ಹಕ್ಕುಪತ್ರ ವಿತರಿಸಲು ಒತ್ತಾಯಿಸಿ ಪ್ರತಿಭಟನೆ

Team Udayavani, Feb 17, 2017, 3:35 PM IST

gul7.jpg

ಆಳಂದ: 2010-11ನೇ ಸಾಲಿನ ಇಲ್ಲಿಯ ಪುರಸಭೆ ವ್ಯಾಪ್ತಿಯ ವಾಜಪೇಯಿ ನಗರ ಆಶ್ರಯ ಯೋಜನೆಯಲ್ಲಿ ಮಂಜೂರಾದ ಫಲಾನುಭವಿಗಳಿಗೆ 15 ದಿನಗಳಲ್ಲಿ ನಿವೇಶನದ ಹಕ್ಕುಪತ್ರ ನೀಡದಿದ್ದಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಶಾಸಕ, ಬಿಜೆಪಿ ನಾಯಕ ಸುಭಾಷ ಗುತ್ತೇದಾರ ಹೇಳಿದರು. 

ಬಿಜೆಪಿ ಕಾರ್ಯಕರ್ತರು ಮತ್ತು ಆಶ್ರಯ ಹಕ್ಕುಪತ್ರ ವಂಚಿತ ಫಲಾನುಭವಿಗಳು ಸೇರಿ ಬೇಡಿಕೆಗೆ ಒತ್ತಾಯಿಸಿ ಗುರುವಾರ ಪಟ್ಟಣದಲ್ಲಿ ನಡೆಸಿದ ಎರಡನೇ ಪ್ರತಿಭಟನಾ ಹೋರಾಟದ ನೇತೃತ್ವ ವಹಿಸಿ ಅವರು ಮಾತನಾಡದರು. ವಾಜಪೇಯಿ ನಗರ ಆಶ್ರಯ ಯೋಜನೆ ಅಡಿ ಸರ್ವೆ ನಂಬರ್‌ 750ರಲ್ಲಿ 15 ಎಕರೆ ಜಮೀನಿನಲ್ಲಿ 535 ನಿವೇಶನಗಳಿಗೆ 535 ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಕಳಹಿಸಲಾಗಿದೆ.

ನಿಗಮದಿಂದ ಅನುಮೋದನೆಗೊಂಡ 332 ಮಹಿಳಾ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ  2014ರಲ್ಲೇ ಹಕ್ಕುಪತ್ರ ನೀಡುವಂತೆ ಆದೇಶಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 

ಹಿಂದೆ 11 ಮತ್ತು12 ಅಗಸ್ಟ್‌ 2014ರಂದು ತಹಶೀಲ್ದಾರ ಕಚೇರಿ ಎದುರು ಹೋರಾಟ ನಡೆಸಿದ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರು ಲಿಖೀತ ಪತ್ರದ ಮೂಲಕ ಕೂಡಲೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಮುಂದೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದಕ್ಕೆ ಶಾಸಕ ಬಿ.ಆರ್‌. ಪಾಟೀಲರು ತಮ್ಮ ರಾಜಕೀಯ ಲಾಭಕ್ಕಾಗಿ ಇಂದಿಗೂ ಬಡವರಿಗೆ ಹಕ್ಕುಪತ್ರಗಳು ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಸ್‌ ನಿಲ್ದಾಣ, ರಜ್ವಿರೋಡ ಇನ್ನಿತರ ಮಾರ್ಗವಾಗಿ ತಹಸೀಲ್ದಾ ಕಚೇರಿ ವರೆಗೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ ಸಾವಳೇಶ್ವರ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಮಹೇಶ ಗೌಳಿ, ಮಾಧ್ಯಮ ಪ್ರತಿನಿಧಿ ಮಹೇಶ ಹಿರೋಳಿ, ಚಂದ್ರಾಮಪ್ಪ ಘಂಟೆ, ರಾಜಶೇಖರ ಮಲಶೆಟ್ಟಿ, ದೀಲಿಪ ಕ್ಷೀರಸಾಗರ, ಮಲ್ಲಿಕಾರ್ಜುನ ಸಾವಳಗಿ ಇತರರು ಪಾಲ್ಗೊಂಡಿದ್ದರು.   

ಟಾಪ್ ನ್ಯೂಸ್

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

UGC-NET Exam 11 ಲಕ್ಷ ಮಂದಿ ಬರೆದಿದ್ದ ಯುಜಿಸಿ ನೆಟ್‌ ಪರೀಕ್ಷೆ ರದ್ದು , ಸಿಬಿಐ ತನಿಖೆ

UGC-NET Exam 11 ಲಕ್ಷ ಮಂದಿ ಬರೆದಿದ್ದ ಯುಜಿಸಿ ನೆಟ್‌ ಪರೀಕ್ಷೆ ರದ್ದು , ಸಿಬಿಐ ತನಿಖೆ

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

ವಿದ್ಯುತ್‌ ಶಾಕ್‌ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

ವಿದ್ಯುತ್‌ ಶಾಕ್‌ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

bjpಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ

ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ

ಸರ್ಕಾರಿ ಬಸ್‌ ಪ್ರಯಾಣ ದರ ಹೆಚ್ಚಳ: ಸಾರಿಗೆ ಸಚಿವರ ಸುಳಿವು

Government ಬಸ್‌ ಪ್ರಯಾಣ ದರ ಹೆಚ್ಚಳ: ಸಾರಿಗೆ ಸಚಿವರ ಸುಳಿವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ತೊಗರಿಗೆ 550 ರೂ ಬೆಂಬಲ ಬೆಲೆ ಹೆಚ್ಚಳ… ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

Kalaburagi: ತೊಗರಿಗೆ 550 ರೂ ಬೆಂಬಲ ಬೆಲೆ ಹೆಚ್ಚಳ… ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

2-chincholi

Chincholi: ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಆತ್ಮಹತ್ಯೆ

Veerashaiva-Lingayat separate religion recognition protest back to fore: Eshwar Khandre

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

UGC-NET Exam 11 ಲಕ್ಷ ಮಂದಿ ಬರೆದಿದ್ದ ಯುಜಿಸಿ ನೆಟ್‌ ಪರೀಕ್ಷೆ ರದ್ದು , ಸಿಬಿಐ ತನಿಖೆ

UGC-NET Exam 11 ಲಕ್ಷ ಮಂದಿ ಬರೆದಿದ್ದ ಯುಜಿಸಿ ನೆಟ್‌ ಪರೀಕ್ಷೆ ರದ್ದು , ಸಿಬಿಐ ತನಿಖೆ

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

ವಿದ್ಯುತ್‌ ಶಾಕ್‌ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

ವಿದ್ಯುತ್‌ ಶಾಕ್‌ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.