ವೈಭವದ ಗವಿಸಿದ್ದೇಶ್ವರ ರಥೋತ್ಸವ


Team Udayavani, Jan 13, 2020, 1:25 PM IST

kopala-tdy-1

ಕೊಪ್ಪಳ: ಇಲ್ಲಿಯ ಗವಿಸಿದ್ದೇಶ್ವರರ ಮಹಾರಥೋತ್ಸವ ರವಿವಾರ ಸಂಜೆ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ವೈಭವದಿಂದ ನೆರವೇರಿತು. 6 ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಅಂತಾರಾಷ್ಟ್ರೀಯ ಕ್ರೀಡಾಪಟು ಡಾ| ಮಾಲತಿ ಹೊಳ್ಳ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.

ನಾಡಿನ ಹರಗುರು ಚರಮೂರ್ತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ನಾಡಿನ ಗಣ್ಯಾತೀತರು ನಾಡಿನ ಒಳಿತಿಗೆ ಬೇಡಿಕೊಂಡರು. ಸುತ್ತಲಿನ ನೂರಾರು ಹಳ್ಳಿಗಳ ಜನರು ಎತ್ತಿನ ಬಂಡಿ, ಟಂಟಂ, ಲಾರಿ ಸೇರಿ ಬಸ್‌ಗಳನ್ನೇರಿ ರವಿವಾರ ಮಧ್ಯಾಹ್ನವೇ ಜಾತ್ರೆಗೆಆಗಮಿಸಿದ್ದರೆ, ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಮಠದಲ್ಲಿ ಧಾರ್ಮಿಕ ಸಂಪ್ರದಾಯದಂತೆನಂದಿ ಕೋಲಿನ ಮೆರವಣಿಗೆ ಜರುಗಿತು. ಗವಿಸಿದ್ದೇಶ್ವರರ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಬಳಿಕ ಧ್ವಜಾರೋಹಣ ಸ್ಥಳಕ್ಕೆ ಆಗಮಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಡಾ| ಮಾಲತಿ ಹೊಳ್ಳ ಧ್ವಜಾರೋಹಣ ನೆರವೇರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ಭಕ್ತಸಾಗರ ರಥೋತ್ಸವಕ್ಕೆ ಹೂವು, ಉತ್ತತ್ತಿ ಹಾಗೂ ಬಾಳೆಹಣ್ಣು ಸಮರ್ಪಿಸಿ ಭಕ್ತಿ ಸಮರ್ಪಿಸಿದರು. ಜಾತ್ರೋತ್ಸವದಲ್ಲಿ ಶಾಸಕ ವೆಂಕಟರಾವ್‌ ನಾಡಗೌಡ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್‌, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಸಂಸದ ಸಂಗಣ್ಣ ಕರಡಿ, ಸಿ.ವಿ. ಚಂದ್ರಶೇಖರ, ಅಮರೆಗೌಡ ಬಯ್ನಾಪೂರ, ಬಸವರಾಜ ರಾಯರಡ್ಡಿ, ರಾಘವೇಂದ್ರ ಹಿಟ್ನಾಳ, ಇಕ್ಬಾಲ್‌ ಅನ್ಸಾರಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ, ಜಿಲ್ಲಾಧಿಕಾರಿ ಸುನೀಲ್‌ ಕುಮಾರ ಇದ್ದರು.

ಜಾತ್ರೋತ್ಸವದಲ್ಲಿ ಮೋದಿ ಘೋಷಣೆ :  ಮಹಾ ರಥೋತ್ಸವ ಸಾಗುವ ಅರ್ಧ ಗಂಟೆಗೂ ಮುನ್ನ ಸಿ.ಟಿ. ರವಿ, ಬಿ.ವೈ. ವಿಜಯೇಂದ್ರ ಅವರು ಭಾಷಣ ಆರಂಭಿಸುತ್ತಿದ್ದಂತೆ ಕೆಲ ಯುವಕರ ದಂಡು “ಮೋದಿ ಮೋದಿ’ ಎಂದು ಘೋಷಣೆ ಕೂಗಲಾರಂಭಿಸಿದರು. ಇದನ್ನರಿತು ಗವಿಸಿದ್ದಪ್ಪ ಕೊಪ್ಪಳ ಎಂಬ ಭಕ್ತರು ಕೂಡಲೇ ಮೈಕ್‌ ಹಿಡಿದು ಇದು ಮಠದ ಸಂಸ್ಕೃತಿಯಲ್ಲ. ಆ ರೀತಿ ವರ್ತಿಸುವುದು ಸರಿಯಲ್ಲ. ಮಠದ ಭಕ್ತರು ಗವಿಸಿದ್ದನಿಗೆ ಕಪ್ಪು ಚುಕ್ಕೆ ತಾರದಿರಲಿ ಎಂದು ಪದೇ ಪದೇ ಹೇಳಿ ಮನವಿ ಮಾಡಿದರು.

ಕಂಬಳಿ ಬೀಸಿದ ಯುವಕ :  ಗವಿಸಿದ್ದೇಶ್ವರ ಮಹಾರಥೋತ್ಸವ ಸಾಗುವ ಕೆಲ ಗಂಟೆಯ ಸಮಯದಲ್ಲಿ ಮಾಜಿ ಸಿಎಂಸಿದ್ದರಾಮಯ್ಯ ಅವರು ಮಹಾರಥೋತ್ಸವ ಸಾಗುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಜನಸಮೂಹಕೇಕೆ ಹಾಕಿತು. ಸಿದ್ದರಾಮಯ್ಯ ಅವರು ಧ್ವಜಾರೋಹಣದ ಸ್ಥಳಕ್ಕೆ ತೆರಳುತ್ತಿದ್ದಂತೆ ವ್ಯಕ್ತಿಯೋರ್ವ ಕಂಬಳಿ ಹಿಡಿದು ಬೀಸಲಾರಂಭಿಸಿದನು. ಇದನ್ನು ಕಂಡ ಕೆಲವರು ಕೇಕೆ ಹಾಕಿದರು.ಮಾತನ್ನಾಡಿ ಎಲ್ಲರ ಗಮನ ಸೆಳೆದರು.

ಹೌದ್ದ ಹುಲಿಯಾ ಎಂದ ಅನ್ಸಾರಿ :  ಗಂಗಾವತಿ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಅವರು ಗವಿಸಿದ್ದೇಶ್ವರ ಮಹಾರಥೋತ್ಸವ ವೇಳೆ ಭಾಷಣ ಆರಂಭಿಸಿದರು. ಗವಿಮಠದ ಜಾತ್ರೆ, ಗತ ವೈಭವಮಾತನಾಡುತ್ತಲೇ ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ನೋಡುತ್ತಲೇ ಈಗಎಲ್ಲವೂ ಹೌದ್ದ ಹುಲಿಯಾ ಎನ್ನುವ ಮಾತು ಕೇಳಿ ಬರುತ್ತಿವೆ ಎನ್ನುವ.

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಧ್ಯಾತ್ಮ, ಅಕ್ಷರ,ಅನ್ನದಾಸೋಹ ಸಂಸ್ಕೃತಿಯಲ್ಲಿ ಹೆಸರು ಮಾಡಿದೆ.ಅನೇಕ ಮಕ್ಕಳಿಗೆ ಶಿಕ್ಷಣ ಕೊಡುವ ಕಾಯಕವೂ ಮಠದಿಂದ ನಡೆದಿದೆ. ಇತ್ತೀಚೆಗೆ ಶ್ರೀಗಳು ಕೈಗೊಂಡ ಹಿರೇಹಳ್ಳದ ಸ್ವಚ್ಛತಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಶ್ರೀಗಳು ರೈತರ ಹಿತ ಕಾಯುತ್ತಿದ್ದಾರೆ. ಅದಕ್ಕೆ ಜಿಲ್ಲಾಡಳಿತವೂ ಸಹಕಾರ ನೀಡಿದೆ. ಗವಿಮಠವು ಸಾಮಾಜಿಕ ಆಂದೋಲನ ಜಾತ್ರೆಯಾಗಿದೆ.  –ಪಿ. ಸುನೀಲ್‌ಕುಮಾರ್‌, ಕೊಪ್ಪಳ ಜಿಲ್ಲಾ ಧಿಕಾರಿ

ಟಾಪ್ ನ್ಯೂಸ್

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಯುವಕರು ಸ್ವಾತಂತ್ರ್ಯ  ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ

ಯುವಕರು ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ

ಜಗಳ ಬಿಡಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು : ಇಬ್ಬರ ಬಂಧನ

ಮಗನಿಂದ ಸೊಸೆಯ ಮೇಲಿನ ಹಲ್ಲೆ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ತಾಯಿ ಸಾವು : ಇಬ್ಬರ ಬಂಧನ

ಹಕ್ಕು,ಕರ್ತವ್ಯ ಬಳಸಿಕೊಂಡು ದೇಶ ಸೇವೆಗೆ ಮುಂದಾಗಿ: ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಹಕ್ಕು,ಕರ್ತವ್ಯ ಬಳಸಿಕೊಂಡು ದೇಶ ಸೇವೆಗೆ ಮುಂದಾಗಿ: ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಗಂಗಾವತಿ : ದೇಶಕ್ಕೆ ಮಾದರಿಯಾದ ಇಂಗುಗುಂಡಿ ಕಾಮಗಾರಿ ಯೋಜನೆ,  ಕೇಂದ್ರ ಸಚಿವರಿಂದ ಪ್ರಶಂಸೆ

ಗಂಗಾವತಿ : ದೇಶಕ್ಕೆ ಮಾದರಿಯಾದ ಇಂಗುಗುಂಡಿ ಕಾಮಗಾರಿ ಯೋಜನೆ,  ಕೇಂದ್ರ ಸಚಿವರಿಂದ ಪ್ರಶಂಸೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

4covid

ಸರ್ಕಾರದ ನಿರ್ದೇಶನ ಪಾಲಿಸಿ, ಕೋವಿಡ್‌ ನಿಯಂತ್ರಿಸಿ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

3distric

ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

2abulence

ಉಚಿತ ಆಂಬ್ಯುಲೆನ್ಸ್‌ ಸೇವೆಗೆ ಸಚಿವ ನಿರಾಣಿ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.