ಕೋಟೆ ಗಡಿ ಗ್ರಾಮದ ತುಂಬಾ ಮಲೆಯಾಳಂ ಫ‌ಲಕ!


Team Udayavani, Jan 10, 2020, 3:09 PM IST

mysuru-tdy-2

ಎಚ್‌.ಡಿ.ಕೋಟೆ: ತಾಲೂಕಿನ ಕೇರಳ ಗಡಿ ಭಾಗದ ಹಲವಾರು ಗ್ರಾಮಗಳು ಭಾಷೆ ಅಷ್ಟೇ ಅಲ್ಲದೆ ಅಂಗಡಿ ಮುಂಗಟ್ಟು ಗಳು ಮಲೆಯಾಳಂ ಮಯವಾಗುತ್ತಿವೆ. ತಾಲೂಕಿನ ಗಡಿ ಭಾಗದ ಡಿ.ಬಿ. ಕುಪ್ಪೆ ಗ್ರಾಮದಲ್ಲಿ ಎಲ್ಲಿ ನೋಡಿದರೂ ಮಲೆಯಾಳಂ ನಾಮಫ‌ಲಕಗಳು ಕಂಡು ಬರುತ್ತಿವೆ. ಡಿ.ಬಿ.ಕುಪ್ಪೆ ಗ್ರಾಮದ ಪ್ರತಿ ಅಂಗಡಿ ಮುಂಗ ಟ್ಟುಗಳ ಮುಖ್ಯದ್ವಾರದಲ್ಲಿ ಮಲೆಯಾಳಂ ಭಾಷಾ ನಾಮಫಲಕಗಳು ರಾರಾಜಿ ಸುತ್ತಿರುವ ದೃಶ್ಯವನ್ನು ನೋಡಿದರೆ ಕೇರಳ ರಾಜ್ಯಕ್ಕೆ ಬಂದಿದ್ದೇವಾ ಎಂಬ ಭಾವನೆ ಮೂಡು ತ್ತದೆ. ಬೆರಳಣಿಕೆ ಯಷ್ಟು ಕನ್ನಡ ನಾಮಫ‌ಲಕಗಳು ಹೊರತು ಪಡಿಸಿದರೆ ಇನ್ನುಳಿದಂತೆ ಇಡೀ ಡಿ.ಬಿ. ಕುಪ್ಪೆ ಪರಭಾಷೆ ಹಾವಳಿಗೆ ತುತ್ತಾಗಿದೆ. ಗ್ರಾಮ ದಲ್ಲಿ ಕಳೆದ ಒಂದು ತಿಂಗಳಿ ನಿಂದ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಗ್ರಾಮದ ಹಲವು ಕಡೆಗಳಲ್ಲಿ ಮಲೆಯಾಳಂ ಭಾಷೆ ನಾಮ ಫ‌ಲಕ ಅಳವಡಿಸಲಾಗಿದೆ ಎಂಬ ಉತ್ತರ ಬರುತ್ತಿದೆ.

ಕೇರಳದ ಗಡಿಭಾಗ ಬಹುತೇಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆವರಿಸಿದ್ದು, ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಜನರ ಹೇಳಿಕೆಯಂತೆ ಕಳೆದ ಒಂದು ತಿಂಗಳಿಂದ ಚಿತ್ರೀಕರಣಕ್ಕೆ ಅನುಮತಿ ನೀಡಿದವರು ಯಾರು?, ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇದಿಯಾ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಅಂಗನವಾಡಿ ಕೇಂದ್ರ, ಸರ್ಕಾರ ಶಾಲೆ ಸೇರಿದಂತೆ ಕುಡಿಯುವ ನೀರಿ ಗಾಗಿ ಕೊಳವೆ ಬಾವಿ ತೆಗೆಯಲು ಅನುಮತಿ ನಿರಾಕರಿಸುವ ಅರಣ್ಯ ಇಲಾಖೆ ಚಿತ್ರೀಕರಣಕ್ಕೆ ಅನುಮತಿ ನೀಡಿದೆಯೇ ಅನ್ನುವ ಅನುಮಾನ ಕಾಡುತ್ತಿದೆ.

ಚಿತ್ರೀಕರಣಕ್ಕೆ ಮಲೆಯಾಳಿ ಫ‌ಲಕ ಏಕೆ?: ಚಿತ್ರೀಕರಣಕ್ಕೆ ಕರ್ನಾಟಕದ ಗಡಿಭಾಗದ ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲೂಕಿನ ಗಡಿಭಾಗ ಆಯ್ಕೆ ಮಾಡಿಕೊಂಡು ಇಡೀ ಗ್ರಾಮವನ್ನು ಮಲೆಯಾಳಂ ಮಯ ಮಾಡುವ ಹುನ್ನಾರ ಇದಿಯಾ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಡಿ. ಬಿ.ಕುಪ್ಪೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾ ಲಯ ಕಾರ್ಯನಿರ್ವಹಿಸುತ್ತಿದ್ದರೂ ಕನ್ನಡ ಭಾಷಾ ನಾಮ ಫ‌ಲಕ ತೆರವು ಗೊಳಿಸಿ ಮಲೆಯಾಳಂ ಭಾಷಾ ನಾಮಫ‌ಲಕ ಅಳವಡಿಸಿದರೂ ಚಕಾರ ಎತ್ತುತ್ತಿಲ್ಲ.

ತನಿಖೆ ನಡೆಸಿ: ನಾಗರಹೊಳೆ ಅರಣ್ಯದಲ್ಲಿ ನಡುವಿನಲ್ಲಿ ರುವ ಡಿ.ಬಿ.ಕುಪ್ಪೆಯ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರ ಕುರಿತು ತನಿಖೆ ನಡೆಸಬೇಕು. ಶೂಟಿಂಗ್‌ ವೇಳೆ ಏನಾದರೂ ಅವಘಡ ಸಂಭವಿಸಿ ಅರಣ್ಯ ಮತ್ತು ವನ್ಯಜೀವಿಗಳ ಜೀವಕ್ಕೆ ಹಾನಿಯಾದರೆ ಅದಕ್ಕೆ ಹೊಣೆ ಯಾರು?, ಅನುಮತಿ ನೀಡಿರುವುದು ಸರಿಯೇ?, ಈ ಕುರಿತು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಪರಿಸರ ಪ್ರೇಮಿ ಗಳು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.

ಗಡಿ ಗ್ರಾಮಗಳು ಮಲೆಯಾಳಂ ಮಯ : ತಾಲೂಕಿನಿಂದ 40 ಕಿ.ಮೀ. ಅಂತರವಿರುವ ಬಾವಲಿ ಗ್ರಾಮವು, ಕೇರಳ ಮತ್ತು ಕರ್ನಾಟಕರಾಜ್ಯದ ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನ ಗಡಿಭಾಗವಾಗಿದೆ. ಬಾವಲಿ ಗ್ರಾಮಕ್ಕೆ ಮೊದಲು ಹುಲ್ಲುಮೊಟ್ಲು, ಕಡೇಗದ್ದೆ, ವಡಕನಮಾಳ, ಮಚ್ಚಾರು, ಹೊಸೂರು, ಗೋಳೂರು ಹಾಡಿ, ಆನೆಮಾಳ, ಡಿ.ಬಿ.ಕುಪ್ಪೆ ಗ್ರಾಮಗಳು ಇವೆ. ಇಲ್ಲಿನ ಬಹುತೇಕ ಜನರು ಮಲೆಯಾಳಂ ಭಾಷೆಗೆ ಮಾರು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಸಂಘಟನೆಗಳಷ್ಟೇ ಅಲ್ಲದೇ ಜಿಲ್ಲಾಡಳಿತ, ತಾಲೂಕು ಆಡಳಿತ ಕನ್ನ ಭಾಷೆ ಬಗ್ಗೆ ಜನರಲ್ಲಿ ಅರಿವು ಮೂಡಿಸದೇ ಇದ್ದರೆ ಈ ಭಾಗ ಕಾಲ ಕ್ರಮೇಣ ಮಲೆಯಾಳಂ ಭಾಷೆಯಿಂದ ಆವರಿಸಿಕೊಂಡು ಕನ್ನಡ ಭಾಷೆ ಸಂಸ್ಕೃತಿ ನಶಿಸುವುದರಲ್ಲಿ ಸಂಶಯ ಇಲ್ಲ.

ಎಚ್‌.ಡಿ.ಕೋಟೆ ತಾಲೂಕಿನ ಗಡಿಭಾಗವಾದ ಡಿ.ಬಿ.ಕೊಪ್ಪೆ ಗ್ರಾಮದಲ್ಲಿ ಮಲೆಯಾಳಂ ನಾಮಫ‌ಲಕ ಅಳವಡಿಸಿರುವುದು “ಉದಯವಾಣಿ’ ಮೂಲಕ ತಮಗೆ ತಿಳಿದು ಬಂದಿದೆ. ಈ ಕುರಿತು ಗ್ರಾಮ ಪಂಚಾಯ್ತಿಯಿಂದ ಮಾಹಿತಿ ಪಡೆದುಕೊಂಡು ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಮಲೆಯಾಳಂ ಫ‌ಲಕ ತೆರವುಗೊಳಿಸಿ, ಕನ್ನಡ ನಾಮಫ‌ಲಕ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಆರ್‌.ಮಂಜುನಾಥ್‌, ತಹಶೀಲ್ದಾರ್‌

 

-ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

Fake ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

1-BJP-JDS

Hunsur ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

5-hunsur

Hunsur: ಶುಂಠಿ ಮದ್ಯೆ ಬೆಳೆಸಿದ್ದ ಗಾಂಜಾ ಗಿಡ ವಶ, ಆರೋಪಿ ಪರಾರಿ

4-hunsur

Hunsur: ಮೈಮುಲ್ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸುವ ಸಚಿವರ ಹುನ್ನಾರ ನಡೆಯಲ್ಲ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

1–ncxcx.

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.