ಯೋಧರ ಗೌರವಿಸುವುದೂ ದೇಶಸೇವೆ

Team Udayavani, May 3, 2019, 3:16 PM IST

Udayavani Kannada Newspaper

ಮಂಡ್ಯ: ಹುತಾತ್ಮ ವೀರಯೋಧರಿಗೆ ನೀಡುವ ದೊರಕುವಷ್ಟೇ ಗೌರವ ದೇಶ ರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ದೊರತರ ಮತಷ್ಟು ಯುವಕರು ಸೇನೆ ಸೇರಲು ಪ್ರೇರಣೆಯಾಗುತ್ತದೆ ಎಂದು ಮಂಡ್ಯ ಯೂತ್‌ ಗ್ರೂಪ್‌ ಅಧ್ಯಕ್ಷ ಡಾ.ಅನಿಲ್ ಆನಂದ್‌ ಹೇಳಿದರು.

ನಗರದ ನಿರಾಳ ಕ್ಲಿನಿಕ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಕುಟುಂಬಕ್ಕೆ ಮ್ಯಾನ್‌ಕೈಂಡ್‌ ಸಂಸ್ಥೆ ವತಿಯಿಂದ 2.50 ಲಕ್ಷ ರೂ. ಆರ್ಥಿಕ ನ ನೆರವು ನೀಡಿ ಅವರು ಮಾತನಾಡಿದರು.

ಹುತಾತ್ಮ ಯೋಧರಿಗೆ ಹರಿದುಬರುವ ಎಷ್ಟೇ ಹಣವಾದರೂ ಅವರ ಪ್ರಾಣಕ್ಕೆ ಸಮನಾಗಲಾರದು. ರಾಷ್ಟ್ರಾಭಿಮಾನದ ಕೆಚ್ಚು ನಮ್ಮ ಯುವ ಪೀಳಿಗೆಯಲ್ಲಿ ಜೀವಂñ‌ವಾಗಿದ್ದರಷ್ಟೇ ಸುರಕ್ಷಿತ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ದೇಶಸೇವೆಗೆ ಉತ್ಸಾಹ ಅವಶ್ಯ: ದೇಶ ಕಾಯುವ ಯೋಧರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವೈಯಕ್ತಿಕ ಸುಖ, ಸಂತೋಷ ತೊರೆದು ಕುಟುಂಬ ವ್ಯಾಮೋಹದಿಂದ ದೂರ ಉಳಿದು ದೇಶ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಂತಹವರಿಗೂ ಗೌರವ ದೊರಕಿದಂತಾದರೆ ನಮ್ಮ ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬಿದಂತಾಗುತ್ತದೆ. ದೇಶಸೇವೆಗೆ ಇನ್ನಷ್ಟು ಉತ್ಸಾಹ, ಸ್ಫೂರ್ತಿ ಬರುತ್ತದೆ ಎಂದು ಡಾ. ಆನಂದ್‌ ಹೇಳಿದರು.

ಯುವಜನತೆ ಸೈನ್ಯ ಸೇರಿ: ದೇಶವನ್ನು ಧರ್ಮ ದ ಹೆಸರಿನಲ್ಲಿ ಒಡೆಯುವ ಸಲುವಾಗಿ ವಿಚ್ಛಿದ್ರ ಕಾರಕ ಶಕ್ತಿಗಳು ಅಮಾಯಕರ ಪ್ರಾಣವನ್ನು ಕುತಂತ್ರದಿಂದ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಮ್ಮ ಸೈನಿಕರಂತೆ ನೇರವಾಗಿ ಹೋರಾಟ ಮಾಡುವ ಶಕ್ತಿ ಇಲ್ಲ. ದೇಶದೊಳಗೆ ದುಷ್ಕೃತ್ಯ ನಡೆಸುವ ಮೂಲಕ ಅಭದ್ರತೆ ಸೃಷ್ಟಿಸುತ್ತಿರುವ ದುಷ್ಟ ಶಕ್ತಿಗಳನ್ನು ನಾಶಪಡಿಸುವುದಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಸೇರಬೇಕು. ಅವರಿಗೆ ಎಲ್ಲರೂ ಚೈತನ್ಯಶಕ್ತಿಯಾಗಬೇಕು. ಆಗ ರಾಷ್ಟ್ರÊ‌ನ್ನು ಸುಭದ್ರವಾಗಿರಿಸಲು ಸಾಧ್ಯವಾಗುವುದು ಎಂದು ತಿಳಿಸಿದರು.

ಚೆಕ್‌ ವಿತರಣೆ: ಮೃತ ವೀರಯೋಧ ಗುಡಿಗೆರೆ ಕಾಲೋನಿಯ ಗುರು ಪತ್ನಿ ಕಲಾವತಿಗೆ ಮ್ಯಾನ್‌ಕೈಂಡ್‌ ಫಾರ್ಮಾ ವತಿಯಿಂದ ಮಂಡ್ಯ ಯೂತ್‌ ಗ್ರೂಪ್‌ ಸಹಯೋಗದೊಂದಿಗೆ ಗೌರವ ಸನ್ಮಾನ ಮಾಡಿ 2.50 ಲಕ್ಷ ರೂ. ಚೆಕ್‌ ವಿತರಿಸಲಾಯಿತು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಕ್ಕೆ ತಲಾ 2.50 ಲಕ್ಷ ರೂ.ಗಳನ್ನು ಮ್ಯಾನ್‌ಕೈಂಡ್‌ ಸಂಸ್ಥೆ ವತಿಯಿಂದ ವಿತರಿಸ ಲಾಗಿದೆ.ಕಳೆದ ವರ್ಷ ಕೇರಳದಲ್ಲಿ ನಡೆದ ಭೀಕರ ಚಂಡಮಾರುತ ಸಮಯದಲ್ಲೂ ಮ್ಯಾನ್‌ಕೈಂಡ್‌ ಸಂಸ್ಥೆ 1 ಕೋಟಿ ರೂ. ನೆರವು ನೀಡಿತ್ತು. ಇದೇ ಸಂದರ್ಭದಲ್ಲಿ ಮ್ಯಾನ್‌ಕೈಂಡ್‌ ಫಾರ್ಮಾ ಮ್ಯಾನೇಜರ್‌ಗಳಾದ ಅಕ್ಬರ್‌, ಹರ್ಷದ್‌, ಸೈಯದ್‌ ಇದ್ದರು. ಮಂಡ್ಯ ಯೂತ್‌ ಗ್ರೂಪ್‌ನ ಉಪಾಧ್ಯಕ್ಷ ಹೆಚ್.ಎಸ್‌.ಮಂಜು, ದರ್ಶನ್‌, ವಿನಯ್‌, ದೇವಿ, ಕಿರಣ್‌, ಪ್ರತಾಪ್‌ ಇತರರಿದ್ದರು.

ಟಾಪ್ ನ್ಯೂಸ್

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆ ಸ್ವರ್ಣ ಸಮರ್ಪಣೆಗೆ ಚಾಲನೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

Beejadi: 7 ದಿನದ ಹಿಂದೆ ಸಮುದ್ರ ಪಾಲಾಗಿದ್ದ ತುಮಕೂರು ಮೂಲದ ಯುವಕನ ಶವ ಕಾರವಾರದಲ್ಲಿ ಪತ್ತೆ

Beejadi: 7 ದಿನದ ಹಿಂದೆ ಸಮುದ್ರ ಪಾಲಾಗಿದ್ದ ತುಮಕೂರು ಮೂಲದ ಯುವಕನ ಶವ ಕಾರವಾರದಲ್ಲಿ ಪತ್ತೆ

3

ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

23

Actor Darshan: ಕಾನ್‌ಸ್ಟೇಬಲ್‌ ಮೇಲೆಯೂ ನಟ ದರ್ಶನ್‌ ಗ್ಯಾಂಗ್‌ ಹಲ್ಲೆ 

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

Mandya: Theft of sandal trees from school premises after threatening security guards

Mandya: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆ ಸ್ವರ್ಣ ಸಮರ್ಪಣೆಗೆ ಚಾಲನೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

5

Dengue fever: ಪಾಲಿಕೆ ಆಯುಕ್ತರಿಗೂ ಡೆಂಘಿ ಜ್ವರ; ಹೆಚ್ಚುತ್ತಿವೆ ಪ್ರಕರಣ

54

ತಾಯಿ ನಿಂದಿಸಿದ್ದಕ್ಕೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೂಲಿ ಕಾರ್ಮಿಕನ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.