೆ ಪೂಜೆ ಮಾಡಿಲ್ಲ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ತಾಲೂಕಿನ ರೈತರ ಹಿತದೃಷ್ಟಿಯಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ರಾಜೀನಾಮೆ ನೀಡಲಿ: ಸೆ.7ರಂದು ಕಾಂಗ್ರೆಸ್‌ ಪಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಧರಣಿ ನಡೆಸಿ ಕಾರ್ಖಾನೆಯಿಂದ ತಾಲೂಕಿನ ಮಿನಿ ವಿಧಾನಸೌಧದವರೆಗೆ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಅಂದು ಕ್ಷೇತ್ರದ ಶಾಸಕ ಬಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ, ದಿನಾಂಕ ತಿಳಿಸಿದ್ದರು. ಅವರು, ಆಡಿದ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವೆ, ರೈತರ ಹೆಸರಿನಲ್ಲಿ ಕಾರ್ಖಾನೆಯ ಮೂಲಕ ರಾಜಕೀಯ ಮಾಡುತ್ತಿರುವುದಾಗಿ ಹೇಳಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಹಕಾರ ಆಡಳಿತ ಮಂಡಳಿಯವರು ನಡೆಸುತ್ತಿದ್ದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜೆಡಿಎಸ್‌ ಮುಖಂಡರು ತಮ್ಮ ಸ್ವಹಿತಕ್ಕಾಗಿ ಖಾಸಗಿಯವರಿಗೆ ನೀಡುವ ಮೂಲಕ ಜಿಲ್ಲೆಯಕಬ್ಬುಬೆಳೆಗಾರರಿಗೆ ದ್ರೋಹ ಮಾಡಿದ್ದಾರೆ. ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡಿದ್ದಾರೆ, ಕಳೆದ ನಾಲ್ಕೂವರೆ ವರ್ಷದಿಂದ ಚಾಮುಂಡೇಶ್ವರಿ ಕಾರ್ಖಾನೆ ಪ್ರಾರಂಭಿಸುವ ಇರಾದೆ ಅವರಿಗಿಲ್ಲ, ಆಡಳಿತ ಮಂಡಳಿ ಇದ್ದು ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಹೇಮಾವತಿ ಸಹಕಾರ ಸಕ್ಕರೆಕಾರ್ಖಾನೆಆಡಳಿತ ಮಂಡಳಿ ಖಾಸಗಿ ಪರವಾಗಿ ವಕಾಲತ್ತು ವಹಿಸುತ್ತಿದೆ, ಶಾಸಕರಿಗೆ ಕ್ಷೇತ್ರದ ರೈತರ ಹಿತಕ್ಕಿಂತ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಹಿತಕಾಯುವುದೇ ಮುಖ್ಯವಾಗಿದೆ, ಕೃಷಿ ಮಾಡಿಕೊಂಡು ಬದುಕುಕಟ್ಟಿಕೊಳ್ಳುತ್ತಿರುವವರ ಕಷ್ಟ ಬಾಲಕೃಷ್ಣಗೆ ತಿಳಿಯುತ್ತಿಲ್ಲ. ಅವರಿಗೆ ಸಕಾಲಕ್ಕೆ ಎಲ್ಲವೂ ಸಲ್ಲುತ್ತಿರುವುದರಿಂದಬಡವರಿಗಿಂತಗುತ್ತಿಗೆದಾರರು ಮುಖ್ಯವಾಗಿದ್ದಾರೆ ಎಂದು ದೂರಿದರು.

ಜಿಪಂ ಮಾಜಿ ಸದಸ್ಯ ಎಂ.ಕೆ.ಮಂಜೇಗೌಡ, ತಾಪಂ ಅಧ್ಯಕ್ಷೆ ಶಾಮಲಾ, ಉಪಾಧ್ಯಕ್ಷ ರಾಮಕೃಷ್ಣೇಗೌಡ, ಮುಖಂಡ ರಾಮಣ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ: ಮಥುರಾದಲ್ಲಿ ಅಮಿತ್ ಶಾ

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ: ಮಥುರಾದಲ್ಲಿ ಅಮಿತ್ ಶಾ

west indies odi team

ಭಾರತ ಪ್ರವಾಸಕ್ಕೆ ಬಲಿಷ್ಠ ತಂಡ ಕಟ್ಟಿದ ವಿಂಡೀಸ್: 3 ವರ್ಷದ ಬಳಿಕ ತಂಡ ಸೇರಿದ ರೋಚ್

1-gsdww

ಸವದಿ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ: ಲಖನ್ ಜಾರಕಿಹೊಳಿ ಬಾಂಬ್

19accident

ಕುಷ್ಟಗಿ: ಟ್ರ್ಯಾಕ್ಟರ್ ಪಲ್ಟಿಯಾಗಿ ಮಹಿಳೆ ದುರ್ಮರಣ; ಇಬ್ಬರಿಗೆ ಗಂಭೀರ ಗಾಯ

ರಿಲೀಸ್‌ ಗೆ ರೆಡಿಯಾದಳು ‘ರೌಡಿ ಬೇಬಿ’

ರಿಲೀಸ್‌ ಗೆ ರೆಡಿಯಾದಳು ‘ರೌಡಿ ಬೇಬಿ’

1-rwrwr

ದೆಹಲಿ:ಯುವತಿಯ ಗ್ಯಾಂಗ್ ರೇಪ್,ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ!

beli-prakash

ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ..: ಕಡೂರು ಶಾಸಕ ಬೆಳ್ಳಿ ಪ್ರಕಾಶ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಅಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

ಕೊರೊನಾ ಅಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

ಅವೈಜ್ಞಾನಿಕವಾಗಿ ರಸ್ತೆ , ಚರಂಡಿ ನಿರ್ಮಾಣ

ಅವೈಜ್ಞಾನಿಕವಾಗಿ ರಸ್ತೆ , ಚರಂಡಿ ನಿರ್ಮಾಣ

ನನ್ನ ವಿರುದ್ಧದ ಅಪಪ್ರಚಾರ ಸಹಿಸೆನು

ನನ್ನ ವಿರುದ್ಧದ ಅಪಪ್ರಚಾರ ಸಹಿಸೆನು

ಯೋಜನೆ ವಿಳಂಬಕ್ಕೆ ಜೆಡಿಎಸ್‌ ಕಾರಣ

ಯೋಜನೆ ವಿಳಂಬಕ್ಕೆ ಜೆಡಿಎಸ್‌ ಕಾರಣ

ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?

ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?

MUST WATCH

udayavani youtube

ವಿರಾಟ್​ ಕುದುರೆ ನಿವೃತ್ತಿ, ಮೈ ಸವರಿ ಮುದ್ದಿಸಿ ಬೀಳ್ಕೊಟ್ಟ ಪ್ರಧಾನಿ ಮೋದಿ

udayavani youtube

ರೈತರು ಇವಿಷ್ಟನ್ನು ಗಮನದಲ್ಲಿಟ್ಟುಕೊಳ್ಳಬೇಕು

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

ಹೊಸ ಸೇರ್ಪಡೆ

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ: ಮಥುರಾದಲ್ಲಿ ಅಮಿತ್ ಶಾ

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ: ಮಥುರಾದಲ್ಲಿ ಅಮಿತ್ ಶಾ

20protest

ಅಂಬೇಡ್ಕರ್ ಗೆ ಅವಮಾನ: ಹುಣಸೂರಿನಲ್ಲಿ ನ್ಯಾಯಾಧೀಶರ ವಿರುದ್ದ ಪ್ರತಿಭಟನೆ

west indies odi team

ಭಾರತ ಪ್ರವಾಸಕ್ಕೆ ಬಲಿಷ್ಠ ತಂಡ ಕಟ್ಟಿದ ವಿಂಡೀಸ್: 3 ವರ್ಷದ ಬಳಿಕ ತಂಡ ಸೇರಿದ ರೋಚ್

1-gsdww

ಸವದಿ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ: ಲಖನ್ ಜಾರಕಿಹೊಳಿ ಬಾಂಬ್

19accident

ಕುಷ್ಟಗಿ: ಟ್ರ್ಯಾಕ್ಟರ್ ಪಲ್ಟಿಯಾಗಿ ಮಹಿಳೆ ದುರ್ಮರಣ; ಇಬ್ಬರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.