ಬೇಸಿಗೆ ಬಿಸಿಗೆ ಬಸವಳಿದ ಜನತೆ

•'ಉಸ್ಸಪ್ಪಾ' ಎಂದು ಏದುಸಿರು ಬಿಡುವಂತಾದ ಬಿಸಿಲು •ಸೂರ್ಯನ ಶಾಖಕ್ಕೆ ಬೆಂದ ಹಾವೇರಿ

Team Udayavani, May 15, 2019, 1:24 PM IST

havweri-tdy-1…

ಹಾವೇರಿ: ನೀರು ತರಲು ಹೋಗುತ್ತಿರುವ ವೃದ್ಧೆ.

ಹಾವೇರಿ: ಸೂರ್ಯದೇವ ಜನರಿಗೆ ‘ಚುರುಕು’ ಮುಟ್ಟಿಸಿದ್ದು, ಜನರು ‘ಉಸ್ಸಪ್ಪಾ.. ಏನಿದು ಬಿಸಿಲು!’ ಎಂದು ಉದ್ಗರಿಸುತ್ತಲೇ ಬೆವರು ಒರೆಸಿಕೊಳ್ಳುವುದು ಸಾಮಾನ್ಯವಾಗಿದೆ.

ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರಲು ಶುರುವಾಗಿದೆ. ಜಿಲ್ಲೆಯಲ್ಲಿ ಈಗ ಸೂರ್ಯ ಸರಾಸರಿ 36ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತನ್ನ ಪ್ರತಾಪ ತೋರುತ್ತಿದ್ದು, ಜನಜೀವನದ ಮೇಲೆ ಭಾರಿ ತಾಪದ ದುಷ್ಪರಿಣಾಮ ಬೀರುತ್ತಿದೆ.

ಬೆಳಗ್ಗೆ 7:30ರಿಂದಲೇ ರವಿ ತನ್ನ ಪ್ರಖರತೆಯನ್ನು ತೋರಲು ಪ್ರಾರಂಭಿಸಿದ್ದು, ಸಂಜೆ 6ರ ವರೆಗೂ ಬಿಸಿಲಿನ ಶಾಖ ಬೆವರಿಳಿಸುವಂತೆ ಮಾಡುತ್ತಿದೆ. ಮಧ್ಯಾಹ್ನ 1ರಿಂದ 4ಗಂಟೆ ವರೆಗಿನ ಸಮಯವಂತೂ ಕಾದ ಹೆಂಚಿನಂತೆ ಭೂಮಿ ಸುಡುತ್ತಿರುತ್ತದೆ. ಮಣ್ಣಿನ ರಸ್ತೆಗಳಲ್ಲಿ ಧೂಳು ಇನ್ನಷ್ಟು ಒಣಗಿ ಮೇಲೆದ್ದರೆ, ಡಾಂಬರ್‌ ರಸ್ತೆಗಳು ಶಾಖವನ್ನು ಪ್ರತಿಫಲಿಸಿ, ಇಡೀ ವಾತಾವರಣವನ್ನು ಇನ್ನಷ್ಟು ಸುಡುಬೆಂಕಿಯನ್ನಾಗಿಸುತ್ತಿವೆ.

ಮಹಿಳೆಯರು, ಮಕ್ಕಳು ಹಾಗೂ ಹಿರಿಯರಿಗೆ ಮಧ್ಯಾಹ್ನ 12 ಗಂಟೆಯ ನಂತರದ ಸಂಚಾರ ಸಂಕಟಮಯವಾಗುತ್ತಿದೆ. ಆಸ್ಪತ್ರೆ, ಕಚೇರಿ ಓಡಾಟ ಅನಿವಾರ್ಯವಾದರಿಗೆ ಈ ಸುಡುಬಿಸಿಲಿನ ತೀವ್ರತೆ ತುಸು ಹೆಚ್ಚೇ ತನ್ನ ‘ಬಿಸಿ’ಮೂಡಿಸುತ್ತಿದೆ.

ಕಾದ ಕಾವಲಿ: ಮನೆಗಳಲ್ಲಿ, ಕಚೇರಿಗಳಲ್ಲಿ ಬೆಳಗ್ಗೆಯಿಂದಲೇ ಫ್ಯಾನ್‌ಗಳು ತಿರುಗಲು ಪ್ರಾರಂಭಿಸುತ್ತಿವೆ. ಬಿಸಿಲಿನ ತೀವ್ರತೆ ಹೆಚ್ಚಾದಂತೆ ಫ್ಯಾನ್‌ನ ಗಾಳಿಯೂ ಬಿಸಿಯಾದಾಗ ಬದುಕು ಬಹಳ ಸಂಕಷ್ಟಮಯ ಎನಿಸಿ ‘ಮಳೆ ಬಂದರೆ ಸಾಕಪ್ಪ’ ಎಂದು ಅಪೇಕ್ಷೆಯ ಮಾತುಗಳು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ವಿದ್ಯುತ್‌ ವ್ಯತ್ಯಯದ ಪಾಳಿಯೂ ಇದೆ. ವಿದ್ಯುತ್‌ ಎಷ್ಟೊತ್ತಿಗೆ ಇರುತ್ತದೆ, ಎಷ್ಟೋತ್ತಿಗೆ ಇರುವುದಿಲ್ಲ ಎಂಬುದು ತಿಳಿಯದ ರೀತಿಯಲ್ಲಿ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ಮಾಡಲಾಗುತ್ತಿದೆ. ವಿದ್ಯುತ್‌ ಹೋದ ಮೇಲಂತೂ ಫ್ಯಾನಿನ ಬಿಸಿಗಾಳಿಯೂ ಮಾಯವಾಗಿ ಮನೆ, ಕಚೇರಿಗಳು ಮಂಡಕ್ಕಿ ಭಟ್ಟಿಯಂತೆ ಕಾವು ತುಂಬಿಕೊಳ್ಳುತ್ತಿವೆ.

ನೀರಿನ ಬವಣೆ: ಕುಡಿಯುವ ನೀರಿನ ಸಮಸ್ಯೆಗೂ ಹಾವೇರಿಗೂ ‘ಬಿಡದ’ ನಂಟು. ಜಿಲ್ಲೆಯ ಹಲವೆಡೆ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ಹಲವೆಡೆ ಕೊಳವೆಬಾವಿಗಳಲ್ಲಿ ಅಂತರ್ಜಲವೂ ಖಾಲಿಯಾಗಿ ಬಂದ್‌ ಆಗಿವೆ. ನೀರು ಇರುವ ಕೊಳವೆ ಬಾವಿಗಳ ಬಳಿ ನಿತ್ಯ ನೂರಾರು ಜನರು ಕೊಡ ಹಿಡಿದು ಸಾಲಿನಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.

ನೀರು ವ್ಯಾಪಾರ: ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿರುವ ಜಿಲ್ಲೆಯಲ್ಲಿ ನೀರಿನ ವ್ಯಾಪಾರ ಬೇಸಿಗೆಯಲ್ಲಿ ಬಲು ಜೋರಾಗಿಯೇ ನಡೆಯುತ್ತಿದೆ. ವಿಶೇಷವಾಗಿ ನಗರ ಪ್ರದೇಶದ ಜನರಿಗೆ ನೀರುಣಿಸಲು ಕೆಲವರು ದೂರದ ಪ್ರದೇಶಗಳಿಂದ ಕುಡಿಯುವ ನೀರನ್ನು ಟ್ಯಾಂಕರ್‌ನಲ್ಲಿ ನೀರು ತಂದು ಮಾರುತ್ತಾರೆ. ಒಂದು ಟ್ಯಾಂಕರ್‌ಗೆ 400-500ರೂ., ಒಂದು ಕೊಡ ನೀರಿಗೆ 1ರಿಂದ 5- 10 ರೂ.ವರೆಗೂ ಮಾರುತ್ತಾರೆ. ನೀರಿನ ತುಟಾಗ್ರತೆ ಹೆಚ್ಚಿದಂತೆ ನೀರಿನ ದರವೂ ಏರುವುದು ಇಲ್ಲಿ ಮಾಮೂಲು.

ಹಣ್ಣು, ಕೋಲ್ಡ್: ಬಿರುಬಿಸಿಲಲ್ಲಿ ಬೆಂದಾದ ಮೈ, ಮನ ತಂಪಿಗಾಗಿ ಹಾತೊರೆಯುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ತಂಪು ಪಾನೀಯ ಅಂಗಡಿಗಳಿಗೆ, ಹಣ್ಣಿನ ಅಂಗಡಿಗಳಿಗೆ ವ್ಯಾಪಾರ ಬಲು ಜೋರು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ತಂಪು ಪಾನೀಯಗಳ ಅಂಗಡಿಗಳು ತಲೆ ಎತ್ತಿವೆ. ಐಸ್‌ಕ್ರೀಮ್‌ ಅಂಗಡಿಗಳಲ್ಲೂ ಜನ ಕೂಲ್ ಕೂಲ್ ಆಗುತ್ತಿದ್ದಾರೆ. ದೇಹಕ್ಕೆ ತಂಪು ಅನುಭವ ನೀಡುವ ಕಲ್ಲಂಗಡಿ ಹಣ್ಣು, ಎಳನೀರು ಬೆಲೆ ದುಪ್ಪಟ್ಟಾಗಿದೆ. ಸಾಮಾನ್ಯ ಗಾತ್ರ ಕಲ್ಲಂಡಗಿ ಹಣ್ಣು 80-150ರೂ. ವರೆಗೆ ಮಾರುತ್ತಿದ್ದರೆ, ಒಂದು ಎಳನೀರಿಗೆ 25-30ರೂ. ಆಗಿದೆ.

ನಾಳೆ, ನಾಡಿದ್ದು ಅಧಿಕ ತಾಪಮಾನ ಸಾಧ್ಯತೆ:

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ 10 ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ತಾಪಮಾನ ಸಾಧ್ಯತೆ ಹೀಗಿದೆ: ಮೇ 15ರಂದು 39 ಡಿಗ್ರಿ ಸೆಲ್ಸಿಯಸ್‌, ಮೇ 16ರಂದು 40 ಡಿಗ್ರಿ ಸೆಲ್ಸಿಯಸ್‌, ಮೇ 17ರಂದು 41ಡಿಗ್ರಿ ಸೆಲ್ಸಿಯಸ್‌, ಮೇ 18ರಂದು 40 ಡಿಗ್ರಿ ಸೆಲ್ಸಿಯಸ್‌, ಮೇ 19ರಂದು 39 ಡಿಗ್ರಿ ಸೆಲ್ಸಿಯಸ್‌, ಮೇ 20ರಂದು 39 ಡಿಗ್ರಿ ಸೆಲ್ಸಿಯಸ್‌, ಮೇ 21ರಂದು 38 ಡಿಗ್ರಿ ಸೆಲ್ಸಿಯಸ್‌, ಮೇ 22ರಂದು 38ಡಿಗ್ರಿ ಸೆಲ್ಸಿಯಸ್‌.

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್

Lokayukta: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಉಪ ತಹಶೀಲ್ದಾರ್

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

4-haveri

Haveri: ಮನೆ ಮೇಲ್ಛಾವಣಿ ಕುಸಿದು 18 ತಿಂಗಳ ಅವಳಿ ಮಕ್ಕಳು ಸೇರಿ ಮೂವರು ಸಾವು

ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ

ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.