ಅನೈತಿಕ ಚಟುವಟಿಕೆಗಳ ತಾಣವಾದ ಹಳೆ ಶಾಸಕರ ಭವನ


Team Udayavani, Jun 23, 2018, 2:50 PM IST

kalabyurgi-2.jpg

„ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಕ್ಷೇತ್ರಕ್ಕೊಬ್ಬರು ಶಾಸಕರು, ಅವರಿಗೊಂದು ಭವನ. ಏಕೆಂದರೆ ಜನಸಾಮಾನ್ಯರು ತಮ್ಮ ಅಹವಾಲುಗಳನ್ನು ಶಾಸಕರಿಗೆ ತಿಳಿಸಬೇಕಾದರೆ ಅವರಿಗೊಂದು ನಿರ್ಧಿಷ್ಟ ಸ್ಥಳ ಬೇಕು. ಹೀಗಾಗಿ ಶಾಸಕರ
ಭವನ ಕಟ್ಟಿರುತ್ತಾರೆ. ಆದರೆ ಪಟ್ಟಣದಲ್ಲಿನ ಶಾಸಕರ ಭವನವನ್ನು ಹುಡುಕುವಂತ ಪರಿಸ್ಥಿತಿ
ನಿರ್ಮಾಣವಾಗಿದೆ.

ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲೋಕೋಪಯೋಗಿ  ಇಲಾಖೆ ಕಟ್ಟಡದಲ್ಲಿರುವ ತಾತ್ಕಾಲಿಕ ಶಾಸಕರ ಭವನವೀಗ ಅಕ್ಷರಶಃ ಖಾಸಗಿ ವಾಹನಗಳ ಅಡ್ಡೆ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಈ ಭವನದ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಡ್ಡದ ಎದುರು ಮತ್ತು ಅಕ್ಕಪಕ್ಕದಲ್ಲಿರುವ ಚರಂಡಿಗಳು ತುಂಬಿಕೊಂಡಿದ್ದು ಚರಂಡಿ ನೀರು ರಸ್ತೆಯ ಮೇಲೆಲ್ಲ ಹರಿದಾಡಿ ಕೊಳಗೇರಿಯಂತೆ ಕಾಣುತ್ತಿದೆ.ಕೊಳಗೇರಿಯಂತೆ ಕಾಣುತ್ತಿದೆ.

ಬಯಲು ಶೌಚಕ್ಕೆ ಶಾಸಕರ ಭವನವೇ ಜಾಗ: ಸಾರ್ವಜನಿಕರು, ಖಾಸಗಿ ವಾಹನಗಳ ಚಾಲಕರು ಭವನದ ಮುಂದಿನ ಚರಂಡಿ ಬಳಿ ಶೌಚಕ್ಕೆ ಹೋಗುತ್ತಾರೆ. ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಇಲ್ಲಿನ ವಾತಾವರಣ ಕಲುಷಿತಗೊಂಡಿದೆ.

ಹಂದಿಗಳ ತಾಣ: ತುಂಬಿಕೊಂಡ ಚರಂಡಿಗಳು, ಎಲ್ಲೆಂದರಲ್ಲಿ ಕಾಣುವ ಪ್ಲಾಸ್ಟಿಕ್‌ ಕಸ ಹಾಗೂ ಸಾರ್ವಜನಿಕರು ಖಾಸಗಿ ವಾಹನಗಳ ಚಾಲಕರು ಇಲ್ಲಿಯೇ ಶೌಚಕ್ಕೆ ಹೋಗುವುದರಿಂದ ಹಂದಿಗಳು ಶಾಸಕರ ಭವನದ ಮುಂಭಾಗ ಮತ್ತು ಆವರಣವನ್ನು ತಮ್ಮ ಕಾಯಂ ವಾಸಸ್ಥಳವನ್ನಾಗಿ ಮಾಡಿಕೊಂಡಿವೆ.

ಚರಂಡಿಯ ಕೋಳಚೆ ನೀರಲ್ಲಿ ಹಂದಿಗಳು ಒದ್ದಾಡುವುದರಿಂದ ಗಬ್ಬು ವಾಸನೆ ಬಡಾವಣೆಗೆ ವ್ಯಾಪಿಸುತ್ತಿದೆ. ಇಂತಹ ಕೊಳಚೆ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡುವುದರಿಂದ ಸಾಂಕ್ರಾಂಮಿಕ ರೋಗದ ಭೀತಿ ಎದುರಾಗಿದೆ.

ಮುಖ್ಯ ರಸ್ತೆಗೆ ಚರಂಡಿ ಇಲ್ಲದಿರುವುದೇ ಸಮಸ್ಯೆಗೆ ಕಾರಣ: ಪಟ್ಟಣದಲ್ಲಿ ದ್ವಿಪಥ ಮುಖ್ಯ ರಸ್ತೆ ನಿರ್ಮಿಸಲಾಗಿದೆ. ಮುಖ್ಯ ರಸ್ತೆಗೆ ಎರಡೂ ಬದಿಯಲ್ಲಿ ಗುಣಮಟ್ಟದ ಮತ್ತು ಸುಸಜ್ಜಿತ ಚರಂಡಿ ನಿರ್ಮಿಸಬೇಕಾಗಿತ್ತು. ಆದರೆ ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸದ ಕಾರಣದಿಂದ ಮತ್ತು ಜನಪ್ರತಿನಿಧಿಗಳು,ಅಧಿಕಾರಿಗಳ ಜವಾಬ್ದಾರಿತನದಿಂದಾಗಿ ಹಳೆಯ ಚರಂಡಿಗಳನ್ನು ಹಾಗೆ ಬಿಡಲಾಗಿದೆ. ಇದರಿಂದಾಗಿ ಚರಂಡಿಗಳು ಮುಚ್ಚಿಕೊಂಡಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿದಾಡುತ್ತಿದೆ.ಪುರಸಭೆಯವರು ಚರಂಡಿ ಸ್ವಚ್ಚಗೊಳಿಸುವ ಗೋಜಿಗೆ ಹೋಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ರಾಷ್ಟ್ರೀಯ ಹಬ್ಬಗಳಂದು ನೆನಪಾಗುವ ಭವನ: ಶಾಸಕರ ಭವನ ಎನ್ನುವುದು ಕೇವಲ ರಾಷ್ಟ್ರೀಯ ಹಬ್ಬಗಳ ದಿನ ಧ್ವಜಾರೋಹಣಕ್ಕಾಗಿ ಮಾತ್ರ ಇದೆ ಎನ್ನುವಂತಾಗಿದೆ. ಯಾರೇ ಜನಪ್ರತಿನಿಧಿಗಳಿರಲಿ, ಶಾಸಕರಾಗಿರಲಿ ಅವರು
ಕೇವಲ ಸ್ವಾತಂತ್ರ ದಿನ, ಗಣರಾಜ್ಯ ದಿನ, ಹೈ.ಕ ವಿಮೋಚನಾ ದಿನಗಳಲ್ಲಿ ಮಾತ್ರ ಭವನಕ್ಕೆ ಬಂದು ಧ್ವಜಾರೋಹಣ ನೆರವೇರಿಸಿ ಹೋಗುತ್ತಾರೆ.ಪುನಃ ಇತ್ತ ಕಡೆ ತಿರುಗಿಯೂ ನೋಡುವುದಿಲ್ಲ. ಹೀಗಾಗಿ ಶಾಸಕರ ಭವನ ಎನ್ನುವುದು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಈ ಕುರಿತು ನೂತನ ಶಾಸಕರು ಕ್ರಮ ಕೈಗೊಳ್ಳುವರೇ ಎಂದು ಕಾಯ್ದು ನೋಡಬೇಕಿದೆ. 

ನಾನು 2004ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡವನ್ನು ಶಾಸಕರ
ಭವನವನ್ನಾಗಿ ಮಾಡಿದ್ದೆ. ಉದ್ಯಾನವನ ನಿರ್ಮಿಸಿ ಒಳ್ಳೆಯ ವಾತಾವರಣ ಸೃಷ್ಟಿಸಿದ್ದೆ. ಆದರೆ ಈ ಹಿಂದೆ ಇದ್ದ ಶಾಸಕರು ಭವನದ ಬಗ್ಗೆ ಗಮನ ಹರಿಸಿಲ್ಲ, ಹೀಗಾಗಿ ಅವ್ಯವಸ್ಥೆಗೆ ಕಾರಣವಾಗಿದೆ. ಆದರೀಗ ಈ ಕಟ್ಟಡ ಕೆಡವಿ ಹೊಸ ಭವನ ಕಟ್ಟಿಸಲಾಗುತ್ತದೆ.
ಎಂ.ವೈ. ಪಾಟೀಲ, ಶಾಸಕರು

ಶಾಸಕರ ಭವನ ಹಾಳಾಗಿದ್ದರ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲಿಸಿದ್ದೇವೆ. ಶೀಘ್ರವೇ ಭವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ದುರಸ್ತಿ ಮಾಡಲಾಗುವುದು.
ಮಾಣಿಕ ಕನಕಟ್ಟಿ, ಪಿಡಬ್ಲ್ಯುಡಿ ಎಇಇ

ಟಾಪ್ ನ್ಯೂಸ್

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ: ಜಿಲ್ಲಾಧಿಕಾರಿ ಕೂರ್ಮಾ ರಾವ್‌

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

8bankloan

ಸಾಲ ಪಡೆಯಲು ಜನಜಂಗುಳಿ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ: ಜಿಲ್ಲಾಧಿಕಾರಿ ಕೂರ್ಮಾ ರಾವ್‌

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.