ಇನ್ನೂ 9 ವರ್ಷ ಕಾಂಗ್ರೆಸ್‌ ಆಡಳಿತ,ಗ್ಯಾರಂಟಿಯೂ ಖಾತ್ರಿ: ಡಿಕೆಶಿ

Team Udayavani, Feb 24, 2024, 11:38 PM IST

ಇನ್ನೂ 9 ವರ್ಷ ಕಾಂಗ್ರೆಸ್‌ ಆಡಳಿತ,ಗ್ಯಾರಂಟಿಯೂ ಖಾತ್ರಿ: ಡಿಕೆಶಿ

ಶಿವಮೊಗ್ಗ: ಈ ಅವಧಿಗೆ ಮಾತ್ರವಲ್ಲ. ಮುಂದಿನ ಅವಧಿಯಲ್ಲೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ. ಬಲಿಷ್ಠ ಕಾಂಗ್ರೆಸ್‌ ಸರಕಾರ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಏನೇ ಹೇಳಿದರೂ ಅದು ಸುಳ್ಳು. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು. ತೆನೆ ಹೊತ್ತ ಮಹಿಳೆ ತೆನೆ ಎಸೆದು ಹೋದಳು. ಕರ್ನಾಟಕ ಪ್ರಬುದ್ಧವಾಯಿತು. ಕರ್ನಾಟಕ ಸಮೃದ್ಧಿಯಾಯಿತು ಎಂದರು.

ನಿಮ್ಮ ಮನೆ ಬೆಳಗಲಿ ಎಂದು “ಗೃಹಜ್ಯೋತಿ’ ಯೋಜನೆ ಘೋಷಿಸಿದ್ದು, ಇಂದು ಒಂದೂವರೆ ಕೋಟಿ ಕುಟುಂಬ 200 ಯೂನಿಟ್‌ವರೆಗೂ ವಿದ್ಯುತ್‌ ಅನ್ನು ಉಚಿತವಾಗಿ ಬಳಸುತ್ತಿದೆ. ಇದರಿಂದ ಪ್ರತಿ ಕುಟುಂಬಕ್ಕೆ 1,500 ರೂ. ಉಳಿಯುತ್ತದೆ. “ಅನ್ನಭಾಗ್ಯ’ ಯೋಜನೆಗೆ ಕೇಂದ್ರ ಸರಕಾರ ಅಕ್ಕಿ ನೀಡದಿದ್ದಾಗ ನಿಮ್ಮ ಖಾತೆಗೆ ಹಣ ಹಾಕಿದೆವು. ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಪ್ರತಿ ಮಹಿಳೆಗೆ ಕನಿಷ್ಠ 2-3 ಸಾ. ರೂ. ಉಳಿಯುತ್ತದೆ ಎಂದರು.

“ಗೃಹಲಕ್ಷ್ಮಿ ‘ ಯೋಜನೆಯಡಿ ರಾಜ್ಯದ 1.10 ಕೋಟಿ ಜನ ಪ್ರಯೋಜನ ಪಡೆಯುತ್ತಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ಮೂರು ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿಯನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ ಕಾರ್ಯಕ್ರಮ ಎಂದರು.

ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗ ಒಂದು ಸೀರೆ, ಒಂದು ಸೈಕಲ್‌ ನೀಡಿದ್ದರು. ಅದನ್ನು ಬಿಟ್ಟರೆ ಬಿಜೆಪಿ ಬೇರೆ ಏನೂ ನೀಡಿಲ್ಲ. ಆ ಸೈಕಲ್‌ ಎಲ್ಲಿ ಹೋಯಿತು? ಅದನ್ನು ಯಾಕೆ ನಿಲ್ಲಿಸಿದಿರಿ ಎಂದು ಪ್ರಶ್ನಿಸಿದರು.

ವಿಜಯೇಂದ್ರಗೆ ಸವಾಲು
ಜಾತಿ ವಿಚಾರದ ಬಗ್ಗೆ ಯೋಚಿಸಬೇಡಿ ಎಂದು ನಾರಾಯಣ ಗುರುಗಳು ನಮಗೆ ಸಂದೇಶ ನೀಡಿದರು. ಅದರಂತೆ ನಾವು ಜಾತಿಯನ್ನು ಬಿಟ್ಟು ನೀತಿ ಮೇಲೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅದಕ್ಕಾಗಿ ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಬಿಜೆಪಿಯವರು ಇಂತಹ ಒಂದು ಕಾರ್ಯಕ್ರಮ ಹೆಸರಲ್ಲಿ ಮತ ಕೇಳಲು ಆಗುತ್ತದೆಯೇ? ನಮ್ಮದು 420 ಕಾರ್ಯಕ್ರಮವಾದರೆ ನಮ್ಮ ಯೋಜನೆಯಿಂದ ಪ್ರಯೋಜನ ಪಡೆಯಬೇಡಿ ಎಂದು ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರು ಜನರಿಗೆ ಕರೆ ನೀಡಲಿ ನೋಡೋಣ ಎಂದು ಸವಾಲು ಹಾಕುತ್ತೇನೆ ಎಂದು ಡಿಕೆಶಿ ಹೇಳಿದರು.

ಟಾಪ್ ನ್ಯೂಸ್

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

1-24-saturday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!

Rameshwaram ಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಪರಮೇಶ್ವರ್‌

Rameshwaram ಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಪರಮೇಶ್ವರ್‌

Rohit SHarma (2)

Retirement ಸದ್ಯಕ್ಕಿಲ್ಲ, ಇನ್ನೂ ಹಲವು ವರ್ಷ ಆಡುತ್ತೇನೆ: ರೋಹಿತ್‌ ಶರ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga; ನಾಮಪತ್ರ ಸಲ್ಲಿಸಿದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ

Shimoga; ನಾಮಪತ್ರ ಸಲ್ಲಿಸಿದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ

ನನ್ನನ್ನು ಇನ್ನೂ ಪಕ್ಷದಿಂದ ಏಕೆ ಉಚ್ಛಾಟಿಸಿಲ್ಲ ಎಂದು ಗೊತ್ತಾಗುತ್ತಿಲ್ಲ: ಈಶ್ವರಪ್ಪ

ನನ್ನನ್ನು ಇನ್ನೂ ಪಕ್ಷದಿಂದ ಏಕೆ ಉಚ್ಛಾಟಿಸಿಲ್ಲ ಎಂದು ಗೊತ್ತಾಗುತ್ತಿಲ್ಲ: ಈಶ್ವರಪ್ಪ

Gas Leakage; ಗ್ಯಾರೇಜ್ ನಲ್ಲಿ ಇಟ್ಟಿದ್ದ ಕಾರು ಸುಟ್ಟು ಭಸ್ಮ… ಓರ್ವನಿಗೆ ಗಂಭೀರ ಗಾಯ!

Gas Leakage; ಗ್ಯಾರೇಜ್ ನಲ್ಲಿ ಇಟ್ಟಿದ್ದ ಕಾರು ಸುಟ್ಟು ಭಸ್ಮ… ಓರ್ವನಿಗೆ ಗಂಭೀರ ಗಾಯ!

Nyamathi: ಕೆಎಸ್‌ಆರ್‌ಟಿಸಿ ಬಸ್ – ಓಮ್ನಿ ಕಾರು ನಡುವೆ ಅಪಘಾತ; ಮೂವರ ದುರ್ಮರಣ

Nyamathi: ಕೆಎಸ್‌ಆರ್‌ಟಿಸಿ ಬಸ್ – ಓಮ್ನಿ ಕಾರು ನಡುವೆ ಅಪಘಾತ; ಮೂವರ ದುರ್ಮರಣ

Shimoga; ಬಿ.ವೈ. ರಾಘವೇಂದ್ರಗೆ ಎರಡು ಲಕ್ಷ ಮತಗಳ ಅಂತರದ ಗೆಲುವು ಖಚಿತ: ವಿಜಯೇಂದ್ರ

Shimoga; ಬಿ.ವೈ. ರಾಘವೇಂದ್ರಗೆ ಎರಡು ಲಕ್ಷ ಮತಗಳ ಅಂತರದ ಗೆಲುವು ಖಚಿತ: ವಿಜಯೇಂದ್ರ

MUST WATCH

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

ಹೊಸ ಸೇರ್ಪಡೆ

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

1-weweewqe

IPL; ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ್‌ ರಾಯಲ್ಸ್‌

1-24-saturday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.