ಶಿವಮೊಗ್ಗ: ಮಳೆಗಾಲದ ಮುಂಚೆಯೇ ಗರಿಷ್ಠ ಮಟ್ಟಕ್ಕೆ ತಲುಪಿದ ಗಾಜನೂರು ಜಲಾಶಯ
Team Udayavani, May 15, 2021, 5:10 PM IST
ಶಿವಮೊಗ್ಗ: ಮಳೆಗಾಲದ ಮುಂಚೆಯೇ ಗಾಜನೂರು ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಈಗಾಗಲೇ ಪವರ್ ಹೌಸ್ ಮೂಲಕ 500 ಕ್ಯೂಸೆಕ್ಸ್ ನಷ್ಟು ನೀರು ಹೊರಗೆ ಬಿಡಲಾಗಿದೆ.
3.17 ಟಿಎಂಸಿ ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲಿ ಪ್ರಸ್ತುತ 2.34 ಟಿಎಂಸಿ ನೀರಿದೆ. ಒಳಹರಿವು 800 ಕ್ಯೂಸೆಕ್ಸ್ ಇದ್ದು ರಾತ್ರಿ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಜಲಾಶಯ ಭರ್ತಿಯಾಗಲು ಕೇವಲ 10 ಇಂಚು ಮಾತ್ರ ಬಾಕಿ ಇದೆ. ನದಿ ಪಾತ್ರದ ಮತ್ತು ನಾಲೆ ಪಾತ್ರಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಎಚ್ಚರಿಕೆಯಿಂದ ಇರಲು ಮತ್ತು ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್
ಸೊರಬ: ಅಂಗನವಾಡಿ ಕೇಂದ್ರದ ಮೇಲೆ ಉರುಳಿದ ಮರ; ಅದೃಷ್ಟವಶಾತ್ ಮಕ್ಕಳು ಪಾರು
ಸಾಗರ: ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಮೇಲಿನ ಪ್ರಕರಣ ವಾಪಾಸಿಗೆ ಆಗ್ರಹ
77 ಸಾವಿರ ರಾಷ್ಟ್ರ ಧ್ವಜ ಸಿದ್ಧ: ಪ್ರತಿ ಮನೆಗೆ ಉಚಿತ ವಿತರಣೆ; ಶಾಸಕ ಹಾಲಪ್ಪ ಹರತಾಳು
ಡಿಕೆಶಿ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ಸಿದ್ದರಾಮೋತ್ಸವ ಮಾಡಿದ್ದಾರೆ: ವಿಜಯೇಂದ್ರ ವ್ಯಂಗ್ಯ