![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
ಲಘು ಭೂಕಂಪ: 10ಕ್ಕೂ ಹೆಚ್ಚು ಮನೆಗಳ ಗೋಡೆ ಬಿರುಕು
Team Udayavani, Apr 10, 2017, 10:07 AM IST
![9-cpt-1p.jpg](https://www.udayavani.com/wp-content/uploads/2017/04/10/9-cpt-1p-620x317.jpg)
ಚನ್ನಪಟ್ಟಣ(ರಾಮನಗರ): ತಾಲೂಕಿನ ಗಡಿಗ್ರಾಮ ದೊಡ್ಡನಹಳ್ಳಿಯಲ್ಲಿ ಶನಿವಾರ ರಾತ್ರಿ ಲಘು ಭೂಕಂಪನವಾಗಿ 10ಕ್ಕೂ ಹೆಚ್ಚು ಮನೆಗಳ ಗೋಡೆ ಬಿರುಕು ಬಿಟ್ಟಿವೆ.ಗ್ರಾಮದ ಮರಿಚಿಕ್ಕೇಗೌಡ, ಸಿದ್ದೇಗೌಡ, ಲಿಂಗೇಶ್, ಕೆಂಪಯ್ಯ, ಚಿಕ್ಕಯ್ಯ, ಗೌರಮ್ಮ, ಸ್ವಾಮಿ, ಮಣಿಯಮ್ಮ, ತಮ್ಮಯ್ಯ, ನಿಂಗಮ್ಮ, ಚಿಕ್ಕಮ್ಮ, ಕೆಂಪಯ್ಯ ಎಂಬುವವರ ಮನೆಗಳ ಗೋಡೆ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಶನಿವಾರ ರಾತ್ರಿ ಭಾರೀ ಶಬ್ದ ಕೇಳಿದ್ದರಿಂದ ಮನೆಯಲ್ಲಿ ಮಲಗಿದ್ದ ಎಲ್ಲರೂ ಆತಂಕದಿಂದ ಹೊರಗೆ ಓಡಿಬಂದಿದ್ದಾರೆ. ಭಾನುವಾರ ಬೆಳಗ್ಗೆ ಮನೆಯನ್ನು ಪರಿಶೀಲಿಸಿದಾಗ ಗೋಡೆಗಳು ಬಿರುಕುಬಿಟ್ಟಿರುವುದು ಕಂಡುಬಂದಿದೆ. ಈ ಹಿಂದೆಯೂ ಸಣ್ಣ ಪ್ರಮಾಣದಲ್ಲಿ ಗ್ರಾಮದಲ್ಲಿ ಭೂಮಿ ಕಂಪಿಸಿತ್ತು ಎನ್ನಲಾಗಿದ್ದು, ಆಗಲೂ ಮನೆಗಳ ಗೋಡೆಗಳಲ್ಲಿ ಸಣ್ಣ ಪ್ರಮಾಣದ ಬಿರುಕು ಮೂಡಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.