ಹನಮಸಾಗರ ಗ್ರಾಪಂ ಆಡಳಿತ ನಿಷ್ಕ್ರಿಯ


Team Udayavani, Dec 28, 2019, 2:31 PM IST

kopala-tdy-2

ಹನಮಸಾಗರ: ಜಿಲ್ಲೆಯೇ ಅತಿ ದೊಡ್ಡ ಗ್ರಾಮ ಪಂಚಾಯತ್‌ ಎಂಬ ಹಣೆಪಟ್ಟಿ ಹೊಂದಿರುವ ಹನುಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಇಲ್ಲದೇ ಆಡಳಿತ ಯಂತ್ರ ಸ್ಥಗಿತಗೊಂಡಾಗಿದ್ದು, ಸಾರ್ವಜನಿಕರು ಅಗತ್ಯ ಕೆಲಸಗಳಿಗಾಗಿ ಪರದಾಡುವಂತಾಗಿದೆ. ಗ್ರಾಪಂನಲ್ಲಿ ಪಿಡಿಒ ಇಲ್ಲದ ಕಾರಣ ಸಾರ್ವಜನಿಕರು ಮನೆ ಉತಾರ, ಕಟ್ಟಡ ಪರವಾನಗಿ, ಜಿಪಿಎಸ್‌ ಇತ್ಯಾದಿ ಕೆಲಸ ಕಾರ್ಯಗಳಿಗೆ ನಿತ್ಯ 5-6 ಬಾರಿ ಅಲೆದಾಡುವಂತಾಗಿದೆ. ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಸಾರ್ವಜನಿಕರು ಗ್ರಾಪಂಗೆ ಎಡತಾಕುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಪಿಡಿಒ ಇಲ್ಲ, ಬಂದ ಮೇಲೆ ಬನ್ನಿ ಎಂದು ಗ್ರಾಪಂ ಸಿಬ್ಬಂದಿಯಿಂದ ಸಿದ್ಧ ಉತ್ತರ ಸಿಗುತ್ತದೆ.

ಒಂದು ವಾರದ ಹಿಂದೆ ಪಿಡಿಒ ದೇವೇಂದ್ರ ಕಮತರ ಅವರ ಬದಲಾಗಿ ನಿಂಗಪ್ಪ ಮೂಲಿಮನಿ ಎನ್ನುವವರು ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ಅವರು ಮರಳಿ ಪಂಚಾಯತ್‌ ಕಡೆ ತಲೆಯನ್ನೇ ಹಾಕಿಲ್ಲ. ಪಂಚಾಯತಿಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಈ ಹಿಂದೆಯೂ ಪಿಡಿಒ ಅವರನ್ನು ವರ್ಗಾವಣೆ ಮಾಡಿ, ಮಹಿಳಾ ಪಿಡಿಒ ಒಬ್ಬರಿಗೆ ಅಧಿಕಾರ ವಹಿಸಿಕೊಳ್ಳಲು ತಿಳಿಸಿದ್ದರು. ಆಗಲೂ ಅವರು ಒಂದು ದಿನ ಅಧಿಕಾರ ವಹಿಸಿಕೊಂಡು ನಂತರ ಬರಲೇ ಇಲ್ಲ. ದಿಢೀರನೇ ಈ ಮೊದಲಿನ ಪಿಡಿಒ ಅವರು ವರ್ಗಾವಣೆಯಾಗಿದ್ದಾರೆ.

ಅವರ ಸ್ಥಾನಕ್ಕೆ ನಿಂಗಪ್ಪ ಮೂಲಿಮನಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಭಾರ ಅಧಿಕಾರ ವಹಿಸಿಕೊಂಡಿರುವ ಜಹಗೀರ ಗುಡದೂರ ಗ್ರಾಪಂ ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿ, ಮೇಲಾಧಿಕಾರಿಗಳ ಆದೇಶದ ಮೇರೆಗೆ ಅಧಿಕಾರವಹಿಸಿಕೊಂಡಿದ್ದೆ. ಆದರೆ ತಾತ್ಕಾಲಿಕವಾಗಿ ಬೇಡ ಎಂದು ತಿಳಿಸಿದ್ದರಿಂದ ಪುನಃ ಪಂಚಾಯಿತಿಗೆ ತೆರಳಿಲ್ಲ ಎಂದು ಹೇಳಿದರು.

ಅಧಿಕಾರಿಗಳ ಈ ನಡೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ. ಹನುಮಸಾಗರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ನಿಯೋಜಿಸಿ ಅವರಿಗೆ ಸಂಪೂರ್ಣ ಅಧಿಕಾರ ಹಸ್ತಾಂತರಿಸುವ ಮೂಲಕ ಕುಂಠಿತಗೊಂಡಿರುವ ಗ್ರಾಪಂ ಕಾರ್ಯಗಳಿಗೆ ವೇಗ ನೀಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಪ್ರಸ್ತುತ ಪಿಡಿಒ ದೇವೆಂದ್ರ ಕಮತರ ವೈದ್ಯಕೀಯ ರಜೆ ಮೇಲೆ ತೆರಳಿದ್ದು, ಬಂದ ಬಳಿಕ ಅವರು ಮುಂದುವರಿಯುತ್ತಾರೆ. ಪಿಡಿಒ ನಿಂಗಪ್ಪ ಮೂಲಿಮನಿ ಅವರು ಅದೇ ಪಂಚಾಯಿತಿಯಲ್ಲಿ ಅಮಾನತು ಆಗಿದ್ದರಿಂದ ಅಲ್ಲಿ ಪುನಃ ನೇಮಿಸಲು ಬರುವುದಿಲ್ಲ. ಆದ್ದರಿಂದ ತಾತ್ಕಾಲಿತವಾಗಿ ಪ್ರಭಾರಿಯಾಗಿ ಚಳಗೇರಾ ಪಿಡಿಒ ಬಸವರಾಜ ಸಂಕನಾಳ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಸೋಮವಾರ ಅವರು ಅಧಿಕಾರ ಸ್ವೀಕರಿಸುವರು. –ತಿಮ್ಮಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಕುಷ್ಟಗಿ

 

-ವಸಂತ ಶಿನ್ನೂರು

ಟಾಪ್ ನ್ಯೂಸ್

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

8-kushtagi

Kushtagi: ಅರೆಸ್ಟ್ ಮಾಡುವುದಾದರೆ 3 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಅರೆಸ್ಟ್ ಮಾಡಿ

8-

Tawargera: ವಿದ್ಯುತ್ ತಂತಿ ತಗುಲಿ ರೈತ ಮತ್ತು ಎತ್ತು ಸಾವು

1-asdsadsad

Bakrid ಶಾಂತಿಸಭೆ: ಗಂಗಾವತಿಯಲ್ಲಿ ಮುಸ್ಲಿಂ ಮುಖಂಡರ ಪರಸ್ಪರ ವಾಗ್ವಾದ

9-dotihala-1

Dotihala: ಬಸವಣ್ಣ ಮೂರ್ತಿಯ ಮುಂದೇ ಶಿವ; ವಿಶಿಷ್ಟ ದಿಡಗಿನ ಬಸವೇಶ್ವರ ದೇವಸ್ಥಾನ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.