ಜ.8ರ ಸಾರ್ವತ್ರಿಕ ಮುಷ್ಕರಕ್ಕೆ ಕೆಪಿಆರ್‌ಎಸ್‌ ಬೆಂಬಲ

Team Udayavani, Dec 29, 2019, 3:59 PM IST

kolar-tdy-1

ಕೋಲಾರ: ಜನವರಿ 8ರಂದು ನಡೆಯಲಿರುವ ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲವಾಗಿ ಕೆಪಿಆರ್‌ಎಸ್‌ ಜಿಲ್ಲಾ ಸಮಿತಿಯಿಂದ ರೈತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮುಷ್ಕರದ ಪತ್ರ ಕಳುಹಿಸಿದರು.

ನಗರದ ಹೊರವಲಯದ ಟಮಕದಲ್ಲಿ ಜಮಾಗೊಂಡ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಬೈಕ್‌ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಪ್ರತಿಭಟನೆ ನಡೆಸಿದ ಕೇಂದ್ರ ಕಾರ್ಮಿಕ ಸಂಘಗಳು 2020ರ ಜ.8ರಂದು ನಡೆದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಸಕ್ರಿಯವಾಗಿ ಬೆಂಬಲಿಸಬೇಕು ಎಂದು ಮನವಿ ಸಲ್ಲಿಸಿದರು.

ದೇಶಾದ್ಯಂತ ಮುಷ್ಕರ: ಕೇಂದ್ರ ಕಾರ್ಮಿಕ ಸಂಘಗಳು, ಬೆಲೆ ಏರಿಕೆ, ನಿರುದ್ಯೋಗ, ಕನಿಷ್ಠ ವೇತನ, ಬೆಂಬಲ ಬೆಲೆ, ಪಿಎಸ್‌ಇಗಳ ಖಾಸಗೀಕರಣ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಅಗತ್ಯ ಸೇವೆಗಳು, ರೈಲ್ವೆ ಖಾಸಗೀಕರಣ, ಆರ್‌ಸಿಇಪಿಗೆ ಸಹಿ ಹಾಕುವ ಅಪಾಯ, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳ ದಲಿತರು ಮತ್ತು ಆದಿವಾಸಿಗಳು ಮೇಲಿನ ದೌರ್ಜನ್ಯ ವಿರೋದಿಸುವ ಇತ್ಯಾದಿ ಪ್ರಶ್ನೆಗಳ ಆಧಾರದಲ್ಲಿ ದೇಶಾದ್ಯಂತ ಮುಷ್ಕರ ನಡೆಯಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹೆಚ್ಚುತ್ತಿದೆ ಬಡತನ, ಹಸಿವು: ಸಾರ್ವತ್ರಿಕ ಮುಷ್ಕರ ಭಾರತದ ಜನರ ನೈಜ ಸಮಸ್ಯೆಗಳ ವಿರುದ್ಧ ರೈತರ ಆತ್ಮಹತ್ಯೆ ಅಡೆತಡೆಯಿಲ್ಲದೆ ಮುಂದುವರಿದಿದ್ದು, ಕೃಷಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಕೃಷಿ ವೆಚ್ಚಗಳು ಹೆಚ್ಚಾಗು ತ್ತಿರುವುದರಿಂದ ಆದಾಯಗಳು ಕುಸಿಯುತ್ತಿವೆ. ಬೆಲೆಗಳು ಕೃಷಿಗೆ ಬೆಂಬಲವಾಗಿಲ್ಲ. ಎಂಜಿಎನ್‌ಆರ್‌ ಇಜಿಎ ಕಳಚಲಾಗುತ್ತಿದೆ. ಬೆಳೆ ವಿಮಾ ಯೋಜನೆಯು ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ ಹೆಚ್ಚಿಸಲು ಸಹಾಯ ಮಾಡುತ್ತಿದೆ. ಪಿಎಂ-ಕಿಸಾನ್‌ ಅಡಿಯಲ್ಲಿನ ಸಣ್ಣ ಮೊತ್ತವೂ ಬಹುಪಾಲು ಜನರಿಗೆ ಲಭ್ಯವಿಲ್ಲ. ಬಡತನ ಮತ್ತು ಹಸಿವು ಬೆಳೆಯುತ್ತಿವೆ ಎಂದರು

ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಪಿ.ಆರ್‌.ಸೂರ್ಯ ನಾರಾಯಣ್‌ ಮಾತನಾಡಿ, ಎಲ್ಲ ವರ್ಗದವರು ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಅಸಮಾ ಧಾನ ಮತ್ತು ಆಕ್ರೋಶವಿದೆ. ರೈತರ ಸಮಸ್ಯೆ ಎತ್ತಿ ಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಕಳೆದ ಚುನಾವಣೆಯ ನಂತರ ದೇಶಾದ್ಯಂತದ ಮೊದಲ ಪ್ರಮುಖ ಮುಷ್ಕರದೊಂದಿಗೆ ಗ್ರಾಮೀಣ ಹರತಾಳು ಆಚರಿಸಲಾಗುವುದು. ಇದಕ್ಕೆ ಸಹಕರಿಸಬೇಕೆಂದರು.

ಕೆಪಿಆರ್‌ಎಸ್‌ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್‌ ಮಾತನಾಡಿ, ನರೇಂದ್ರ ಮೋದಿಯವರ ಕಾರ್ಪೊರೇಟ್‌ ಪರ ನೀತಿಗಳು ಬಿಜೆಪಿ ಸರ್ಕಾರವನ್ನು ಮುನ್ನಡೆಸಿದವು. ಕೃಷಿಕರ ಜೀವನೋಪಾಯ ಉದ್ದೇಶ ಪೂರ್ವಕವಾಗಿ ನಾಶಪಡಿಸಲು ಹೊರಟಿದೆ. ಬೆಳೆ ಗಳನ್ನು ಬೆಳೆಸುವವರು ರೂ.12,000 ಕೋಟಿಗಿಂತ ಹೆಚ್ಚಿನ ನಷ್ಟವನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ವಿನಾಶಕಾರಿ ಹಾದಿಯಿಂದ ಹಿಂದೆ ಸರಿಯುವಂತೆ ಮತ್ತು ರೈತರಿಗೆ ಆಗುವ ನಷ್ಟವನ್ನು ಸರಿ ದೂಗಿಸಲು ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದರು. ಕಾರ್ಪೊರೇಟ್‌ ವಲಯದ ಆಜ್ಞೆಯ ಮೇರೆಗೆ ಬಿಜೆಪಿ ಸರ್ಕಾರ ಆಕ್ರಮಣಕಾರಿಯಾಗಿ ಅನುಸರಿಸು ತ್ತಿರುವ ರೈತ ವಿರೋಧಿ  ಶಾಸನಗಳು ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳ ವಿರುದ್ಧ ಜಾಗರೂಕರಾಗಿರಲು ಎಐಕೆಎಸ್‌ ಜನತೆಗೆ ಕರೆ ನೀಡುತ್ತದೆ. ಕೋಮುವಾದಿ ಶಕ್ತಿಗಳ ವಿರುದ್ಧ ವಿಶಾಲವಾದ ಐಕ್ಯತೆ ನಿರ್ಮಿಸಿ ದೇಶವನ್ನು ಕೋಮು ಧ್ರುವೀಕರಿಸುವ ಪ್ರಯತ್ನಗಳನ್ನು ಎದುರಿಸಲಾಗುವುದು ಎಂದರು.

ಕೆಪಿಆರ್‌ಎಸ್‌ ಜಿಲ್ಲಾ ಉಪಾಧ್ಯಕ್ಷ ಕೃಷ್ಣೇಗೌಡ, ಪಿ.ಆರ್‌.ನವೀನ್‌, ಕುರ್ಕಿ ದೇವರಾಜ್‌, ಗಂಗಮ್ಮ, ಸಿ.ಮುನಿಸ್ವಾಮಿಗೌಡ, ತಾಲೂಕು ಅಧ್ಯಕ್ಷ ಎನ್‌.ಎನ್‌. ಶ್ರೀರಾಮ್‌, ಕಾರ್ಯದರ್ಶಿ ನಾರಾಯಣರೆಡ್ಡಿ, ಮುಖಂಡರಾದ ಪಿ.ವಿ.ರಮಣ್‌, ಮಾಲೂರು ಅಶೋಕ್‌,ವೆಂಕಟೇಶ್‌ ವೆಂಕಟಪ್ಪ ಭಾಗವಹಿಸಿದ್ದರು.

ಟಾಪ್ ನ್ಯೂಸ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

1-dd

Tulu Nadu ದೈವ ದೇವರ ಹೆಸರಿನಲ್ಲಿ ಬ್ರಿಜೇಶ್ ಚೌಟ ಪ್ರಮಾಣ ವಚನ ಸ್ವೀಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

KGF Gold: ಮತ್ತೆ ಚಿನ್ನ ಕೊಡಲಿದೆ ಕೋಲಾರದ ಕೆಜಿಎಫ್!

Tomato-Price

Kolara: ಗಗನಕ್ಕೇರುತ್ತಿರುವ ಟೊಮೆಟೋ ಬೆಲೆ

ಸರಕಾರದ ವಿರುದ್ಧ ಇಂದು ಬಿಜೆಪಿ ಬೃಹತ್‌ ಪ್ರತಿಭಟನೆ: ಅಶ್ವತ್ಥನಾರಾಯಣ

ಸರಕಾರದ ವಿರುದ್ಧ ಇಂದು ಬಿಜೆಪಿ ಬೃಹತ್‌ ಪ್ರತಿಭಟನೆ: ಅಶ್ವತ್ಥನಾರಾಯಣ

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆSiddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

1–ncxcx.

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.