ಗ್ರಾಮ ಸ್ವರಾಜ್‌ ವರದಿ ನೀಡಲು ಸೂಚನೆ


Team Udayavani, Jul 7, 2018, 10:42 AM IST

gul-2.jpg

ಕಲಬುರಗಿ: ಜಿಲ್ಲೆಯ 67 ಗ್ರಾಮಗಳಲ್ಲಿ ಕೇಂದ್ರ ಸರ್ಕಾರವು ಮುಂದುವರಿದ ಗ್ರಾಮ ಸ್ವರಾಜ್‌ ಯೋಜನೆ ಜಾರಿಗೊಳಿಸಿದೆ. ತಾಪಂ ಕಾರ್ಯನಿರ್ವಾಹಕ ಅ ಧಿಕಾರಿಗಳು ಈ ಗ್ರಾಮಗಳಲ್ಲಿ ಸಮೀಕ್ಷೆ ಕೈಗೊಂಡು ಎರಡು ದಿನಗಳಲ್ಲಿ ವಿಸ್ತೃತ ವರದಿ ನಿಡಬೇಕೆಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂದುವರಿದ ಗ್ರಾಮ ಸ್ವರಾಜ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸಲು ಜಿಲ್ಲೆಯಲ್ಲಿ ಮುಂದುವರಿದ ಗ್ರಾಮ ಸ್ವರಾಜ್‌ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಈ ಗ್ರಾಮಗಳಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ, ಸೌಭಾಗ್ಯ (ಬಿಜಲಿ ಹರ ಘರ ಯೋಜನಾ), ಉಜಾಲಾ ಯೋಜನಾ, ಪ್ರಧಾನಮಂತ್ರಿ ಜನಧನ ಯೋಜನಾ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ ಹಾಗೂ ಇಂದ್ರಧನುಷ್‌ ಯೋಜನೆಯಿಂದ ವಂಚಿತ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆ ಲಾಭ ದೊರಕಿಸಬೇಕೆಂದು ಸೂಚಿಸಿದರು.

ಪ್ರಧಾನಮಂತ್ರಿ ಉಜ್ವಲ ಯೋಜನೆ: 67 ಗ್ರಾಮಗಳಲ್ಲಿ 25,105 ಕುಟುಂಬಗಳಿದ್ದು, ಈಗಾಗಲೇ 9233  ಟುಂಬಗಳಿಗೆ ಎಲ್‌.ಪಿ.ಜಿ. ಸಂಪರ್ಕ ಇದೆ. 6695 ಕುಟುಂಬಗಳು ಉಜ್ವಲ ಯೋಜನೆಗೆ ಅನರ್ಹವಾಗಿದ್ದು, ಈಗಾಗಲೇ 5215 ಕುಟುಂಬಗಳಿಗೆ ಎಲ್‌.ಪಿ.ಜಿ. ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ ಸುಮಾರು 4000 ಮನೆಗಳಿಗೆ ಭೇಟಿ ನೀಡಿ ಅವರಿಗೆ ಎಲ್‌.ಪಿ.ಜಿ. ಸಂಪರ್ಕ ಕಲ್ಪಿಸಬೇಕು. ಎರಡು ದಿನದಲ್ಲಿ ಎಲ್‌.ಪಿ.ಜಿ. ಸಂಪರ್ಕ ಕಲ್ಪಿಸಿದ ವಿವರ ವೆಬ್‌ಸೈಟ್‌ನಲ್ಲಿ ಭರ್ತಿಮಾಡಬೇಕು. ಫಲಾನುಭವಿಗಳು ಬ್ಯಾಂಕ್‌ ಪಾಸ್‌ ಪುಸ್ತಕ ಹಾಗೂ ಜಾತಿ ಪ್ರಮಾಣ ಪತ್ರ ನೀಡಿ ಉಜ್ವಲ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ಪ್ರಧಾನಮಂತ್ರಿ ಜನಧನ, ಜೀವನ ಜ್ಯೋತಿ ಬಿಮಾ ಹಾಗೂ ಸುರಕ್ಷಾ ಬಿಮಾ ಯೋಜನೆ: ಈಗಾಗಲೇ ಜನಧನ ಯೋಜನೆ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಅವುಗಳ ವಿವರ ನೀಡಬೇಕು. ಜನಧನ ಬ್ಯಾಂಕ್‌ ಖಾತೆಗಳನ್ನು ತೆರೆಯದವರನ್ನು ಗುರುತಿಸಿ ಖಾತೆ ಪ್ರಾರಂಭಿಸಬೇಕು. ಫಲಾನುಭವಿಗಳಿಗೆ ಜೀವನ ಜ್ಯೋತಿ ಹಾಗೂ ಸುರಕ್ಷಾ ಬಿಮಾ ಯೋಜನೆ ಲಾಭಗಳನ್ನು ವಿವರಿಸಿ ಜಾಗೃತಿ ಮೂಡಿಸಿ ಅವರಿಂದ ವಿಮಾ ಕಂತು ಪಡೆಯಬೇಕು.

ಗ್ರಾಮಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ ಫಲಾನುಭವಿಗಳಿಂದ ಜೀವನ ಜ್ಯೋತಿ ಯೋಜನೆಗಾಗಿ 330 ರೂ. ಹಾಗೂ ಸುರಕ್ಷಾ ಬಿಮಾ ಯೋಜನೆಗಾಗಿ 12 ರೂ.ಗಳ ವಿಮಾ ಕಂತನ್ನು ಪಡೆಯಬೇಕು. ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಈ ಯೋಜನೆಗಳಡಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಇಂದ್ರಧನುಷ: 67 ಗ್ರಾಮಗಳಲ್ಲಿ ಈಗಾಗಲೇ ಇಂದ್ರ ಧನುಷ್‌ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೇ. 91 ರಷ್ಟು ಲಸಿಕೆ ಗುರಿ ತಲುಪಲಾಗಿದೆ. ಉಳಿದ ಗುರಿ ತಲುಪಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸೌಭಾಗ್ಯ ಯೋಜನೆ: ವಿದ್ಯುತ್‌ ಸಂಪರ್ಕ ಹೊಂದಿರದ ಬಿ.ಪಿ.ಎಲ್‌. ಮತ್ತು ಎ.ಪಿ.ಎಲ್‌. ಕುಟುಂಬಗಳನ್ನು ಗುರುತಿಸಿ
ಅವರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಾಗಿದೆ. ಈ ಹಿಂದೆ ಕೈಗೊಂಡ ಸಮೀಕ್ಷೆಯಂತೆ 67 ಗ್ರಾಮಗಳಲ್ಲಿ 1928 ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಇರುವುದಿಲ್ಲ. ಆದಷ್ಟು ಬೇಗ ಈ ಕುಟುಂಬಗಳ ಮನೆಗಳಿಗೆ ವಿದ್ಯುತ್‌ ಸಂಪಕ್‌ ಕಲ್ಪಿಸಬೇಕು. ಇನ್ನೊಮ್ಮೆ ಮರು ಸಮೀಕ್ಷೆ ಕೈಗೊಂಡು ವರದಿ ನೀಡಬೇಕು ಎಂದರು.

ಉಜಾಲಾ ಯೋಜನೆ: ಉಜಾಲಾ ಯೋಜನೆಯಡಿ ಜಿಲ್ಲೆಯಲ್ಲಿ ಗುಲ್ಬರ್ಗಾ ಒನ್‌ ಹಾಗೂ ಮುಖ್ಯ ಅಂಚೆ ಕಚೇರಿಯಲ್ಲಿ ಮಾತ್ರ ಸಹಾಯಧನದ ಎಲ್‌.ಇ.ಡಿ. ಬಲ್ಬ್ಗಳನ್ನು ವಿತರಿಸಲಾಗುತ್ತಿದೆ. ಗ್ರಾಮ ಸ್ವರಾಜ್‌ ಯೋಜನೆ ಜಾರಿಗೊಳಿಸಲಾದ ಗ್ರಾಮಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಎಲ್‌.ಇ.ಡಿ. ಬಲ್ಬ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಅರುಣಕುಮಾರ ಸಂಗಾವಿ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಎಲ್ಲ ತಾಲೂಕುಗಳ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು, ಎಲ್‌.ಪಿ.ಜಿ. ಗ್ಯಾಸ್‌ ವಿತರಕರು ಮತ್ತಿತರರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

1-asdsads

T20 World Cup; ಸೂಪರ್‌-8 ಕನಸಿನಲ್ಲಿರುವ ಅಮೆರಿಕಕ್ಕೆ ಐರ್ಲೆಂಡ್‌ ಸವಾಲು

27

Renukaswamy Case Follwup: ರೇಣುಕಾಸ್ವಾಮಿ ಮರ್ಮಾಂಗಕ್ಕೆ ತೀವ್ರ ಹಲ್ಲೆ?

1-wqewewq

Kerala ಕಾಲೇಜಿನಲ್ಲಿ ನಟಿ ಸನ್ನಿ ಲಿಯೋನ್‌ ನೃತ್ಯ ಪ್ರದರ್ಶನ ರದ್ದು: ಕಾರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bbb

Kuwait ಭೀಕರ ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿ ಸಾವು

KKRDB : ಜೂನ್ 14 ರಂದು ಸಿಎಂ ಪ್ರಗತಿ ಪರಿಶೀಲನೆ ಸಭೆ: ಡಾ. ಅಜಯಸಿಂಗ್

KKRDB : ಜೂನ್ 14 ರಂದು ಸಿಎಂ ಪ್ರಗತಿ ಪರಿಶೀಲನೆ ಸಭೆ: ಡಾ. ಅಜಯಸಿಂಗ್

MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು

MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು

2-kalburgi

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ: ಪ್ರಥಮ ಪ್ರಾಶಸ್ತ್ಯದ ಮತದಲ್ಲಿ ಕಾಂಗ್ರೆಸ್ ಮುನ್ನಡೆ

MLC: ಈಶಾನ್ಯ ಪದವೀಧರ ಕ್ಷೇತ್ರ… ಬಿಜೆಪಿಯ ಅಮರನಾಥ ಪಾಟೀಲ್ ಗೆ ಆರಂಭಿಕ ಮುನ್ನಡೆ

Election Result: ಈಶಾನ್ಯ ಪದವೀಧರ ಕ್ಷೇತ್ರ; ಬಿಜೆಪಿಯ ಅಮರನಾಥ ಪಾಟೀಲ್ ಗೆ ಆರಂಭಿಕ ಮುನ್ನಡೆ

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.