ದೇಗುಲಕ್ಕೆ ನಾಮಫ‌ಲಕ ಅಳವಡಿಕೆ ವಿವಾದ


Team Udayavani, Jan 4, 2020, 4:16 PM IST

mandya-tdy-1

ಮಳವಳ್ಳಿ: ತಾಲೂಕಿನ ಮಾದಹಳ್ಳಿಯಲ್ಲಿ ಶ್ರೀಬಸವೇಶ್ವರ ದೇವಾಲಯ ಉದ್ಘಾಟನೆಗೆ ನಾಮಫ‌ಲಕ ಹಾಕಿಸುವ ವಿಚಾರ ವಿವಾದದ ಸ್ವರೂಪ ತಾಳಿದೆ. ನಾಮಫ‌ಲಕ ಅಳವಡಿಸಲು ತಹಶೀಲ್ದಾರ್‌ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ನಾಮಫ‌ಲಕ ಹಾಕಿದಲ್ಲಿ ಮುಂದಾಗುವ ಅನಾಹುತಕ್ಕೆ ತಹಶೀಲ್ದಾರರೇ ಹೊಣೆ ಎಂದು ಎಚ್ಚರಿಸಿದ ಘಟನೆ ನಡೆದಿದೆ.

ಗ್ರಾಮದಲ್ಲಿ ಮುಜರಾಯಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಬಸವೇಶ್ವರ ದೇವಸ್ಥಾನಸರ್ಕಾರದಅನುದಾನ ಪಡೆಯದೆ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ದೇವಾಲಯ ನಿರ್ಮಾಣಗೊಂಡಿದೆ. ಕೆ.ಆರ್‌.ಪೇಟೆ ಉಪ ಚುನಾವಣೆಗೆ ಸಂದರ್ಭದಲ್ಲಿ ನೀತಿ ಸಂಹಿತೆ ಇದ್ದು ಶ್ರೀ ಚುಂಚನಗಿರಿ ಸ್ವಾಮೀಜಿಯಿಂದ ಉದ್ಘಾಟನೆ ಮಾಡಿಸಲಾಗಿತ್ತು. ಆದರೆ, ದೇವಾಲಯ ಉದ್ಘಾಟನೆಗೊಂಡು ಹಲವು ದಿನಗಳ ನಂತರ ಶಿಷ್ಟಾಚಾರದ ಪ್ರಕಾರ ನಾಮಫ‌ಲಕ ಹಾಕಬೇಕು ಎಂದು ತಹಶೀಲ್ದಾರ್‌ ಚಂದ್ರಮೌಳಿ ತಿಳಿಸಿದ್ದು, ಗ್ರಾಮಸ್ಥರು ಯಾವುದೇ ಕಾರಣಕ್ಕೂ ಸ್ವಾಮೀಜಿ ಹೆಸರು ಬಿಟ್ಟು ಇನ್ನಾವುದೇ ಜನಪ್ರತಿನಿಧಿಗಳ ಹೆಸರಿರುವ ನಾಮಫ‌ಲಕ ಹಾಕಬಾರದು ಎಂದು ಬಿಗಿ ಪಟ್ಟುಹಿಡಿದರು.

ಶಿಷ್ಠಾಚಾರದ ಪ್ರಕಾರ ಹಾಕುವುದಾದರೂ ನಮಗೆ ಕಾಲಾವಕಾಶ ನೀಡಬೇಕು. ನಾವೂ ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡುತ್ತೇವೆ. ಅವರಿಂದ ಯಾವ ಸೂಚನೆ ಬರುತ್ತದೆ ಎಂದು ತಿಳಿದ ನಂತರ ಹಾಕಿಸಿ. ಅಲ್ಲಿಯವರಗೆ ಹಾಕಿಸಬಾರದೆಂದು ಎರಡು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಯಿತು.

ದಾನಿಗಳ ಹೆಸರು ಹಾಕಿ: ನೀತಿ ಸಂಹಿತೆ ಇದ್ದು ಜನಪ್ರತಿನಿಧಿಗಳು ವೇದಿಕೆಯಲ್ಲೇ ಇರಲಿಲ್ಲ. ಜೊತೆಗೆ ಯಾರೂ ದೇವಾಲಯ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಕೇವಲ ಅಧಿಕಾರ ಇದೆ ಎಂದು ನಾಮಫ‌ಲಕ ಹಾಕಬಾರದು. ಜೊತೆಗೆ ದೇವಾಲಯಕ್ಕೆ ಹಲವರು ಧನ ಸಹಾಯ ನೀಡಿದ್ದು ಅವರ ಹೆಸರು ಹಾಕಿಸಿ. ಅಲ್ಲಿಯವರೆಗೆ ಹಾಕಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಇಡೀ ಗ್ರಾಮವೇ ಬೇಡವೆಂದರೂ ಯಾರದೋ ಒತ್ತಡಕ್ಕೆ ಮಣಿದು ನಾಮಫ‌ಲಕ ಹಾಕಿಸುವುದಾದರ ಮುಂದೆ ಆಗುವ ಯಾವುದೇ ಅನಾಹುತಕ್ಕೆ ನಮ್ಮನ್ನು ಹೊಣೆ ಮಾಡಬಾರದು. ಒಂದು ವೇಳೆ ಕಿಡಿಗೇಡಿಗಳು ಅನಾಹುತ ಮಾಡಿ ಅದನ್ನು ನಮ್ಮ ಮೇಲೆ ಹೊರಿಸಬಾರದು. ಹಾಗಿದ್ದರೆ ಜವಾಬ್ದಾರಿ ಹೊತ್ತು ಹಾಕಿಸಿ ಎಂದರು.

ಶಿಷ್ಠಾಚಾರವನ್ನೇ ಪಾಲನೆ ಮಾಡಬೇಕೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಏಕಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ತಹಶೀಲ್ದಾರ್‌ ಸಮರ್ಪಕ ಉತ್ತರ ನೀಡಲಿಲ್ಲ. ಎರಡು ಗಂಟೆ ಚರ್ಚೆ ನಡೆದು ಕಾಲಾವಕಾಶ ನೀಡದೆ ನಾಮಫ‌ಲಕ ಅಳವಡಿಸಲು ಮುಂದಾದಾಗ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.

ಗ್ರಾಮದಲ್ಲಿ ಒಂದೇ ಬಾರಿ ಮೂರು ದೇವಾಲಯ ನಿರ್ಮಿಸಿ ಉದ್ಘಾಟಿಸಿದ್ದು, ಉಳಿದ ಎರಡು ದೇವಾಲಯಕ್ಕೆ ನಾಮಫ‌ಲಕ ಹಾಕಿಸದೆ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಮಾತ್ರ ಏಕೆ ಹಾಕಿಸಬೇಕು. ನಿಯಮ ಇದೆಯಾ. ಹಾಗಿದ್ದರೆ ಮೂರು ದೇವಾಲಯಕ್ಕೂ ಹಾಕಿಸಿ ಇಲ್ಲದಿದ್ದರೆ ಯಾವುದೇ ದೇವಸ್ಥಾನಕ್ಕೂ ಹಾಕಸಬೇಡಿ ಎಂದು ಮನವಿ ಮಾಡಿದರೂ ತಹಶೀಲ್ದಾರ್‌ ನಾನು ಕಾನೂನು ಪಾಲನೇ ಮಾಡಬೇಕಿದೆ ಈ ಹಿನ್ನೆಲೆಯಲ್ಲಿ ಹಾಕಿಸು ವುದಾಗಿ ಹೇಳಿ ಅಂತಿಮವಾಗಿ ಅಳವಡಿಸಿ ತೆರಳಿದರು.

ಗ್ರಾಮಾಂತರ ಸರ್ಕಲ್‌ ಇನ್ಸ್‌ಪೆಕ್ಟರ್‌ ಧರ್ಮೇಂದ್ರ ಮಾತನಾಡಿ, ಗ್ರಾಮದಲ್ಲಿ ಶಾಂತಿಯುತವಾಗಿ ದೇವಸ್ಥಾನ ನಿರ್ಮಿಸಿದ್ದು, ಅಹಿತಕರ ಘಟನೆಗೆ ಅವಕಾಶ ನೀಡದಂತೆ ನಾಮಫ‌ಲಕ ಅಳವಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಪಿಎಸ್‌ಐ ಮಂಜು ಸೇರಿದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಟಾಪ್ ನ್ಯೂಸ್

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

Mandya: Theft of sandal trees from school premises after threatening security guards

Mandya: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

police crime

Srirangapatna; ಕಾರಿನಲ್ಲಿ ಜಾನುವಾರು ಸಾಗಾಟ:ಉಸಿರುಗಟ್ಟಿ 6 ಕರುಗಳು ಸಾವು

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

naksal (2)

Chhattisgarh:ಎನ್‌ಕೌಂಟರ್‌ನಲ್ಲಿ ಐದು ಮಾವೋವಾದಿಗಳ ಹತ್ಯೆ

Pannu Singh

ಉಗ್ರ ಪನ್ನೂ ಹತ್ಯೆಗೆ ಯತ್ನ: ಆರೋಪಿ ಅಮೆರಿಕಕ್ಕೆ ಹಸ್ತಾಂತರ

rain

ಸದ್ಯ ಮುಂಗಾರು ದುರ್ಬಲ: ಮಾಸಾಂತ್ಯಕ್ಕೆ ಚೇತರಿಕೆ ಸಾಧ್ಯತೆ

BJP 2

Election: ಮಹಾರಾಷ್ಟ್ರ ಸೇರಿ 4 ರಾಜ್ಯ ಉಸ್ತುವಾರಿ ನೇಮಿಸಿದ ಬಿಜೆಪಿ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.