ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫ‌ಲ:ಪ್ರಿಯಾಂಕ್‌

Team Udayavani, Jun 3, 2020, 2:45 PM IST

03-June-22

ಕಲಬುರಗಿ: ಮಹಾಮಾರಿ ಕೋವಿಡ್ ವೈರಸ್‌ ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಾಲೋಚನೆ ನಡೆಸದೇ ಯಾರದ್ದೇ ಅಭಿಪ್ರಾಯ ಪಡೆಯದೇ ತೆಗೆದುಕೊಂಡ ನಿರ್ಧಾರಗಳೇ ಕಾರಣವಾಗಿವೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಸರಕಾರ ಯಾವುದೇ ತಜ್ಞರ, ಪ್ರಮುಖರ ಅಭಿಪ್ರಾಯ ಪಡೆಯದೇ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದೇ ಕಾರಣವಾಗಿದೆ ಎಂದು ಆರೋಪಿಸಿದರು. ಯಾವುದೇ ನಿಟ್ಟಿನಲ್ಲಿ ಚರ್ಚಿಸದೇ ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿಗೆ ತಂದಿರುವುದರಿಂದ ಎದುರಾದ ಪರಿಸ್ಥಿತಿ ಅರಿವಿದ್ದರೂ ಕೋವಿಡ್ ನಂತಹ ವೈರಸ್‌ ತಡೆಗಟ್ಟುವಲ್ಲಿ ಸಹ ಹುಡುಗಾಟದಂತೆ ನಡೆದುಕೊಂಡಿರುವ ಪರಿಣಾಮ ಪರಿಸ್ಥಿತಿ ಕೈ ಮೀರಿದೆ. ಈಗಲಾದರೂ ಎಚ್ಚೆತ್ತು ಬರೀ ಮಾತನಾಡದೇ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಬೇಕು ಎಂದರು.

ಪ್ರಧಾನಿಯವರು ಆಗೊಮ್ಮೆ- ಈಗೊಮ್ಮೆ ಟಿವಿಯಲ್ಲಿ ಬಂದು ಪ್ರವಚನ ನೀಡುತ್ತಾರೆ. ಯಾರೊಂದಿಗೆ ಸಮಾಲೋಚನೆ ನಡೆಸದೇ ಏನೇನೋ ಹೇಳುತ್ತಾರೆ. ತದನಂತರ ಎಲ್ಲ ಅಧಿಕಾರ ರಾಜ್ಯಗಳಿಗೆ ಬಿಟ್ಟು ಬಿಡುತ್ತಾರೆ. ಈತ್ತ ರಾಜ್ಯದಲ್ಲಿ ಮುಂಜಾನೆ ಒಂದು ನಿರ್ಧಾರ, ಸಂಜೆ ಮತ್ತೂಂದರ ಕುರಿತಾಗಿ ಆದೇಶ ಹೊರಡಿಸಲಾಗುತ್ತದೆ. ಹೀಗಾಗಿ ಅಧಿ ಕಾರಿಗಳು ಗೊಂದಲದಲ್ಲಿ ಮುಳುಗಿದ್ದಾರೆ. ಒಟ್ಟಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಕೊರೊನಾ ನಿಯಂತ್ರಣ ಕ್ಕೆ ಬಾರದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಕ್ಕೆ ಉತ್ತರವಿಲ್ಲ: ಕಾರ್ಮಿಕರನ್ನು ಮಾರ್ಚ್‌ ತಿಂಗಳಲ್ಲೇ ಕರೆದುಕೊಂಡು ಬರುವಂತೆ ಪತ್ರ ಬರೆಯಲಾಗಿತ್ತು. ಅದೇ ರೀತಿ ಕೋವಿಡ್‌ ಹೊರತಾಗಿ ಇತರ ರೋಗಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಕೇಳಿ ಬರೆಯಲಾದ ಮಾಹಿತಿಗೂ ಜಿಲ್ಲಾಡಳಿತದಿಂದ ಉತ್ತರ ಬಂದಿಲ್ಲ. ಬಹುಶ: ತಮಗೆ ಉತ್ತರ ನೀಡದಿರುವಂತೆ ಸರ್ಕಾರ ನಿರ್ದೇಶನ ನೀಡಿರಬಹುದು ಎಂದು ಖರ್ಗೆ ವ್ಯಂಗ್ಯವಾಡಿದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಯುವ ಘಟಕದ ಅಧ್ಯಕ್ಷ ಈರಣ್ಣ ಝಳಕಿ, ಮುಖಂಡರಾದ ಡಾ. ಕಿರಣ ದೇಶಮುಖ, ಸುಭಾಷ ರಾಠೊಡ ಸೇರಿದಂತೆ ಮುಂತಾದವರಿದ್ದರು.

ಟಾಪ್ ನ್ಯೂಸ್

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

ಪ್ರಶ್ನೆಪತ್ರಿಕೆ ಸೋರಿಕೆಗೆ ಬುಲ್ಡೋಜರ್‌ ಕ್ರಮ? ತಪ್ಪಿತಸ್ಥರಿಗೆ ಭಾರೀ ದಂಡ

ಪ್ರಶ್ನೆಪತ್ರಿಕೆ ಸೋರಿಕೆಗೆ ಬುಲ್ಡೋಜರ್‌ ಕ್ರಮ? ತಪ್ಪಿತಸ್ಥರಿಗೆ ಭಾರೀ ದಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಪಠ್ಯದ ಅಂಕದ ಜತೆಗೆ ಜೀವನದ ಅಂಕವೂ ಗಳಿಸಿ: ಲಿಂಗರಾಜಪ್ಪ ಅಪ್ಪ

Kalaburagi: ಪಠ್ಯದ ಅಂಕದ ಜತೆಗೆ ಜೀವನದ ಅಂಕವೂ ಗಳಿಸಿ: ಲಿಂಗರಾಜಪ್ಪ ಅಪ್ಪ

9-

Kalaburagi: ಹೋಟೆಲ್ ಕಿಚನ್ ನಲ್ಲಿ ಸಿಲಿಂಡರ್ ಸ್ಪೋಟ: 10 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

4-kalburgi

Kalaburagi: ಉದಯವಾಣಿ ಸಹಯೋಗದಲ್ಲಿ ಯೋಗೋತ್ಸವ

1-eeeju

Kalaburagi; ರಾಡಿ ನೀರು ಪೂರೈಕೆ: ಈಜು ಕೋಳವೂ ಬಂದ್

Kalaburagi; ಜಿಮ್ಸ್-ಜಯದೇವ ಆಸ್ಪತ್ರೆಗಳಿಗೆ ವಿಪಕ್ಷ ನಾಯಕ ಅಶೋಕ್ ಭೇಟಿ

Kalaburagi; ಜಿಮ್ಸ್-ಜಯದೇವ ಆಸ್ಪತ್ರೆಗಳಿಗೆ ವಿಪಕ್ಷ ನಾಯಕ ಅಶೋಕ್ ಭೇಟಿ

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.