ಸುಳ್ಳು ವದಂತಿ ಹಬ್ಬಿಸಿದರೆ ಕಠಿಣ ಕ್ರಮ

15ಸ್ವಯಂ ಸೇವಕರು ಸೇವೆಗೆ ಸನ್ನದ್ಧಅಗತ್ಯ ಮಾರ್ಗಸೂಚಿಗಳ ಹೊತ್ತಿಗೆ ಬಿಡುಗಡೆ

Team Udayavani, Mar 23, 2020, 4:51 PM IST

23-March-23

ರಾಯಚೂರು: ಕೋವಿಡ್-19  ವೈರಸ್‌ ಕುರಿತು ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹಬ್ಬಿಸುವವರ ಮೇಲೆ ವಿಶೇಷ ನಿಗಾವಹಿಸಲು ರಾಯಚೂರು ಕೋವಿಡ್-19  ಸೈನಿಕರ ತಂಡ ರಚಿಸಲಾಗಿದೆ. ಈ ಕಾರ್ಯನಿರ್ವಹಣೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಉತ್ಸಾಹಿ ಯುವಕರ ಸ್ವಯಂ ಸೇವಕ ಪಡೆಯೊಂದು ಜಿಲ್ಲೆಯಲ್ಲಿ ಸನ್ನದ್ಧಗೊಂಡಿದೆ.

ಈ ತಂಡವು ಕೋವಿಡ್-19  ವೈರಾಣು ಹರಡುವಿಕೆ ಕುರಿತು ವಿವಿಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ವದಂತಿಗಳನ್ನು ಪತ್ತೆ ಹಚ್ಚಿ ಅವುಗಳ ನೈಜತೆ ಪರಾಮರ್ಶಿಸಿ ನಿಖರ ಮಾಹಿತಿ ನೀಡಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್‌ ಎಚ್‌.ಸಿ ತಿಳಿಸಿದರು.

ಈ ಕುರಿತು ನಗರದ ವಾರ್ತಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವುದು ಕೋವಿಡ್-19  ಸೈನಿಕರ ಕೆಲಸವಾಗಿದೆ. ಅದಕ್ಕಾಗಿ ಜಿಲ್ಲಾಮಟ್ಟದಲ್ಲಿ 15 ಸ್ವಯಂ ಸೇವಕರು ಕೊರೊನಾ ಸೈನಿಕರಾಗಲು ಆಸಕ್ತರಾಗಿ ಮುಂದೆ ಬಂದಿದ್ದಾರೆ ಎಂದು ತಿಳಿಸಿದರು. ಅಂತೆಯೇ ಪ್ರತಿ ತಾಲೂಕಿನಲ್ಲಿಯೂ 20 ಜನರ ತಂಡವು ನಿಗಾ ವಹಿಸಲಿದೆ. ಆಯ್ಕೆಯಾದ ಸೈನಿಕರು ಕೊರೋನಾ ವದಂತಿಗಳ ವಿರುದ್ಧ ಈ ಅಭಿಯಾನ ಜಾರಿಗೆ ತರಲಾಗಿದೆ.

ಈಗಾಗಲೇ ಕೋವಿಡ್-19  ಹರಡಿರುವ ಕುರಿತು ಎರಡು ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಬಗ್ಗೆ ಪತ್ತೆಯಾಗಿದ್ದು, ಗಾಳಿ ಸುದ್ದಿ ಹಾಗೂ ಸುಳ್ಳು ವದಂತಿಗಳನ್ನು ಹಬ್ಬಿಸಿದರೆ ದೂರು ದಾಖಲಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ನಾಗರಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಸುಳ್ಳು ಸುದ್ದಿ ಹಬ್ಬಿಸುವವರ ಕುರಿತು ಮಾಹಿತಿ ನೀಡಬೇಕು. ಇದೇ ವೇಳೆ ಮಾರ್ಗಸೂಚಿಗಳ ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಜಿಲ್ಲಾ ಯುವ ರೆಡ್‌ ಕ್ರಾಸ್‌ ಸಂಚಾಲಕ ವಿದ್ಯಾಸಾಗರ, ರೆಡ್‌ಕ್ರಾಸ್‌ನ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದಾರ, ಐಎಚ್‌ಒನ ಹ್ಯುಮಿಟೇಷನ್‌ ಆರ್ಗನೈಸೇಷನ್‌ನ ಓಂಕಾರ್‌ ಪಾಟೀಲ್‌, ದಿಗ್ವಿಜಯ ಎಚ್‌. ತಲಸ್ತೆ, ರುಷಿಕೇಶ್‌, ನಾಗೇಶ್‌ ವಾಡಿಕರ್‌, ಭಾರತೀಯ ರೆಡ್‌ ಕ್ರಾಸ್‌ನ ಟಿ.ರಾಮಯ್ಯ ನಾಯಕ, ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ರೆಡ್‌ ಕ್ರಾಸ್‌ನ ಸದಸ್ಯ ಶ್ರೀನಿವಾಸ ರಾಯಚೂರಕರ್‌, ಈರಣ್ಣ ಬೆಂಗಾಲಿ, ನಮ್ಮ ರಾಯಚೂರು ಫೌಂಡೇಷನ್‌ ಅಧ್ಯಕ್ಷ ಪ್ರಭು ಯದ್ಲಾಪುರ ಇತರರಿದ್ದರು.

ಟಾಪ್ ನ್ಯೂಸ್

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lingasugur; Akshara Dasoha officer attempted

Lingasugur; ಅಕ್ಷರ ದಾಸೋಹ ಅಧಿಕಾರಿ ಆತ್ಮಹತ್ಯೆಗೆ ಯತ್ನ

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: Power outage; Voting by torchlight

Raichur: ವಿದ್ಯುತ್ ಅಡಚಣೆ; ಟಾರ್ಚ್ ಬೆಳಕಿನಲ್ಲಿ ಮತದಾನ

Sindhanur: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿಗೆ ಎಂಎಲ್ಸಿ ಟಿಕೆಟ್

Sindhanur: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿಗೆ ಎಂಎಲ್ಸಿ ಟಿಕೆಟ್

Sindhanuru; ಕಾಲೇಜು ಮಹಡಿ ಮೇಲಿಂದ ಬಿದ್ದು ಹೊರಗುತ್ತಿಗೆ ನೌಕರ ಸಾವು

Sindhanuru; ಕಾಲೇಜು ಮಹಡಿ ಮೇಲಿಂದ ಬಿದ್ದು ಹೊರಗುತ್ತಿಗೆ ನೌಕರ ಸಾವು

MUST WATCH

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

ಹೊಸ ಸೇರ್ಪಡೆ

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

8

ವಿಷ ಸೇವನೆ : ಪದವಿ ವಿದ್ಯಾರ್ಥಿನಿಯ ಸಾವು 

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

6

Bantwal: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.