ದಸರಾ ವೇಳೆಗೆ ಹಿನಕಲ್‌ ಫ್ಲೈಓವರ್‌ ಕಾಮಗಾರಿ ಪೂರ್ಣ


Team Udayavani, Jul 4, 2018, 12:41 PM IST

m6-dusser.jpg

ಮೈಸೂರು: ನಗರದ ಮೈಸೂರು-ಹುಣಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಿನಕಲ್ ಜಂಕ್ಷನ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಫ್ಲೈ ಓವರ್‌ ನಿರ್ಮಾಣ ಕಾಮಗಾರಿಯನ್ನು ದಸರಾ ವೇಳೆಗೆ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಂಸದ ಪ್ರತಾಪ ಸಿಂಹ ಸೂಚಿಸಿದರು. 

ಕೇಂದ್ರದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ವತಿಯಿಂದ ನಿರ್ಮಿಸಿರುವ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಸಂಸದರು, ಕಾಮಗಾರಿ ಪ್ರಗತಿ ಹಾಗೂ ಗುಣಮಟ್ಟ ಪರಿಶೀಲಿಸಿದರು. ಈ ವೇಳೆ ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಳೆದ 2016ರಲ್ಲಿ ಕೈಕೊಂಡಿರುವ ಕಾಮಗಾರಿ ಈಗಾಗಲೇ ಪೂರ್ಣವಾಗಬೇಕಿತ್ತು.

ಕಾಮಗಾರಿ ವಿಳಂಬದಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ತುರ್ತಾಗಿ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಡಾ ಕಾರ್ಯಪಾಲಕ ಅಭಿಯಂತರ ಸುರೇಶ್‌ ಬಾಬು, ಬಹುತೇಕ ಕೆಲಸ ಮುಗಿದಿದ್ದು, ಅಕ್ಟೋಬರ್‌ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು.

ದಸರಾ ವೇಳೆಗೆ ಪೂರ್ಣ: ನಗರದಲ್ಲಿರುವ 42 ಕಿ.ಮೀ ರಿಂಗ್‌ ರಸ್ತೆಯನ್ನು ಮುಡಾದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಹೀಗಾಗಿ ರಿಂಗ್‌ರಸ್ತೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮೊದಲ ಹಂತವಾಗಿ 177 ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಿದೆ.

ನಗರದ ಜಂಕ್ಷನ್‌ನಲ್ಲಿ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕಾಗಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಇದೀಗ ಫ್ಲೈಓವರ್‌ ಆಗಿ ಬದಲಾಗಿದೆ. ಅಂದಾಜು 19.83 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್‌ ನಿರ್ಮಿಸುತ್ತಿರುವ ಕಾಮಗಾರಿ ದಸರಾ ವೇಳೆಗೆ ಕೆಲಸ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. 

ಬಾರ್‌ಗಳ ತೆರವಿಗೆ ಕ್ರಮ: ರಿಂಗ್‌ರಸ್ತೆಯ ಸರ್ವೀಸ್‌ ರಸ್ತೆಯ ಅಕ್ಕಪಕ್ಕದಲ್ಲಿ ನೆಡಲಾಗಿರುವ ಸಸಿಗಳ ಮೇಲೆ ಲಾರಿ ನಿಲ್ಲಿಸಲಾಗುತ್ತಿದ್ದು, ಜತೆಗೆ ಸರ್ವೀಸ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ ಸುತ್ತಲಿನ 500 ಮೀಟರ್‌ ವ್ಯಾಪ್ತಿಯಲ್ಲಿ ಬಾರ್‌ಗಳಿಗೆ ಸುಪ್ರೀಂಕೋರ್ಟ್‌ ನಿಷೇಧದ ಹಿನ್ನೆಲೆಯಲ್ಲಿ ರಿಂಗ್‌ರಸ್ತೆಯುದ್ದಕ್ಕೂ ಬಾರ್‌ಗಳು ತೆರೆದಿರುವುದರಿಂದ ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ.

ಹೀಗಾಗಿ ರಿಂಗ್‌ರಸ್ತೆಯಲ್ಲಿರುವ ಬಾರ್‌ಗಳನ್ನು ಶೀಘ್ರ ತೆರವುಗೊಳಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್‌ ಆಯುಕ್ತರು ಮುಂದಾಗಬೇಕೆಂದರು. ಮುಡಾ ಎಇಇ ಸತೀಶ್‌, ಕಾಮಗಾರಿ ಗುತ್ತಿಗೆದಾರ ಜೈನ್‌ ಇನ್ನಿತರರು ಹಾಜರಿದ್ದರು. 

ಟಾಪ್ ನ್ಯೂಸ್

ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Mumbai; ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Sullia ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Sullia ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Aranthodu ಕಾಂತಮಂಗಲ : ಕೊಲೆ ಆರೋಪಿಯ ಬಂಧನ

Aranthodu ಕಾಂತಮಂಗಲ : ಕೊಲೆ ಆರೋಪಿಯ ಬಂಧನ

Perne Tragedy: ಮಹಿಳೆಯ ಕೊಲೆ; ಬಾಲಕನ ಬಂಧನ

Tragedy ಪೆರ್ನೆ: ಮಹಿಳೆಯ ಕೊಲೆ; ಬಾಲಕನ ಬಂಧನ

Committee formation for NTA reform?

ಎನ್‌ಟಿಎ ಸುಧಾರಣೆಗೆ ಸಮಿತಿ ರಚನೆ?

Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ

Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ

Mangaluru- Bangalore ಸುಗಮ ರಸ್ತೆ,ರೈಲು ಸಂಪರ್ಕಕ್ಕೆ ಆದ್ಯತೆ: ಸಂಸದ ಬ್ರಿಜೇಶ್‌ ಚೌಟ

Mangaluru- Bangalore ಸುಗಮ ರಸ್ತೆ,ರೈಲು ಸಂಪರ್ಕಕ್ಕೆ ಆದ್ಯತೆ: ಸಂಸದ ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur ಅಂಧ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು

Hunsur ಅಂಧ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

6-hunsur’

Hunsur: ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣು

Renukaswamy Case: ದರ್ಶನ್‌ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!

Renukaswamy Case: ದರ್ಶನ್‌ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Mumbai; ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Sullia ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Sullia ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Aranthodu ಕಾಂತಮಂಗಲ : ಕೊಲೆ ಆರೋಪಿಯ ಬಂಧನ

Aranthodu ಕಾಂತಮಂಗಲ : ಕೊಲೆ ಆರೋಪಿಯ ಬಂಧನ

ajit pawar

Maharashtra; ಅಜಿತ್‌ ಬಣದ 18-19 ಶಾಸಕರು ಶರದ್‌ಬಣಕ್ಕೆ ಪಕ್ಷಾಂತರ: ರೋಹಿತ್‌

Perne Tragedy: ಮಹಿಳೆಯ ಕೊಲೆ; ಬಾಲಕನ ಬಂಧನ

Tragedy ಪೆರ್ನೆ: ಮಹಿಳೆಯ ಕೊಲೆ; ಬಾಲಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.