ಫೀವರ್ ಕ್ಲಿನಿಕ್ ಮತ್ತು ಆಂಬುಲೆನ್ಸ್ ಗೆ ಎಂಎಲ್‌ಸಿ ವಿಶ್ವನಾಥ್ ಚಾಲನೆ

Team Udayavani, Jan 17, 2022, 6:17 PM IST

ಫೀವರ್ ಕ್ಲಿನಿಕ್ ಮತ್ತು ಆಂಬುಲೆನ್ಸ್ ಗೆ ಎಂಎಲ್‌ಸಿ ವಿಶ್ವನಾಥ್ ಚಾಲನೆ

ಹುಣಸೂರು: ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ದಿ ಅನುದಾನದಡಿ ಆವರಣದಲ್ಲಿ ನಿರ್ಮಿಸಿರುವ ಫೀವರ್‌ ಅಕ್ಲಿನಿಕ್ ಹಾಗೂ ಸುಸಜ್ಜಿತ ಆಂಬುಲೆನ್ಸ್ ಗೆ ಶಾಸಕರಾದ ಎಚ್.ವಿಶ್ವನಾಥ್ ಎಚ್.ಪಿ.ಮಂಜುನಾಥರೊಡಗೂಡಿ ಚಾಲನೆ ನೀಡಿದರು.

ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಎಂ.ಎಲ್.ಸಿ.ವಿಶ್ವನಾಥರು ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡದ ನಡುವೆ ವೈದ್ಯರು ಕೆಲಸ ಮಾಡುವ ಸ್ಥಿತಿ ಇತ್ತು. ಇದಕ್ಕಾಗಿ ಪ್ರತ್ಯೇಕ ಫೀವರ್ ಕ್ಲಿನಿಕ್ ಕಟ್ಟಡ ಹಾಗೂ ಸುಸಜ್ಜಿತ ಆಂಬುಲೆನ್ಸ್ ಅತ್ಯವಶ್ಯದ ಬಗ್ಗೆ ಇಲ್ಲಿನ ವೈದ್ಯರು ಪ್ರಸ್ತಾಪಿಸಿದ್ದರು.

ಅಂದು ತಾವು ಭರವಸೆ ನೀಡಿದ್ದಂತೆ ಆಸ್ಪತ್ರೆ ಆವರಣದಲ್ಲಿ 12 ಲಕ್ಷರೂ ವೆಚ್ಚದಡಿ ಫೀವರ್ ಕ್ಲೀನಿಕ್ ಕಟ್ಟಡ ನಿರ್ಮಿಸಿ ಸೇವೆಗೆ ಸಮರ್ಪಿಸಲಾಗುತ್ತಿದೆ. ಇನ್ನು ಆಸ್ಪತ್ರೆಗೆ ಬಹಳ ಅತ್ಯವಶ್ಯವಾಗಿದ್ದ ಆಂಬುಲೆನ್ಸನ್ನು 30 ಲಕ್ಷರೂ ಅನುದಾನದಡಿ  ಆಕ್ಸಿಜನ್,ವೆಂಟಿಲೇಟರ್, ಕಾಫ್ ಇಂಡಿಕೇಟರ್,ವೀಲ್ ಚೇರ್, ಇ.ಸಿ.ಜಿ. ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳುಳ್ಳ ವಾಹನವನ್ನು ನೀಡಲಾಗಿದೆ. ಈ ಎರಡು ಸೌಲಭ್ಯಗಳಿಂದ ಸಮರ್ಪಕ ಆರೋಗ್ಯ ಸೇವೆ ದೊರೆಯಲಿದೆ. ಇವೆಲ್ಲವೂ ಸಮರ್ಪಕವಾಗಿ ಬಳಕೆಯಾಗಲೆಂದು ಆಶಿಸಿ, ಇಲ್ಲಿನ ವೈದ್ಯರು ಕೊರೊನಾ ವಿರುದ್ದ ಹೋರಾಟದಲ್ಲಿ ಸಮರೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆಂದು ಶ್ಲಾಘಿಸಿದರು.

ತಮ್ಮ ಅನುದಾನದಲ್ಲಿ ಶೈಕ್ಷಣಿಕ, ಆರೋಗ್ಯ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈವರೆಗೆ 1.32 ಕೋಟಿರೂ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಆಸ್ಪತ್ರೆ ಮೇಲೆ ಸಾಕಷ್ಟು ಒತ್ತಡವಿತ್ತು. ಪ್ರತ್ಯೇಕ ಫೀವರ್‌ಕ್ಲಿನಿಕ್ ಹಾಗೂ ಆಂಬುಲೆನ್ಸ್ ಅತ್ಯವಶ್ಯವಾಗಿತ್ತು. ಇದನ್ನು ಮನಗಂಡ ಎಂ.ಎಲ್.ಸಿ.ವಿಶ್ವನಾಥರು ತಮ್ಮ ಅನುದಾನದಡಿ ಫೀವರ್‌ಕ್ಲಿನಿಕ್ ಕಟ್ಟಡ ಹಾಗೂ ಆಂಬುಲೆನ್ಸ್ ಸೌಲಭ್ಯ ಕಲ್ಪಿಸಿರುವುದಕ್ಕೆ ಅವರನ್ನು ಅಭಿನಂದಿಸಿ, ಎಂ.ಎಲ್.ಸಿ.ಯವರ ಕನಸಿನ ಚಿಲ್ಕುಂದ ನೀರಾವರಿ ಯೋಜನೆ ಇಂದು ನಾಳೆ ಎಂಬಂತಾಗಿದ್ದು, ಶೀಘ್ರ ಅನುಷ್ಟಾನವಾಗಲಿ ಎಂದರು.

ವೈದ್ಯರ ಸೇವೆ ಅನನ್ಯ:

ಕೊರೊನಾ ನಿಯಂತ್ರಣದಲ್ಲಿ ಇಲ್ಲಿನ ಆಸ್ಪತ್ರೆ ಹಾಗೂ ತಾಲೂಕಿನ ಎಲ್ಲ ವೈದ್ಯರು, ಆರೋಗ್ಯ,ಅಂಗನವಾಡಿ-ಆಶಾ ಕಾರ್ಯಕರ್ತರ ಬದ್ದತೆಯ ನಿರ್ವಹಣೆಯಿಂದ ಕೊರೊನಾ ನಿಯಂತ್ರಣಗೊಳಿಸಿದ್ದರು. ಅಲ್ಲದೆ ಲಸಿಕೆ ನೀಡುವಲ್ಲಿ ಮೊದಲ ಡೋಸ್ ಶೇ.೯೮ರಷ್ಟು, ಎರಡನೇ ಡೋಸ್ ಶೇ.೮೩ರಷ್ಟು ಸಾಧನೆಗೈದಿದ್ದಾರೆಂದು ಪ್ರಶಂಸಿಸಿ, ಮುಂದಿನ ಕೊರೊನಾ ನಿಯಂತ್ರಣಕ್ಕೆ ನಾವೆಲ್ಲರೂ ಸಹಕರಿಸುವ ಜೊತೆಗೆ ಜನರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆವಹಿಸುವಂತೆ ಮನವಿ ಮಾಡಿದರು.

ಶೀಘ್ರ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ:

ಆಸ್ಪತ್ರೆ ಆವರಣದಲ್ಲಿ ಸುಮಾರು 50 ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿರುವ ಆಕ್ಸಿಜನ್‌ಪ್ಲಾಂಟ್ ಹಾಗೂ ಐ.ಟಿ.ಸಿ.ಕಂಪನಿ ನೆರವಿನ ಮತ್ತೊಂದು ಆಕ್ಸಿಜನ್ ಪ್ಲಾಂಟ್ ಕಾಮಗಾರಿ ಮುಗಿದಿದ್ದು, ಎರಡೂ ಪ್ಲಾಂಟ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಶೀಘ್ರ ಉದ್ಘಾಟಿಸಲಾಗುವುದೆಂದರು. ಇದೇ ವೇಳೆ ಹನಗೋಡು ಆಸ್ಪತ್ರೆಗೆ  ವೈಯಕ್ತಿಕವಾಗಿ ನೀಡಿರುವ ಆಂಬುಲೆನ್ಸನ್ನು ಆರೋಗ್ಯ ಇಲಾಖೆ ಸುಪರ್ದಿಗೆ ತೆಗೆದುಕೊಂಡು ನಿರ್ವಹಣೆ ಮಾಡುವಂತೆ ಡಿಎಚ್‌ಓ ಡಾ.ಕೆ.ಎಚ್.ಪ್ರಸಾದ್‌ರಿಗೆ ಸೂಚಿಸಿದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇಅರಸ್ ಮಾತನಾಡಿ ಕೊರೊನಾಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಫೀವರ್ ಕ್ಲಿನಿಕ್ ಅವಶ್ಯವಿತ್ತು. ಇಲ್ಲಿ ಮೂರು ಕೊಠಡಿಗಳಿದ್ದು. ಪ್ರತ್ಯೇಕವಾಗಿ ಪರೀಕ್ಷೆ, ಸಲಹೆ ನೀಡಲು ಸಹಕಾರಿಯಾಗಿದೆ. ಆಂಬುಲೆನ್ಸ್ ನ್ನು ಅವಶ್ಯಕತೆ ಇದ್ದುದ್ದನ್ನು ಮನವರಿಕೆ ಮಾಡಿಕೊಟ್ಟ ಮೇರೆಗೆ ಸುಸಜ್ಜಿತ ಆಂಬುಲೆನ್ಸ್ ನೀಡಿರುವುದು ಸಾಕಷ್ಟು ಅನುಕೂಲವಾಗಿದೆ ಎಂದರು.

ಟಿಎಚ್‌ಓ ಡಾ.ಕೀರ್ತಿಕುಮಾರ್ ಮಾತನಾಡಿದರು. ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಸದಸ್ಯ ಹರೀಶ್, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಹಳ್ಳದಕೊಪ್ಪಲುನಾಗಣ್ಣಗೌಡ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕೆಂಪೇಗೌಡ, ಮುಖಂಡ ಕಣಗಾಲುರಾಮೇಗೌಡ ಇದ್ದರು.

ಮಕ್ಕಳ ಔಷಧಿಗೆ 10 ಲಕ್ಷ: ಇತ್ತೀಚೆಗೆ ಕೊರೊನಾ ಮಕ್ಕಳನ್ನು ಬಾಧಿಸುತ್ತಿದ್ದು, ಮಕ್ಕಳ ಔಷಧ ಕೊರತೆ ಬಗ್ಗೆ ಮಾಹಿತಿ ನೀಡಿದ್ದು. ತಮ್ಮ ಅನುದಾನದಡಿ ಮಕ್ಕಳ ಔಷಧಕ್ಕಾಗಿ ೧೦ ಲಕ್ಷರೂ ನೀಡುವುದಾಗಿ ಎಂ.ಎಲ್.ಸಿ.ವಿಶ್ವನಾಥರು ತಿಳಿಸಿದರು.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.