ಗಮನ ಸೆಳೆದ ಸಿಎಫ್ಟಿಆರ್‌ಐ ಆಹಾರ


Team Udayavani, Oct 30, 2018, 12:11 PM IST

m2-gamana.jpg

ಮೈಸೂರು: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(ಸಿಎಫ್ಟಿಆರ್‌ಐ)ದಲ್ಲಿ ನಡೆಯುವ ಸಂಶೋಧನೆಗಳು, ಕಾರ್ಯವೈಖರಿಗಳ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಮುಕ್ತ ದಿನಕ್ಕೆ ಮೊದಲ ದಿನದಂದು ಉತ್ತಮ ಪ್ರತಿಕ್ರಿಯೆ ದೊರೆಯಿತು. 

ಸಿಎಫ್‌ಟಿಆರ್‌ಐನ ಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಮುಕ್ತ ದಿನದ ಹಿನ್ನೆಲೆಯಲ್ಲಿ ಸಿಎಫ್‌ಟಿಆರ್‌ಐ ಭೇಟಿ ನೀಡಿದ ವಿದ್ಯಾರ್ಥಿಗಳು, ಜನಸಾಮಾನ್ಯರು, ಆಹಾರ ಸಂಶೋಧನೆಯಲ್ಲಿ ಸಂಸ್ಥೆ ನಡೆಸುತ್ತಿರುವ ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರ, ಕಾರ್ಯ ವಿಧಾನದ ಬಗ್ಗೆ ಮಾಹಿತಿ ಪಡೆದರು.

ಅಲ್ಲದೇ ಸಿಎಫ್‌ಟಿಆರ್‌ಐನ 20 ನಾನಾ ವಿಭಾಗದಿಂದ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ, ವಸ್ತುಪ್ರದರ್ಶನ, ಪ್ರಯೋಗಾಲಯಗಳ ವಿವರಣೆ, ಯಂತ್ರಗಳ ಕಾರ್ಯ ವಿಧಾನವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಮುಕ್ತ ದಿನದ ಅಂಗವಾಗಿ ಪ್ರದರ್ಶನಕ್ಕಿಡಲಾಗಿದ್ದ ಸ್ಥಳದಲ್ಲೇ ದೋಸೆ ಮಾಡುವ ವಿಧಾನ ನೋಡುಗರ ಪ್ರಮುಖ ಆಕರ್ಷಣೆಗೆ ಕಾರಣವಾಯಿತು. 

ಮುದ್ದೆ-ಉಪ್ಸಾರು ರುಚಿ: ಓಪನ್‌ ಡೇ ಹಿನ್ನೆಲೆಯಲ್ಲಿ ಸಿಎಫ್ಟಿಆರ್‌ಐ ವತಿಯಿಂದ ಸಂಶೋಧನೆ ಮಾಡಲಾಗಿರುವ ರಾಗಿ ಮುದ್ದೆ ತಯಾರಿಕೆ ಯಂತ್ರ ಪ್ರದರ್ಶನದ ಕೇಂದ್ರಬಿಂದುವಾಗಿತ್ತು. ಸ್ಥಳದಲ್ಲೇ ಮುದ್ದೆ ಮಾಡುವ ವಿಧಾನವನ್ನು ಕಣ್ಣಾರೆ ಕಂಡು ಅಗತ್ಯ ಮಾಹಿತಿ ಪಡೆದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು, ಮುದ್ದೆ-ಉಪ್ಸಾರು ಸವಿದು ಬಾಯಿಚೆಪ್ಪರಿಸಿದರು.

ಯಂತ್ರದಲ್ಲಿ ಯಾವುದೇ ಗಂಟಿಲ್ಲದೆ ಹೊರ ಬಂದ 100 ಗ್ರಾಂನ ಮೆತ್ತನೆ ಮುದ್ದೆಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಹೀಗಾಗಿ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮುದ್ದೆ ಮಾಡುವ ವಿಧಾನ ತಿಳಿದುಕೊಳ್ಳುವ ಜತೆಗೆ ಮುದ್ದೆ ಸವಿದರು. ಸಿಎಫ್ಟಿಆರ್‌ಐ ಸಿಬ್ಬಂದಿ ಗಂಟೆಗೆ 250 ಮುದ್ದೆಯನ್ನು ಸ್ಥಳದಲ್ಲೇ ಮಾಡಿ ತೋರಿಸಿದ ಪರಿಣಾಮ, ಕೇವಲ ಒಂದೂವರೆ ಗಂಟೆಯಲ್ಲೇ ಅಂದಾಜು 700 ಮುದ್ದೆ ಖಾಲಿ ಆಯಿತು. ಸಂಜೆಯೊಳಗೆ ಸಾವಿರಕ್ಕೂ ಹೆಚ್ಚು ಮುದ್ದೆಗಳು ಖಾಲಿಯಾಗಿತ್ತು. 

6 ಸೆಕೆಂಡಿಗೆ 1 ದೋಸೆ: ಕಳೆದ 10 ವರ್ಷದ ಹಿಂದೆಯೇ ಸಿಎಫ್‌ಟಿಆರ್‌ಐ ಕಂಡು ಹಿಡಿದಿರುವ ದೋಸೆ ತಯಾರಿಕೆ ಯಂತ್ರ ಪ್ರದರ್ಶನದಲ್ಲಿ ಗಮನ ಸೆಳೆಯಿತು. ಆರು ಸೆಕೆಂಡಿಗೆ 1 ಹಾಗೂ ಗಂಟೆಗೆ 380 ದೋಸೆ ಹೊರ ಬರುತ್ತಿದ್ದ ವಿಶೇಷ ಪ್ರಯೋಗವನ್ನು ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಉಳಿದಂತೆ ಸಿಎಫ್‌ಟಿಆರ್‌ಐ ವತಿಯಿಂದ ತಯಾರಿಸಿದ ಸೇಬು, ಸೀಬೆಹಣ್ಣು , ದಾಳಿಂಬೆ, ಕಿತ್ತಲೆ, ದ್ರಾಕ್ಷಿ ಜ್ಯೂಸ್‌ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಉಳಿದಂತೆ ಮೊಟ್ಟೆಯಲ್ಲಿ ಮಾಡಿದ 10ಕ್ಕೂ ಬಗೆಯ ತಿನಿಸು, ಕ್ಯಾರೆಟ್‌ ಹಲ್ವಾ, ಲಸ್ಸಿ, ಚಕೂಲಿ ಮುರುಕು, ಪಸ್ತಾ ಮಾಡುವ ಬಗೆ ಸಾರ್ವಜನಿಕರು ಮಾಹಿತಿ ಪಡೆದರು.

ಟಾಪ್ ನ್ಯೂಸ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

14-

ಕಾರ ಹುಣ್ಣಿಮೆ; ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ; ಕನ್ನಡದ ಮೊದಲ ಮಣ್ಣಿನ ಹಬ್ಬ ಕಾರಹುಣ್ಣಿಮೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Dhananjaya as Nadaprabhu Kempegowda

Dhananjaya; ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ

Pat Cummins becomes the 2nd Australian to pick a hat-trick in the T20 World Cup history

T20 World Cup; ಹ್ಯಾಟ್ರಿಕ್ ವಿಕೆಟ್ ಕಿತ್ತ ಕಮಿನ್ಸ್; 17 ವರ್ಷದ ಬಳಿಕ ಆಸೀಸ್ ಬೌಲರ್ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bypoll; ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಲ್ಲ; ಜಿ.ಟಿ.ದೇವೇಗೌಡ ಹೇಳಿಕೆ

Bypoll; ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಲ್ಲ; ಜಿ.ಟಿ.ದೇವೇಗೌಡ ಹೇಳಿಕೆ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

ರಂಗಕರ್ಮಿ ನ.ರತ್ನ ನಿಧನ: ಆಸ್ಪತ್ರೆಗೆ ದೇಹದಾನ

ರಂಗಕರ್ಮಿ ನ.ರತ್ನ ನಿಧನ: ಆಸ್ಪತ್ರೆಗೆ ದೇಹದಾನ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್

13-

Dharmsthala ಯೋಜನೆ ವತಿಯಿಂದ ರಾಜ್ಯಾದ್ಯಂತ 770 ಕೆರೆ ಪುನಶ್ಚೇತನ: ಆನಂದ್‌ ಸುವರ್ಣ

MUST WATCH

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

ಹೊಸ ಸೇರ್ಪಡೆ

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

15

Doddanagudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ನಾಗ ತನುತರ್ಪಣ ಮಂಡಲ ಸೇವೆ ಸಂಪನ್ನ

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.