
ಅಕ್ರಮ ಮನೆ ನಿರ್ಮಾಣಕ್ಕೆ ತಡೆ
Team Udayavani, May 31, 2020, 7:15 AM IST

ಟೇಕಲ್: ಹೋಬಳಿಯ ಕೆ.ಜಿ.ಹಳ್ಳಿಯ ಸರ್ವೆ ನಂ. 73ರ ಗೋಮಾಳ ಬಂಡೆ ಮೇಲೆ ಈ ಹಿಂದೆ ಅಕ್ರಮ ವಾಗಿ ಮನೆ ನಿರ್ಮಿಸುತ್ತಿದ್ದವರಿಗೆ ಸ್ಥಗಿತಗೊಳಿಸಿ ಎಂದು ಎಸಿ ಸೋಮಶೇಖರ್ ಆದೇಶಿಸಿದ್ದರೂ ಲಾಕ್‌ಡೌನ್ ದುರ್ಬಳಕೆ ಮಾಡಿಕೊಂಡ ಕೆಲವರು ಪ್ರಭಾವಿಗಳ ಕೈವಾಡದೊಂದಿಗೆ ಮನೆ ಕಟ್ಟುತ್ತಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ತಹಶೀಲ್ದಾರ್ ಎಂ.ಮಂಜುನಾಥ್, ದಿಢೀರ್ ಭೇಟಿ ನೀಡಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳು ತ್ತಿದ್ದನ್ನು ಸ್ಥಗಿತಗೊಳಿಸಿದರು. ಈ ವೇಳೆ ತಹಶೀಲ್ದಾರ್ ಮಂಜುನಾಥ್ ಮಾತ ನಾಡಿ, ಸರ್ವೆ ನಂ.73ರ ಗೋಮಾಳದಲ್ಲಿ ಸ್ಥಳೀಯರ ಪ್ರಭಾವದಿಂದ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳುತ್ತಿ ರುವುದು ಗಮನಕ್ಕೆ ಬಂದಿದ್ದು, ಇದನ್ನು ಭೂಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ದಾವೆ ಹೂಡಲಾಗುತ್ತದೆ.
ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಪಂಚಾ ಯ್ತಿಯಿಂದ ಏನಾದರೂ ಅಕ್ರಮ ಖಾತೆಗಳು ನಡೆದಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು. ಟೇಕಲ್ ನಾಡಕಚೇರಿ ಉಪತಹಶೀಲ್ದಾರ್ ಜಗನ್ನಾಥ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರಿ ಜಾಗದಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಅತಿಕ್ರಮ ಪ್ರವೇಶ ಮಾಡಿದರೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ.
ಮನೆ ಇಲ್ಲದವರು ಪಂಚಾಯ್ತಿಯಲ್ಲಿ ಅರ್ಜಿ ನೀಡಿದರೆ ಅಂತಹವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮಾಹಿತಿ ನೀಡಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿ ದರು. ಈ ವೇಳೆ ಉಪತಹಶೀಲ್ದಾರ್ ಜಗನ್ನಾಥರೆಡ್ಡಿ, ಕಂದಾಯ ಅಧಿಕಾರಿ ಮುನಿಸ್ವಾಮಿಶೆಟ್ಟಿ, ಗ್ರಾಮಲೆಕ್ಕಾಧಿ ಕಾರಿ ಸುಧಾಮಣಿ, ಗ್ರಾಪಂ ಸದಸ್ಯ ಮುರುಗೇಶ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
