ವರನಟ ಡಾ.ರಾಜ್‌ಗೆ ಅಪಾರ ಭಾಷಾಭಿಮಾನ

Team Udayavani, Nov 2, 2018, 12:07 PM IST

m2-varanata.jpg

ಎಚ್‌.ಡಿ.ಕೋಟೆ: ನಮ್ಮದು ಗಡಿ ತಾಲೂಕಾದರೂ ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ವರನಟ ಡಾ.ರಾಜ್‌ಕುಮಾರ್‌ ಅವರಂತೆ ಭಾಷಾಭಿಮಾನ ಬೆಳೆಸಿಕೊಳ್ಳುವಂತೆ ಶಾಸಕ ಅನಿಲ್‌ಕುಮಾರ್‌ ಹೇಳಿದರು. ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವರನಟ ಡಾ.ರಾಜ್‌ಕುಮಾರ್‌ ಕನ್ನಡ ನಾಡು ಕನ್ನಡ ಅತ್ಯಂತ ಶ್ರೇಷ್ಠ ನಟ. ಇವರಿಗೆ ಬೇರೆ ಭಾಷೆಗಳಲ್ಲಿ ನಟಿಸಲು ಅವಕಾಶ ಬಂದರೂ ಅವರಲ್ಲಿದ್ದ ಕನ್ನಡ ಭಾಷಾಭಿಮಾನದಿಂದ ನಟಿಸಲಿಲ್ಲ. ತಾಲೂಕಿನ ಗಡಿ ಭಾಗದ ವರ್ತಕರು ತಮ್ಮ ಅಂಗಡಿ ನಾಮಫಲಕಗಳನ್ನು ಮಳಯಾಳಂ ಭಾಷೆಯಲ್ಲಿ ಆಳವಡಿಸಿರುವುದು ನನ್ನ ಗಮನಕ್ಕೆ ಬಂದಿದೆ, ಅದನ್ನು ತೆರವುಗೊಳಿಸಿ ಕನ್ನಡ ನಾಮಫಲಕ ಹಾಕಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಅನ್ಯಭಾಷಿಕರಿಗೆ ಕನ್ನಡ ಕಲಿಸಿ: ಮುಖ್ಯ ಶಿಕ್ಷಕ ವಿ.ರಂಗಸ್ವಾಮಿಶೆಟ್ಟಿ ಮಾತನಾಡಿ, ಕನ್ನಡ ಭಾಷೆಗೆ ಶ್ರೀಮಂತವಾದ ಪದ ಪುಂಜವಿದೆ. ಅಮೂಲ್ಯ ಪರಂಪರೆ ಇರುವ ಕನ್ನಡ ಭಾಷೆಗೆ ಇಂದು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ.25ರಷ್ಟು ಮಾತ್ರ ಎಂದು ವಿಷಾದಿಸಿದರು.

ಕನ್ನಡಿಗರಾದ ನಾವು ನಮ್ಮ ನಾಡಿಗೆ ಬಂದ ಅನ್ಯಭಾಷಿಕರ ಭಾಷೆ ಮಾತನಾಡದೆ, ಅವರಿಗೂ ನಮ್ಮ ಕಲಿಸುವ ಮಾಡಬೇಕು. ಸರ್ಕಾರಿ ಶಾಲೆ ಮುಚ್ಚಬೇಡಿ ಎನ್ನುವ ಸರ್ಕಾರ ಅತ್ತ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡುವುದು ಯಾವ ನ್ಯಾಯ. ಕನ್ನಡ ಶಾಲೆ ಮುಚ್ಚಬಾರದು, ಕನ್ನಡ ಶಾಲೆ ಕಟ್ಟುವಂತಾಗಬೇಕು ಆ ನಿಟ್ಟಿನಲ್ಲಿ ಚಿಂತನೆ ಮಾಡುವ ಅಗತ್ಯವಿದೆ ಎಂದರು. 

ಮೆರವಣಿಗೆ: ಪಟ್ಟಣದ ಶ್ರೀವರದರಾಜ ಸ್ವಾಮಿ ದೇವಸ್ಥಾನದ ಮುಂದೆ ಬೆಳ್ಳಿ ರಥದಲ್ಲಿ ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರವಿರಿಸಿ ಕಳಸ ಹೊತ್ತ ಮಹಿಳೆಯರೊಂದಿಗೆ ಹೊರಟ ಮೆರವಣಿಗೆಗೆ ಶಾಸಕ ಅನಿಲ್‌ಕುಮಾರ್‌ ನಂದಿ ಕಂಬಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಂದಿಕಂಬ, ನಾದಸ್ವರ, ನಗಾರಿ, ಕನ್ನಡ ಇತಿಹಾಸ ಸಾರುವ ಸ್ತಬ್ಧ ಚಿತ್ರಗಳು, ಮಕ್ಕಳ ಕುಣಿತ ಮೆರವಣಿಗೆಗೆ ರಂಗು ತಂದಿತು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ನಯೀಮಾ, ಸದಸ್ಯ ವೆಂಕಟಸ್ವಾಮಿ, ತಾಪಂ.ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಂಜುಳಾ, ಸರಗೂರು ಪಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಮಂಜುಳಾ, ತಹಶೀಲ್ದಾರ್‌ ಮಂಜುನಾಥ್‌, ಇಒ ದರ್ಶನ್‌, ಬಿಇಒ ಸುಂದರ, ಪಿಎಸ್‌ಐ ಆಶೋಕ್‌, ಫರ್ವೇಜ್‌ ಕಲೀಂವುಲ್ಲಾ, ಬಿಆರ್‌ಪಿ ಮಹದೇವಯ್ಯ, ಸಿಆರ್‌ಪಿ ಪ್ರಕಾಶ್‌ ಇನ್ನಿತರರಿದ್ದರು.

ಟಾಪ್ ನ್ಯೂಸ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

14-

ಕಾರ ಹುಣ್ಣಿಮೆ; ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ; ಕನ್ನಡದ ಮೊದಲ ಮಣ್ಣಿನ ಹಬ್ಬ ಕಾರಹುಣ್ಣಿಮೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Dhananjaya as Nadaprabhu Kempegowda

Dhananjaya; ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ

Pat Cummins becomes the 2nd Australian to pick a hat-trick in the T20 World Cup history

T20 World Cup; ಹ್ಯಾಟ್ರಿಕ್ ವಿಕೆಟ್ ಕಿತ್ತ ಕಮಿನ್ಸ್; 17 ವರ್ಷದ ಬಳಿಕ ಆಸೀಸ್ ಬೌಲರ್ ಸಾಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bypoll; ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಲ್ಲ; ಜಿ.ಟಿ.ದೇವೇಗೌಡ ಹೇಳಿಕೆ

Bypoll; ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಲ್ಲ; ಜಿ.ಟಿ.ದೇವೇಗೌಡ ಹೇಳಿಕೆ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

ರಂಗಕರ್ಮಿ ನ.ರತ್ನ ನಿಧನ: ಆಸ್ಪತ್ರೆಗೆ ದೇಹದಾನ

ರಂಗಕರ್ಮಿ ನ.ರತ್ನ ನಿಧನ: ಆಸ್ಪತ್ರೆಗೆ ದೇಹದಾನ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್

13-

Dharmsthala ಯೋಜನೆ ವತಿಯಿಂದ ರಾಜ್ಯಾದ್ಯಂತ 770 ಕೆರೆ ಪುನಶ್ಚೇತನ: ಆನಂದ್‌ ಸುವರ್ಣ

MUST WATCH

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

ಹೊಸ ಸೇರ್ಪಡೆ

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

15

Doddanagudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ನಾಗ ತನುತರ್ಪಣ ಮಂಡಲ ಸೇವೆ ಸಂಪನ್ನ

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.