Udayavni Special

ಡ್ಯಾಂ ಇದ್ದರೂ ನೀರಿಗೆ ಹಾಹಾಕಾರ


Team Udayavani, May 17, 2019, 5:31 PM IST

kopala-tdy-1…

ಕೊಪ್ಪಳ: ತುಂಗಭದ್ರಾ ಜಲಾಶಯ ಜಿಲ್ಲೆಯಲ್ಲೇ ಇದ್ದರೂ 282ಕ್ಕೂ ಹೆಚ್ಚು ಹಳ್ಳಿಗಳು ಇಂದಿಗೂ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಪ್ರತಿ ಬೇಸಿಗೆಯಲ್ಲಿ ಜನರ ಗೋಳಾಟ, ಪರಿಪಾಟಲು ಯಾರಿಗೂ ಹೇಳತೀರದಂತ ಸ್ಥಿತಿಯಿದೆ. ಜಿಲ್ಲಾಡಳಿತ ಪ್ರತಿ ವರ್ಷ ಕೋಟ್ಯಂತರ ರೂ. ಹಣ ವೆಚ್ಚ ಮಾಡಿದರೂ ಜನರು ನೀರಿಗೆ ಬಿಕ್ಕುವ ಸ್ಥಿತಿ ತಪ್ಪಿಲ್ಲ.

ಜಿಲ್ಲೆ ಮೊದಲೇ ಬರಪೀಡಿತ ಎಂಬ ಹಣೆಪಟ್ಟಿ ಹೊತ್ತಿದೆ. ಮಳೆಯ ಅಭಾವದಿಂದ ಈ ಭಾಗದಲ್ಲಿ ಅಂತರ್ಜಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕೆರೆ, ಬಾವಿ ನೀರಿನ ಮೂಲಗಳನ್ನೇ ನಂಬಿ ಜೀವನ ನಡೆಸುವ ಜನತೆ ಕೊಡ ನೀರಿಗೆ ತೋಟ, ಗದ್ದೆಗಳಿಗೆ ಅಲೆದಾಡುತ್ತಿದ್ದಾರೆ.

•ಜಿಲ್ಲೆಯಲ್ಲಿ ನೀರಿಗೆ ಬಾಯ್ದೆರೆದ 282 ಹಳ್ಳಿಗಳು

•ತುಂಗಭದ್ರೆ ಪಕ್ಕದಲ್ಲೇ ಇದ್ದರೂ ಬಿಕ್ಕುವ ಜನ

•13 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು

•ಕೋಟಿ ಕೋಟಿ ಬಂದರೂ, ಸಮಸ್ಯೆ ಕಗ್ಗಂಟು

ಜಿಲ್ಲೆಯ 737 ಜನವಸತಿ ಪ್ರದೇಶಗಳಲ್ಲಿ 282 ಗ್ರಾಮಗಳು ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳೆಂದು ಜಿಲ್ಲಾಡಳಿತದ ವರದಿಯೇ ಹೇಳುತ್ತದೆ. ಪ್ರತಿ ಬೇಸಿಗೆಯಲ್ಲಿ ಏಪ್ರಿಲ್, ಮೇನಲ್ಲಿ ಸಮಸ್ಯಾತ್ಮಕ ಹಳ್ಳಿಗಳ ಸಂಖ್ಯೆ 330ರ ಗಡಿದಾಟುತ್ತದೆ. ನೀರಿನ ಹಾಹಾಕಾರ ಉಲ್ಭಣಿಸಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಎದ್ದು ಬಿದ್ದು ಕ್ರಿಯಾಯೋಜನೆ ರೂಪಿಸಲು ಓಡಾಡುತ್ತಿರುತ್ತಾರೆ. ಆದರೆ ಪೂರ್ವ ಯೋಜನೆ ಅವರಲ್ಲಿ ಕಾಣಲ್ಲ.

ವಿಶೇಷವೆಂಬಂತೆ, ತುಂಗಭದ್ರಾ ಡ್ಯಾಂ ಜಿಲ್ಲೆಯಲ್ಲೇ ಇದ್ದರೂ ನೀರಿನ ಬವಣೆ ಮಾತ್ರ ನೀಗಿಲ್ಲ. ಕಳೆದ ವರ್ಷ ಡ್ಯಾಂ ಭರ್ತಿಯಾದರೂ ಜಿಲ್ಲೆಯ ಜನ ತೋಟ, ಗದ್ದೆ, ಕೆರೆ, ಬಾವಿಗಳಲ್ಲಿ ನಿಂತ ನೀರನ್ನೇ ಬಳಸುತ್ತಿದ್ದಾರೆ. ಪರ ಊರುಗಳಿಂದ ಜನರು ನೀರು ತಂದು ಜೀವನ ನಡೆಸುವಂತಹ ಸ್ಥಿತಿಯಿದೆ. ಇಲ್ಲಿನ ಶಾಸಕ, ಸಂಸದರು ಶಾಶ್ವತ ಯೋಜನೆ ರೂಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.

ಕ್ರಿಯಾಯೋಜನೆ: ಪ್ರಸಕ್ತ ಬೇಸಿಗೆಯಲ್ಲಿ ನೀರಿನ ಬವಣೆ ನಿವಾರಿಸಲು ಸರ್ಕಾರ ಜಿಪಂನ ಟಾಸ್ಕ್ ಫೋರ್ಸ್‌ನಡಿ 3.75 ಕೋಟಿ, ಎಸ್‌ಡಿಆರ್‌ಎಫ್‌ನಡಿ 1.30 ಕೋಟಿ, ಜಿಲ್ಲಾಧಿಕಾರಿ ಬರ ಪರಿಹಾರದಲ್ಲಿ 3.43 ಕೋಟಿ ಸೇರಿದಂತೆ ಒಟ್ಟು ಕುಡಿಯುವ ನೀರು ಪೈಪ್‌ಲೈನ್‌ ದುರಸ್ತಿ, ಕೊಳವೆ ಬಾವಿ ಬಾಡಿಗೆ, ಕೊಳವೆಬಾವಿ ಕೊರೆಯಿಸುವುದು ಸೇರಿ ಜನರಿಗೆ ನೀರು ಪೂರೈಕೆಗೆ 8.48 ಕೋಟಿ ರೂ.ನಲ್ಲಿ ಕ್ರಿಯಾಯೋಜನೆ ರೂಪಿಸಿ ಬಿಡುಗಡೆಯನ್ನೂ ಮಾಡಿದೆ. ಆದರೆ ಜಿಲ್ಲೆಯ 110 ಗ್ರಾಮಗಳಲ್ಲಿ 138 ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸುವಂತಹ ಸ್ಥಿತಿಯಿದೆ. ಇನ್ನೂ ಕುಷ್ಟಗಿ ತಾಲೂಕಿನ ಗುಡ್ಡದ ದೇವಲಾಪುರ, ಹನುಮನಾಳ, ಸಾಸ್ವಿಹಾಳ, ಅಡವಿಬಾವಿ, ರ್ಯಾವಣಕಿ, ಚಂದ್ರಗಿರಿ ಸೇರಿ ಜಿಲ್ಲೆಯ 13 ಹಳ್ಳಿಗಳಲ್ಲಿ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದ್ದು, ಮೇ ಕೊನೆಯಲ್ಲಿ ಈ ಹಳ್ಳಿಗಳ ಸಂಖ್ಯೆ 40ರ ಗಡಿ ದಾಟಬಹುದು ಎಂದು ಜಿಲ್ಲಾಡಳಿತ ಲೆಕ್ಕಾಚಾರ ಹಾಕಿಕೊಂಡಿದೆ. ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಹಲವು ಕಡೆ ಕೆಟ್ಟಿವೆ. ದುರಸ್ತಿಗೆ ಗ್ರಾಪಂಗಳು ನರಳಾಡುತ್ತಿದ್ದರೆ, ಸಂಘ-ಸಂಸ್ಥೆಗಳ ಆಶ್ರಯದಲ್ಲಿರುವ ಘಟಕಗಳು ಸರಿಯಾಗಿವೆ. ಹಲವೆಡೆ ಘಟಕಗಳಿಗೆ ನೀರಿಗೆ ಬರ ಬಂದಿದೆ. ಪ್ರತಿ ವರ್ಷ ಕುಡಿಯುವ ನೀರಿಗೆ ಕೋಟಿ ಕೋಟಿ ಅನುದಾನ ಬಂದರೂ ಸಮಸ್ಯೆ ಕಗ್ಗಂಟಾಗುತ್ತಿದೆ.

•ದತ್ತು ಕಮ್ಮಾರ

ಟಾಪ್ ನ್ಯೂಸ್

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dasara festival

ವೈಭವದ ಹೇಮಗುಡ್ಡ ಅಂಬಾರಿ ಮೆರವಣಿಗೆ

hyjkhgfdsa

ಹಾಸ್ಟೆಲ್ ನಲ್ಲಿ ಶಾರ್ಟ್ ಸರ್ಕ್ಯೂಟ್  : ಕಂಪ್ಯೂಟರ್ ಭಸ್ಮ

koppala news

ಕೋರ್ಸ್‌ ಪುನಃ ಆರಂಭಿಸಲು ಒತ್ತಾಯ

gangavathi news

ರಾಜಕಾಲುವೆ ಮೇಲೆ ಮಳಿಗೆ ನಿರ್ಮಾಣ

koppala news

ಸಪ್ತಪದಿಗೆ ಜಿಲ್ಲಾಡಳಿತದಿಂದ ಬೇಕು ಮುದ್ರೆ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

suicide

ಮೋಸ ಮಾಡಿದವನನ್ನು ಗಲ್ಲಿಗೇರಿಸಿ: ಡೆತ್ ನೋಟ್ ಬರೆದು ನೇಣಿಗೆ ಶರಣಾದ ವಿದ್ಯಾರ್ಥಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.