ಸಿರಿವಂತರು, ಪ್ರಭಾವಿಗಳ ಮನೆಗಳಿಗೆ ನಿರಂತರ ನೀರು

ಬಡವರು ವಾಸಿಸುವ ಪ್ರದೇಶಕ್ಕೆ ವಾರಕ್ಕೊಮ್ಮೆ ನೀರು ಸರಬರಾಜು • ಮಳೆ ಬರದಿದ್ದರೆ ಪರಿಸ್ಥಿತಿ ಊಹಿಸಲು ಅಸಾಧ್ಯ

Team Udayavani, May 8, 2019, 4:25 PM IST

tumkur-tdy-1..

ತುಮಕೂರಿನಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಾಪಿಸುತ್ತಿರುವುದು.

ತುಮಕೂರು: ಸಿರಿವಂತರು, ಪ್ರಭಾವಿಗಳ ಮನೆಗಳಿಗೆ ನಿರಂತರ ನೀರು ಸರಬರಾಜಾಗುತ್ತಿದೆ. ಆದರೆ, ಬಡವರ ಗೋಳು ಕೇಳ್ಳೋದಾದ್ರು ಯಾರು? ನಗರದ 35 ವಾರ್ಡ್‌ಗಳಲ್ಲೂ ಬೇಸಿಗೆಯ ಸುಡು ಬಿಸಿಲ ನಡುವೆ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಬಡವರು ವಾಸಿಸುವ ಪ್ರದೇಶಗಳಿಗೆ ವಾರಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ, ನೀರಿಗಾಗಿ ಜನ ಪರಿತಪಿ ಸುತ್ತಿದ್ದರೆ. ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು, ಪ್ರತಿದಿನ ಟ್ಯಾಂಕರ್‌ಗಳಲ್ಲಿ ಕುಡಿಯವ ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಮಳೆ ಬರದಿದ್ದರೆ ನಗರದ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಲು ಅಸಾಧ್ಯವಾಗಿದೆ.

ಎಲ್ಲಾ ಕ್ಷೇತ್ರದಲ್ಲೂ ಬೆಳವಣಿಗೆಯ ಹಾದಿಯಲ್ಲಿ ರುವ ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲಿದೆ. ನಗರದ ಯಾವುದೇ ವಾರ್ಡ್‌ಗಳಿಗೆ ಹೋದರೂ ನೀರಿಗಾಗಿ ಜನ ಈಗಾಗಲೇ ಬಿಂದಿಗೆ ಹಿಡಿದು ಬೀದಿ ಬೀದಿ ಸುತ್ತುವುದು ಸಾಮಾನ್ಯವಾಗಿದೆ. ಈ ರೀತಿಯ ಪರಿಸ್ಥಿತಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಬಡವರು ಹಾಗೂ ಸಾಮಾನ್ಯ ಜನರು ವಾಸಿಸುವ ಪ್ರದೇಶಗಳಲ್ಲಿ ಕಂಡು ಬರುತ್ತಿದೆ.

ಹಲವು ಬಡಾವಣೆಗಳಲ್ಲಿ ನೀರಿಗಾಗಿ ಪರದಾಟ: ನಗರದ ಸರಸ್ಪತಿ ಪುರಂ, ಮರಳೇನಹಳ್ಳಿ, ಗೊಲ್ಲರಹಟ್ಟಿ, ರಂಗಾಪುರ, ಎಂ.ಡಿ.ಪಾಳ್ಯ, ಎ.ಕೆ.ಕಾಲೋನಿ, ಹೌಸಿಂಗ್‌ ಬೋರ್ಡ್‌, ಶ್ರೀರಾಮ ನಗರ, ದಿಬ್ಬೂರು, ಜೈಪುರ ಬಡಾವಣೆ, ಪಿ.ಎಚ್. ಕಾಲೋನಿ, ಸುಬ್ರಹ್ಮಣ್ಯ ಪಾರ್ಕ್‌ ಮುಂಭಾಗದ ಲೇಬರ್‌ ಕಾಲೋನಿ ಅಡ್ಡ ರಸ್ತೆಗಳು, ಕ್ರಿಶ್ಚಿಯನ್‌ ಸ್ಟ್ರೀಟ್, ಕುರಿಪಾಳ್ಯ, ಟಿಪ್ಪುನಗರ ಅಡ್ಡ ರಸ್ತೆಗಳು, ಬನಶಂಕರಿ, ಶಾರದಾನಗರ, ಬಿದರ ಮೆಳೆ ತೋಟ, ಬಟವಾಡಿ, ಉಪ್ಪಾರಹಳ್ಳಿ, ಎಸ್‌ಐಟಿ ಬಡಾವಣೆ, ಮರಳೂರು ದಿಣ್ಣೆ, ಶ್ರೀನಗರ, ಬಂಡೇ ಪಾಳ್ಯ, ಸಾಬರ ಪಾಳ್ಯ, ದೇವರಾಯಪಟ್ಟಣ, ಸರಸ್ವತಿ ಪುರಂ 2ನೇ ಹಂತ ಸೇರಿದಂತೆ ಇನ್ನೂ ಹಲವಾರು ಬಡಾವಣೆಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪ್ಪಿಸುತ್ತಿದ್ದಾರೆ.

ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ: ಬಿಸಿಲ ಝಳ ತೀವ್ರವಾಗು ತ್ತಿರುವುದು ಒಂದೆಡೆಯಾದರೆ ನೀರಿಲ್ಲದೆ, ಜನರು ಪರಿತಪ್ಪಿಸುತ್ತಿರು ವುದು ಮತ್ತೂಂದೆ ಡೆಯಾಗಿದೆ. ವಾರಕ್ಕೊಮ್ಮೆ ನೀರು ಈಗ ಲಭ್ಯ ವಾಗುತ್ತಿದೆ. ಇನ್ನು ಒಂದು ತಿಂಗಳು ಕಳೆದರೆ ಇರುವ ನೀರಿನ ಪ್ರಮಾಣವೂ ಕಡಿಮೆಯಾಗಿ ನಗರದಲ್ಲಿ ನೀರಿನ ಬವಣೆ ಉಂಟಾ ಗಲಿದೆ. ಈಗ ಬುಗುಡನ ಹಳ್ಳಿಯಲ್ಲಿ ಶೇಖರಣೆ ಮಾಡಿರುವ ಹೇಮಾವತಿ ಕುಡಿಯುವ ನೀರು ದಿನದಿಂದ ದಿನಕ್ಕೆ ಕಡಿಮೆಯಾಗು ತ್ತಿದೆ. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿರುವಂತೆಯೇ ನಗರದ ಬಹುತೇಕ ಬಡಾವಣೆಗಳಲ್ಲಿ ನಗರಕ್ಕೆ ನೀರುಣಿಸುತ್ತಿ ರುವ ಬೋರ್‌ವೆಲ್ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಕೆಲವು ಬೋರ್‌ವೆಲ್ಗಳು ನಿಂತು ಹೋಗುತ್ತಿವೆ.

ಹಳ್ಳಿಗಳ ಪರಿಸ್ಥಿತಿಯಂತೂ ಹೇಳ ತೀರದು: ನಗರದ ಹೊರವಲಯಗಳಲ್ಲಿ ಪಾಲಿಕೆ ವ್ಯಾಪ್ತಿಗೆ ಸೇರಿರುವ ಹಳ್ಳಿಗಳ ಸ್ಥಿತಿಯಂತೂ ಹೇಳ ತೀರದಾಗಿದೆ, ಹಣ ವಂತರಿಗೆ, ನೀರಿನ ಸಮಸ್ಯೆ ಕಾಣುತ್ತಿಲ್ಲ. ಕಾರಣ ಅವರಿಗೆ ರೈಸಿಂಗ್‌ ಮೈನ್‌ ಮೂಲಕ ನಿರಂತರ ನೀರು ಬರುವಂತೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಬಡವರು ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಗರ ನಿವಾಸಿಗಳ ನೀರಿನ ಬವಣೆಯ ಕೂಗು ಕೇಳದಾಗಿದೆ. ನಗರವು 3.75, 000 ಜನಸಂಖ್ಯೆ ಹೊಂದಿದ್ದು, ಪ್ರತಿದಿನ ತಲಾವಾರು ಕನಿಷ್ಠ ಲಭ್ಯತೆ 78 ಲೀ., ಆಗಿದೆ. ತಲಾವಾರು ನೀರು ಪೂರೈಕೆ ಮಾಡಬೇಕಾಗಿರುವ ನೀರಿನ ಪ್ರಮಾಣ 135 ಲೀ., ಈಗ ಅಗತ್ಯವಿರುವ ನೀರಿನ ಒಟ್ಟು ಪ್ರಮಾಣ 57 ಎಂಎಲ್ಡಿ, ಈಗ ಲಭ್ಯವಿರುತ್ತಿರುವ ನೀರಿನ ಪ್ರಮಾಣ 36ರಿಂದ 38 ಮಾತ್ರ ಇನ್ನೂ 19 ಎಂಎಲ್ಡಿ ನೀರಿನ ಕೊರತೆ ಇದೆ.

4-5 ದಿನಕ್ಕೊಮ್ಮೆ ನೀರು ಸರಬರಾಜು: ಹೇಮಾವತಿ ನೀರು ಸಂಗ್ರಹಿಸಿರುವ ಬುಗುಡನಹಳ್ಳಿಯಲ್ಲಿ 68 ಎಂಸಿಎಫ್ಟಿ ನೀರು ಸಂಗ್ರಹವಿದೆ. ಮೈದಾಳದಿಂದ 50 ಎಂಎಲ್ಡಿ, ಕೊಳವೆಬಾವಿಗಳಿಂದ 3.00 ಎಂಎಲ್ಡಿ ಸೇರಿದಂತೆ ಬುಗುಡನಹಳ್ಳಿ ನೀರು ಸೇರಿ ಈಗ ಒಟ್ಟು 36ರಿಂದ 38 ಎಂಎಲ್ಡಿ ನೀರು ಮಾತ್ರ ಲಭ್ಯವಿದೆ ಆದ್ದರಿಂದ ನಾಲ್ಕು, ಐದು ದಿನಕ್ಕೆ ಒಮ್ಮೆ ನೀರು ಸರಬರಾಜಾಗುತ್ತಿದೆ. ನಗರ ವಾಸಿಗಳಿಗೆ ಸರಬ ರಾಜು ಮಾಡಲು ಕೊರತೆ ಇರುವ ನೀರಿನ ಪ್ರಮಾಣ 19.38 ಎಂಎಲ್ಡಿ ಆಗಿದ್ದು, ನಗರದ ಎಲ್ಲಾ ಕಡೆ ಮೇಲ್ಮಟ್ಟದಲ್ಲಿ 17 ಜಲಸಂಗ್ರಹಗಳಿದ್ದು, ನಗರದಲ್ಲಿ 472 ಕೊಳವೆ ಬಾವಿಗಳಿವೆ. 100ಕ್ಕೆ ಪಂಪುಗಳಿವೆ. ಅದರಲ್ಲಿ 54 ಚಾಲ್ತಿಯಲ್ಲಿದ್ದು, 46 ದುರಸ್ಥಿಯಲ್ಲಿವೆ.

ಈಗಿನ ನೀರಿನ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆ ಯಲ್ಲಿ ನಗರದ 22, 23, 29, 32, 33, 34, 35 ವಾರ್ಡ್‌ ಗಳಿಗೆ ನಾಲ್ಕು ದಿನಕ್ಕೆ ಕೆಲವು ಕಡೆ ಐದು ದಿನಕ್ಕೆ ನೀರು ನೀಡಲಾಗುತ್ತಿದೆ. ನಗರದ ಎಲ್ಲಾ ಕಡೆಯೂ ಐದು ದಿನಕ್ಕೆ ನೀರು ಒದಗಿಸಲು ಪಾಲಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

14 ಸಾವಿರಕ್ಕೂ ರೈಸಿಂಗ್‌ ಮೇನ್‌ಗಳು: ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ರೈಸಿಂಗ್‌ ಕೊಳಾಯಿ ಸಂಪರ್ಕವನ್ನು ಈವರೆಗೂ ಇವರು ಕಡಿತ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳದೇ ಇರುವುದು ವಿಪರ್ಯಾಸ ವಾಗಿದೆ. ಖಾಸಗಿ ಹೋಟೆಲ್, ಕಲ್ಯಾಣ ಮಂಟಪಗಳು, ಆಸ್ಪತ್ರೆಗಳು, ವಾಣಿಜ್ಯೋದ್ಯಮ ಮಳಿಗೆಗಳಿಗೆ ನಲ್ಲಿ ಸಂಪರ್ಕವನ್ನು ಕೆಲವು ಕಡೆ ಅಕ್ರಮವಾಗಿ ನೀಡಿದ್ದಾರೆ. ಈ ಬಗ್ಗೆ ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

ನೀರಿನ ಸಮಸ್ಯೆ ನಿವಾರಣೆಗೆ ಅದ್ಯತೆ: ನಗರದಲ್ಲಿ ಉದ್ಭವವಾಗಿರುವ ಕುಡಿಯುವ ನೀರಿನ ಸಮಸ್ಯೆ ಯನ್ನು ನಿವಾರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಾದ ಭೂಪಾಲನ್‌ ಮುಂದಾಗಿ ದ್ದಾರೆ. ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ ದ್ದಾರೆ. ಜೊತೆಗೆ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದೆ ಕುಡಿಯುವ ನೀರಿಗೆ ಸಮಸ್ಯೆಯಾದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆನ್ನುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳು ಗಮನ ಹರಿಸುವರೇ: ಮುಂದಿನ ದಿನದಲ್ಲಿ ನಗರದಲ್ಲಿ ಕುಡಿಯುವ ನೀರಿನ ತಾತ್ವಾರ ತೀವ್ರಗೊಳ್ಳಲಿದೆ. ಅಂಕಿ ಅಂಶದ ಪ್ರಕಾರ ಈಗ ಇರುವ ಕುಡಿಯುವ ನೀರು ಇನ್ನು ಒಂದು ತಿಂಗಳು ಮಾತ್ರ ಬರಲಿದ್ದು, ಮುಂದಿನ ದಿನದಲ್ಲಿ ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ ಎನ್ನುವ ಮಾತುಗಳು ಆಡಳಿತ ವರ್ಗದಿಂದಲೇ ಕೇಳಿಬರುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಮುಂದಿನ ದಿನದಲ್ಲಿ ಎದುರಾಗುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ ಕುಮಾರ್‌ ಗಮನ ಹರಿಸುವುದು ಅಗತ್ಯವಾಗಿದೆ.

● ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shobha-Kharandlaje

Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್‌ ಸರ್ಕಾರ: ಕೇಂದ್ರ ಸಚಿವೆ ಶೋಭಾ 

5-tumkur

Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ

4-koratagere

Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ

1-ewewqe

Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.