ರಂಗಾಯಣದಿಂದ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಚಿಣ್ಣರಮೇಳ

Team Udayavani, Apr 17, 2018, 12:49 PM IST

m5-rangayana.jpg

ಹುಣಸೂರು: ಮೈಸೂರಿನ ರಂಗಾಯಣದಿಂದ ಪ್ರಥಮ ಬಾರಿಗೆ ಗ್ರಾಮೀಣ ಭಾಗದಲ್ಲಿ ಚಿಣ್ಣರ ಮೇಳ ಆಯೋಜಿಸಿದ್ದು, ತಾಲೂಕು ಗಾವಡಗೆರೆ ಹಾಗೂ ನಾಗರಹೊಳೆ ಉದ್ಯಾನದ ಡಿ.ಬಿ.ಕುಪ್ಪೆ ಹಾಡಿಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಆ ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಹೊರಟಿದೆ ಎಂದು ರಂಗಾಯಣ ನಿರ್ದೇಶಕಿ ಭಾಗೀರತಿ ಬಾಯಿ ಕದಂ ತಿಳಿಸಿದರು.

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳೆದ 25 ವರ್ಷಗಳಿಂದ ರಂಗಾಯಣ ಮೈಸೂರು ನಗರದ ಮಕ್ಕಳಿಗೆ ಮಾತ್ರ ಚಿಣ್ಣರ ಮೇಳ ಆಯೋಜಿಸಿಕೊಂಡು ಬಂದಿತ್ತು.  ಇಂತಹ ಮೇಳ ಗ್ರಾಮೀಣ ಪ್ರದೇಶದಲ್ಲಿ ನಡೆಸಬೇಕೆಂಬ ಬಹುಜನರ ಬೇಡಿಕೆಯನ್ನು ರಂಗಾಯಣವು ಸಕಾರಾತ್ಮಕವಾಗಿ ಸ್ವೀಕರಿಸಿ, ಪ್ರಥಮ ಬಾರಿಗೆ ತಾಲೂಕಿನ ಗಾವಡಗೆರೆಯಲ್ಲೂ ಹಾಗೂ ಆದಿವಾಸಿ ಮಕ್ಕಳಿಗೂ ಇಂತಹ ಅವಕಾಶ ಕಲ್ಪಿಸಲು ಎಚ್‌.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗಿರಿಜನ ಹಾಡಿಯ ಆಶ್ರಮ ಶಾಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರಂಗಾಯಣದ ಹಿರಿಯ ಕಲಾವಿದ ಕೃಷ್ಣಪ್ರಸಾದ್‌ ಮಾತನಾಡಿ, ಮಕ್ಕಳ ಪ್ರತಿಭೆ ಪೊ›ತ್ಸಾಹಿಸುವ ದೃಷ್ಟಿಯಿಂದ ನಾಟಕದೊಂದಿಗೆ ಮಕ್ಕಳ ಅಭಿರುಚಿಗೆ ತಕ್ಕಂತೆ ಜನಪದ ನೃತ್ಯ, ಗೀತೆ, ಚಿತ್ರಕಲೆ, ಪೇಪರ್‌ ಮೇಕಿಂಗ್‌ ಸೇರಿ ಅನೇಕ ಕಲೆಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಇಲ್ಲಿ ಕಲಿತದ್ದನ್ನು ರಂಗಾಯಣದಲ್ಲೂ, ಅಲ್ಲಿ ಕಲಿತದ್ದನ್ನು ಇಲ್ಲಿಯೂ ಮಕ್ಕಳು ಪರಸ್ಪರ ಪ್ರದರ್ಶನ ಮಾಡಿ ಸಾಂಸ್ಕೃತಿಕ ವಿನಿಮಯ ಮಾಡುವ ಆಲೋಚನೆಯೂ ಇದೆ. ಈ ಎರಡೂ ಕಡೆ ನಡೆಯುವ ಮೇಳದ ಉಸ್ತುವಾರಿಯನ್ನು ವಹಿಸುವರೆಂದರು.

ಚಿಣ್ಣರಿಗೆ ಹಾಡಿ ವಾಸ್ತವ್ಯ: ರಂಗಾಯಣದ ಚಿಣ್ಣರ ಮೇಳದಲ್ಲಿ ತಾಲೂಕಿನ ಮಕ್ಕಳು ಭಾಗವಹಿಸಬಹುದಾಗಿದೆ. 500 ರೂ. ಶುಲ್ಕ ನಿಗದಿಪಡಿಸಿದೆ. ಡಿ.ಬಿ.ಕುಪ್ಪೆಯ ಆಶ್ರಮ ಶಾಲೆಯಲ್ಲಿ ನಡೆಯುವ ಶಿಬಿರದಲ್ಲಿ 10 ಆದಿವಾಸಿ ಮಕ್ಕಳು ಭಾಗವಹಿಸಲಿದ್ದು, ಇವರಿಗೆ ಉಚಿತ ತರಬೇತಿ ನೀಡಲಾಗುವುದು.

ತಾವು ವ್ಯಾಸಂಗ ಮಾಡಿದ ಹುಣಸೂರು ತಾಲೂಕಿನ ಗಾವಡಗೆರೆಯ ಸರ್ಕಾರಿ ಶಾಲೆಯಲ್ಲಿ ಚಿಣ್ಣರ ಮೇಳ ಉದ್ಘಾಟನೆಗೊಂಡಿದ್ದು ಮೇ 5 ರವರೆಗೆ ನಡೆಯಲಿದೆ. ಡಿ.ಬಿ.ಕುಪ್ಪೆಯ ಹಾಡಿಯಲ್ಲಿ ಏ.21ರಂದು ಉಧಾ^ಟನೆಗೊಳ್ಳಲಿದ್ದು, ಮೇ 10ರ ವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಚಿಣ್ಣರ ಮೇಳದ ನಿರ್ದೇಶಕ, ಹಿರಿಯ ಕಲಾವಿದ ಕೃಷ್ಣಪ್ರಸಾದ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್‌ ಇದ್ದರು.

ಟಾಪ್ ನ್ಯೂಸ್

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Marriage of 72-year-old man with 12-year-old girl; The father sold his daughter for money!

Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

6-hunsur’

Hunsur: ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣು

Renukaswamy Case: ದರ್ಶನ್‌ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!

Renukaswamy Case: ದರ್ಶನ್‌ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

Hunasur: ನಾಗರಹೊಳೆ ಉದ್ಯಾನದಲ್ಲಿ ಐದು ವರ್ಷದ ಹುಲಿ ಕಳೆ‌ಬರ ಪತ್ತೆ

Hunasur: ನಾಗರಹೊಳೆ ಉದ್ಯಾನದಲ್ಲಿ ಐದು ವರ್ಷದ ಹುಲಿ ಕಳೆ‌ಬರ ಪತ್ತೆ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Marriage of 72-year-old man with 12-year-old girl; The father sold his daughter for money!

Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

udupi-1

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.