ಕೋವಿಡ್ ಸಂಕಷ್ಟದಲ್ಲೂ ಬಿಜೆಪಿಯಲ್ಲಿ ಅಧಿಕಾರ ದಾಹ
Team Udayavani, May 31, 2020, 1:37 PM IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಎಲ್ಲೆಡೆ ಕೋವಿಡ್ ವೈರಸ್ ತಾಂಡವವಾಡುತ್ತಿದ್ದರೆ, ಬಿಜೆಪಿಯಲ್ಲಿ ಮಾತ್ರ ಅಧಿಕಾರ ದಾಹ ಕಂಡುಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನೆರವಿಗೆ ಧಾವಿಸಬೇಕಾದ ಆಡಳಿತ ಪಕ್ಷದಲ್ಲಿ ಅಧಿಕಾರದ ದಾಹ ಕಾಣಿಸತೊಡಗಿದೆ. ಇದು ಜನಸಾಮಾನ್ಯರಿಗೆ ಬೇಸರ ತರಿಸಿದೆ ಎಂದರು. ಇಂತಹ ಸಂಕಷ್ಟ ಸಂದರ್ಭ ಅಧಿಕಾರ ಮುಖ್ಯವಾಗಬಾರದು. ಜನರ ಸಮಸ್ಯೆಗಳನ್ನು ಆಲಿಸಬೇಕು. ಸರ್ಕಾರ ಜನಸಾಮಾನ್ಯರ ಸಂಕಷ್ಟ ನಿವಾರಿಸಲು ಮುಂದಾಗಬೇಕು. ಬಿಜೆಪಿಯಲ್ಲಿನ ಬೇಗುದಿಯನ್ನು ಜೆಡಿಎಸ್ ಕಾದು ನೋಡುತ್ತದೆ ಎಂದರು.
ಕೋವಿಡ್ ಶೈಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಸಮಸ್ಯೆ ಉಟು ಮಾಡಿದೆ. ಇದರಿಂದ ವಿವಿಧ ತರಗತಿಗಳ ಮೌಲ್ಯ ಮಾಪನ ಮಾಡುವುದಕ್ಕೂ ಸಮಸ್ಯೆ ಎದುರಾಗಿದೆ. ಹೀಗಾಗಿ ಮೌಲ್ಯಮಾಪಕರು ಇಚ್ಛೆ ಪಡುವ ಕೇಂದ್ರಗಳಲ್ಲಿ ಸರ್ಕಾರ ಅವಕಾಶ ಮಾಡಿಕೊಡಬೇಕು. ಮೌಲ್ಯಮಾಪನ ಕಾರ್ಯಕ್ಕಾಗಿ ಬೇರೆ ಊರುಗಳಿಗೆ ನಿಯೋಜಿಸಿದರೆ ಮೌಲ್ಯಮಾಪಕರು ಹಲವಾರು ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ರೆಬೈಲಿನಿಂದ 2 ಆನೆಗಳ ಮಧ್ಯಪ್ರದೇಶಕ್ಕೆ ರವಾನೆ
50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಒಂದೇ ವಾರದಲ್ಲಿ ಕಿತ್ತೋಯ್ತು; ಗ್ರಾಮಸ್ಥರ ಆಕ್ರೋಶ
ಮಾತನಾಡುವಾಗ ಕಾಮನ್ ಸೆನ್ಸ್ ಇರಬೇಕು: ಆರಗ ವಿರುದ್ಧ ಮಾಜಿ ಸಚಿವ ಕಿಮ್ಮನೆ ವಾಗ್ದಾಳಿ
ಸಿ.ಡಿ ರಾಜಕಾರಣ ರಾಜ್ಯಕ್ಕೆ ಕಳಂಕ: ಕೆಎಸ್ ಈಶ್ವರಪ್ಪ
ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ
MUST WATCH
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani
ಹೊಸ ಸೇರ್ಪಡೆ
ಮಣಿಪಾಲ: ಅಪಾರ್ಟ್ ಮೆಂಟ್ ನಲ್ಲಿ ಲಕ್ಷಾಂತರ ರೂ. ಸೊತ್ತುಗಳ ಕಳವು
ಷೇರುಗಳ ಮೌಲ್ಯ ಕುಸಿತ; ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಗಳಿಂದ ಅದಾನಿ ಪಡೆದ ಸಾಲದ ಮೊತ್ತ ಎಷ್ಟು ಗೊತ್ತಾ?
ಮಾರಿಗುಡ್ಡದಲ್ಲಿ ಗಡ್ಡಧಾರಿಗಳ ಅಬ್ಬರ
ಮಂಗಳೂರು : ಜ್ಯುವೆಲ್ಲರಿ ಶಾಪ್ ನಲ್ಲಿ ಸಿಬಂದಿಗೆ ಚೂರಿ ಇರಿತ
ಬಸವ ಕಲ್ಯಾಣದಲ್ಲಿ ಸಿದ್ದರಾಮಯ್ಯ,ಕೋಲಾರದಲ್ಲಿ ಡಿಕೆಶಿ: ಪ್ರಜಾಧ್ವನಿ ಯಾತ್ರೆಗೆ ಚಾಲನೆ