ರಸ್ತೆಯಲ್ಲೇ ಅಡುಗೆ ಮಾಡಿದ ಬೀದಿ ವ್ಯಾಪಾರಿಗಳ ವಾಗ್ವಾದ

Team Udayavani, Feb 18, 2017, 3:26 PM IST

gul3.jpg

ಕಲಬುರಗಿ: ಉತ್ಛ ನ್ಯಾಯಾಲಯ ನೀಡಿದ ಆದೇಶದಂತೆ ಇನ್ನು 10 ದಿನಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸ್ಥಳದ ವ್ಯವಸ್ಥೆ ಹಾಗೂ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅಡ್ಡಿಪಡಿಸಿದ್ದರಿಂದ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯ ಮಾತಿನ ಚಕಮಕಿ ನಡೆಯಿತು. 

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನ್ಯಾಯಾಲಯದ ಆದೇಶ ಜಾರಿ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ತಮಗೆ ಸಂಬಂಧವಿಲ್ಲ ಎಂದು ಹೇಳಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ನಗರದ ಚೌಪಾಟಿ ಸ್ಥಳದಲ್ಲಿ ಕಳೆದ 20 ವರ್ಷದಿಂದ ವ್ಯಾಪಾರ ಮಾಡುತ್ತಿದ್ದ ಸುಮಾರು 200 ಜನರನ್ನು ಜಿಲ್ಲಾಡಳಿತ ಕೆಲ ತಿಂಗಳ ಹಿಂದೆ ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಿದೆ.

ಈ ಎಲ್ಲ ವ್ಯಾಪಾರಿಗಳು ಸಂತ್ರಸ್ಥರಾಗಿದ್ದಾರೆ. ಏಳು ವಲಯಗಳನ್ನು ನಿರ್ಮಿಸಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುವ ಭರವಸೆ ನೀಡಿದ್ದರೂ ಆ ಕಾರ್ಯವೂ ಆಗಿಲ್ಲ. ಟಿವಿಸಿ ಸಮಿತಿ ರಚಿಸಿ ವರ್ಷವಾದರೂ ಒಂದೂ ಮಾಸಿಕ ಸಭೆ ಕರೆದಿಲ್ಲ. ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಹಲವು ಯೋಜನೆಗಳಿದ್ದರೂ ಪಾಲಿಕೆ ಬೀದಿ ವ್ಯಾಪಾರಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ವ್ಯಾಪಾರಸ್ಥರಿಗೆ ತಲಾ 25 ಸಾ.ರೂ. ಗಳಂತೆ ಸಹಾಯಧನ ನೀಡುವ ಬಗ್ಗೆ ಒಪ್ಪಿಗೆ ಸೂಚಿಸಿತ್ತು. ಅದೂ ಜಾರಿಯಾಗಿಲ್ಲ ಎಂದರು. ಕಳೆದ ಡಿ.14 ರಂದು ಕಲಬುರಗಿ ಹೈಕೋರ್ಟ್‌ ಪೀಠ ತೀರ್ಪು ನೀಡಿ 150 ಜನರಿಗೆ ಚೌಪಾಟಿ ಜಾಗದಲ್ಲಿಯೇ ವ್ಯವಸ್ಥೆ ಮಾಡಿ, ನಾಲ್ಕು ವಾರದೊಳಗೆ ವ್ಯಾಪಾರಕ್ಕೆ ಅವಕಾಶ ಒದಗಿಸಲು ಸೂಚಿಸಿದೆ. ಆ ಅವಧಿ ಮುಗಿದರೂ ಸಹ ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ಬೆಲೆ ನೀಡಿಲ್ಲ. ಇನ್ನು ಮೇಲಾದರೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಸಂಘದ ಸಂಸ್ಥಾಪಕ ಅಮೃತ ಸಿರನೂರ, ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ರವಿ ಒಂಟಿ, ಶಿವಕುಮಾರ ಭಾಗೋಡಿ, ಸರೂಬಾಯಿ, ಭಾಗಮ್ಮಾ  ಚೌಧರಿ, ಆನಂದ ಸಾಕ್ರೆ, ಚಂದ್ರಶೇಖರ ರೆಡ್ಡಿ, ದತ್ತು ಭಾಸಗಿ, ಸುಭಾಷ ಢರಬಿ ಹಾಗೂ ಇತರರಿದ್ದರು.  

ಟಾಪ್ ನ್ಯೂಸ್

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

1-dd

Tulu Nadu ದೈವ ದೇವರ ಹೆಸರಿನಲ್ಲಿ ಬ್ರಿಜೇಶ್ ಚೌಟ ಪ್ರಮಾಣ ವಚನ ಸ್ವೀಕಾರ

1-sadsadsad

Revanna; ಪ್ರಜ್ವಲ್ ಗೆ 14 ದಿನ ನ್ಯಾಯಾಂಗ ಬಂಧನ: ಸೂರಜ್ ಜುಲೈ 1ರವರೆಗೆ ಸಿಐಡಿ ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

Revenue Minister Byre Gowda’s progress review meeting at Kalaburagi

Kalaburagi: ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಗತಿ ಪರಿಶೀಲನಾ ಸಭೆ

Bomb threat to Kalaburagi Airport: flight cancelled

Bomb threat; ಕಲಬುರಗಿ ವಿಮಾನ ನಿಲ್ದಾಣಕ್ಕೆ‌ ಬಾಂಬ್ ಬೆದರಿಕೆ: ವಿಮಾನಯಾನ ರದ್ದು

Chittapur ಕಾಡು ಹಂದಿ ಬೇಟೆ: ಇಬ್ಬರ ಬಂಧನ

Chittapur ಕಾಡು ಹಂದಿ ಬೇಟೆ: ಇಬ್ಬರ ಬಂಧನ

Kalaburagi; ಸೂರಜ್ ಪ್ರಕರಣ ವಿಚಿತ್ರ, ವಿಕೃತ, ಅಸಹ್ಯವಾದದ್ದು: ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಸೂರಜ್ ಪ್ರಕರಣ ವಿಚಿತ್ರ, ವಿಕೃತ, ಅಸಹ್ಯವಾದದ್ದು: ಸಚಿವ ಪ್ರಿಯಾಂಕ್ ಖರ್ಗೆ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

1–ncxcx.

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.