ಅಸಮಾನತೆ ತೊಲಗಿಸಿದ ಅಂಬೇಡ್ಕರ್‌

Team Udayavani, Apr 15, 2017, 12:43 PM IST

mys3.jpg

ತಿ.ನರಸೀಪುರ: ಸ್ವಾತಂತ್ರ್ಯ ನಂತರದ ದೇಶದಲ್ಲಿನ ಸಾಮಾಜಿಕ ಅಸಮಾನತೆ ನಿವಾರಣೆ ಮಾಡಲು ಸಂವಿಧಾನದಲ್ಲಿ ಕ್ರಾಂತಿಕಾರಕ ಕಾಯ್ದೆಗಳನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ರೂಪಿಸಿದ್ದರಿಂದ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಡಿ ನಾವೆಲ್ಲರೂ ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಗೊಂಡಿ ದ್ದೇವೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಮಲ್ಲೇಶ ನಾಯಕ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಡಾ. ಬಿ.ಆರ್‌. ಅಂಬೇಡ್ಕರ್‌ 126ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿಯತೆಯಿಂದ ಜಿಡ್ಡುಗಟ್ಟಿದ್ದ ಅಸಮಾನತೆ ವಿರುದ್ಧ ಧ್ವನಿಯೆತ್ತಿದ ಅಂಬೇಡ್ಕರ್‌ ದೇಶ ವಿದೇಶಗಳ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡು ಹಲವು ರಾಷ್ಟ್ರಗಳ ಸಂವಿಧಾನ ಅಧ್ಯಯನ ಮಾಡಿ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಜನಪ್ರತಿನಿಧಿಗಳ ಆಡಳಿತವನ್ನು ಜಾರಿಗೆ ತರುವಲ್ಲಿ ಸಫ‌ಲರಾದರು ಎಂದರು.

ಅಂಬೇಡ್ಕರ್‌ ಭಾವಚಿತ್ರಕ್ಕೆ ಅಧ್ಯಕ್ಷೆ ಸುಧಾ ಪುಷ್ಪನಮನ ಸಲ್ಲಿಸಿದರು. ಉಪಾಧ್ಯಕ್ಷೆ ರತ್ನಮ್ಮ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಕಿರಿಯ ಎಂಜಿನಿಯರ್‌ ಕೆ.ಪುರುಷೋತ್ತಮ, ಯೋಜನಾಧಿಕಾರಿ ಕೆಂಪರಾಜು, ಸದಸ್ಯರಾದ ನೈಸ್‌ ಮಹದೇವಸ್ವಾಮಿ, ರಾಘವೇಂದ್ರ, ಸಿ.ಉಮೇಶ, ಶಶಿಕಲಾ ಪ್ರಕಾಶ್‌, ಮೀನಾಕ್ಷಿ, ರಾಜಮ್ಮ, ಸಿ.ಮಹದೇವ, ಗುಲ್ಜಾರ್‌ ಖಾನ್‌, ನಾಗೇಂದ್ರ, ಆರೋಗ್ಯಾಧಿಕಾರಿ ಚೇತನ್‌ಕುಮಾರ್‌, ಸಮುದಾಯ ಸಂಘಟಕ ಮಹದೇವ, ಕಂದಾಯಾಧಿಕಾರಿ ರಾಣಿ, ಪುಟ್ಟ ಸ್ವಾಮಿ, ಕೃಷ್ಣಪ್ಪ, ಮಹಾಲಿಂಗು, ತಾರಾ, ಆಶಾ, ಚಂದ್ರು, ರವಿ ಇನ್ನಿತರರು ಹಾಜರಿದ್ದರು.

ಜಿಪಂ ತಾಂತ್ರಿಕ ಉಪವಿಭಾಗ: ಪಟ್ಟಣದ ಲಿಂಕ್‌ ರಸ್ತೆಯಲ್ಲಿರುವ ಜಿಪಂ ತಾಂತ್ರಿಕ ಉಪವಿಭಾಗದ ಕಚೇರಿಯಲ್ಲೂ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್‌.ಸಿದ್ದರಾಜು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಎಂಜಿನಿಯರ್‌ಗಳಾದ ನಂಜುಂಡಯ್ಯ, ವಿ.ಟಿ.ಪ್ರಕಾಶ್‌, ದೇವರಾಜು, ರಾಜನಾಯಕ, ಕಚೇರಿ ಅಧೀಕ್ಷಕ ಕೆ.ಎಸ್‌. ಸಿದ್ದಲಿಂಗಮೂರ್ತಿ, ಸಿಬ್ಬಂದಿ ಚಂದ್ರಕಲಾ, ಜ್ಯೋತಿ, ಕೃಷ್ಣಮೂರ್ತಿ, ಮಹದೇವ, ಚನ್ನಮಲ್ಲು ಹಾಗೂ ಇನ್ನಿತರರು ಹಾಜರಿದ್ದರು.

ಜೆಡಿಎಸ್‌ ಕಚೇರಿಯಲ್ಲಿ ಜಯಂತಿ: ಜಾತಿ ಮುಕ್ತ ಪ್ರಬುದ್ಧ ಭಾರತದ ಪರಿಕಲ್ಪನೆ ಅಂಬೇಡ್ಕರ್‌ ಕನಸಾಗಿತ್ತು ಎಂದು ಸೋಮ ನಾಥಪುರ ಜಿಪಂ ಸದಸ್ಯ ಎಂ. ಅಶ್ವಿ‌ನ್‌ಕುಮಾರ್‌ ಹೇಳಿದರು. ಪಟ್ಟಣದ ಹೊಸ ತಿರುಮಕೂಡಲು ಕಾಲೇಜು ಜೋಡಿ ರಸ್ತೆಯಲ್ಲಿರುವ ಜಾತ್ಯತೀತ ಜನತಾದಳ ಕಚೇರಿಯಲ್ಲಿ ಅಂಬೇಡ್ಕರ್‌ ಜನ್ಮ ದಿನಾಚರಣೆ ಕಾರ್ಯ ಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಹಾಸು ಹೊಕ್ಕಿದ್ದ ಮೇಲು ಕೀಳೆಂಬ ಭಾವನೆ ಕಿತ್ತೇಸೆದು, ಸೋದರತೆ ಸಹಬಾಳ್ವೆಯಿಂದ ಕೂಡಿದ ಸಾಮರಸ್ಯ ಸಮಾಜ ನಿರ್ಮಾಣ ಮಾಡುವ ಮಹತ್ವಕಾಂಕ್ಷೆ ಅಂಬೇಡ್ಕರ್‌ ಅವರಲ್ಲಿತ್ತು ಎಂದರು.

ವರುಣ ಹೋಬಳಿ ಘಟಕದ ನೂತನ ಅಧ್ಯಕ್ಷ ಪುಟ್ಟಸ್ವಾಮಿ ಅವರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಎಸ್‌.ಸತೀಶ್‌ಕುಮಾರ್‌, ಹೆಳವರಹುಂಡಿ ಮಠದ ಗುರುಸ್ವಾಮಿ ಸ್ವಾಮೀಜಿ, ರಾಜ್ಯ ಜೆಡಿಎಸ್‌ ಯುವ ಉಪಾಧ್ಯಕ್ಷ ಎಂ.ಬಾಲಕೃಷ್ಣ, ವರುಣ ಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ, ನರಸೀಪುರ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಪ್ರಸಾದ್‌, ಯುವ ಅಧ್ಯಕ್ಷ ಎಂ. ಶಿವಕುಮಾರ್‌, ಜಿಲ್ಲಾ ಕಾರ್ಯದರ್ಶಿ ನಾಗಾರ್ಜುನ್‌, ಮುಖಂಡರಾದ ಎಲ್‌.ರವಿ, ತಿರುಮಕೂಡಲು ಜಯರಾಂ, ಅಬ್ದುಲ್‌ ಅತ್ತಿಕ್‌, ಅಬೀದ್‌ ಹುಸೇನ್‌, ಮೂರ್ತಿ, ಮಹದೇವಯ್ಯ, ಮಂಟೇಲಿಂಗು, ಎಂ.ರಮೇಶ್‌ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ

Suraj Revanna ಸತ್ಯ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ

Untitled-1

BJP-JDS 19 ಸಂಸದರಿದ್ರೂ ಬಜೆಟ್‌ನಲ್ಲಿ ರಾಜ್ಯಕ್ಕೆ ನಾಮ: ಎಂ.ಲಕ್ಷ್ಮಣ್‌

Army Air Defence: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ

Army Air Defence: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೈಸೂರು ಮಹಿಳೆ

Mysore: ಕೆಆರ್‌ ಎಸ್‌ ಗೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ

Mysore: ಕೆಆರ್‌ ಎಸ್‌ ಗೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ, ಅಧಿಕಾರಿಗಳ ಜತೆ ಸಮಾಲೋಚನೆ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.