ಅಂತೂ ಇಂತೂ ಮಾರುಕಟ್ಟೆಗೆ ಮಾವು ಬಂತು


Team Udayavani, Apr 17, 2017, 12:51 PM IST

mys2.jpg

ಮೈಸೂರು: ಆಕರ್ಷಕ‌ ರೂಪ, ಸ್ವಾದಿಷ್ಟ ರುಚಿ ಹಾಗೂ ಮನಮೋಹಕ ಪರಿಮಳದ ಗುಣಗಳಿಂದಾಗಿ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ, ಕಾರ್ಬೈಡ್‌ ಉಪಚರಿಸಿ ಮಾಗಿಸಿದ ಹಣ್ಣಿನದೇ ದರ್ಬಾರಾಗಿರುವುದರಿಂದ ಗ್ರಾಹಕರು ಖರೀದಿಸಲು ಹಿಂದು ಮುಂದು ನೋಡುವಂತಾಗಿದೆ.

ಮಾವಿನ ಕಾಯಿಯನ್ನು ಬೇಗನೆ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‌ ಉಪಚರಿಸಿ ಮಾಗಿಸಿದ ಮಾವಿನ ಹಣ್ಣು ಸೇವಿಸುವುದರಿಂದ ಕ್ಯಾನ್ಸರ್‌ ಕಾಯಿಲೆ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿ ಣಾಮ ಉಂಟಾಗಲಿದೆ. ಹೀಗಾಗಿ ಇಂತಹ ಹಣ್ಣು ಗಳನ್ನು ತಿನ್ನದೇ ಇರುವುದು ಒಳಿತು ಎಂದು ತೋಟ ಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕಾರ್ಬೈಡ್‌ ಉಪಚರಿಸಿದ ಮಾವಿನ ಹಣ್ಣಿನ ಸಿಪ್ಪೆ ಸಂಪೂರ್ಣವಾಗಿ ಹಳದಿ ಬಣ್ಣದಿಂದ ಕೂಡಿರು ವುದಲ್ಲದೆ, ಹಣ್ಣಿನ ಮೇಲೆ ಅಲ್ಲಲ್ಲಿ ಕಾರ್ಬೈಡ್‌ನ‌ ಧೂಳು ಅಂಟಿರುತ್ತದೆ. ಜತೆಗೆ ಕೆಲವು ಮಾವಿನ ತಳಿಗಳಲ್ಲಿ ಹಳದಿ ಹಾಗೂ ಹಸಿರು ಬಣ್ಣದ ಮಚ್ಚೆಯೂ ಇರುತ್ತದೆ. ಹಣ್ಣಿನ ಸಿಪ್ಪೆ ಮಂದವಾಗಿದ್ದು ತಿರುಳಿನಿಂದ ಬೇರ್ಪಡಿಸುವುದು ಕಷ್ಟವಾಗುತ್ತದೆ. ಹಣ್ಣು ತಿಳಿ ಹಳದಿ ಬಣ್ಣದಿಂದ ಕೂಡಿದ್ದು, ತಿರುಳು ಗಟ್ಟಿಯಾಗಿರುತ್ತದೆ. ಅಲ್ಲದೇ ನಾರಿನ ಅಂಶ ಕೂಡ ಇರುವುದಿಲ್ಲ.

ಈ ಹಣ್ಣನ್ನು ತಿಂದಾಗ ಹುಳಿ ಮಿಶ್ರಿತ ಸಿಹಿ ಹಾಗೂ ನಾಲಗೆಗೆ ಆಮ್ಲಿàಯ ಅನುಭವವಾಗುತ್ತದೆ. ಇಂತಹ ಕಾರ್ಬೈಡ್‌ ಯುಕ್ತ ಹಣ್ಣನ್ನು 4-5 ದಿನಗಳ ಕಾಲ ಕೆಡದಂತೆ ಇಡಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. ಕರ್ನಾಟಕದಲ್ಲಿ ಪ್ರಮುಖವಾಗಿ ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳ ಸುಮಾರು 1.70 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. 

ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂದೂರಾ, ಮಲಗೋಬಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್‌, ದಶೇರಿ ಮೊದಲಾದ ತಳಿಯ ಮಾವನ್ನು ರಾಜ್ಯದಲ್ಲಿ ಬೆಳೆಯಲಾಗುತ್ತದೆ. ಮೈಸೂರು ಜಿಲ್ಲೆಯ ಸುಮಾರು 4128 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ರತ್ನರಿ ಅಲ್ಪಾ ನ್ಸೋ, ಬಾದಾಮಿ, ರಸಪುರಿ, ಸೇಂಧೂರ, ಮಲಗೋಬಾ, ತೋತಾಪುರಿ, ಮಲ್ಲಿಕಾ, ದಶೇರಿ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದ್ದು, ವಾರ್ಷಿಕ 40 ಟನ್‌ ಮಾವು ಬೆಳೆ ಅಂದಾಜಿಸಲಾಗಿದೆ.

* ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

8–Mudhol

Mudhol: ಅಕ್ರಮ ಅಕ್ಕಿ ಸಾಗಾಟ ಲಾರಿ ವಶಕ್ಕೆ: ಇಬ್ಬರ ಬಂಧನ

Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ

Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ

7-hunasagi

Hunasagi: ಬೈಕ್ ಹಾಯ್ದು ಇಬ್ಬರು ಮಹಿಳೆಯರು ಸಾವು

Kejriwal

Aravind Kejriwal: ಇನ್ನೂ ಕೆಲವು ದಿನ ಕೇಜ್ರಿವಾಲ್‌ ಗೆ ತಿಹಾರ್‌ ಜೈಲೇ ಗತಿ!

5-Kunigal

Kunigal: ಗಮನ ಬೇರೆಡೆಗೆ ಸೆಳೆದು 3.30 ಲಕ್ಷ ರೂ. ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು

David Warner retired from all formats of the cricket

David Warner; ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸ್ಟೈಲಿಶ್ ಬ್ಯಾಟರ್ ವಾರ್ನರ್

3-Sagara

Sagara: ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಆತ್ಮಹತ್ಯೆಗೆ ಶರಣಾದ ಬಾಲಕ

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಹೆದರಿ ಆತ್ಮಹತ್ಯೆಗೆ ಶರಣಾದ ಬಾಲಕ

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

Fake ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

1-BJP-JDS

Hunsur ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

5-hunsur

Hunsur: ಶುಂಠಿ ಮದ್ಯೆ ಬೆಳೆಸಿದ್ದ ಗಾಂಜಾ ಗಿಡ ವಶ, ಆರೋಪಿ ಪರಾರಿ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

8–Mudhol

Mudhol: ಅಕ್ರಮ ಅಕ್ಕಿ ಸಾಗಾಟ ಲಾರಿ ವಶಕ್ಕೆ: ಇಬ್ಬರ ಬಂಧನ

Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ

Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ

Karje

Udayavani Campaign: ಉಡುಪಿ-ನಮ್ಮೂರಿಗೆ ನರ್ಮ್ ಕಳ್ಸಿ ಮಾರ್ರೆ!

7-hunasagi

Hunasagi: ಬೈಕ್ ಹಾಯ್ದು ಇಬ್ಬರು ಮಹಿಳೆಯರು ಸಾವು

6-Chikodi

Chikodi: ತುರ್ತು ಪರಿಸ್ಥಿತಿ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.