Udayavni Special

ಸದ್ದಿಲ್ಲದೇ ನಡೆದಿದೆ ನಕಲಿ ರಸಗೊಬ್ಬರ ಪೂರೈಕೆ?

ಸರ್ಕಾರ ನಿಷೇಧಿಸಿದ ಗೊಬ್ಬರ ಪೂರೈಸುವವರ ವಿರುದ್ಧ ಕ್ರಮಕ್ಕೆ ಒತ್ತಾಯ

Team Udayavani, May 30, 2020, 5:29 PM IST

30-May-23

ಸಾಂದರ್ಭಿಕ ಚಿತ್ರ

ದೇವದುರ್ಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಂಚಿಸಲು ಸರಕಾರ ನಿರ್ಬಂಧಿಸಿದ ಬಯೋ ಕಂಪನಿ ರಸಗೊಬ್ಬರ ಪೂರೈಸುವ ಜಾಲ ಹಳ್ಳಿಗಳಲ್ಲಿ ಸದ್ದಿಲ್ಲದೇ ವ್ಯಾಪಕವಾಗಿ ನಡೆದಿದೆ.

ಇತ್ತೀಚೆಗೆ ಮರಳು ಮಿಶ್ರಿತ ರಸಗೊಬ್ಬರ ಪೂರೈಸಿರುವ ಬಸವೇಶ್ವರ ಕೃಷಿ ಸೇವಾ, ಎಸ್‌.ಎಂ. ಆಗ್ರೋ ಏಜೆನ್ಸಿ ಎರಡು ಅಂಗಡಿಗಳ ವಿರುದ್ಧ ಲೈಸನ್ಸ್‌ ರದ್ದುಗೊಳಿಸಲು ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಬ್ಯಾನ್‌ ಆಗಿರುವ ಬಯೋ ಕಂಪನಿಯ ರಸಗೊಬ್ಬರ ಮಾರಾಟ ನಡೆಸಿದವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ರೈತ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದಾರೆ.

ರೈತರು ಮುಂಗಾರು ಹಂಗಾಮಿನಲ್ಲಿ ಕಂತಿನ ಮೇಲೆ ಗೊಬ್ಬರ ಪೂರೈಸುವ ಕೆಲ ಅಂಗಡಿಗಳ ಮಾಲೀಕರು ದಲ್ಲಾಳಿಗಳನ್ನು ಹಳ್ಳಿಗಳಿಗೆ ಕಳಿಸಿ ದಂಧೆ ನಡೆಸಿದ್ದಾರೆ. ನಕಲಿ ಬೀಜ, ರಸಗೊಬ್ಬರ ಮಾರಾಟ ಮಾಡುವ ದಂಧೆ ಬೇರೂರಿದೆ. ಇಲಾಖೆಯ ಕೆಲ ಅಧಿಕಾರಿಗಳು ಅಂಗಡಿಗಳ ಮಾಲೀಕರ ಜತೆ ಶಾಮೀಲಾಗಿ ರೈತರಿಗೆ ವಂಚಿಸುವ ದಂಧೆ ಹಿಂದಿನಿಂದಲೂ ನಡೆದಿದೆ.

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರತಿವರ್ಷ ಆಂಧ್ರ ಮೂಲಕ ವ್ಯಕ್ತಿಗಳಿಂದ ನಕಲಿ ಬೀಜ ಪೂರೈಸುವ ಜಾಲ ಹಳ್ಳಿಗಳಲ್ಲಿ ವ್ಯಾಪಕವಾಗಿದೆ. ತಾಲೂಕಿನ ರೈತರು ಅಂಗಡಿಗಳಲ್ಲಿ ಯಾವುದೇ ಬೀಜ, ರಸಗೊಬ್ಬರ, ರಾಸಾಯನಿಕ ಖರೀದಿಸಿದರೇ ಟಿನ್‌ ನಂಬರ್‌ ಬಿಲ್‌ ನೀಡದೇ ಬಿಳಿ ಹಾಳೆಯಲ್ಲಿ ರಶೀದಿ ನೀಡಿ ರೈತರನ್ನು ವಂಚಿಸುತ್ತಿದೆ. ಬೆಳೆ ಬೆಳೆದು ಮಾರಾಟ ನಂತರವೇ ಹಣ ಪಾವತಿಸುವ ಪದ್ದತಿ ಜಾರಿಯಲ್ಲಿದೆ. ಬಿತ್ತನೆ ವೇಳೆ ರೈತರಿಗೆ ಅನುಕೂಲ ಮಾಡುವ ನೆಪದಲ್ಲಿ ಇಳುವರಿ ವ್ಯತ್ಯಾಸ ಬೆಳೆ ನಷ್ಟವಾದರೆ ಯಾವುದೇ ರಸೀದಿ ಇಲ್ಲದ ಇಂತಹ ಬಿತ್ತನೆ ಬೀಜ ಖರೀದಿಸಿದ ರೈತರು ಬೆಳೆನಷ್ಟ ಪರಿಹಾರದಿಂದ ವಂಚಿತರಾಗುವುದು ಸಾಮಾನ್ಯವಾಗಿದೆ.

ಅಂಗಡಿಗಳ ಮಾಲೀಕರ ದಲ್ಲಾಳಿಗಳು ಹಳ್ಳಿ, ಹಳ್ಳಿಗಳಿಗೆ ಅಲೆದು ಈ ಕಂಪನಿ ಬೀಜ, ರಸಗೊಬ್ಬರ ಹಾಕಿ ಬೆಳೆದರೇ ಈ ಬಾರಿ ಉತ್ತಮ ಫಸಲು ಬರುತ್ತದೆ ಎಂದು ನಂಬಿಸಿ ರೈತರನ್ನು ವಂಚಿಸುವ ಕೆಲಸ ಸದ್ದಿಲ್ಲದೇ ನಡೆದಿದೆ. ನಕಲಿ ಬೀಜ ಮಾರಾಟ ನಡೆಸಿದ ಅಂಗಡಿಗಳ ಮಾಲೀಕರು ವಿದೇಶ ಪ್ರವಾಸದಲ್ಲಿ ಮೋಜು ಮಸ್ತಿಯಲ್ಲಿ ಲಾಭ ಗಳಿಸಿದ್ದಾರೆ. ಸರಕಾರ ಬಯೋ ಕಂಪನಿ ರಸಗೊಬ್ಬರವನ್ನು ಬ್ಯಾನ್‌ ಮಾಡಲಾಗಿದೆ. ಇಲ್ಲಿನ ಕೆಲ ಅಂಗಡಿಗಳ ಮಾಲೀಕರು ಅನುಮತಿ ಇಲ್ಲದೇ ಗೊಬ್ಬರ ಮಾರಾಟ ದಂಧೆ ನಡೆಸಿದ್ದು, ಅಕ್ರಮ ನಡೆಸುವವರ ವಿರುದ್ಧ ಕೃಷಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಮಿಶ್ರಿತ ಗೊಬ್ಬರ ಮಾರಾಟ ಮಾಡಿರುವ ಎರಡು ಅಂಗಡಿಗಳ ಮಾಲೀಕರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು. ಇಲ್ಲವಾದಲ್ಲಿ ತಹಶೀಲ್ದಾರ್‌ ಕಚೇರಿ ಮುಂದೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ.
ಮಲ್ಲಯ್ಯ ಕಟ್ಟಿಮನಿ
ಕೆಆರ್‌ಎಸ್‌ ತಾಲೂಕಾಧ್ಯಕ್ಷರು.

ಮರಳು ಮಿಶ್ರಿತ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳ ಲೈಸನ್ಸ್‌ ರದ್ದುಗೊಳಿಸಲು ಸೂಚಿಸಲಾಗಿದೆ. ನಕಲಿ ಬೀಜ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ಎಲ್ಲಾ ಅಂಗಡಿಗಳ ಮಾಲೀಕರಿಗೆ ಮಾರಾಟದ ದರದ ಪಟ್ಟಿಯನ್ನು ಅಳವಡಿಸುವಂತೆ ಆದೇಶಿಸಲಾಗಿದೆ.
ಡಾ.ಎಸ್‌.ಪ್ರಿಯಾಂಕ್‌
ಸಹಾಯಕ ಕೃಷಿ ನಿರ್ದೇಶಕರು

ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

28

ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

PM Narendra Modi to attend UN climate meet at Glasgow, environment minister says

ವಿಶ್ವಸಂಸ್ಥೆಯ ಗ್ಲ್ಯಾಸ್ಗೋ ಹವಾಮಾನ ಶೃಂಗಸಭೆಗೆ ಪ್ರಧಾನಿ ಮೋದಿ

1-222

ನಗರಗಳಿಗೆ ಸೀಮಿತವಾದ ಬಿಜೆಪಿಯನ್ನು ಪ್ರತಿ ಹಳ್ಳಿಗಳಿಗೆ ತಲುಪಿಸಿದ್ದು ಯಡಿಯೂರಪ್ಪ

25

ಮಲೆನಾಡಿನಲ್ಲಿ ಮಳೆ ಅಬ್ಬರ: ಕಾಫಿ ಬೆಳೆಗಾರರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rayachuru news

ಮಳಿಗೆ ದುರಸ್ತಿ, ಮರು ಹರಾಜಿನತ್ತ ನಗರಸಭೆ ಚಿತ್ತ

rayachuru news

ಸಿಂಧನೂರು ಕ್ಷೇತ್ರದಲ್ಲಿ “ಎನ್‌ಸಿಪಿ’ ಕಸರತ್ತು ಶುರು

25

ಪುರಸಭೆ ಹೈಟೆಕ್‌ ಕಟ್ಟಡ ಹಸ್ತಾಂತರಕ್ಕೆ ಗ್ರಹಣ

25

ರಾಜ್ಯ ಹೆದ್ದಾರಿ ಮೇಲೆ ಗಲೀಜು ನೀರು

24

ಸರ್ಕಾರದ ನಿಯಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

bidkalkatte news

ಬಿದ್ಕಲ್‌ಕಟ್ಟೆ : ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಬಿಸಿಯೂಟ ಸವಿದ ವಿದ್ಯಾರ್ಥಿಗಳು

free school

ಉಚಿತ ಪಾಠ-ಪ್ರವಚನ ತರಗತಿಗಳ ಉದ್ಘಾಟನೆ

28

ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.