ಅಂತೂ ಇಂತೂ ವಿಜಯನಗರ ಬಡಾವಣೆಗೆ ನೀರು ಬಂತು

Team Udayavani, May 14, 2019, 3:40 PM IST

kopp-6

ಕೊಪ್ಪಳ: ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ 26ನೇ ವಾರ್ಡ್‌ನ ವಿಜಯನಗರ ಬಡಾವಣೆಗೆ ಕೊನೆಗೂ ನೀರು ಪೂರೈಕೆ ಪ್ರಾರಂಭವಾಗಿದೆ. ವಾರ್ಡ್‌ ಸದಸ್ಯೆ ದೇವಕ್ಕ ಕಂದಾರಿ ಅವರ ಸತತ ಪ್ರಯತ್ನದಿಂದ ವಾರ್ಡ್‌ಗೆ ನೀರು ಪೂರೈಕೆಯಾಗಿದ್ದು, ಸೋಮವಾರ ಓಣಿಯಲ್ಲಿ ಸಂಭ್ರಮ ಮನೆ ಮಾಡಿತ್ತು.

ಹೌದು.. ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇದ್ದರೂ ಕೊಪ್ಪಳದ ಜನತೆ ಕುಡಿಯುವ ನೀರಿಗೆ ಎಲ್ಲೆಡೆ ಅಲೆದಾಡುವಂತ ಪರಿಸ್ಥಿತಿ ಇದೆ. ಹೊಲ, ಗದ್ದೆಗಳಿಗೆ, ಹಳ್ಳದ ತಟದಲ್ಲಿನ ಬೋರ್‌ವೆಲ್ಗೆ ತೆರಳಿ ನೀರು ತರುವಂತ ಸ್ಥಿತಿಯಿದೆ. ಅಲ್ಲದೇ, 26ನೇ ವಾರ್ಡಿನಲ್ಲಂತೂ ಅತೀವ ನೀರಿನ ಸಮಸ್ಯೆ. ವಾರ್ಡ್‌ ಸದಸ್ಯರ ಪರಿಶ್ರಮದಿಂದ ಕೊನೆಗೂ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಇಲ್ಲಿನ ಜನತೆ ಹಬ್ಬದಂತೆ ನೀರಿಗೆ ಪೂಜೆ ಮಾಡಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ನೀರಿನ ಸಮಸ್ಯೆಯಿಂದಾಗಿ ವಾರ್ಡ್‌ನಲ್ಲಿನ ಹಾಸ್ಟೆಲ್ಗೆ ವಿದ್ಯಾರ್ಥಿನಿಯರು ಆಗಮಿಸಲು ಹಿಂದೇಟು ಹಾಕುವಂತ ಸ್ಥಿತಿಯಿತ್ತು. ಅಂತೂ ವಿಜಯನಗರದ ಬಡಾವಣೆಯ ಜನರ ಬಹುದಿನದ ಬೇಡಿಕೆ ಈಡೇರಿದೆ. ತುಂಗಭದ್ರಾ ನೀರನ್ನು ಓಣಿಗೆ ತಂದಿದ್ದಕ್ಕೆ ಬಡಾವಣೆಯ ಜನರ ಮನಸ್ಸಿನಲ್ಲಿ ಉಲ್ಲಾಸ ತುಂಬಿ ತುಳುಕುತ್ತಿತ್ತು.

ಈ ಸಂಭ್ರಮದಲ್ಲಿ ನಗರಸಭೆ ಸದಸ್ಯೆ ದೇವಕ್ಕ ಕಂದಾರಿ, ಮುಖಂಡರಾದ ಹಾಲೇಶ ಕಂದಾರಿ ಬಸವರಾಜ ಬನ್ನಿಕೊಪ್ಪ, ರಾಘವೇಂದ್ರ ನರಗುಂದ, ಶರಣಯ್ಯ ಹಿರೇಮಠ, ಶಿವಣ್ಣ ಹಟ್ಟಿ, ನಿವಾಸಿಗಳಾದ ಕಾಸೀಂ, ಸಂಜೀವ, ಪಾಪಣ್ಣ ನಾಯಕ, ಸಿದ್ದು ಭಾಗ್ಯನಗರ, ಕುಮಾರ, ಜೀಲಾನಸಾಬ್‌, ನಜೀರಸಾಬ್‌ ಚಿಲವಾಡ್ಗಿ, ಮುರುಳೀಧರ ಭಜಂತ್ರಿ, ರಾಯನಗೌಡ, ಮಂಜುನಾಥ ಗುಗ್ರಿ, ಮೈಲಾರಪ್ಪ ವಕೀಲರು, ಯಾಕುಬ್‌ ಸಾಬ್‌, ಗೈಬು ಮೇಸ್ತ್ರಿ, ನಾಗಪ್ಪ ಚಳ್ಳಾರಿ ಸೇರಿ ಇತರರು ಇದ್ದರು.

ಎಲ್ಲದಕ್ಕೂ ನೀರು ಬಹಳ ಮುಖ್ಯ. ವಿಜಯನಗರ ಬಡಾವಣೆಯ ಜನರು ಕೊಳವೆಬಾಯಿಯನ್ನೇ ಅವಲಂಬಿಸಿದ್ದರು. ಈಗ ತುಂಗಭದ್ರಾ ನದಿಯ ಸಿಹಿ ನೀರುನ್ನು ಪೂರೈಸಿದ್ದು ಖುಷಿಯಾಗಿದೆ. ನೀರು ಒದಗಿಸುವ ಪ್ರಕ್ರಿಯಲ್ಲಿ ಭಾಗವಹಿಸಿದ ಎಲ್ಲ ನಗರಸಭೆಯ ಅಧಿಕಾರಿ ವರ್ಗಕ್ಕೆ ಮತ್ತು ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ.
•ದೇವಕ್ಕ ಲಕ್ಷ್ಮಣ ಕಂದಾರಿ,ವಾರ್ಡ್‌ ಸದಸ್ಯೆ
ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಇತ್ತು. ಬಹಳ ದಿನಗಳ ನಮ್ಮ ಬೇಡಿಕೆ ಈಡೇರಿದಂತಾಗಿದೆ. ವಾರ್ಡ್‌ ಸದಸ್ಯೆ ದೇವಕ್ಕ ಕಂದಾರಿ ಅವರ ಶ್ರಮದಿಂದ ನಮಗೆ ಸಿಹಿ ನೀರು ಲಭಿಸಿದೆ. ಅದಕ್ಕೆ ತುಂಬ ಖುಷಿಯಾಗಿದೆ.
•ಪಾಪಣ್ಣ ನಾಯಕ, ಸ್ಥಳೀಯ

ಟಾಪ್ ನ್ಯೂಸ್

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

1-MPP

Madhya Pradesh:ಡಿಸ್ಟಿಲರಿಯಲ್ಲಿದ್ದ 58 ಬಾಲ ಕಾರ್ಮಿಕರ ರಕ್ಷಣೆ

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Tawargera: ವಿದ್ಯುತ್ ತಂತಿ ತಗುಲಿ ರೈತ ಮತ್ತು ಎತ್ತು ಸಾವು

1-asdsadsad

Bakrid ಶಾಂತಿಸಭೆ: ಗಂಗಾವತಿಯಲ್ಲಿ ಮುಸ್ಲಿಂ ಮುಖಂಡರ ಪರಸ್ಪರ ವಾಗ್ವಾದ

9-dotihala-1

Dotihala: ಬಸವಣ್ಣ ಮೂರ್ತಿಯ ಮುಂದೇ ಶಿವ; ವಿಶಿಷ್ಟ ದಿಡಗಿನ ಬಸವೇಶ್ವರ ದೇವಸ್ಥಾನ

Falls: ಕಪಿಲತೀರ್ಥ ಜಲಪಾತ…: ಇದು ಕಲ್ಯಾಣ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತ

Falls: ಕಪಿಲತೀರ್ಥ ಜಲಪಾತ…: ಇದು ಕಲ್ಯಾಣ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತ

ಒಂಟಿಗಾಲಲ್ಲೇ ಬದುಕು; ನಾಗರಾಜನಿಗೆ ಆಸರೆಯಾದ ಉದ್ಯೋಗ ಖಾತ್ರಿ

ಒಂಟಿಗಾಲಲ್ಲೇ ಬದುಕು; ನಾಗರಾಜನಿಗೆ ಆಸರೆಯಾದ ಉದ್ಯೋಗ ಖಾತ್ರಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.