ಸಿಟಿ ಕೋ-ಆಪ್‌ ಬ್ಯಾಂಕ್‌ಗೆ ನಿರ್ದೇಶಕರ ಆಯ್ಕೆ

Team Udayavani, Sep 11, 2020, 1:34 PM IST

ಸಿಟಿ ಕೋ-ಆಪ್‌ ಬ್ಯಾಂಕ್‌ಗೆ ನಿರ್ದೇಶಕರ ಆಯ್ಕೆ

ಮಂಡ್ಯ: ಮಂಡ್ಯ ಸಿಟಿ ಕೋಆಪರೇಟಿವ್‌ ಬ್ಯಾಂಕ್‌ನ ಆಡಳಿತ ಮಂಡಳಿಗೆ ಮೊದಲ ಬಾರಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆನಡೆಯದೆ ಎಲ್ಲ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬ್ಯಾಂಕ್‌ ಆರಂಭವಾದ 1985ರಿಂದಲೂ 2015ರವರೆಗೂ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿತ್ತು. ಆದರೆ, ಮೊದಲ ಬಾರಿಗೆ ಮಾಜಿ ಅಧ್ಯಕ್ಷ ಬಿ.ಟಿ.ನಾಗರಾಜು ಹಾಗೂ ಮಾಜಿ ನಿರ್ದೇಶಕ ಎಚ್‌.ಅಶೋಕ್‌ ಗುಂಪುಗಳ ನಡುವೆಮಾತುಕತೆ ನಡೆದು ಒಮ್ಮತದ ನಿರ್ಣಯದಿಂದ ಬಿ.ಟಿ.ನಾಗರಾಜುಬಣದ ಐದು ಮಂದಿ ಕಣದಿಂದಹಿಂದೆ ಸರಿದಿದ್ದರಿಂದ, ಅಶೋಕ್‌ಬಣದ 9 ಮಂದಿ ಹಾಗೂ ಬಿ.ಟಿ. ನಾಗರಾಜು ಬಣದ ನಾಲ್ಕು ಮಂದಿಅವಿರೋಧವಾಗಿ ಆಯ್ಕೆಯಾದರು.

ಎಚ್‌.ಅಶೋಕ್‌ ಗುಂಪಿನಿಂದಸಿ.ಸುಂದರ, ಸಿ.ಬೋರೇಗೌಡ, ಎಚ್‌. ಅಶೋಕ್‌, ಆನಂದ್‌, ಬಿ.ಲಿಂಗರಾಜು,ಎಚ್‌.ಎಸ್‌.ಚನ್ನಪ್ಪ, ಎಚ್‌.ಆರ್‌.ರಮ್ಯಾ, ತಿರುಮಲಾಚಾರಿ, ಸೋಮ ಶೇಖರ್‌ ಕೆರಗೋಡು ಆಯ್ಕೆಯಾದರೆ,ಬಿ.ಟಿ.ನಾಗರಾಜು ಬಣದಿಂದ ಎಸ್‌.ಕೃಷ್ಣಶೆಟ್ಟಿ, ಎಸ್‌.ಸತ್ಯಸಾವಿತ್ರಿ, ಬಿ.ಚೌಡಯ್ಯ, ಆರ್‌.ನಾಗಯ್ಯ ಆಯ್ಕೆಯಾಗಿದ್ದಾರೆ. ಬಿ.ಟಿ.ನಾಗರಾಜು, ಮಹೇಶ್‌, ಎ.ಎನ್‌.ಸತೀಶ್‌, ಎಚ್‌.ಎಲ್‌.ಸ್ವಾಮಿ, ನೇತ್ರಾವತಿ ಕಣದಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ 13ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆ ಘೋಷಿಸಲಾಯಿತು ಎಂದು ಚುನಾವಣಾಧಿಕಾರಿ ಎಚ್‌.ಆರ್‌.ನಾಗಭೂಷಣ್‌ ಘೋಷಿಸಿದರು.

21ಕ್ಕೆ ಅಧ್ಯಕ್ಷರ ಚುನಾವಣೆ: ಮಂಡ್ಯ ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ನ ಆಡಳಿತ ಮಂಡಳಿಯ 13 ನಿರ್ದೇಶಕಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಬಯಸಿ 46 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 6 ನಾಮಪತ್ರ ತಿರಸ್ಕೃತಗೊಂಡರೆ, 40 ನಾಮ ಪತ್ರಗಳು ಕ್ರಮ ಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯಲು ಗುರುವಾರ ಕೊನೆ ದಿನವಾಗಿತ್ತು. 40 ಮಂದಿಯ ಪೈಕಿ 27 ಮಂದಿತಮ್ಮ ಉಮೇದುವಾರಿಕೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ 13 ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದ್ದು,ಇದು ಬ್ಯಾಂಕ್‌ನ ಇತಿಹಾಸದಲ್ಲೇ ಮೊದಲಾಗಿದೆ. ಇದರಿಂದಾಗಿ ಬ್ಯಾಂಕ್‌ ಗೆ ಸುಮಾರು 5 ಲಕ್ಷ ರೂ. ಉಳಿ ತಾಯವಾಗಿದೆ ಎಂದು ಚುನಾವಣಾಧಿಕಾರಿ ಎಚ್‌.ಆರ್‌.ನಾಗಭೂಷಣ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆ ಘೋಷಣೆಯಾದಾಗ 258 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ನಂತರದಲ್ಲಿ 650 ಮಂದಿ ನ್ಯಾಯಾಲಯದಿಂದ ಮತದಾನ ಮಾಡುವ ಹಕ್ಕು ಪಡೆದುಕೊಂಡ ಬಂದ ಹಿನ್ನೆಲೆಯಲ್ಲಿ ಒಟ್ಟು 908 ಮಂದಿ ಮತದಾರರಿದ್ದರು. ಆದರೆ,ಚುನಾವಣೆ ನಡೆಯದೆ ಎಲ್ಲವೂ ಸುಖಾಂತ್ಯವಾಗಿ ಕೊನೆ ಗೊಂಡಿದೆ ಎಂದು ವಿವರಿಸಿದರು.

ನೂತನ ನಿರ್ದೇಶಕರಾದ ಎಚ್‌.ಅಶೋಕ್‌, ಸಿ.ಸುಂದರ, ಸಿ.ಬೋರೇಗೌಡ, ಆನಂದ್‌, ಬಿ.ಲಿಂಗರಾಜು, ಎಚ್‌.ಎಸ್‌. ಚನ್ನಪ್ಪ, ತಿರುಮಲಾಚಾರಿ, ಸೋಮಶೇಖರ್‌ ಕೆರಗೋಡು ಹಾಜರಿದ್ದರು

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

23

Actor Darshan: ಕಾನ್‌ಸ್ಟೇಬಲ್‌ ಮೇಲೆಯೂ ನಟ ದರ್ಶನ್‌ ಗ್ಯಾಂಗ್‌ ಹಲ್ಲೆ 

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

Mandya: Theft of sandal trees from school premises after threatening security guards

Mandya: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.