ಮೈಷುಗರ್‌ ಆರಂಭಕ್ಕೆ ಒಗ್ಗಟ್ಟಿನ ಕೊರತೆ


Team Udayavani, Jun 4, 2020, 5:37 AM IST

oggatina

ಮಂಡ್ಯ: ಮೈಸೂರು ಸಕ್ಕರೆ ಕಂಪನಿ ಆರಂಭದ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರಲ್ಲಿ ಒಗ್ಗಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ದೂರಿದರು. ಬುಧವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ರೈತರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಖಾಸಗೀಕರಣ ಮಾಡಿ, ಕಬ್ಬು ಅರೆಯಲು ಯೋಜನೆ ರೂಪಿಸಿತ್ತು. ಅದಕ್ಕೆ ಜನಪ್ರತಿನಿಧಿಗಳಾದಿಯಾಗಿ ರೈತ ಮುಖಂಡರು ವಿರೋಧ  ವ್ಯಕ್ತಪಡಿಸಿದರು.

ನಂತರದಲ್ಲಿ ನಿರ್ವಹಣೆ ಮತ್ತು ಕಾರ್ಯಾಚರ ಣೆಯನ್ನಷ್ಟೇ ಖಾಸಗೀಯವರಿಗೆ ವಹಿಸುವ ನಿರ್ಧಾರ ಮಾಡಿತು. ಅದಕ್ಕೆ ಕೆಲವರು ಒಪ್ಪಿಗೆ ಸೂಚಿಸಿದರೆ ಮತ್ತೆ ಕೆಲವರು ಅಪಸ್ವರ ಎತ್ತಿ ದರು. ಜಿಲ್ಲೆಯ ರೈತ ಮುಖಂಡರು,  ಶಾಸಕರಲ್ಲೇ ಸಹಮತವಿಲ್ಲದಿದ್ದಾಗ ಸರ್ಕಾರ ಏನು ತಾನೇ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರಸಕ್ತ ವರ್ಷದಿಂದ ಕಬ್ಬು ಅರೆಯುವಿಕೆ ಆರಂಭಿಸುವುದಕ್ಕೆ ಸಿಎಂ ಸಿದತೆ ಮಾಡಿಕೊಂಡು ರೈತ ಮುಖಂಡರ  ಸಭೆಯನ್ನು ವಾರದ ಹಿಂದಷ್ಟೇ ಬೆಂಗಳೂರಿನಲ್ಲಿ ಕರೆದಿದ್ದರು.

ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರು ಗಲಾಟೆ ಮಾಡಿದರು. ಒಮ್ಮತದ ನಿರ್ಧಾರಕ್ಕೆ ಯಾರೂ ಬರಲಿಲ್ಲ. ರೈತರ ಪರವಾಗಿ ಸಭೆಗೆ ಬಂದವರು ಕಬ್ಬು ಬೆಳೆಗಾರರ  ಹಿತವನ್ನು ಕಡೆಗ ಣಿಸಿ ಪ್ರತಿಷ್ಠೆಯನ್ನು ಮುಂದು ಮಾಡಿಕೊಂಡಿದ್ದ ರಿಂದ ಒಮ್ಮತದ ನಿರ್ಧಾರ ಕೈಗೊಳ್ಳಲು ಸಾಧ್ಯವಾ ಗಲಿಲ್ಲ ಎಂದರು.

ತಜ್ಞರ ತಂಡದಿಂದ ಪರಿಶೀಲನೆ: ಸಿಎಂ ಮೈಷು ಗರ್‌ ಪುನಶ್ಚೇತನಕ್ಕೆ ಉತ್ಸುಕರಾಗಿದ್ದಾರೆ. ತಜ್ಞರ ತಂಡವೊಂದನ್ನು ಕಾರ್ಖಾನೆಗೆ ಕಳುಹಿಸಿ ಯಂತ್ರೋಪಕರಣಗಳ ಪ್ರಸ್ತುತ ಸ್ಥಿತಿ-ಗತಿಗಳ ಕುರಿತು ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ.  ತಜ್ಞರ ವರದಿ ಆಧರಿಸಿ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆಯನ್ನು ನಡೆಸುವುದಕ್ಕೆ ಅಗತ್ಯ ಅನು ದಾನದ ಬಗ್ಗೆ ಸಮೀಕ್ಷೆ ನಡೆಸಿ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಕಬ್ಬು ಅರೆಯುವಿಕೆ ಅನುಮಾನ: ಪ್ರಸ್ತುತ ಪರಿಸಿ §ತಿಯಲ್ಲಿ ಈ ವರ್ಷ ಮೈಷುಗರ್‌ ಕಾರ್ಖಾನೆ ಯಲ್ಲಿ ಕಬ್ಬು ಅರೆಯುವುದು ಅನುಮಾನವಿದೆ. ಈ ಕಾರಣದಿಂದ ಕಟಾವಿಗೆ ಬಂದಿರುವ ಕಬ್ಬನ್ನು ಶೀಘ್ರ ಕಟಾವು ಮಾಡಿಸಿ, ಜಿಲ್ಲೆಯ ಇತರೆ ಕಾರ್ಖಾನೆಗಳು, ನೆರೆ ರಾಜ್ಯಗಳ ಸಕ್ಕರೆ ಕಾರ್ಖಾ ನೆಗಳಿಗೆ ಸಾಗಿಸುವಂತೆ ಡೀಸಿ ಸೂಚನೆ ನೀಡಲಾ ಗಿದೆ ಎಂದರು.

ಮುಡಾ ಅಧ್ಯಕ್ಷ ಶ್ರೀನಿವಾಸ್‌, ಜಿಪಂ ಸದಸ್ಯ ಎನ್‌.ಶಿವಣ್ಣ, ಮುಖಂಡ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್‌ ಮೊದಲಾದವರು ಹಾಜರಿದ್ದರು.

ಟಾಪ್ ನ್ಯೂಸ್

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

12

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

7–HPV

HPV: ಹ್ಯೂಮನ್‌ ಪ್ಯಾಪಿಲೋಮಾವೈರಸ್‌ (ಎಚ್‌ಪಿವಿ) ಮತ್ತು ಗರ್ಭಕಂಠದ ಕ್ಯಾನ್ಸರ್‌

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

11

Father’s Day: ಏನೋ ಹೇಳಬೇಕಿತ್ತು… ಧೈರ್ಯಬರಲಿಲ್ಲ…

Rajeev Chandrasekhar hits back at Elon Musk

EVM ಸರಿಯಲ್ಲ ಎಂದ ಎಲಾನ್ ಮಸ್ಕ್ ಗೆ ರಾಜೀವ್ ಚಂದ್ರಶೇಖರ್ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

Mandya: Theft of sandal trees from school premises after threatening security guards

Mandya: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

police crime

Srirangapatna; ಕಾರಿನಲ್ಲಿ ಜಾನುವಾರು ಸಾಗಾಟ:ಉಸಿರುಗಟ್ಟಿ 6 ಕರುಗಳು ಸಾವು

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Gowri Movie Dhool Yebsava Video Song

Samarjith lankesh; ಧೂಳ್‌ ಎಬ್ಬಿಸುತ್ತ ಬಂದ ಗೌರಿ ಹಾಡು

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

1-aaaa

Bihar:ಗಂಗಾ ನದಿಯಲ್ಲಿ ಮುಳುಗಿದ 17 ಭಕ್ತರಿದ್ದ ದೋಣಿ,6 ಮಂದಿ ನಾಪತ್ತೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

12

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.