43 ಡಿಗ್ರಿ ತಲುಪಿದ ಉಷ್ಣಾಂಶ

Team Udayavani, May 26, 2020, 6:25 AM IST

43 ಡಿಗ್ರಿ ತಲುಪಿದ ಉಷ್ಣಾಂಶ

ರಾಯಚೂರು: ಕಳೆದ ವರ್ಷಕ್ಕಿಂತ ಸರಾಸರಿ ಬಿಸಿಲಿನ ಪ್ರಮಾಣ ಕಡಿಮೆ ಇದ್ದರೂ ಈ ಬಾರಿಯೂ 43 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಲಾಕ್‌ಡೌನ್‌ ಮಧ್ಯೆ ಬೇಸಿಗೆ ಪೂರ್ತಿ ಮನೆಯಲ್ಲೇ ಕಳೆದ ಜನರಿಗೆ ಕೊನೆಯಲ್ಲಿ ಬೇಸಿಗೆ ಬಿಸಿ ತಟ್ಟಿದೆ.

ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮಳೆಯ ಹಿತಾನುಭವ ಆಗುತ್ತಿದ್ದರೆ; ಜಿಲ್ಲೆಯಲ್ಲಿ ಮಾತ್ರ ಉರಿ ಬಿಸಿಲಿಗೆ ಜನ ಬಸವಳಿದಿದ್ದಾರೆ. ಮನೆಗಳಲ್ಲಿದ್ದರೂ ಬಿಸಿ ಗಾಳಿಗೆ ತತ್ತರಿಸುವಂತಾಗಿದೆ. ಹಿಂದಿನ ಬೇಸಿಗೆಗೆ ಹೋಲಿಸಿದರೆ ಈ ಬಾರಿ ಸರಾಸರಿ 0.5ನಷ್ಟು ಉಷ್ಣಾಂಶ ಕಡಿಮೆಯಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಹಿಂದಿನ ವರ್ಷ ಏಪ್ರಿಲ್‌ನಲ್ಲೇ ಬಿಸಿಲಿನ ಪ್ರಖರತೆ 42 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿತ್ತು. ಮೇನಲ್ಲಿ ಸಾಕಷ್ಟು ದಿನಗಳ ಕಾಲ 43 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿತ್ತು. ಈ ವರ್ಷ ಮಾರ್ಚ್‌ ಅಂತ್ಯಕ್ಕೆ ಲಾಕ್‌ಡೌನ್‌ ಶುರುವಾದ ಕಾರಣ ಜನ ಮನೆಯಿಂದ ಹೊರ ಬಂದಿಲ್ಲ. ಕೈಗಾರಿಕೆಗಳು, ವಾಹನ ದಟ್ಟಣೆಗಳಿಲ್ಲದೆ ವಾಯು ಮಾಲಿನ್ಯವೂ ಕುಗ್ಗಿ ಬಿಸಿಲಿನ ಪ್ರಮಾಣ ಕಡಿಮೆಯಾದ ಸಾಧ್ಯತೆಗಳಿವೆ. ಮೇ ತಿಂಗಳಾಂತ್ಯಕ್ಕೆ ಬೇಸಿಗೆ ಮುಗಿಯುತ್ತಿದ್ದಂತೆ ಉಷ್ಣಾಂಶದಲ್ಲಿ ಮತ್ತೆ ಏರಿಕೆ ಕಂಡಿದ್ದು, 43 ಡಿಗ್ರಿ ಸೆಲ್ಸಿಯಸ್‌ ಬಿಸಿಲು  ದಾಖಲಾಗಿದೆ.

ಕಲಬುರಗಿಯಲ್ಲಿ 44 ಡಿಗ್ರಿ: ಇನ್ನು ಕಲಬುರಗಿ ಜಿಲ್ಲೆಯಲ್ಲಿ 44.1 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿದೆ. ಬೀದರ್‌ 41.6, ವಿಜಯಪುರ 41.5 ಸೆಲ್ಸಿಯಸ್‌ ದಾಖಲಾಗಿದೆ. ಹೈ-ಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ 39.5 ಉಷ್ಣಾಂಶ ದಾಖಲಾಗಿದೆ. ಆದರೆ, ಅತಿ ಹೆಚ್ಚು ಬಿಸಿಲು ದಾಖಲಾಗಿರುವ ಜಿಲ್ಲೆಗಳ ಸಾಲಿನಲ್ಲಿ ಕಲಬುರಗಿ ಮೊದಲಾದರೆ ರಾಯಚೂರು ನಂತರದಲ್ಲಿದೆ.

ಕಳೆದ ವರ್ಷದ ಬಿಸಿಲಿನ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಸರಾಸರಿ 0.5 ಉಷ್ಣಾಂಶ ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ಉಷ್ಣಾಂಶ ಹೆಚ್ಚಾಗಿ 43 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಕನಿಷ್ಠ 29 ಡಿಗ್ರಿ ಸೆಲ್ಸಿಯಸ್‌ ಇದೆ. ಜೂನ್‌ನಿಂದ ಮಳೆಗಾಲ ಶುರುವಾಗಲಿದ್ದು, ಬಿಸಿಲಿನ ಪ್ರಮಾಣ ಕಡಿಮೆಯಾಗಲಿದೆ.  ಡಾ| ಶಾಂತಪ್ಪ ದುತ್ತರಗಾವಿ, ತಾಂತ್ರಿಕ ಅಧಿಕಾರಿ, ಹವಾಮಾನ ವಿಭಾಗ, ಕೃಷಿ ವಿವಿ ರಾಯಚೂರು

ಟಾಪ್ ನ್ಯೂಸ್

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Kalasa ನೀರುಪಾಲಾಗಿದ್ದ ಯುವಕನ ಶವವನ್ನು ಪತ್ತೆಹಚ್ಚಿದ ಉಜಿರೆ-ಬೆಳಾಲು ಶೌರ್ಯ ಘಟಕ

Kalasa ನೀರುಪಾಲಾಗಿದ್ದ ಯುವಕನ ಶವವನ್ನು ಪತ್ತೆಹಚ್ಚಿದ ಉಜಿರೆ-ಬೆಳಾಲು ಶೌರ್ಯ ಘಟಕ

ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Mumbai; ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Sullia ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Sullia ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Aranthodu ಕಾಂತಮಂಗಲ : ಕೊಲೆ ಆರೋಪಿಯ ಬಂಧನ

Aranthodu ಕಾಂತಮಂಗಲ : ಕೊಲೆ ಆರೋಪಿಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಏಳನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ

June ಅಂತ್ಯದೊಳಗೆ 7ನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ

Raichur; 371ಜೆ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Raichur; 371ಜೆ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Raichur: ಪ್ರೀತಿ ನಿರಾಕರಿಸಿದಕ್ಕಾಗಿ ಯುವಕ ಆತ್ಮಹತ್ಯೆ

Raichur: ಪ್ರೀತಿ ನಿರಾಕರಿಸಿದಕ್ಕಾಗಿ ಯುವಕ ಆತ್ಮಹತ್ಯೆ

court

ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಸಜೆ: ಸಂತ್ರಸ್ತ ಬಾಲಕಿಗೆ 9 ಲಕ್ಷ ರೂ. ಪರಿಹಾರ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Kalasa ನೀರುಪಾಲಾಗಿದ್ದ ಯುವಕನ ಶವವನ್ನು ಪತ್ತೆಹಚ್ಚಿದ ಉಜಿರೆ-ಬೆಳಾಲು ಶೌರ್ಯ ಘಟಕ

Kalasa ನೀರುಪಾಲಾಗಿದ್ದ ಯುವಕನ ಶವವನ್ನು ಪತ್ತೆಹಚ್ಚಿದ ಉಜಿರೆ-ಬೆಳಾಲು ಶೌರ್ಯ ಘಟಕ

ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Mumbai; ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.