ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ
Team Udayavani, Dec 8, 2020, 4:14 PM IST
ರಾಯಚೂರು: ಜಿಲ್ಲೆಯಲ್ಲಿ 173 ಗ್ರಾಪಂಗಳಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆಈಗಾಗಲೇ ನೀತಿ ಸಂಹಿತೆ ಜಾರಿಯಾಗಿದ್ದು,ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡುಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು,ಮೊದಲ ಹಂತದಲ್ಲಿ ರಾಯಚೂರು, ಮಾನ್ವಿ,ದೇವದುರ್ಗ, ಸಿರವಾರ ತಾಲ್ಲೂಕಿನ ವ್ಯಾಪ್ತಿಯ 93 ಪಂಚಾಯಿತಿಗಳಿಗೆ ಡಿ.22ರಂದು ಚುನಾವಣೆ ನಡೆಯಲಿದೆ. ಎರಡನೇಹಂತದಲ್ಲಿ 83 ಗ್ರಾಪಂಗಳಿಗೆ ಡಿ.27ರಂದುಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆಶುರುವಾಗಿದ್ದು, ಉಮೇದುವಾರಿಕೆ ಸಲ್ಲಿಕೆಗೆ ಡಿ.11ರಂದು ಕೊನೆ ದಿನ. ಡಿ.12ರಂದುನಾಮಪತ್ರ ಪರಿಶೀಲನೆ, 14ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ.ಮರುಮತದಾನದ ಅವಶ್ಯತೆ ಬಿದ್ದರೆ, 24ರಂದು ನಡೆಯಲಾಗುವುದು ಎಂದರು.
2ನೇ ಹಂತದಲ್ಲಿ ಲಿಂಗಸುಗೂರು,ಸಿಂಧನೂರು, ಮಸ್ಕಿ ತಾಲ್ಲೂಕು ವ್ಯಾಪ್ತಿಯ 80 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತಕ್ಕೆ 17ರಂದು ನಾಮಪತ್ರ ಪರಿಶೀಲನೆ, 19ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿರುತ್ತದೆ.27ರಂದು ಮತದಾನ ನಡೆಯಲಿದೆ.ಅಗತ್ಯ ಬಿದ್ದರೆ 29ರಂದು ಮರುಮತದಾನನಡೆಯಲಿದೆ. 30ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯನಡೆಯಲಿದೆ ಎಂದರು.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಪ್ರಕ್ರಿಯೆ ನಡೆಸಲಾಗುವುದು. ಪ್ರತಿಗ್ರಾಪಂ ಚುನಾವಣೆಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯನ್ನು ನಿಯೋಜಿಸಲಾಗಿದೆ. ಈಗಾಗಲೇ ಚುನಾವಣಾಧಿಕಾರಿಗಳಿಗೂ ತರಬೇತಿ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು. ಎಡಿಸಿ ಕೆ.ಎಚ್.ದುರಗೇಶ ಗೋಷ್ಠಿಯಲ್ಲಿದ್ದರು.
ಆರು ಗ್ರಾಪಂಗಳಿಗಿಲ್ಲ ಚುನಾವಣೆ: ಜಿಲ್ಲೆಯಲ್ಲಿ ಒಟ್ಟು 179 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿಕಾರಣಾಂತರಗಳಿಂದ ಆರುಪಂಚಾಯಿತಿಗಳಿಗೆ ಚುನಾವಣೆನಡೆಯುತ್ತಿಲ್ಲ. ದೇವದುರ್ಗ ತಾಲ್ಲೂಕಿನಶಾವಂತಗೇರಾ, ಹೇಮನಾಳ ಗ್ರಾಪಂಗಳ ಪ್ರಕರಣ ಉತ್ಛ ನ್ಯಾಯಾಲಯದಲ್ಲಿಬಾಕಿ ಉಳಿದಿವೆ. ಇದೇ ತಾಲ್ಲೂಕಿನಜಾಲಹಳ್ಳಿ, ಕರಡಿಗುಡ್ಡಿ ಹಾಗೂ ಚಿಂಚೋಡಿ ಗ್ರಾಪಂಗಳು ಪಟ್ಟಣ ಪಂಚಾಯಿತಿಗಳೆಂದು ಮೇಲ್ದರ್ಜೆಗೇರಿಸಿದ ಕಾರಣ ಚುನಾವಣೆನಡೆಸದಂತೆ ಚುನಾವಣೆ ಆಯೋಗ ನಿರ್ದೇಶನ ನೀಡಿದೆ. ಲಿಂಗಸುಗೂರುತಾಲ್ಲೂಕಿನ ರೋಡಲಬಂಡಾ ಗ್ರಾಪಂ ಅವಧಿ 2021ರ ಮೇ ತಿಂಗಳಲ್ಲಿ ಮುಗಿಯುವ ಕಾರಣಕ್ಕೆ ಚುನಾವಣೆ ಕೈಬಿಡಲಾಗಿದೆ.
ಮಸ್ಕಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿರುವ ವಿಚಾರ ಗಮನಕ್ಕಿದೆ. 5ಎ ಕಾಲುವೆ ಜಾರಿಗೆಈಗಾಗಲೇ ಉಸ್ತುವಾರಿ ಸಚಿವರು, ಮುಖ್ಯ ಇಂಜಿನಿಯರ್‌ಭರವಸೆ ನೀಡಿದ್ದಾರೆ. ತಾಂತ್ರಿಕ ತಜ್ಞರ ವರದಿ ನೀಡದ ವಿನಃ ಅಲ್ಲಿ ಕಾಮಗಾರಿ ಆರಂಭಿಸುವುದು ಕಷ್ಟ. ಹೀಗಾಗಿ ವರದಿ ಬರುವವರೆಗೆ ಕಾಯುವಂತೆ ಸ್ಥಳೀಯರಿಗೆ ಮನವರಿಕೆ ಮಾಡಲಾಗುವುದು. ಗ್ರಾಮಗಳಿಗೆ ತೆರಳಿ ಜನರಿಗೆ ತಿಳಿ ಹೇಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. -ಆರ್.ವೆಂಕಟೇಶಕುಮಾರ, ಜಿಲ್ಲಾಧಿಕಾರಿ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444