Toll Work: ಅರ್ಧಂಬರ್ಧ ಕಾಮಗಾರಿಗೆ ಪೂರ್ಣ ಟೋಲ್‌?


Team Udayavani, Dec 11, 2023, 4:39 PM IST

Toll Work: ಅರ್ಧಂಬರ್ಧ ಕಾಮಗಾರಿಗೆ ಪೂರ್ಣ ಟೋಲ್‌?

ರಾಮನಗರ: ಬೆಂಗಳೂರು, ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಸಂಚಾರ ಪ್ರಾರಂಭವಾಗಿ ವರ್ಷ ಕಳೆಯುತ್ತಾ ಬಂದಿದೆಯಾದರೂ, ಕಾಮಗಾರಿ ಮಾತ್ರ ಪೂರ್ಣ ಗೊಂಡಿಲ್ಲ, ಅಗತ್ಯ ಸೌಲಭ್ಯ, ಪ್ರಯಾಣಿಕರ ಸುರಕ್ಷತಾ ಕ್ರಮಗಳು ಯಾವುದೂ ಬಗೆಹರಿದಿಲ್ಲವಾದರೂ, ಪೂರ್ಣ ಪ್ರಮಾಣದ ಟೋಲ್‌ ಸಂಗ್ರಹಿಸುತ್ತಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು.., ರಾಜ್ಯದ ಮಹತ್ವಾಕಾಂಕ್ಷಿ ಹೆದ್ದಾರಿ ಎನಿ ಸಿದ್ದ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಮ ಗಾರಿಯನ್ನು ರಾಜ್ಯದಲ್ಲಿ ಯಾವ ರಾಷ್ಟ್ರೀಯ ಹೆದ್ದಾ ರಿಯೂ ಮಾಡದ ರೀತಿಯಲ್ಲಿ ಅಭಿವೃದ್ಧಿ ಪಡಿ ಸುವುದಾಗಿ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಪ್ರಾರಂಭದ ದಿನಗಳಲ್ಲಿ ಹೇಳಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದೆ. ಸಂಚಾರ ಆರಂಭಗೊಂಡು ವರ್ಷಗಳೇ ಕಳೆದಿವೆಯಾದರೂ ಹೆದ್ದಾರಿ ಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ದೊರೆಯ ಬೇಕಾದ ಯಾವುದೇ ಸೌಲಭ್ಯಗಳು ಸಿಗದಾಗಿದೆ.

ಗೌಪ್ಯವಾಗೇ ಉಳಿದ ವರದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಸಾಲು ಸಾಲು ಅಪ ಘಾತಗಳು ಸಂಭವಿಸಿದ ಪರಿಣಾಮ ರಾಜ್ಯ ಸರ್ಕಾರದ ಅಧಿಕಾರಿಗಳು, ಕೇಂದ್ರ ಹೆದ್ದಾರಿ ಪ್ರಾಧಿಕಾರ, ಪೊಲೀಸ್‌ ಇಲಾಖೆ ಹೀಗೆ ಮೂರರಿಂದ ನಾಲ್ಕುತಂಡ ಹೆದ್ದಾರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಯಾದರೂ, ಈ ವರದಿಯಲ್ಲಿ ಏನಿದೆ, ಹೆದ್ದಾರಿ ಅವ್ಯವಸ್ಥೆ ಸುಧಾರಣೆಗೆ ಈ ಸಮಿತಿಗಳು ಮಾಡಿರುವ ಶಿಫಾರಸ್ಸು ಗಳೇನು ಎಂಬುದು ಗೌಪ್ಯವಾಗೇ ಉಳಿ ದಿದೆ. ಇನ್ನು ಪೊಲೀಸ್‌ ಇಲಾಖೆ ವೇಗಮಿತಿ ವಿಧಿಸಿ ಪ್ರಯಾಣಿಕರಿಗೆ ದಂಡ ವಿಧಿಸಿದ ಬಳಿಕ ನಿಧಾನವಾಗಿ ಸಂಚರಿಸಿ ಎಂಬ ಸಲಹೆಯನ್ನು ಪ್ರಯಾಣಿಕರಿಗೆ ಸಲಹೆ ನೀಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ದಂಡವಿಧಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸುಧಾರಣೆ ಇದುವರೆಗೆ ಕಂಡಿಲ್ಲ.

ಅಪಘಾತ ಕಡಿಮೆಯಾಗಿದ್ದೇ ಸಾಧನೆ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಾಲು ಸಾಲು ಅಪ ಘಾತ ಸಂಭವಿಸಿದ ಪರಿ ಣಾಮ ಡೆತ್‌ವೇ ಎಂದು ವ್ಯಾಖ್ಯಾನಿಸಲಾಗಿತ್ತು. ಪೊಲೀಸ್‌ ಇಲಾಖೆ ಎಚ್ಚೆತ್ತು ಕೊಂಡು ರಸ್ತೆಗಿಳಿದ ಪರಿ ಣಾಮ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಹೊರತು ಪಡಿಸಿದರೆ, ಬೆಂಗಳೂರಿನಿಂದ ಮೈಸೂರು ವರೆಗಿನ 119ಕಿ.ಮೀ. ಉದ್ದದ ಹೆದ್ದಾರಿಯಲ್ಲಿ ಎರಡು ಕಡೆ ಏಕಮುಖ ಸಂಚಾರಕ್ಕೆ 320 ರೂ. ಟೋಲ್‌ ಪಾವತಿಸಿ ಪ್ರಯಾಣಿಸಿ ಮತ್ತೆ ಟೋಲ್‌ ಪಾವತಿಸೇ ಹಿಂದಿರುಗುತ್ತಿರುವ ಪ್ರಯಾಣಿಕರಿಗೆ ಯಾವುದೇ ಸೌಲಭ್ಯ ಸಿಗದೆ ಪರದಾಡಿಕೊಂಡೇ ತಿರುಗಾಡಬೇಕಿದೆ.

ಹೆಸರಿಗೆ ಅನ್ವರ್ಥ: ಬೆಂಗಳೂರು ಮೈಸೂರು ಎಕ್ಸ್‌ ಪ್ರಸ್‌ ವೇ ನಲ್ಲಿ ಸಾಲು ಸಾಲು ಅಪಘಾತಗಳು ಸಂಭ ವಿಸ ಲಾರಂಭಿಸಿದ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್‌ ವೇನಲ್ಲಿ ವೇಗದ ಮಿತಿಯನ್ನು 100ಕಿಮೀಗೆ ನಿಗದಿ ಗೊಳಿಸ ಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಟೀಕೆ ವ್ಯಕ್ತವಾದಾಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದು ಎಕ್ಸ್‌ಪ್ರೆಸ್‌ ವೇ ಅಲ್ಲ, ಆಕ್ಸೆಸ್‌ ಕಂಟ್ರೋಲ್‌ ಹೈವೆ ಎಂದು ಸಮರ್ಥನೆ ನೀಡಿ ದರು. ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುವ ಪ್ರಕಾರ ಇದು ಆಕ್ಸೆಸ್‌ ಕಂಟ್ರೋಲ್‌ ಹೈವೆಯಾಗದೆ, ಯಾರು ಎಲ್ಲಿ ಬೇಕಾದರೂ ಹೆದ್ದಾರಿಗೆ ಪ್ರವೇಶ ಪಡೆಯುವ, ಹೇಗೆ ಬೇಕಾದರು ಹೊರಗೆ ಹೋಗುವಂತಾಗಿದ್ದು, ಆಕ್ಸೆಸ್‌ ಕಂಟ್ರೋಲ್‌ ಹೈವೆ ಎಂಬ ಹೆಸರನ್ನು ಅಣಕಿಸುತ್ತಿದೆ.

ಜಾರಿಯಾಗದ ಹೆಚ್ಚುವರಿ ಯೋಜನೆಗಳು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಸಮೀಪ ಕೆಫೆಟೇರಿಯಾ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ. ಪ್ರವೇಶಕ್ಕೆ ನಿರ್ಬಂಧಿಸುವ ಉದ್ದೇಶದಿಂದ ಕ್ಲೋಸ್‌ ಟೋಲ್‌ಗ‌ಳ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಲಾ ಗಿತ್ತಾದರೂ ವರ್ಷ ಕಳೆದರೂ ಈ ಕಾಮಗಾರಿಗಳು ಆರಂಭಗೊಂಡಿಲ್ಲ. ಕ್ಲೋಸ್‌ಟೋಲ್‌ಗೆ ಜಾಗ ಗುರುತಿ ಸಲಾಗಿದೆಯಾದರೂ ಭೂಸ್ವಾಧೀನ ಪ್ರಕ್ರಿಯೆ ನಡೆ ಯದ ಪರಿಣಾಮ ಅಪಾಯಕಾರಿ ಎಂಟ್ರಿ ಎಕ್ಸೈಟ್‌ ಗಳ ಸಮಸ್ಯೆ ಹಾಗೇ ಮುಂದುವರೆದಿದೆ. ಈ ಸಮಸ್ಯೆ ಸರಿಪಡಿಸುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಟೋಲ್‌ ಪ್ರವೇಶದಿಂದ ಸವಾರರು ತಪ್ಪಿಸಿ ಕೊಳ್ಳುತ್ತಿ ದ್ದಾರೆ ಎಂಬ ಕಾರಣ ನೀಡಿ, ಹೆದ್ದಾರಿ ಪ್ರಾಧಿಕಾರವು, ಎಂಟ್ರಿ ಎಕ್ಸಿಟ್‌ಗಳನ್ನು ಸಾಕಷ್ಟು ಕಡಿತಗೊಳಿಸಿದ್ದಾರೆ. ಕೆಲವೆಡೆ ಎಂಟ್ರಿ ಅಷ್ಟನ್ನೆ ನೀಡಿ ದ್ದಾರೆ. ಹೀಗಾಗಿ ತುರ್ತು ಸನ್ನಿವೇಶಗಳಲ್ಲಿ ಆ್ಯಂಬುಲೆನ್ಸ್‌, ಟೋಯಿಂಗ್‌ ಗಾಡಿಗಳು ಎಕ್ಸ್‌ಪ್ರೆಸ್‌ವೇ ಏರಲು ಪರದಾಡಬೇಕಿದೆ. ಪೆಟ್ರೋಲ್‌ ಬಂಕ್‌, ಪಂಚರ್‌ ಶಾಪ್‌, ಹೋಟಲ್‌ ಗಳು ಯಾವೊಂದು ಕೆಲಸವು ಆಗಿಲ್ಲ, ಪ್ರತಿ ಕಿ.ಮಿಗೆ ಅಳವಡಿಸಬೇಕಿದ್ದ ಎಐ ಕ್ಯಾಮೆರಾಗಳ ಅಳವಡಿಕೆಯು ನಡೆದಿಲ್ಲ. ಈ ಬಗ್ಗೆ ಯಾರ ಸಂಪರ್ಕಕ್ಕೂ ಸಿಗದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉದಾಸೀನ ಮಾಡುತ್ತಿರುವುದು ಪ್ರಯಾಣಿಕರು ಅವ್ಯವಸ್ಥೆಯ ಹೆದ್ದಾರಿಯಲ್ಲಿ ಸಾಗುವಂತಾಗಿದೆ.

ಅವ್ಯವಸ್ಥೆ ಸರಿಯಾಗೇ ಇಲ್ಲ : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನ ಅವ್ಯವಸ್ಥೆಗಳು ಇಂದಿಗೂ ಸರಿಯಾಗಿಲ್ಲ. ಸ್ಕೈವಾಕ್‌, ಎಐ ಕ್ಯಾಮೆರಾ, ರೆಸ್ಟ್‌ ಏರಿಯಾ, ಬಸ್‌ ಶೆಲ್ಟರ್‌ಗಳು ಹೀಗೆ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿದ್ದು, ಇವುಗಳನ್ನು ಕಲ್ಪಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ತುಟಿತೆರೆಯುತ್ತಿಲ್ಲ. ಇಡೀ ಹೆದ್ದಾರಿ ಅವ್ಯವಸ್ಥೆಗಳ ಆಗರವಾಗಿದೆ. ಈ ಹಿಂದೆ ಹೆದ್ದಾರಿ ಪ್ರಾಧಿಕಾರ, ರಾಜ್ಯ ಸರ್ಕಾರ, ಕೇಂದ್ರ ಸಾರಿಗೆ ಸಚಿವರು ನೀಡಿದ್ದ ಭರವಸೆಗಳೆಲ್ಲವು ಹುಸಿಯಾಗಿದೆ.

ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದ ಬಳಿಕ ಟೋಲ್‌ ಸಂಗ್ರಹ ಮಾಡ ಬೇಕು ಎಂದು ಹೆದ್ದಾರಿ ಪ್ರಾಧಿಕಾರದ ನಿಯಮ ಹೇಳುತ್ತದೆ. ಆದರೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಅರ್ಧಂಬರ್ಧ ಸೌಲಭ್ಯಗಳನ್ನು ಹೊಂದಿದ್ದು ಪೂರ್ಣ ಪ್ರಮಾಣದ ಟೋಲ್‌ ಸಂಗ್ರಹಿ ಸುತ್ತಿರುವುದು ಸರಿಯಲ್ಲ. ಹೆದ್ದಾರಿ ಪ್ರಾಧಿಕಾರ ಪೂರ್ಣ ಸೌಲಭ್ಯ ಕಲ್ಪಿಸುವವರೆಗೆ ಟೋಲ್‌ ಸಂಗ್ರಹಣೆಯನ್ನು ನಿಲ್ಲಿಸಲಿ. ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಲಿ. -ನೀಲೇಶ್‌ಗೌಡ, ರಾಜ್ಯಾಧ್ಯಕ್ಷ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ

– ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1——dsadsa

Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.