ರೈಲು ಓಡಾಟ-ವಿಮಾನ ಹಾರಾಟ ಸೇವೆಗೆ ಸಿದ್ಧತೆ

Team Udayavani, May 23, 2020, 5:12 PM IST

23-May-20f

ಸಾಂದರ್ಭಿಕ ಚಿತ್ರ

ಕಲಬುರಗಿ: ಲಾಕ್‌ಡೌನ್‌ ಸಡಿಲಿಕೆ ಮಾಡಿದ ಸಾರಿಗೆ ಬಸ್‌ ಸಂಚಾರ ಆರಂಭಿಸಲಾಗಿದ್ದು, ರೈಲು ಓಡಾಟ ಮತ್ತು ವಿಮಾನ ಹಾರಾಟಕ್ಕೆ ಸಿದ್ಧತೆ ನಡೆದಿವೆ. ಮೇ 25ರಿಂದ ದೇಶೀಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಇಲ್ಲಿನ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಸಮೀಪದ ವಿಮಾನ ನಿಲ್ದಾಣದಿಂದ ಬೆಂಗಳೂರು, ಮೈಸೂರಿಗೆ ಅದೇ ದಿನವೇ ವಿಮಾನ ಸೇವೆ ಪುನಾರಂಭಿಸಲಾಗುತ್ತಿದೆ.

ವಿಮಾನಯಾನ ಸಂಸ್ಥೆಗಳಾದ ಸ್ವಾರ್‌ ಏರ್‌, ಅಲಯನ್ಸ್‌ ಏರ್‌ ವಿಮಾನ ಸಂಚಾರಕ್ಕೆ ಆರಂಭಿಸಲು ನಿರ್ಧರಿಸಿವೆ. ಇದಕ್ಕಾಗಿ ಅವಶ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆ ಅಧಿಕಾರಿಗಳು ಅವಲೋಕನದಲ್ಲಿ ತೊಡಗಿದ್ದಾರೆ. ಅಲ್ಲದೇ, ಜಿಲ್ಲಾಡಳಿತದೊಂದಿಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತೆ, ಆರೋಗ್ಯ ತಪಾಸಣೆ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸ್ವಾರ್‌ ಏರ್‌ ವಿಮಾನ ಸಂಸ್ಥೆ ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭಿಸಿದ್ದು, ಮೇ 25ರ ಟಿಕೆಟ್‌ ಬುಕ್‌ ಮಾಡಬಹುದಾಗಿದೆ. ಹೀಗಾಗಿ ವಿಮಾನ ಹಾರಾಟ ಆರಂಭವಾಗುವುದೂ ಬಹುತೇಕ ಖಚಿತವಾಗಿದೆ.

ರೈಲು ಓಡಾಟವೂ ಪಕ್ಕಾ: ಕಲಬುರಗಿ ರೈಲ್ವೆ ನಿಲ್ದಾಣ ಮಾರ್ಗವಾಗಿ ಜೂ.1ರಿಂದ ಮೂರು ರೈಲುಗಳ ಸಂಚಾರಕ್ಕೆ ಚಿಂತನೆ ನಡೆಸಲಾಗಿದ್ದು, ಇದರಿಂದ ರೈಲು ಓಡಾಟವೂ ಪಕ್ಕಾ ಆಗಿದೆ. ಮುಂಬೈನಿಂದ ಕಲಬುರಗಿ ಮೂಲಕ ತೆರಳುವ ಉದ್ಯಾನ್‌ ಎಕ್ಸ್‌ಪ್ರೆಸ್‌, ಹುಸೇನ್‌ ಸಾಗರ್‌, ಕೋನಾರ್ಕ್‌ ಎಕ್ಸ್‌ಪ್ರೆಸ್‌ ರೈಲು ಆರಂಭವಾಗಲಿದೆ. ಅಲ್ಲದೇ, ಶುಕ್ರವಾರದಿಂದಲೇ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಶುರುವಾಗಿದೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಎ.ಎಸ್‌. ಪ್ರಸಾದ್‌ರಾವ್‌ ತಿಳಿಸಿದ್ದಾರೆ. ಒಟ್ಟಾರೆ, ಲಾಕ್‌ಡೌನ್‌ನಿಂದ ಒಂದೂವರೆ ತಿಂಗಳಿಂದ ಸ್ತಬ್ಧಗೊಂಡಿದ್ದ ಸಂಚಾರ ಮುಂದಿನ ಒಂದು ವಾರದಲ್ಲಿ ಮರಳಿ ಹಳಿಗೆ ಬರುವ ಎಲ್ಲ ಲಕ್ಷಣ ಕಾಣುತ್ತಿವೆ.

ಎಂಟು ಕಡೆ ಟಿಕೆಟ್‌ ಬುಕ್ಕಿಂಗ್‌
ಜೂ.1ರಿಂದ ರೈಲು ಸಂಚಾರ ಆರಂಭಿಸುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಂಟು ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ ಆರಂಭಿಸಲಾಗಿದೆ. ಕಲಬುರಗಿ, ಸೇಡಂ, ಯಾದಗಿರಿ, ನಾಲವಾರ, ಸೈದಾಪುರ, ರಾಯಚೂರು, ಹೊಸಪೇಟೆ, ಬಳ್ಳಾರಿ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ.

ಟಾಪ್ ನ್ಯೂಸ್

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

4-chincholi

Chincholi ತಾಲೂಕಿನಾದ್ಯಂತ ಧಾರಾಕಾರ ಮಳೆ, ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ

1-bbb

Kuwait ಭೀಕರ ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿ ಸಾವು

KKRDB : ಜೂನ್ 14 ರಂದು ಸಿಎಂ ಪ್ರಗತಿ ಪರಿಶೀಲನೆ ಸಭೆ: ಡಾ. ಅಜಯಸಿಂಗ್

KKRDB : ಜೂನ್ 14 ರಂದು ಸಿಎಂ ಪ್ರಗತಿ ಪರಿಶೀಲನೆ ಸಭೆ: ಡಾ. ಅಜಯಸಿಂಗ್

MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು

MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.