ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕತೆ ಅರಿವು ಅವಶ್ಯ

ಆರ್ಟಿಫಿಶಿಯಲ್ ಇಂಟಲಿಜೆನ್ಸಿ, ಮೆಷಿನ್‌ ಲರ್ನಿಂಗ್‌ ಲ್ಯಾಬ್‌ ಉದ್ಘಾಟನೆಯಲ್ಲಿ ಕಂಪನಿ ಸಂಸ್ಥಾಪಕ ತ್ರಿವಿಕ್ರಮ ರಾವ್‌ ಅಭಿಮತ

Team Udayavani, May 8, 2019, 4:47 PM IST

tumkur-tdy-4..

ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಲ್ಯಾಬ್‌ನ ಉದ್ಘಾಟನಾ ಕಾರ್ಯಕ್ರಮ ವನ್ನು ಉದ್ಘಾಟಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ತ್ರಿವಿಕ್ರಮ ರಾವ್‌, ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಮತ್ತಿತರರು.

ತಿಪಟೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಾಧನೆಗೈಯಬೇಕಾದರೆ ತಾಂತ್ರಿಕತೆಯ ಅರಿವು ಅವಶ್ಯಕ ಎಂದು ಪ್ಲಾಟಿಫೈ ಸೆಲ್ಯೂಷನ್‌ ಕಂಪನಿ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ತ್ರಿವಿಕ್ರಮ ರಾವ್‌ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೈಕ್ರೋಸಾಫ್ಟ್- ಪ್ಲಾಟಿಫೈ ಕಂಪನಿಯ ವತಿಯಿಂದ ನಿರ್ಮಿಸಿದ್ದ ಆರ್ಟಿ ಫಿಶಿಯಲ್ ಇಂಟಲಿಜೆನ್ಸಿ ಮತ್ತು ಮೆಷಿನ್‌ ಲರ್ನಿಂಗ್‌ ಲ್ಯಾಬ್‌ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದೊಂದಿಗೆ ಸಾಗಿದರೆ ಮಾತ್ರ ಏನನ್ನಾ ದರೂ ಸಾಧನೆ ಮಾಡ ಬಹುದಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಲ್ಯಾಬ್‌ನ್ನು ಪ್ರಾರಂಭಿಸಲಾಗಿದ್ದು, ಈ ಲ್ಯಾಬ್‌ ತಿಪಟೂರಿನಲ್ಲಿ ಪ್ರಪ್ರಥಮವಾಗಿ ಪ್ರಾರಂಭ ಮಾಡಲಾಗಿದೆ. ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅವಶ್ಯಕತೆ ಇದ್ದು, ವಿದ್ಯಾರ್ಥಿಗಳು ನಮ್ಮ ಐಡಿಗೆ ಲಾಗಿನ್‌ ಆಗಿ ಇದರ ಪ್ರಯೋಜನ ಪಡೆದುಕೊಂಡು ಹೊಸ ಹೊಸ ಸಂಶೋಧನೆಗಳತ್ತ ಚಿಂತನೆ ನಡೆಸಬೇಕು ಎಂದರು.

ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಉಪಯೋಗ ವಾಗಲಿದೆ ಎಂಬ ಯೋಜನೆಗಳು, ಅವಶ್ಯಕತೆಗಳು ಹಾಗೂ ಅವಕಾಶಗಳಿಗಾಗಿ ನಮ್ಮ ಸಂಸ್ಥೆ ಏನು ಬೇಕಾದರೂ ಮಾಡಲಿದೆ. ಎಲ್ಲಾ ರೀತಿಯ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ಬೇಕಾದ ಪೂರಕ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ. ಆಧುನಿಕ ಸಮಾಜದಲ್ಲಿ ತಂತ್ರಜ್ಞಾನದ ಅವಶ್ಯಕತೆ ಹೆಚ್ಚಿರುವ ಕಾರಣ ಮೈಕ್ರೋಸಾಫ್ಟ್ – ಪ್ಲಾಟಿಫೈ ಕಂಪನಿಯ ಸಹಯೋಗ ದೊಂದಿಗೆ ಲ್ಯಾಬ್‌ ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿ ಗಳು ಇದರ ಸದುಪಯೋಗ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತರಬೇಕು ಎಂದರು.

ಕೆಐಟಿ ಪ್ರಾಂಶುಪಾಲ ಡಾ. ನಂದೀಶಯ್ಯ ಮಾತ ನಾಡಿ, ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಲಭಿಸಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವ ತಯಾರಿಯಾಗುವ ಜೊತೆಗೆ ಅನುಭವವೂ ಮುಖ್ಯವಾಗಿರುತ್ತದೆ. ಆದ್ದರಿಂದ ಪಠ್ಯದ ಜೊತೆಗೆ ಇತರೆ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಡೆವಲಪ್‌ಮೆಂಟ್ ಮೈಕ್ರೋಸಾಫ್ಟ್ನ ನಿರ್ದೇಶಕ ಅಬಿರಾಮ್‌ ಎ ರಂಗನಾಥ್‌, ಕೆವಿಎಸ್‌ ಉಪಾಧ್ಯಕ್ಷ ಎಸ್‌.ಎಸ್‌. ನಟರಾಜು, ಖಜಾಂಚಿ ಟಿ.ಎಸ್‌. ಶಿವಪ್ರಸಾದ್‌, ಕಾರ್ಯದರ್ಶಿ ಪ್ರೊ. ರಾಜಕುಮಾರ್‌, ಕೆ.ಪಿ. ರುದ್ರಮುನಿಸ್ವಾಮಿ, ಟಿ.ಯು. ಜಗದೀಶ ಮೂರ್ತಿ, ಜಿ.ಕೆ. ಪ್ರಭು, ಸದಸ್ಯರಾದ ಬಾಗೇಪಲ್ಲಿ ನಟರಾಜು, ಸುಮನ್‌, ಸ್ವರ್ಣಗೌರಿ, ನಂಜುಂಡ ಸ್ವಾಮಿ ಮತ್ತಿತರರಿದ್ದರು.

ಟಾಪ್ ನ್ಯೂಸ್

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

police

Kunigal;ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: ಏಳು ಮಂದಿ ಬಂಧನ

PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

17-uv-fusion

UV Fusion: ಐ (i) ಅಂದ್ರೆ?

16-uv-fusion

Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.