ತಡೆಯಾಜ್ಞೆ ತೆರವು ಬಳಿಕ ಹಕ್ಕು ಪತ್ರ


Team Udayavani, Sep 23, 2017, 1:09 PM IST

mys1.jpg

ಹುಣಸೂರು: ಗೋಮಾಳ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ವಿತರಿಸಲು ಸರ್ಕಾರ ಮುಂದಾಗಿದ್ದರೂ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಸರ್ಕಾರ ತಡೆಯಾಜ್ಞೆ ತೆರವಿಗೆ ಮುಂದಾಗಿದ್ದು, ಆದೇಶ ಬಂದ ತಕ್ಷಣವೇ ಸಾಗುವಳಿ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

ಕಂದಾಯ ಇಲಾಖೆ ವತಿಯಿಂದ ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಾಗುವಳಿ ಪತ್ರ ವಿತರಣೆಯಲ್ಲಿ 57 ಮಂದಿಗೆ ಸಾಗುವಳಿ ಪತ್ರ ವಿತರಿಸಿ ಮಾತನಾಡಿದರು. ರಾಜ್ಯದಲ್ಲೇ ರೈತರಿಗೆ ಅತಿಹೆಚ್ಚು ಭೂಮಿಯ ಹಕ್ಕು ಪತ್ರ ವಿತರಿಸಿರುವ ತಾಲೂಕು ಹುಣಸೂರಾಗಿದೆ.

ಈವರೆಗೆ 570 ಕೃಷಿಕರಿಗೆ ಸಾಗುವಳಿ ವಿತರಿಸುವ ಅವಕಾಶ ಸಿಕ್ಕಿರುವುದು ಪುಣ್ಯದ ಕೆಲಸವೆಂದು ಭಾವಿಸಿದ್ದೇನೆ. ತಮ್ಮ ಅವಧಿಯಲ್ಲಿ ಉದ್ದೂರು ಮತ್ತು ಆಸ್ಪತ್ರೆ ಕಾವಲ್‌ ಸೊಸೈಟಿ ರೈತರಿಗೆ ಹಾಗೂ ಪುನರ್ವಸತಿ ಕೇಂದ್ರದ ಗಿರಿಜನರಿಗೆ ತಮ್ಮ ಅವಧಿಯಲ್ಲಿ ಸಾಗುವಳಿ ಪತ್ರ ಮಂಜೂರು ಮಾಡಿಸಿರುವ ಹೆಮ್ಮೆಯಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಇನ್ನೂ ಸಾವಿರ ಮಂದಿ ರೈತರಿಗೆ ಸಾಗುವಳಿ ಪತ್ರ ವಿತರಿಸಲಾಗುವುದು. ಈ ನಡುವೆ ದಾಖಲಾತಿಗಳು ಕ್ರಮಬದ್ಧವಾಗಿರುವ ಅನೇಕ ರೈತರು ಸರಾìರಕ್ಕೆ ಕಿಮ್ಮತ್ತು ಕಟ್ಟಿ ಸಾಗುವಳಿ ಪತ್ರ ಪಡೆಯಲು ಮುಂದೆ ಬಾರದಿರುವುದು ವಿಪರ್ಯಾಸ. ಆದರೆ, ಸಮಿತಿ ಮುಂದೆ ಬಹುತೇಕ ತಕರಾರಿರುವ ಪ್ರಕರಣಗಳೇ ಬರುತ್ತಿದೆ. ಕೆಲವರಿಗೆ ಭೂ ಮಂಜೂರಾತಿ ಸಂಬಂಧ ಕಾನೂನಿನ ಬಗ್ಗೆ ಅರಿವಿಲ್ಲದೇ ಅಲೆದಾಡುತ್ತಿದ್ದಾರೆಂದರು.

ಎಸಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ: 2008ಕ್ಕಿಂತ ಮೊದಲು ದರ್ಖಾಸ್ತು ಭೂಮಿಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಅಧಿಕಾರಿಗಳು ಹಿಂಬರಹ ನೀಡದೇ ಸಮಿತಿ ತಿರಸ್ಕರಿಸುವ  ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದನ್ನು ಅರಿತು ಇದೀಗ ಹಿಂಬರಹ ಕೊಡಿಸಲಾಗಿದ್ದು ಸೂಕ್ತ ದಾಖಲಾತಿ ಇದ್ದವರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಸಮಿತಿಗೆ ಪುನರ್‌ ಪರಿಶೀಲನೆಗೆ ಅರ್ಜಿ ಬರಲಿದ್ದು, ಅದನ್ನು ಸಮಿತಿ ಪರಿಶೀಲಿಸಲಿದೆ. ಇದನ್ನು ರೆತರು ಅರ್ಥ ಮಾಡಿಕೊಳ್ಳಬೇಕೆಂದರು. 

ತಹಶೀಲ್ದಾರ್‌ ಎಸ್‌.ಪಿ.ಮೋಹನ್‌, ಶಿರಸ್ತೇದಾರ್‌ ಗುರುರಾಜ್‌, ರಾಜಸ್ವ ನಿರೀಕ್ಷಕರಾದ ರಾಜ್‌ಕುಮಾರ್‌, ಪ್ರಭಾಕರ್‌, ವೆಂಕಟಸ್ವಾಮಿ, ಸಮಿತಿ ಸದಸ್ಯರಾದ ಬನ್ನಿಕುಪ್ಪೆಚಿಕ್ಕಸ್ವಾಮಿ, ಮಮತ, ಶಿವಲಿಂಗಪ್ಪ, ತಾಪಂ ಸದಸ್ಯರಾದ ರವಿಪ್ರಸನ್ನ, ವೆಳ್ಳಂಗಿರಿ, ವಿಷಕಂಠನಾಯ್ಕ, ಗ್ರಾಮಲೆಕ್ಕಾಧಿಕಾರಿಗಳಾದ ಶಿವಕುಮಾರ್‌, ಶ್ರೀನಿವಾಸ್‌, ಮಹದೇವ್‌, ಗುರುಪ್ರಸಾದ್‌ ಮತ್ತಿತರರಿದ್ದರು.

ಅ.16ಕ್ಕೆ ಮತ್ತೆ ಸಾಗುವಳಿ ಚೀಟಿ ವಿತರಣೆ
ಮುಂದಿನ ದಿನಗಳಲ್ಲಿ ಆಗಾಗ್ಗೆ ಸಮಿತಿ ಸಭೆ ನಡೆಸಿ ಸಾಗುವಳಿ ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು. ಇದೀಗ 57 ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಅಲ್ಲದೆ, ಸಭೆಯಲ್ಲಿ 64 ಮಂದಿಗೆ ಸಾಗುವಳಿ ಮಂಜೂರು ಮಾಡಲಾಗುವುದು. ಅ.16ಕ್ಕೆ ಮುಂದಿನ ಸಭೆ ನಡೆಯಲಿದ್ದು, ಅಂದು  ಹಕ್ಕುಪತ್ರ ವಿತರಿಸಲಾಗುವುದೆಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

12

Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ

11-hunsur

Hunsur: ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.